Bhagya Lakshmi ; ತಾಂಡವ್ ಕಳಿಸಿದ್ದ ಹುಡುಗಿಯನ್ನು ಖೆಡ್ಡಾಗೆ ಬೀಳಿಸಲು ಮಾಸ್ಟರ್ ಪ್ಲಾನ್ ಮಾಡಿದ ಭಾಗ್ಯ ..!
ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಕಿಶನ್ ಮತ್ತು ಪೂಜಾ ಮದುವೆ ನಿಲ್ಲಿಸಲು ತಾಂಡವ್ ಮತ್ತು ಶ್ರೇಷ್ಠಾ ಪ್ಲಾನ್ ಮಾಡಿದ್ದಾರೆ. ಕಿಶನ್ ಹೋಗುವ ದಾರಿ ಮಧ್ಯದಲ್ಲಿ ಡ್ರಾಪ್ ಕೇಳುವ ನೆಪದಲ್ಲಿ ಹುಡುಗಿಯನ್ನು ಕಳುಹಿಸಿದ್ದಾರೆ. ತಾಂಡವ್ ಮತ್ತು ಶ್ರೇಷ್ಠಾ ಅಂದುಕೊಂಡತೆ ಕಿಶನ್ ಆ ಅನಾಮಿಕ ಹುಡುಗಿಯನ್ನು ಡ್ರಾಪ್ ಮಾಡಲು ಮುಂದಾಗಿದ್ದು, ಬೈಕ್ ಏರಿದ ಹುಡುಗಿ ಕಿಶನ್‌ನ ಅಪ್ಪಿಕೊಂಡಿದ್ದಾಳೆ. ಇದರಿಂದ ಕಿಶನ್‌ಗೆ ಇರಿಸು ಮುರಿಸಾಗುತ್ತೆ.
ಇದೇ ಸಮಯದಲ್ಲಿ ಕುಸುಮಾ ಮತ್ತು ಭಾಗ್ಯ ಅದೇ ದಾರಿಯಲ್ಲಿ ಬಂದಿದ್ದು ಕಿಶನ್‌ನ ಬೇರೆ ಹುಡುಗಿಯ ಜೊತೆ ನೋಡಿ ತಲೆ ಕೆಡಿಸಿಕೊಂಡಿದ್ದಾರೆ. ಆದರೂ ಕೂಡ ಕಿಶನ್ ಹೀಗೆಲ್ಲ ಮಾಡಲಾರ ಎಂಬ ನಂಬಿಕೆ ಇಬ್ಬರಿಗೆ ಇದೆ.

ಮತ್ತೊಂದು ಕಡೆ ಇದೇ ಸಮಯದಲ್ಲಿ ತನ್ನ ಅತ್ತೆ ಸುನಂದಾಳನ್ನು ಕರೆಸಿಕೊಂಡಿರುವ ತಾಂಡವ್, ಪೂಜಾಳನ್ನು ಮದುವೆಯಾಗಲಿರುವ ಹುಡುಗ ಕಿಶನ್ ಸರಿ ಇಲ್ಲ, ಇದಕ್ಕೆ ಬೇಕಾದ ಸಾಕ್ಷಿ ನಿಮ್ಮ ಕಣ್ಮುಂದೆಯೇ ಇದೆ ಎಂದು ತೋರಿಸುತ್ತಾನೆ. ಕಿಶನ್ ಬಗ್ಗೆ ಇಲ್ಲ ಸಲ್ಲದ ಮಾತುಗಳನ್ನಾಡುತ್ತಾನೆ.
