Bhagya Lakshmi ; ಭಾಗ್ಯ ಮತ್ತು ಕುಸುಮಾ ಕೈಯಲ್ಲಿ ತಗಲಾಕಿಕೊಂಡ ಮಿಸ್ಟರಿ ಗರ್ಲ್, ಸುನಂದಾ ಮಾತಿಗೆ ಎಲ್ಲ ತಬ್ಬಿಬ್ಬು..!
ಕಿಶನ್ ಮತ್ತು ಪೂಜಾ ಮದುವೆಯಾಗದಂತೆ ತಾಂಡವ್ ಮತ್ತು ಶ್ರೇಷ್ಠಾ ಪ್ಲ್ಯಾನ್ ಮಾಡಿದ್ದರು. ಡ್ರಾಪ್ ಕೇಳುವ ನೆಪದಲ್ಲಿ ಕಿಶನ್ ಹಿಂದೆ ಹುಡುಗಿಯನ್ನು ಕಳುಹಿಸಿ ಮಜಾ ತೆಗೆದುಕೊಂಡಿದ್ದರು. ಸಾಲದಕ್ಕೆ ತಾಂಡವ್ ತನ್ನ ಅತ್ತೆ ಸುನಂದಾಳನ್ನು ಕೂಡ ಕಿಶನ್ ವ್ಯಕ್ತಿತ್ವ ಸರಿ ಇಲ್ಲ ಎಂದು ನಂಬಿಸಿದ್ದ. ಕಿಶನ್ ಕುರಿತು ಇಲ್ಲ ಸಲ್ಲದ ಮಾತುಗಳನ್ನು ಹೇಳಿದ್ದ.
ತಾಂಡವ್ ಮಾತನಾಡಿದ ಮಾತುಗಳೆಲ್ಲವೂ ಸತ್ಯ ಎಂದುಕೊಂಡ ಸುನಂದಾ ಈ ಮದುವೆ ನಡೆಯಲು ನಾನು ಬಿಡುವುದಿಲ್ಲ ಎಂದು ಶಪಥ ಮಾಡಿದ್ದಳು. ಇನ್ನು ಮತ್ತೊಂದು ಕಡೆ ಕುಸುಮಾ ಮತ್ತು ಭಾಗ್ಯ ಆರಂಭದಲ್ಲಿ ಕಿಶನ್ ವರ್ತನೆ ಕಂಡು ಅನುಮಾನಗೊಂಡರು ಆ ನಂತರ ಕಿಶನ್ ಹೀಗೆಲ್ಲ ಮಾಡಲಾರ ಎನ್ನುವ ನಂಬಿಕೆಯನ್ನು ವ್ಯಕ್ತಪಡಿಸಿದ್ದರು.

ವಿಸಿಟಿಂಗ್ ಕಾರ್ಡ್‌ನಿಂದ ತಗ್ಲಾಕಿಕೊಂಡ ಮಿಸ್ಟರಿ ಗರ್ಲ್
ಇಬ್ಬರ ನಂಬಿಕೆ ಹುಸಿ ಮಾಡದ ಕಿಶನ್ ಆ ನಂತರ ಭಾಗ್ಯ ಮತ್ತು ಕುಸುಮಾ ಕಣ್ಣೇದುರಲ್ಲಿಯೇ ಆ ಹುಡುಗಿಗೆ ತಪರಾಕಿಯನ್ನು ಹಾಕಿದ್ದ. ಆದರೆ ಈ ಸಮಯದಲ್ಲಿ ಬೈಕ್‌ನಲ್ಲಿ ಕಿಶನ್ ಜೊತೆ ಬರುವಾಗ ಆ ಹುಡುಗಿ ಕಿಶನ್ ಜಾಕೆಟ್‌ನಲ್ಲಿ ತನ್ನ ವಿಸಿಟಿಂಗ್ ಕಾರ್ಡ್ ಇಟ್ಟಿದ್ದಳು. ಆ ನಂತರ ಇದನ್ನು ಗಮನಿಸಿದ ಕಿಶನ್ ಆ ನಂಬರ್‌ಗೆ ಕರೆ ಮಾಡಿದಾಗ ನನಗೆ ಹೇಳಿದ್ದ ಕೆಲಸ ನಾನು ಮಾಡಿದ್ದೇನೆ ಎಂದು ಆ ಹುಡುಗಿ ಫೋನ್ ಕಟ್ ಮಾಡಿದ್ದಳು.
