Bhagya Lakshmi ; ಬೇರೊಬ್ಬಳ ಜೊತೆ ಕಿಶನ್ ಜಾಲಿ ರೈಡ್, ತಲೆ ಕೆಡಿಸಿಕೊಂಡು ಬೆನ್ನತ್ತಿದ ಭಾಗ್ಯ !

ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಕಿಶನ್ ನಡೆ ಮತ್ತು ನುಡಿಯ ಪರೀಕ್ಷೆಯನ್ನು ಮಾಡುವ ಕುಸುಮಾ ಮನೆಗೆ ಬಂದು ಭಾಗ್ಯ ಎದುರು ಕಿಶನ್‌ನ ಕೊಂಡಾಡಿರುತ್ತಾಳೆ. ಆ ನಂತರ ಇಬ್ಬರು ಪೂಜಾ ಮುಂದೆ ಹೋಗಿ ಮದುವೆಯ ಪ್ರಸ್ತಾಪ ಮಾಡಿದಾಗ ನೀವು ಹೇಳಿದಂತೆಯೇ ಆಗಲಿ ಎಂದು ಪೂಜಾ ತಲೆಯಾಡಿಸುತ್ತಾಳೆ. ಮನದೊಳಗೆ ಖುಷಿ ಪಡುತ್ತಾಳೆ. ಪೂಜಾ ಮದುವೆಗೆ ರೆಡಿ ಎಂದ ಹಿನ್ನೆಲೆ ಭಾಗ್ಯ ಮತ್ತು ಕುಸುಮಾ ಇಬ್ಬರಿಗೆ ಖುಷಿಯಾಗಿರುತ್ತೆ.

ಆದರೆ ಇವರ ಸಂಭ್ರಮಕ್ಕೆ ಕೊಳ್ಳಿ ಇಡಲು ತಾಂಡವ್ ಮತ್ತು ಶ್ರೇಷ್ಠಾ ಹೊತೊರೆಯುತ್ತಿದ್ದಾರೆ. ಸುಮ್ಮನೆ ಇರದ ಶ್ರೇಷ್ಠಾ, ಭಾಗ್ಯಾಗೆ ಫೋನ್ ಮಾಡಿರುತ್ತಾಳೆ. ಪೂಜಾ ಬಗ್ಗೆ ಇಲ್ಲ ಸಲ್ಲದ ಮಾತು ಹೇಳಲು ಬಂದ ಶ್ರೇಷ್ಠ ಮುಖಕ್ಕೆ ಉಗಿದು ಭಾಗ್ಯ ಮಂಗಳಾರತಿ ಮಾಡಿದ್ದಾಳೆ. ಮನೆಯ ಮಾನ ಮರ್ಯಾದೆಯನ್ನು ಬೀದಿಯಲ್ಲಿ ಹರಾಜು ಹಾಕೋಕೆ ನನ್ನ ತಂಗಿಯನ್ನೇನು ನೀನು ಅಂದುಕೊಂಡಿದ್ದೀಯಾ, ನಾಚಿಕೆ ಮಾನ ಮರ್ಯಾದೆ ಇಲ್ಲದೆ ಇನ್ನೊಬ್ಬರ ಮನೆ ಹಾಳು ಮಾಡುವವಳು ನೀನು ಎಂದು ಕಿಡಿ ಕಾರಿದ್ದಾಳೆ.

kannada-serial-bhagya-lakshmi-written-update-may-17

ನಿನ್ನಿಂದ ಬುದ್ದಿ ಹೇಳಿಸಿಕೊಳ್ಳುವ ದರ್ದು ನನಗೆ ಇಲ್ಲ, ನೀನ್ಯಾರೋ ನಡತೆ ಸರಿ ಇಲ್ಲದವನನ್ನು ಒಪ್ಪಿಕೊಂಡಿದ್ದೀಯಾ ಎಂದರೆ ನಮ್ಮ ಪೂಜಾ ಕೂಡ ಹಾಗೇ ಮಾಡ್ತಾಳೆ ಅಂದುಕೊಂಡಿದ್ದೀಯಾ ಎಂದು ಬ್ಯೆದಿದ್ಧಾಳೆ. ಇದರಿಂದ ಶ್ರೇಷ್ಠಾ ಕೊತ ಕೊತ ಕುದಿಯುತ್ತಿದ್ಧಾಳೆ.