ಕಣ್ಣಾರೆ ಕಂಡ ದೃಶ್ಯಗಳನ್ನು ಮತ್ತು ತಾಂಡವ್ ಮಾತುಗಳನ್ನು ನಂಬುವ ಸುನಂದಾ ಯಾವುದೇ ಕಾರಣಕ್ಕೂ ನಡೆಯಬಾರದು ಅಳಿಯಂದ್ರೆ ಎಂದು ಹೇಳಿದ್ದಾಳೆ. ಆ ನಂತರ ಮನೆಗೆ ಬಂದು ಕಿಶನ್ ನಡುವಳಿಕೆ ಸರಿ ಇಲ್ಲ ಈ ಮದುವೆ ನಡೆಯಲು ಸಾಧ್ಯ ಇಲ್ಲ ಎಂದು ಹೇಳಿದ್ದಾಳೆ. ಪೂಜಾ ಮದುವೆ ವಿಚಾರದಲ್ಲಿ ನನಗೂ ಜವಾಬ್ಧಾರಿ ಇದೆ ಈ ಮದುವೆ ನಡೆಯಲು ನಾನು ಬಿಡಲ್ಲ ಎಂದು ಹೇಳಿದ್ದಾಳೆ.
ಆ ಹುಡುಗಿಯ ಜನ್ಮ ಜಾಲಾಡಲು ಮುಂದಾದ ಭಾಗ್ಯ
ಬೈಕ್ ಹತ್ತಿದ ಹುಡುಗಿಯನ್ನು ಕಿಶನ್ ತರಾಟೆಗೆ ತೆಗೆದುಕೊಂಡಿದ್ದನ್ನು ನೋಡಿದ್ದ ಭಾಗ್ಯ ಮತ್ತು ಕುಸುಮಾಗೆ ಇದರ ಹಿಂದೆ ಬೇರೆ ಯಾರದ್ದೋ ಕೈವಾಡ ಇದೆ ಎನ್ನುವುದು ಸ್ಪಷ್ಟವಾಗಿರುತ್ತೆ.
ಬೇಕಂತಲೇ ಯಾರೋ ಆ ಹುಡುಗಿಯನ್ನು ಕಳುಹಿಸಿದ್ದು ಎನ್ನುವ ಅನುಮಾನ ಭಾಗ್ಯ ಮತ್ತು ಕುಸುಮಾಗೆ ಬರುತ್ತೆ. ಹೀಗಾಗಿ ಆ ಹುಡುಗಿ ಯಾರು ಎನ್ನುವ ಸತ್ಯವನ್ನು ಭಾಗ್ಯ ಮತ್ತು ಕುಸುಮಾ ಹುಡುಕಲು ಮುಂದಾಗಿದ್ದು ಈ ಎಲ್ಲದರ ಹಿಂದೆ ಇರುವ ಮಾಸ್ಟರ್ ಮೈಂಡ್ ಯಾರದ್ದು ಎಂದು ತಲೆ ಕೆಡಿಸಿಕೊಂಡಿದ್ದಾರೆ.
ಕಿಶನ್ ಜಾಕೆಟ್‌ನಲ್ಲಿ ವಿಸಿಟಿಂಗ್ ಕಾರ್ಡ್
ಬೈಕ್‌ನಲ್ಲಿ ಕಿಶನ್ ಜೊತೆ ಬರುವಾಗ ಆ ಹುಡುಗಿ ಕಿಶನ್ ಜಾಕೆಟ್‌ನಲ್ಲಿ ತನ್ನ ವಿಸಿಟಿಂಗ್ ಕಾರ್ಡ್ ಇಟ್ಟಿರುತ್ತಾಳೆ. ಇದನ್ನು ಗಮನಿಸಿದ ಕಿಶನ್ ಆ ನಂತರ ಆ ನಂಬರ್‌ಗೆ ಕರೆ ಮಾಡಿದಾಗ ನನಗೆ ಹೇಳಿದ್ದ ಕೆಲಸ ನಾನು ಮಾಡಿದ್ದೇನೆ ಎಂದು ಆ ಹುಡುಗಿ ಫೋನ್ ಕಟ್ ಮಾಡುತ್ತಾಳೆ. ಇದರಿಂದ ಅನುಮಾನಗೊಳ್ಳುವ ಕಿಶನ್ ಕೂಡಲೇ ಭಾಗ್ಯಾಗೆ ಫೋನ್ ಮಾಡಿ ಎಲ್ಲವನ್ನು ವಿವರಿಸಿದ್ದಾನೆ. ಆ ಹುಡುಗಿಯ ನಂಬರ್‌ನ್ನು ಕೂಡ ಭಾಗ್ಯಾಗೆ ಕಳಿಸಿದ್ದಾನೆ
