Bhagya Lakshmi; 5G ಯುಗದಲ್ಲಿಯೂ ಅವರೇ ಇವರು-ಇವರೇ ಅವರು ಎಂದು ಭಾಗ್ಯ ಮತ್ತು ಆದೀಶ್ವರ್ ಕಾಮತ್‌ಗೆ ಗೊತ್ತಾಗಲೇ ಇಲ್ಲ

'ಭಾಗ್ಯಲಕ್ಷ್ಮೀ' ಧಾರಾವಾಹಿಯಲ್ಲಿ ಆದೀಶ್ವರ್ ಕಾಮತ್, ಕಿಶನ್ ಅಣ್ಣ ಎಂದು ಗೊತ್ತಿರದೇ ಕುಸುಮಾ ಜೋರು ಜಗಳ ಮಾಡಿದ್ದಾಳೆ. ಕಾರು ತಾಕಿರು ವಿಚಾರಕ್ಕೆ ಇಬ್ಬರ ನಡುವೆ ಜಗಳ ಶುರುವಾಗಿದ್ದು ತಾರಕಕ್ಕೇರಿದೆ. ಕಿಶನ್‌ನ ಅಣ್ಣನೇ ಈ ಆದೀಶ್ವರ್ ಕಾಮತ್ ಎಂದು ತಿಳಿಯದೇ ಭಾಗ್ಯ ಮತ್ತು ಕುಸುಮಾ, ಆದೀಶ್ವರ್ ಕಾಮತ್‌ನ ಸರಿಯಾಗಿ ಕ್ಲಾಸಗ ತಗೊಂಡಿದಾರೆ. ಸಾಲದಕ್ಕೆ ಬುದ್ದಿ ಕಲಿಸಬೇಕು ಎಂದು ಅಲ್ಲಿಯೇ ಇದ್ದ ಕಲ್ಲನ್ನು ಆದೀಶ್ವರ್ ಕಾಮತ್ ಕಾರಿನ ಮೇಲೆ ಬೀಸಾಕಿ ಕುಸುಮಾ ಕಾರಿನ ಗಾಜನ್ನು ಪುಡಿ ಪುಡಿ ಮಾಡಿದ್ದಾಳೆ.

ಇದೆಲ್ಲ ಆದ ನಂತರ ಭಾಗ್ಯ-ಕುಸುಮಾ ರೋಡ್ ಸೈಡ್​ನಲ್ಲಿ ಒಬ್ಬರ ಬಳಿ ಹಣ ತೆಗೆದುಕೊಳ್ಳುತ್ತಿರುತ್ತಾರೆ. ಇದೆಲ್ಲವನ್ನು ಆದೀಶ್ವರ್ ಕಾಮತ್ ನೋಡುತ್ತಾನೆ. ಹಾಗೇ ನೋಡಿದರೆ ಭಾಗ್ಯ ಮತ್ತು ಕುಸುಮಾ ಕೆಲ ದಿನದ ಹಿಂದೆ ತನ್ನೊಬ್ಬ ಗ್ರಾಹಕನಿಗೆ ಕ್ಯಾಟರಿಂಗ್ ಸರ್ವಿಸ್ ಮಾಡಿರುತ್ತಾರೆ.

kannada-serial-bhagya-lakshmi-written-update-june 2

ಆದರೆ ಊಟ ಆರ್ಡರ್ ಮಾಡಿದ್ದ ವ್ಯಕ್ತಿ ಮಾತ್ರ ಹಣ ಕೊಡದೇ ಸತಾಯಿಸುತ್ತಿರುತ್ತಾನೆ. ಆಗ ಬೇರೆ ದಾರಿ ಇಲ್ಲದೇ ಕುಸುಮಾ ಮತ್ತು ಭಾಗ್ಯ ಅವನ ಮನೆ ಬಳಿ ಹೋಗಿ ಧಮ್ಕಿ ಹಾಕಿ ಹಣ ವಸೂಲಿಯನ್ನು ಮಾಡಿರುತ್ತಾರೆ.

ಈ ಘಟನೆಯನ್ನು ದೂರದಿಂದ ಗಮನಿಸುವ ಆದೀ ಕುಸುಮಾ ಮತ್ತು ಭಾಗ್ಯ ಬಗ್ಗೆ ತಪ್ಪಾಗಿ ತಿಳಿದುಕೊಂಡಿದ್ದಾನೆ. ಸಿಕ್ಕ ಸಿಕ್ಕವರಿಂದ ಹಣ ವಸೂಲಿ ಮಾಡುವುದೇ ಈ ಹೆಂಗಸರ ಕೆಲಸ ಎಂದುಕೊಳ್ಳುತ್ತಾನೆ. ಸತ್ಯದ ಅರಿವು ಇಲ್ಲದೇ ಭಾಗ್ಯ ಮತ್ತು ಕುಸುಮಾ ಬಳಿ ಬಂದು ಪ್ರಶ್ನೆ ಮಾಡುತ್ತಾನೆ.

ಸತ್ಯ ತಿಳಿಯದೇ ಬಂದ ಆದೀಯ ವಿರುದ್ದ ಕುಸುಮಾ ಕೆಂಡ ಕಾರಿದ್ದಾಳೆ.ಯಾಕೆ ಕಾಲು ಕೆರ್ಕೊಂಡು ನಮ್ ಹತ್ರ ಬರ್ತೀಯ, ಕೋಲು ಕೊಟ್ಟ ಹೊಡಿಸಿಕೊಳ್ಳುವ ಕೆಲಸ ನಿನಗೆ ಯಾಕೆ,ನೋಡು ಇನ್ನುಮುಂದೆ ಯಾವತ್ತೂ ನೀನು ನನ್ನ ಕಣ್ಣಮುಂದೆ ಕಾಣಿಸಿಕೊಳ್ಳಬೇಡ ಎಂದೆಲ್ಲ ಮಾತನಾಡಿದ್ದಾಳೆ.