ಇದರಿಂದ ಅನುಮಾನಗೊಳ್ಳುವ ಕಿಶನ್ ಕೂಡಲೇ ಭಾಗ್ಯಾಗೆ ಫೋನ್ ಮಾಡಿ ಎಲ್ಲವನ್ನು ವಿವರಿಸಿದ್ದ. ಆ ಹುಡುಗಿಯ ನಂಬರ್‌ನ್ನು ಕೂಡ ಭಾಗ್ಯಾಗೆ ಕಳಿಸಿದ್ದ. ಕಿಶನ್ ಕಡೆಯಿಂದ ನಂಬರ್ ಪಡೆದುಕೊಂಡಿದ್ದ ಭಾಗ್ಯ ಆ ಚೆಲುವೆಗೆ ಫೋನ್ ಮಾಡಿದ್ದಳು. ಕಿಶನ್ ಕಳುಹಿಸಿದ ನಂಬರ್‌ಗೆ ಭಾಗ್ಯ ಫೋನ್ ಮಾಡಿದ್ದಳು. ಮಾಡೆಲಿಂಗ್ ಏಜೆನ್ಸಿಯಿಂದ ಕರೆ ಮಾಡುತ್ತಿರುವುದಾಗಿ ಸುಳ್ಳು ಹೇಳಿದ್ದಳು. ಭಾಗ್ಯ ಮಾತುಗಳನ್ನು ನಂಬಿದ್ದ ಆ ಹುಡುಗಿ ಭಾಗ್ಯಳನ್ನು ಭೇಟಿಯಾಗಲು ಒಪ್ಪಿಕೊಂಡಿದ್ದಳು.
ಅನಾಮಿಕ ಹುಡುಗಿಯನ್ನು ತರಾಟೆಗೆ ತೆಗೆದುಕೊಂಡ ಕುಸುಮಾ
ಅದ್ರಂತೆ ಇದೀಗ ಆ ಹುಡುಗಿ ಭಾಗ್ಯ ಹೇಳಿದ್ದ ಲೊಕೇಷನ್‌ಗೆ ಬಂದಿದ್ದಾಳೆ. ಭಾಗ್ಯಾಗೆ ಫೋನ್ ಮಾಡಿದ್ದಾಳೆ. ಆಗ ಅಲ್ಲಿಗೆ ಕುಸುಮಾ ಬಂದಿದ್ದು ವಾಚಾಮಗೋಚರವಾಗಿ ಬೈದಿದ್ದಾಳೆ. ಮಾಡೆಲಿಂಗ್ ಆಸೆ ತೋರಿಸಿ ತನ್ನನ್ನು ಇಲ್ಲಿ ಕರೆಸಿಕೊಳ್ಳಲಾಗಿದೆ ಎನ್ನುವುದನ್ನು ಅರಿತ ಆ ಹುಡುಗಿ ನಿಮ್ಮ ಮಾತೆಲ್ಲ ಒಂದು ರೀತಿ ಇದೆಯಲ್ಲ ಎಂದು ಹೇಳುತ್ತಾಳೆ. ಆಗ ಅಬ್ಬಬ್ಬಾ ಕೊನೆಗೂ ಸತ್ಯ ಗೊತ್ತಾಯ್ತಲ್ಲಾ ಎಂದು ಭಾಗ್ಯ ವ್ಯಂಗ್ಯ ಮಾಡಿದ್ದು, ಕುಸುಮಾ ನೀವು ಹುಡುಗಿಯರು ಬುದ್ದಿನ ಬಾಡಿಗೆಗೆ ಕೊಟ್ಟಿರುತ್ತೀರೋ ಅಥವಾ ನೀವು ಇರೋದೇ ಹೀಗಾ ಎಂದು ಪ್ರಶ್ನೆ ಕೇಳುತ್ತಾಳೆ.