ಆಕ್ಟಿಂಗ್ ಆಫರ್ ನೀಡಿದ ಭಾಗ್ಯಾ
ಕಿಶನ್ ಕಳುಹಿಸಿದ ನಂಬರ್‌ಗೆ ಭಾಗ್ಯ ಫೋನ್ ಮಾಡಿದ್ದು, ಮಾಡೆಲಿಂಗ್ ಏಜೆನ್ಸಿಯಿಂದ ಕರೆ ಮಾಡುತ್ತಿರುವುದಾಗಿ ಸುಳ್ಳು ಹೇಳಿದ್ದಾರೆ. ನಮ್ಮ ಬಳಿ ದೊಡ್ಡ ಜಾಹೀರಾತು ಇದೆ ನಿಮಗೆ ಮಾಡೆಲಿಂಗ್ ಅಂದರೆ ತುಂಬಾ ಆಸಕ್ತಿ ಎನ್ನುವ ವಿಚಾರ ಗೊತ್ತಾಯ್ತು ಹೀಗಾಗಿ ನಮ್ಮ ಜಾಹೀರಾತಿನಲ್ಲಿ ನೀವು ಅಭಿನಯಿಸುತ್ತೀರಾ ಎಂದು ಭಾಗ್ಯ ಆ ಹುಡುಗಿಗೆ ಕೇಳುತ್ತಾಳೆ.
ಭಾಗ್ಯ ನೀಡಿದ ಈ ಆಫರ್‌ನ್ನು ಮರು ಮಾತನಾಡದೇ ಒಪ್ಪಿಕೊಳ್ಳುವ ಆ ಹುಡುಗಿ ಖುಷಿಯಿಂದ ಯಾವ ತರಹದ ಜಾಹೀರಾತು, ಏನು ಕತೆ ಎಂದು ಕೇಳುತ್ತಾಳೆ. ಹುಡುಗಿಯ ಈ ಮಾತು ಕೇಳಿ ಖುಷಿಯಾಗುವ ಭಾಗ್ಯ ಎಲ್ಲ ಫೋನ್‌ನಲ್ಲಿಯೇ ಮಾತನಾಡುವುದು ಬೇಡ ನಾಣೊಂದು ಲೊಕೇಷನ್ ನಿಮಗೆ ಕಳುಹಿಸುತ್ತೇನೆ ಅಲ್ಲಿಗೆ ಬನ್ನಿ ಅಲ್ಲಿಯೇ ವಿವರವಾಗಿ ಮಾತನಾಡೋಣ ಎನ್ನುತ್ತಾಳೆ.
ಸದ್ಯ ಭಾಗ್ಯ ಆ ಹುಡುಗಿಗೆ ಲೋಕೆಷನ್ ಕಳುಹಿಸಿದ್ದು ಭಾಗ್ಯ ಮತ್ತು ಆ ಹುಡುಗಿ ಮುಖಾಮುಖಿಯಾದ ನಂತರ ಆ ಹುಡುಗಿ ಯಾವೆಲ್ಲ ವಿಚಾರ ಹೇಳುತ್ತಾಳೆ ? ತಾಂಡವ್ ಗೆ ಭಾಗ್ಯ ಮತ್ತೊಮ್ಮೆ ಈ ಮೂಲಕ ಶಾಕ್ ನೀಡುತ್ತಾಳಾ ? ಎನ್ನುವುದನ್ನು ಸದ್ಯ ಕಾದು ನೋಡಬೇಕಿದೆ.


Click it and Unblock the Notifications