ಮತ್ತೊಂದು ಕಡೆ ಸುನಂದಾ ಕೂಡ ತನ್ನ ಹಣದಾಸೆಯನ್ನು ಆದೀ ಮುಂದೆ ಹೇಳಿದ್ದಾಳೆ. ಮನೆಗೆ ಬಂದ ಆದೀಶ್ವರ್ ಕಾಮತ್ ಬಳಿ ನಮಗೆ ಬಂಗಾರ ತೆಗೆಯಲು ಹಣ ಕೊಡಿ ಎಂದು ನೇರವಾಗಿ ಕೇಳಿದ್ದಾಳೆ. ಇದರಿಂದ ಆದೀಗೆ ಕೋಪ ಬಂದಿದೆ. ಎಲ್ಲದಕ್ಕೂ ಒಂದು ಇತಿ-ಮಿತಿ ಅಂತ ಇರುತ್ತೆ. ಅದನ್ನು ಮೀರಿ ಯಾರೂ ಯಾವತ್ತೂ ಹೋಗಬಾರದ ಎಂದು ಹೇಳಿ ಮನೆಯಿಂದ ಹೋಗಿದ್ದಾನೆ.

ಕಿಶನ್ ಮುಂದೆ ಆದೀಶ್ವರ್ ಕಾಮತ್ ಹೇಳಿದ್ದೇನು ?

ಈ ಕಡೆ ಕಿಶನ್ ಚಡಪಡಿಸುತ್ತಿದ್ದಾನೆ. ಆದೀ ಮನೆಗೆ ಬಂದ ನಂತರ ಕಿಶನ್ ಪೂಜಾ ಅವರ ಅಕ್ಕನ ಭೇಟಿಯಾದೆಯಾ ಎಂದು ಕೇಳುತ್ತಾನೆ. ಆಗ ತನ್ನ ಅಸಮಾಧಾನ ಹೊರ ಹಾಕುವ ಆದೀಶ್ವರ್ ಕಾಮತ್, ಪೂಜಾಳ ಅಕ್ಕನಿಗೆ ಅವಳ ತಂಗಿಯ ಮದುವೆಯ ಬಗ್ಗೆ ಚೂರೇ ಚೂರು ಕೂಡ ಕಾಳಜಿ ಇಲ್ಲ ಎನ್ನುತ್ತಾನೆ. ಆದೀಯ ಮಾತು ಕೇಳಿ ದಂಗಾದ ಕಿಶನ್ ಅಣ್ಣಾ ಏನು ಹೇಳ್ತಿದೀಯಾ ನೀನು ಎಂದು ಕೇಳುತ್ತಾನೆ.

ಆಗ ನಾನು ಹೇಳ್ತಿರುವುದು ನಿಜಾ ಎನ್ನುವ ಆದೀ, ಪೂಜಾ ಅಕ್ಕ ಭಾಗ್ಯ ಇದ್ದಾಳಲ್ಲ ಅವಳು ಇವತ್ತು ನನ್ನ ಭೇಟಿಯಾಗಲಿಲ್ಲ ಎಂದು ಹೇಳುತ್ತಾನೆ. ತನ್ನೆಲ್ಲ ಕೆಲಸ ಬಿಟ್ಟು ಅವಳು ನನ್ನನ್ನು ಭೇಟಿಯಾಗಲು ಬರಬೇಕಿತ್ತು, ಬಂದಿಲ್ಲ ಅಂದರೆ ಏನರ್ಥ ಎಂದು ಕಿಶನ್‌ಗೆ ಪ್ರಶ್ನೆ ಮಾಡುತ್ತಾನೆ.

ಭಾಗ್ಯಾ ಎನ್ನುವಳಿಗೆ ಬೇಜವಾಬ್ದಾರಿತನ ಹೆಚ್ಚು ಎನ್ನುತ್ತಾನೆ. ಅಕ್ಕಂಗೆ ಇಷ್ಟು ಬೇಜವಾಬ್ದಾರಿತನ ಅಂದರೆ ತಂಗಿ ಕೂಡ ಹಾಗೇ ಇರ್ತಾಳೆ ಅಲ್ವಾ ಎಂದು ಆದೀಶ್ವರ್ ಕಾಮತ್, ಕಿಶನ್ ಬಳಿ ಪ್ರಶ್ನೆ ಮಾಡ್ತಾನೆ. ಇದೆಲ್ಲವನ್ನೂ ನೋಡಿದ ಪ್ರೇಕ್ಷಕರಿಗೆ 5G ಯುಗದಲ್ಲಿಯೂ ಕೂಡ ಅವರೇ ಇವರು, ಇವರೇ ಅವರು ಎನ್ನುವುದು ಗೊತ್ತಾಗಲಿಲ್ವಾ ? ಕಿಶನ್ ತನ್ನ ಮೊಬೈಲ್‌ನಲ್ಲಿ ಭಾಗ್ಯ ಮತ್ತು ಕುಸುಮಾ ಫೋಟೊ ತೋರಿಸಬಹುದಿತ್ತಲ್ಲ ಎನ್ನುವ ಪ್ರಶ್ನೆ ಕಾಡುತ್ತಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X