Bhagya Lakshmi ; ಭಾಗ್ಯ ಕುಟುಂಬವನ್ನು ಮನೆಯಿಂದ ಹೊರ ಹಾಕಿದ ಕನ್ನಿಕಾ, ಪೂಜಾ-ಕಿಶನ್ ಮದ್ವೆ ಮುರಿದು ಬಿತ್ತಾ ?

ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಪೂಜಾ ಮತ್ತು ಕಿಶನ್ ಮದ್ವೆಯ ಕುರಿತು ಕುತೂಹಲ ಮನೆ ಮಾಡಿದೆ. ಕಿಶನ್ ಬೇರೆ ಯಾರು ಅಲ್ಲ ಬದಲಿಗೆ ಭಾಗ್ಯಗೆ ಪದೇ ಪದೇ ಹಿಂಸೆ ಕೊಟ್ಟ, ಮತ್ತೆ ಮತ್ತೆ ಭಾಗ್ಯಾಗೆ ಹೀಯಾಳಿಸುತ್ತಿದ್ದ ಬದ್ದ ವೈರಿ ಕನ್ನಿಕಾಳ ಸ್ವಂತ ಅಣ್ಣ ಎನ್ನುವುದು ಪ್ರೇಕ್ಷಕರಿಗೆ ಗೊತ್ತಾಗಿದೆ. ಇಷ್ಟೇ ಅಲ್ಲದೇ ಭಾಗ್ಯಾ ಅವರ ಫ್ಯಾಮಿಲಿಗೆ ಕೂಡ ಈಗ ಈ ಕಹಿ ಸತ್ಯ ಗೊತ್ತಾಗಿದೆ.

ಭಾಗ್ಯಗೆ ಎದುರಾದ ಕನ್ನಿಕಾ

ಹೌದು, ಕುಸುಮಾ ಮತ್ತು ಭಾಗ್ಯ ನೀಡಿದ ಪರೀಕ್ಷೆಗಳಲ್ಲಿ ಪಾಸಾದ ಕಿಶನ್ ಸುಮ್ಮನೆ ಇರದೇ ಭಾಗ್ಯಾಗೆ ಕೇಟರಿಂಗ್ ಆರ್ಡರ್ ಕೊಡಿಸಿದ್ದ. ಭಾಗ್ಯ ಕುಟುಂಬ ಮತ್ತು ನನ್ನ ಕುಟುಂಬ ಮೊದಲ ಭೇಟಿಯಲ್ಲಿಯೇ ಒಂದಾಗಲಿ ಎಂದು ಪ್ರಾರ್ಥನೆಯನ್ನು ಕೂಡ ಮಾಡಿದ್ದ.

kannada-serial-bhagya-lakshmi-written-update-may-25

ಆದರೆ, ದೇವರಿಗೆ ಕಿಶನ್ ಮಾಡಿದ ಪ್ರಾರ್ಥನೆ ಕೇಳಿಸಲಿಲ್ಲ. ಹೀಗಾಗಿ ಸದ್ಯ ಕಿಶನ್ ಲೆಕ್ಕಾಚಾರ ತಲೆ ಕೆಳಗಾಯ್ತು. ಅಲ್ಲಿ ಹೋದ ಭಾಗ್ಯಗೆ ಕನ್ನಿಕಾ ಎದುರಾದಳು. ಆ ನಂತರ ಕನ್ನಿಕಾಳಿಗೆ ಪೂಜಾ ತಿರುಗೇಟು ನೀಡಿದ್ದು ಯಾಕೆ ಕನ್ನಿಕಾ ಹೊಟ್ಟೆ ಉರಿಯುತ್ತಿದೆಯಾ, ಹೊಟ್ಟೆ ತಣ್ಣಗಾಗಲು ಲೈಮ್ ಸೋಡಾ ಮಾಡಿ ಕೊಡಲಾ ಎಲ್ಲ ಸರಿ ಹೋಗುತ್ತೆ ಎಂದಿದ್ದಳು. ಇದರಿಂದ ಕೆರಳುವ ಕನ್ನಿಕಾ ಏಯ್ ಎಂದು ಉತ್ತರ ಕೊಡಲು ಮುಂದಾದಾಗ ಕನ್ನಿಕಾ ಕೈಯನ್ನು ಪೂಜಾ ತಿರುವಿದ್ದಳು.

ಇದೆಲ್ಲವನ್ನೂ ನೋಡುವ ಕಿಶನ್‌ಗೆ ಆಕಾಶ ಕಳಚಿ ಬಿದ್ದಂತೆ ಆಗುತ್ತೆ. ಆದರೆ ಅಲ್ಲಿರದ ಕಿಶನ್ ಸೀದಾ ಜಿಮ್‌ಗೆ ಹೋಗುತ್ತಾನೆ. ಕಾರ್ಯಕ್ರಮ ಎಲ್ಲ ಮುಗಿದ ನಂತರ ಕಿಶನ್ ಬಂದಿದ್ದು ಕುಸುಮಾ ಎಲ್ಲಿ ಹೋಗಿದ್ದೇ ಹೀಗೆ ಹೋಗಿ ಹಾಗೇ ಬರ್ತಿನಿ ಎಂದು ಹೇಳಿದವನು ಪತ್ತೆ ಇಲ್ಲವಲ್ಲ ಎಂದಿದ್ದಳು. ಇದಕ್ಕೆ ಕಿಶನ್ ಕುಂಟು ನೆಪ ಹೇಳಿದ್ದ.

