Bhagya Lakshmi ; ಭಾಗ್ಯಗೆ ಕಾಡಲು ಮತ್ತೆ ಬಂದ ಕನ್ನಿಕಾ, ಪೂಜಾ-ಕಿಶನ್ ಮದ್ವೆ ಮುರಿದು ಬೀಳುತ್ತಾ ?

ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ತಾಂಡವ್ ಮತ್ತು ಶ್ರೇ‍ಷ್ಠಾ ಮಾಡಿದ್ದ ಫ್ಲ್ಯಾನ್ ಸದ್ಯ ಉಲ್ಟಾ ಆಗಿದೆ. ಕಿಶನ್ ಬೈಕ್ ಹತ್ತಿದ್ದ ಮಿಸ್ಟರಿ ಗರ್ಲ್‌ ರಹಸ್ಯ ಬಯಲಾಗಿದೆ. ಭಾಗ್ಯ ಬೀಸಿದ್ದ ಮಾಡೆಲಿಂಗ್ ಗಾಳಕ್ಕೆ ಹುಡುಗಿ ಸಿಕ್ಕಿ ಹಾಕಿಕೊಂಡಿದ್ದು ಭಾಗ್ಯಳನ್ನು ಭೇಟಿ ಮಾಡಲು ಬಂದಿದ್ದಾಳೆ. ಇದೇ ಸಮಯದಲ್ಲಿ ಕುಸುಮಾ ಬಂದಿದ್ದು ವಾಚಾಮಗೋಚರವಾಗಿ ಬೈದಿದ್ದಾಳೆ. ಮಾಡೆಲಿಂಗ್ ಆಸೆ ತೋರಿಸಿ ತನ್ನನ್ನು ಇಲ್ಲಿ ಕರೆಸಿಕೊಳ್ಳಲಾಗಿದೆ ಎನ್ನುವುದನ್ನು...

ಅರಿತ ಆ ಹುಡುಗಿ ನಿಮ್ಮ ಮಾತೆಲ್ಲ ಒಂದು ರೀತಿ ಇದೆಯಲ್ಲ ಎಂದು ಹೇಳುತ್ತಾಳೆ. ಆಗ ಅಬ್ಬಬ್ಬಾ ಕೊನೆಗೂ ಸತ್ಯ ಗೊತ್ತಾಯ್ತಲ್ಲಾ ಎಂದು ಭಾಗ್ಯ ವ್ಯಂಗ್ಯ ಮಾಡಿದ್ದು, ಕುಸುಮಾ ನೀವು ಹುಡುಗಿಯರು ಬುದ್ದಿನ ಬಾಡಿಗೆಗೆ ಕೊಟ್ಟಿರುತ್ತೀರೋ ಅಥವಾ ನೀವು ಇರೋದೇ ಹೀಗಾ ಎಂದು ಪ್ರಶ್ನೆ ಕೇಳುತ್ತಾಳೆ.

kannada-serial-bhagya-lakshmi-written-update-may-23

ಸುನಂದಾಗೆ ಭಾಗ್ಯ ಫೋನ್ ಮಾಡಿ ಲೊಕೇಷನ್‌ಗೆ ಬರುವಂತೆ ಹೇಳಿದ್ದು ಸುನಂದಾ ಕೂಡ ಅಲ್ಲಿಗೆ ಬಂದಿದ್ದಾಳೆ. ಹುಡುಗಿ ಹೇಳಿದ ಸತ್ಯ ಕೇಳಿ ಬೆಚ್ಚಿ ಬಿದ್ದ ಸುನಂದಾ ಇದೆಲ್ಲ ಆ ಮನೆಹಾಳನ ಕೆಲಸಾನಾ ? ಮಗನೂ ಚೂಟಿ ತೊಟ್ಟಿಲು ತೂಗುವ ಕೆಲಸ ಮಾಡಿದ್ದಾನೆ ಅವನು ಎಂದು ಕಿಡಿ ಕಾರಿದ್ದಾಳೆ. ಸುನಂದಾ ಮಾತುಗಳನ್ನು ಕೇಳಿ ಭಾಗ್ಯ ಮತ್ತು ಕುಸುಮಾ ಆಶ್ಚರ್ಯಗೊಂಡಿದ್ದಾರೆ.ಇದರ ನಡುವೆ ಇದೀಗ ಕನ್ನಿಕಾ ಮತ್ತು ಕಿಶನ್ ನಡುವಿನ ಸಂಬಂಧ ಬಯಲಾಗಿದೆ.


