Bhagya Lakshmi ; ಭಾಗ್ಯ ಲಕ್ಷ್ಮಿ ಧಾರಾವಾಹಿಯಲ್ಲಿ ಮತ್ತೊಂದು ತಿರುವು, ಕನ್ನಿಕಾ ಮನೆಗೆ ಬಂದ ಅಣ್ಣ, ಯಾರಿವರು ?

ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಪೂಜಾ ಮತ್ತು ಕಿಶನ್ ಮದ್ವೆಗೆ ಕನ್ನಿಕಾ ಮುಳ್ಳಾಗಿದ್ದಾಳೆ. ಕನ್ನಿಕಾ ಮನೆಗೆ ಮದುವೆಯ ಮಾತುಕತೆ ಮಾಡಲು ಭಾಗ್ಯ ಮತ್ತು ಅವರ ಕುಟುಂಬಸ್ಥರು ಹೋದಾಗ, ಕನ್ನಿಕಾ ಕೆರಳಿ ಕೆಂಡವಾಗಿರುತ್ತಾಳೆ. ಭಾಗ್ಯ ಮತ್ತು ಮನೆಯವರನ್ನು ಅವಮಾನಿಸುತ್ತಾಳೆ. ಏನ್ ಮುಖ ನೋಡ್ತಿದ್ದೀಯಾ ಇಲ್ಲಿ ನಿನ್ನ ಡ್ರಾಮಾಗೆ ಸೊಪ್ಪು ಹಾಕುವರು ಯಾರು ಇಲ್ಲ ಕೂಡಲೇ ಇಲ್ಲಿಂದ ಹೊರಡು ಎಂದು ಭಾಗ್ಯಗೆ ಹೇಳುತ್ತಾಳೆ.

ನಿನ್ನ ತಂಗಿ ಈ ಮನೆ ಸೊಸೆಯಾಗಿ ಬರೋಕೆ ನಾನು ಯಾವುದೇ ಕಾರಣಕ್ಕೂ ಬಿಡಲ್ಲ ಎನ್ನುತ್ತಾಳೆ. ಕನ್ನಿಕಾ ಮಾತುಗಳಿಂದ ಕೆರಳುವ ಪೂಜಾ, ನೀನೇನು ಹೇಳುವುದು ನನ್ನ ಕಾಲಿನ ಧೂಳು ಕೂಡ ಈ ಮನೆಯನ್ನು ಸೋಕಲ್ಲ ಎಂದು ಹೇಳುತ್ತಾಳೆ. ನಿನ್ನಂತ ಮನೆಹಾಳಿ ಇರುವ ಮನೆಗೆ ನಾನು ಬರಲ್ಲ ಎನ್ನುತ್ತಾಳೆ.

kannada-serial-bhagya-lakshmi-written-update-may-26

ಪೂಜಾ ಮಾತುಗಳಿಂದ ಇನ್ನಷ್ಟು ಕೋಪ ಮಾಡಿಕೊಳ್ಳುವ ಕನ್ನಿಕಾ, ಎಲ್ಲರನ್ನು ಮನೆಯಿಂದ ಆಚೆ ಹಾಕುವಂತೆ ಸೆಕ್ಯೂರಿಟಿ ಗಾರ್ಡ್‌ಗಳಿಗೆ ಹೇಳಿದಾಗ, ಇಲ್ಲೀತನ್ಕ ಬಂದೋರಿಗೆ ಹೊರಗೆ ಹೇಗೆ ಹೋಗಬೇಕೆನ್ನುವುದು ಕೂಡ ಚೆನ್ನಾಗಿ ಗೊತ್ತಿದೆ. ನೀವು ಯಾರು ನಮಗೆ ದಾರಿ ತೋರಿಸಬೇಕಿಲ್ಲ ಎಂದು ಕುಸುಮಾ ಹೇಳಿದ್ದಾಳೆ. ಬನ್ನಿ ಎಲ್ಲರೂ ಹೋಗೋಣ ಎಂದು ಎಲ್ಲರು ಮನೆಯಿಂದ ಆಚೆ ಹೊರಡುತ್ತಾರೆ.

ರಾಮದಾಸ್ ಕಾಮತ್ ಮಧ್ಯ ಪ್ರವೇಶ

ಕನ್ನಿಕಾ ಮನೆಯಿಂದ ಭಾಗ್ಯ ಕುಟುಂಬ ಹೊರ ಬಂದಿದ್ದು ಸದ್ಯ ಕನ್ನಿಕಾ ತಂದೆ ರಾಮ್‌ದಾಸ್ ಕಾಮತ್ ಈ ಗಲಾಟೆಯಲ್ಲಿ ಮಧ್ಯ ಪ್ರವೇಶಿಸಿದ್ದಾರೆ. ರಾಮದಾಸ್ ಕಾಮತ್‌ರ ಎದುರು ಭಾಗ್ಯ ತನ್ನ ಆತಂಕವನ್ನು ಹಂಚಿಕೊಂಡಿದ್ದು ನೋಡಮ್ಮ ಭಾಗ್ಯ ಇವತ್ತು ಆಗಿರುವ ವಿಷಯವನ್ನೆಲ್ಲ ಮರೆತು ಬಿಡು ಆ ಮನೆಯಲ್ಲಿ ನಿನ್ನ ತಂಗಿ ಪೂಜಾ ನೆಮ್ಮದಿಯಿಂದ ಸುಖವಾಗಿ ಆರಾಮಾಗಿ ಇರುತ್ತಾಳೆ ಎಂದು ಹೇಳುತ್ತಾರೆ. ಅವಳಿಗೆ ಯಾವುದೇ ಸಮಸ್ಯೆಯಾಗದಂತೆ ನಾನು ನೋಡಿಕೊಳ್ಳುತ್ತೇನೆ ಎಂದು ಭರವಸೆಯನ್ನು ಕೂಡ ಕೊಡುತ್ತಾರೆ. ಇದು ರಾಮ್ ದಾಸ್ ಕಾಮತ್ ನಿನಗೆ ಕೊಡ್ತಿರುವ ಮಾತು ಎಂದು ಹೇಳುತ್ತಾರೆ.