ಕನ್ನಿಕಾ ಮುಂದೆ ಬಯಲಾದ ಸತ್ಯ

ಆದರೆ ಈಗ ಕನ್ನಿಕಾ ಮನೆಗೆ ಮದುವೆಯ ಮಾತುಕತೆ ಮಾಡಲು ಭಾಗ್ಯ ಮತ್ತು ಅವರ ಕುಟುಂಬಸ್ಥರು ಹೋಗಿದ್ದು, ಕನ್ನಿಕಾ ಸದ್ಯ ಕೆರಳಿ ಕೆಂಡವಾಗಿದ್ದಾಳೆ. ಭಾಗ್ಯ ಮತ್ತು ಮನೆಯವರನ್ನು ಅವಮಾನಿಸುತ್ತಾಳೆ. ಏನ್ ಮುಖ ನೋಡ್ತಿದ್ದೀಯಾ ಇಲ್ಲಿ ನಿನ್ನ ಡ್ರಾಮಾಗೆ ಸೊಪ್ಪು ಹಾಕುವರು ಯಾರು ಇಲ್ಲ ಕೂಡಲೇ ಇಲ್ಲಿಂದ ಹೊರಡು ಎಂದು ಭಾಗ್ಯಗೆ ಹೇಳುತ್ತಾಳೆ. ನಿನ್ನ ತಂಗಿ ಈ ಮನೆ ಸೊಸೆಯಾಗಿ ಬರೋಕೆ ನಾನು ಯಾವುದೇ ಕಾರಣಕ್ಕೂ ಬಿಡಲ್ಲ ಎನ್ನುತ್ತಾಳೆ.

ಕನ್ನಿಕಾಗೆ ಮನೆಹಾಳಿ ಎಂದ ಪೂಜಾ

ಕನ್ನಿಕಾ ಮಾತುಗಳಿಂದ ಕೆರಳುವ ಪೂಜಾ, ನೀನೇನು ಹೇಳುವುದು ನನ್ನ ಕಾಲಿನ ಧೂಳು ಕೂಡ ಈ ಮನೆಯನ್ನು ಸೋಕಲ್ಲ ಎಂದು ಹೇಳುತ್ತಾಳೆ. ನಿನ್ನಂತ ಮನೆಹಾಳಿ ಇರುವ ಮನೆಗೆ ನಾನು ಬರಲ್ಲ ಎನ್ನುತ್ತಾಳೆ. ಪೂಜಾ ಆಡಿದ ಈ ಮಾತುಗಳನ್ನು ಕೇಳಿದ ಕಿಶನ್ ಏನು ಮಾತನಾಡಬೇಕೆಂದು ಗೊತ್ತಾಗದೇ ಸುಮ್ಮನೆ ಆಗುತ್ತಾನೆ.

ಮನೆಯಿಂದ ಆಚೆ ಹಾಕಲು ಹೇಳುವ ಕನ್ನಿಕಾ

ಪೂಜಾ ಮಾತುಗಳಿಂದ ಇನ್ನಷ್ಟು ಕೋಪ ಮಾಡಿಕೊಳ್ಳುವ ಕನ್ನಿಕಾ, ಎಲ್ಲರನ್ನು ಮನೆಯಿಂದ ಆಚೆ ಹಾಕುವಂತೆ ಸೆಕ್ಯೂರಿಟಿ ಗಾರ್ಡ್‌ಗಳಿಗೆ ಹೇಳುತ್ತಾಳೆ. ಆಗ ಇಲ್ಲೀತನ್ಕ ಬಂದೋರಿಗೆ ಹೊರಗೆ ಹೇಗೆ ಹೋಗಬೇಕೆನ್ನುವುದು ಕೂಡ ಚೆನ್ನಾಗಿ ಗೊತ್ತಿದೆ. ನೀವು ಯಾರು ನಮಗೆ ದಾರಿ ತೋರಿಸಬೇಕಿಲ್ಲ ಎಂದು ಕುಸುಮಾ ಹೇಳುತ್ತಾಳೆ. ಬನ್ನಿ ಎಲ್ಲರೂ ಹೋಗೋಣ ಎನ್ನುತ್ತಾಳೆ. ಕುಸುಮಾ ಮಾತಿಗೆ ಭಾಗ್ಯ, ಪೂಜಾ ಸೇರಿ ಎಲ್ಲರೂ ಕನ್ನಿಕಾ ಮನೆಯಿಂದ ಹೊರಡುತ್ತಾರೆ.

ಸದ್ಯ ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಎಲ್ಲರೂ ಕನ್ನಿಕಾ ಮನೆಯಿಂದ ಹೊರ ನಡೆದಿದ್ದು, ತಾಂಡವ್ ಮತ್ತು ಶ್ರೇಷ್ಠಾ ಎದುರಾಗಿದ್ದಾರೆ. ಮುಂದೆ ಪೂಜಾ ಮತ್ತು ಕಿಶನ್ ಮದುವೆ ನಡೆಯುತ್ತಾ ? ಕನ್ನಿಕಾ ಸುಮ್ಮನಾಗ್ತಾಳಾ ? ತಾಂಡವ್ ಮತ್ತು ಶ್ರೇಷ್ಠಾ ಮುಂದಿನ ನಡೆಯೇನು ಎನ್ನುವುದನ್ನು ಈಗ ಕಾದು ನೋಡಬೇಕಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X