ಕನ್ನಿಕಾಳ ಸ್ವಂತ ಅಣ್ಣ ಕಿಶನ್

ಹೌದು, ಕುಸುಮಾ ಮತ್ತು ಭಾಗ್ಯ ನೀಡಿದ ಪರೀಕ್ಷೆಗಳಲ್ಲಿ ಪಾಸಾದ ಕಿಶನ್ ಸುಮ್ಮನೆ ಇರದೇ ಭಾಗ್ಯಾಗೆ ಕೇಟರಿಂಗ್ ಆರ್ಡರ್ ಕೊಡಿಸಿದ್ದಾನೆ. ಭಾಗ್ಯ ಕುಟುಂಬ ಮತ್ತು ನನ್ನ ಕುಟುಂಬ ಮೊದಲ ಭೇಟಿಯಲ್ಲಿಯೇ ಒಂದಾಗಲಿ ಎಂದು ಪ್ರಾರ್ಥನೆ ಮಾಡಿದ್ದಾನೆ. ಆದರೆ ಕಿಶನ್ ಲೆಕ್ಕಾಚಾರ ಸದ್ಯ ತಲೆ ಕೆಳಗಾಗಿದೆ. ಅಲ್ಲಿ ಹೋದ ಭಾಗ್ಯಗೆ ಪದೇ ಪದೇ ಹಿಂಸೆ ಕೊಟ್ಟ, ಮತ್ತೆ ಮತ್ತೆ ಹೀಯಾಳಿಸುತ್ತಿದ್ದ ಕನ್ನಿಕಾ ಎದುರಾಗಿದ್ದಾಳೆ. ಇದರಿಂದ ಸದ್ಯ ಭಾಗ್ಯ ಆಘಾತಕ್ಕೊಳಗಾಗಿದ್ದಾಳೆ.

ಭಾಗ್ಯಗೆ ಇನ್ನೂ ಗೊತ್ತಾಗಿಲ್ಲ ಸತ್ಯ

ಕಿಶನ್ ಆರ್ಡರ್ ನೀಡಿದ ನಂತರ ದೇವಸ್ಥಾನಕ್ಕೆ ಪೂಜಾ ಜೊತೆ ಬರುವ ಭಾಗ್ಯ ಮತ್ತು ಕುಸುಮಾ ಅಡುಗೆ ಮಾಡಲು ಶುರು ಮಾಡಿದ್ದಾರೆ. ಇದೇ ಸಮಯದಲ್ಲಿ ಅಲ್ಲಿ ಕನ್ನಿಕಾ ಬಂದಿದ್ದಾಳೆ. ಕನ್ನಿಕಾಳನ್ನು ಕಂಡು ಭಾಗ್ಯ ಗಲಿಬಿಲಿಗೊಂಡಿದ್ದು ಸದ್ಯ ಕನ್ನಿಕಾಳೇ ಕಿಶನ್ ಸಹೋದರಿ ಎನ್ನುವ ವಿಚಾರ ಭಾಗ್ಯಗೆ ಗೊತ್ತಾಗಿಲ್ಲ. ಗೊತ್ತಾದರೆ ಭಾಗ್ಯ ಮುಂದೇನು ಮಾಡುತ್ತಾಳೆ ಎನ್ನುವುದನ್ನು ನೋಡಬೇಕಿದೆ.

ಕನ್ನಿಕಾಳನ್ನು ಕೆಣಕಿದ ಪೂಜಾ

ಪೂಜಾ ಮತ್ತು ಕುಟುಂಬವನ್ನು ಕನ್ನಿಕಾ ಅವಮಾನಿಸಿದ್ದಾಳೆ. ತನ್ನ ತಂಗಿಯ ಮದುವೆ ಕನಸು ಕಾಣುತ್ತಿದ್ದ ಭಾಗ್ಯ ಸದ್ಯ ಕನ್ನಿಕಾಳನ್ನು ಕಂಡು ತಲೆ ಕೆಡಿಸಿಕೊಂಡಿದ್ದಾಳೆ. ಇದರ ನಡುವೆ ಕನ್ನಿಕಾಳಿಗೆ ಪೂಜಾ ತಿರುಗೇಟು ನೀಡಿದ್ದು ಯಾಕೆ ಕನ್ನಿಕಾ ಹೊಟ್ಟೆ ಉರಿಯುತ್ತಿದೆಯಾ, ಹೊಟ್ಟೆ ತಣ್ಣಗಾಗಲು ಲೈಮ್ ಸೋಡಾ ಮಾಡಿ ಕೊಡಲಾ ಎಲ್ಲ ಸರಿ ಹೋಗುತ್ತೆ ಎನ್ನುತ್ತಾಳೆ. ಇದರಿಂದ ಕೆರಳುವ ಕನ್ನಿಕಾ ಏಯ್ ಎಂದು ಉತ್ತರ ಕೊಡಲು ಮುಂದಾದಾಗ ಕನ್ನಿಕಾ ಕೈಯನ್ನು ಪೂಜಾ ತಿರುವುತ್ತಾಳೆ.

ಇನ್ನು ಇದೆಲ್ಲದರ ನಡುವೆ ಕನ್ನಿಕಾಳ ಅಣ್ಣ ಕಿಶನ್ ಎನ್ನುವ ವಿಚಾರ ತಾಂಡವ್‌ಗೆ ಗೊತ್ತಾಗಿದೆ. ಈ ವಿಚಾರವನ್ನು ತಿಳಿದು ತಾಂಡವ್ ಕೂಡ ಶಾಕ್ ಆಗಿದ್ದಾನೆ. ಸದ್ಯ ಕಿಶನ್ ಮತ್ತು ಪೂಜಾ ಮದುವೆ ಈ ಎಲ್ಲಾ ಅಡತಡೆಗಳ ನಡುವೆ ಆಗುತ್ತಾ ? ಪೂಜಾ-ಕಿಶನ್ ಮದುವೆ ನಿಲ್ಲಿಸಲು ಕನ್ನಿಕಾ ಜೊತೆ ಸೇರಿ ತಾಂಡವ್ ಬೇರೆ ಪ್ಲ್ಯಾನ್ ಮಾಡುತ್ತಾನಾ ? ಎನ್ನುವುದನ್ನು ಸದ್ಯ ಕಾದು ನೋಡಬೇಕಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X