ಮದುವೆ ನಿಲ್ಲಿಸಲು ತಾಂಡವ್-ಶ್ರೇಷ್ಠಾ ಪ್ಲ್ಯಾನ್

ಹೇಗಾದರೂ ಮಾಡಿ ಮದುವೆ ನಿಲ್ಲಿಸಬೇಕೆಂದು ಶ್ರೇಷ್ಠಾ ಮತ್ತು ತಾಂಡವ್ ನಿರ್ಧಾರ ಮಾಡಿದ್ದಾರೆ. ಈ ಸಮಯದಲ್ಲಿ ಶ್ರೇಷ್ಠಾ ನನ್ನ ಬಳಿ ಒಂದು ಐಡಿಯಾ ಇದೆ ಎನ್ನುತ್ತಾಳೆ. ತಾಂಡವ್‌ಗೆ ತನ್ನ ಅತ್ತೆ ಸುನಂದಾ ತಲೆ ಕೆಡಿಸುವಂತೆ ಹೇಳುತ್ತಾಳೆ. ಕೂಡಲೇ ಕಾರ್ಯಪ್ರವೃತ್ತನಾಗುವ ತಾಂಡವ್ ತಡಮಾಡದೇ ಸುನಂದಾಗೆ ಕರೆ ಮಾಡುತ್ತಾನೆ. ಪೂಜಾಳನ್ನು ಮದುವೆಯಾಗಲಿರುವ ಹುಡುಗ ಕಿಶನ್ ಸರಿ ಇಲ್ಲ ಅವನಂತಹ ನಾಲಾಯಕ್ ವ್ಯಕ್ತಿಯೇ ಈ ನೆಲದ ಮೇಲಿಲ್ಲ ಎಂದು ಹೇಳುತ್ತಾನೆ.

ತಾಂಡವ್ ಮಾತಿಗೆ ತಲೆಯಾಡಿಸಿದ ಸುನಂದಾ

ತಾಂಡವ್ ಮಾತು ಕೇಳಿ ಸುನಂದಾಗೆ ನಿಂತ ನೆಲ ಕುಸಿದ ಅನುಭವವಾಗುತ್ತೆ. ಹೀಗಾಗಿ ಕಿಶನ್ ಸತ್ಯವನ್ನು ತಾನೇ ಪತ್ತೆ ಹಚ್ಚಲು ಸುನಂದಾ ನಿರ್ಧಾರ ಮಾಡಿದ್ಧಾಳೆ. ಇದೇ ಸಮಯದಲ್ಲಿ ಕಿಶನ್‌ನ ನಿಜವಾದ ಮುಖ ತೋರಿಸುವುದಾಗಿ ಹೇಳಿ ಸುನಂದಾಳನ್ನು ತಾಂಡವ್ ಕರೆಸಿಕೊಂಡಿದ್ದಾನೆ. ಮತ್ತೊಂದು ಕಡೆ ಹುಡುಗಿಯನ್ನು ಕಿಶನ್ ಹಿಂದೆ ಕಳುಹಿಸಿದ್ದಾನೆ.