ಕುಸುಮಾ ಮತ್ತು ಭಾಗ್ಯಳ ಮಾತುಗಳಿಗೆ ಉತ್ತರಿಸಲು ಪರದಾಡುವ ಅನಾಮಿಕ ಹುಡುಗಿ ಇದರಲ್ಲಿ ನನ್ನ ತಪ್ಪೇನು ಇಲ್ಲ ಶ್ರೇಷ್ಠಾ ಹೇಳಿದಂತೆ ನಾನು ಮಾಡಿದ್ದೇನೆ ಎಂದು ಹೇಳಿದ್ದಾಳೆ. ಇನ್ನು ಇದೆಲ್ಲದರ ನಡುವೆ ಸುನಂದಾಗೆ ಭಾಗ್ಯ ಫೋನ್ ಮಾಡಿ ಲೊಕೇಷನ್‌ಗೆ ಬರುವಂತೆ ಹೇಳಿದ್ದು ಸುನಂದಾ ಕೂಡ ಅಲ್ಲಿಗೆ ಬಂದಿದ್ದಾಳೆ. ಹುಡುಗಿ ಹೇಳಿದ ಸತ್ಯ ಕೇಳಿ ಬೆಚ್ಚಿ ಬಿದ್ದ ಸುನಂದಾ ಇದೆಲ್ಲ ಆ ಮನೆಹಾಳನ ಕೆಲಸಾನಾ ? ಮಗನೂ ಚೂಟಿ ತೊಟ್ಟಿಲು ತೂಗುವ ಕೆಲಸ ಮಾಡಿದ್ದಾನೆ ಅವನು ಎಂದು ಕಿಡಿ ಕಾರಿದ್ದಾಳೆ.
ಸುನಂದಾ ಮಾತು ಕೇಳಿ ಶಾಕ್ ಆದ ಭಾಗ್ಯ-ಕುಸುಮಾ
ಸುನಂದಾ ಮಾತುಗಳನ್ನು ಕೇಳಿ ಕುಸುಮಾ ಮತ್ತು ಭಾಗ್ಯ ಶಾಕ್ ಆಗಿದ್ದು, ಅಮ್ಮ ಏನು ಹೇಳ್ತಿದ್ದೀಯಮ್ಮ ಎಂದು ಭಾಗ್ಯ ಪ್ರಶ್ನೆ ಮಾಡುತ್ತಾಳೆ. ಆಗ ಈ ಕಿಶನ್ ಎಷ್ಟು ಕೆಟ್ಟವನು ಇವನ ನಿಜವಾದ ಬಣ್ಣ ಬಯಲು ಮಾಡ್ತೀನಿ ಬನ್ನಿ ಎಂದು ಯಾವುದೋ ಜಾಗಕ್ಕೆ ಕರೆಸಿದ್ದ ಎಂದು ಸುನಂದಾ ಹೇಳುತ್ತಾಳೆ. ಈ ಮೂಲಕ ಇದೆಲ್ಲದರ ಹಿಂದೆ ತಾಂಡವ್ ಕೈವಾಡ ಇದೆ ಎನ್ನುವ ವಿಚಾರ ಈಗ ಭಾಗ್ಯ ಮತ್ತು ಕುಸುಮಾಗೆ ಗೊತ್ತಾಗಿದೆ.
ಕಿಶನ್‌ನ ವ್ಯಕ್ತಿತ್ವವನ್ನು ಅನುಮಾನಿಸಿದ್ದಕ್ಕೆ ಬೇಸರ ಮಾಡಿಕೊಂಡಿದ್ದಾಳೆ.


Click it and Unblock the Notifications