ರಾಮ್ ದಾಸ್ ಕಾಮತ್ ಅವರಾಡಿದ ಈ ಮಾತುಗಳನ್ನು ಕೇಳಿ ಭಾಗ್ಯ ಮತ್ತು ಭಾಗ್ಯಳ ಕುಟುಂಬ ವರ್ಗ ನೆಮ್ಮದಿಯ ನಿಟ್ಟುಸಿರು ಬಿಡುತ್ತೆ. ಎಲ್ಲರ ಮೊಗದಲ್ಲಿ ಮಂದಹಾಸ ಮೂಡುತ್ತೆ. ಕಿಶನ್ ಮತ್ತು ಪೂಜಾ ಕೂಡ ಸಂಭ್ರಮ ಪಡ್ತಾರೆ.

ಕನ್ನಿಕಾ ಮನೆಗೆ ಅಣ್ಣನ ಎಂಟ್ರಿ

ಇನ್ನು ಇದೆಲ್ಲದರ ನಡುವೆ ಇದೀಗ ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ಮತ್ತೊಂದು ತಿರುವು ಎದುರಾಗಿದೆ. ಧಾರಾವಾಹಿಯಲ್ಲಿ ಕನ್ನಿಕಾ ಅವರ ಅಣ್ಣನ ಪ್ರವೇಶವಾಗಿದೆ. ಈ ಕುರಿತು ಸದ್ಯ ಪ್ರೋಮೋವನ್ನು ಕಲರ್ಸ್ ಕನ್ನಡ ಹಂಚಿಕೊಂಡಿದ್ದು ಭಾಗ್ಯಲಕ್ಷ್ಮೀ ಸಂಸಾರಕ್ಕೆ ಈಗೊಂದು ಹೊಸ ಎಂಟ್ರಿ, ಹೊಸ ಪಾತ್ರ, ಹೊಸ ತಿರುವು ಯಾರಿವರು ಎಂದು ಗೆಸ್ ಮಾಡಿ ಎಂದು ಹೇಳಿದೆ.

ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ಈ ಹೊಸ ಪಾತ್ರದ ಪ್ರವೇಶದಿಂದ ಸಹಜವಾಗಿ ಈಗ ಭಾಗ್ಯಲಕ್ಷ್ಮಿ ಅಭಿಮಾನಿಗಳಲ್ಲಿ ಕುತೂಹಲ ಮನೆ ಮಾಡಿದೆ. ಹಲವರು ಈ ಹೊಸ ನಟ ಯಾರಿರಬಹುದು ಎಂದು ತಲೆ ಕೆಡಿಸಿಕೊಂಡಿದ್ಧಾರೆ. ಈಗ ಬಂದಿರುವ ಕನ್ನಿಕಾ ಅಣ್ಣನ ಜೊತೆ ಭಾಗ್ಯ ಮದುವೆ ನಡೆಯುತ್ತೆ ನೋಡ್ತೀರಿ ಎಂದು ಭವಿಷ್ಯವನ್ನು ಕೂಡ ಹೇಳುತ್ತಿದ್ದಾರೆ.

ಸದ್ಯ ಭಾಗ್ಯ ಲಕ್ಷ್ಮಿ ಧಾರಾವಾಹಿಗೆ ಮತ್ತೊಂದು ಪಾತ್ರ ಎಂಟ್ರಿ ಕೊಟ್ಟಿದ್ದು, ಕನ್ನಿಕಾ ಅಣ್ಣನ ಪಾತ್ರವನ್ನು ಯಾರು ನಿರ್ವಹಿಸಿದ್ದಾರೆ ಎನ್ನುವ ಕುತೂಹಲ ಅನೇಕರಲ್ಲಿದೆ. ಕನ್ನಿಕಾ ಅಣ್ಣನ ಪಾತ್ರವನ್ನು ನಿರ್ವಹಿಸಿರುವುದು ಯಾರು ? ಭಾಗ್ಯ ಲಕ್ಷ್ಮಿ ಧಾರಾವಾಹಿ ಮುಂದೆ ಯಾವ ತಿರುವು ಪಡೆಯಲಿದೆ ? ಪೂಜಾ ಮತ್ತು ಕಿಶನ್ ಮದುವೆ ನಡೆಯುತ್ತಾ ಎನ್ನುವುದನ್ನು ಈಗ ಕಾದು ನೋಡಬೇಕಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X