ಡ್ರಾಪ್ ಕೇಳುವ ನೆಪದಲ್ಲಿ ಆ ಹುಡುಗಿ ಕಿಶನ್ ಬೈಕ್ ಹತ್ತುತ್ತಾಳೆ. ಆಗ ನೋಡಿದ್ರಲ್ಲಾ ಈ ತರಹದ ಶೋಕಿ ಎಲ್ಲ ಇದೆ ಇವನಿಗೆ ಎಂದು ಭಾಗ್ಯ ತಲೆಯನ್ನು ತಾಂಡವ್ ಕೆಡಿಸಿದ್ದಾನೆ. ಸುನಂದಾ ಕೂಡ ಅಳಿಯನ ಮಾತನ್ನು ನಂಬಿದ್ದು ಬನ್ನಿ ಇಬ್ಬರನ್ನು ಫಾಲೋ ಮಾಡೋಣ ಎಂದು ಹೇಳುತ್ತಾಳೆ.

ಕಿಶನ್‌ ಪಾಲಿಗೆ ಜಾಲಿ ರೈಡ್‌ ಅಲ್ಲ ಕಿರಿ ಕಿರಿ ರೈಡ್

ಬೈಕ್ ಏರಿದ ಹುಡುಗಿ ಕಿಶನ್‌ನ ಅಪ್ಪಿಕೊಂಡಿದ್ದಾಳೆ. ಇದರಿಂದ ಕಿಶನ್‌ಗೆ ಇರಿಸು ಮುರಿಸಾಗುತ್ತೆ. ಇದೇ ಸಮಯದಲ್ಲಿ ಕುಸುಮಾ ಮತ್ತು ಭಾಗ್ಯ ಅದೇ ದಾರಿಯಲ್ಲಿ ಬಂದಿದ್ದು ಕಿಶನ್‌ನ ಬೇರೆ ಹುಡುಗಿಯ ಜೊತೆ ನೋಡಿ ತಲೆ ಕೆಡಿಸಿಕೊಂಡಿದ್ದಾರೆ. ಆದರೂ ಕೂಡ ಕಿಶನ್ ಹೀಗೆಲ್ಲ ಮಾಡಲಾರ ಎಂಬ ನಂಬಿಕೆ ಇಬ್ಬರಿಗೆ ಇದೆ. ಈ ಸಮಯದಲ್ಲಿ ಕಿಶನ್ ಬೈಕ್ ಹತ್ತಿದ ಹುಡುಗಿಗೆ ತರಾಟೆ ತೆಗೆದುಕೊಂಡಿದ್ದು ಇದೆಲ್ಲವನ್ನು ಭಾಗ್ಯ ಮತ್ತು ಕುಸುಮಾ ಅಲ್ಲಿಯೇ ಹತ್ತಿರದಿಂದ ನೋಡಿದ್ದಾರೆ. ಇಬ್ಬರ ಸಂಭಾಷಣೆ ಕೇಳಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಸದ್ಯ ತಾಂಡವ್ ಮಾತುಗಳನ್ನು ಸುನಂದಾ ಸಂಪೂರ್ಣವಾಗಿ ನಂಬಿದ್ದು ಮದುವೆ ಯಾವುದೇ ಕಾರಣಕ್ಕೂ ನಡೆಯಬಾರದು ಅಳಿಯಂದ್ರೆ ಎಂದು ಹೇಳಿದ್ದಾಳೆ. ಭಾಗ್ಯ ಮತ್ತು ಕುಸುಮಾ ಅಸಲಿ ವಿಚಾರವನ್ನು ಸುನಂದಾಗೆ ಹೇಳುತ್ತಾರಾ ? ಸುನಂದಾಗೆ ತಾಂಡವ್ ಪ್ಲ್ಯಾನ್ ಗೊತ್ತಾಗುತ್ತಾ ? ಪೂಜಾ ಮದುವೆ ಕಿಶನ್ ಜೊತೆ ನಡೆಯುತ್ತಾ ಎನ್ನುವುದನ್ನು ಈಗ ಕಾದು ನೋಡಬೇಕಿದೆ.

More from Filmibeat

English summary
kannada serial bhagya lakshmi written update may 17
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X