Bhagya Lakshmi ; ಪೂಜಾಗೆ ಎಚ್ಚರಿಕೆ ನೀಡಿದ್ದ ಆದೀಶ್ವರ್ ಕಾಮತ್ ತರಾಟೆಗೆ ತೆಗೆದುಕೊಂಡ ಕುಸುಮಾ..!
'ಭಾಗ್ಯಲಕ್ಷ್ಮೀ' ಧಾರಾವಾಹಿಯಲ್ಲಿ ಸದ್ಯ ಪೂಜಾ ಮದುವೆಯ ಸುತ್ತ ಮುತ್ತ ಕುತೂಹಲ ಅನೇಕರಲ್ಲಿ ಗರಿಗೆದರಿದೆ. ಕಿಶನ್ ಮತ್ತು ಪೂಜಾ ನಡುವೆ ಕನ್ನಿಕಾ ಬಂದಿದ್ದು ಹೇಗಾದರೂ ಮಾಡಿ ಮದುವೆ ನಿಲ್ಲಿಸಬೇಕೆಂಬ ಶಪಥ ಮಾಡಿದ್ದಾಳೆ. ಮನೆಗೆ ಬಂದ ಭಾಗ್ಯ ಮತ್ತು ಕುಟುಂಬದವರನ್ನು ಅವಮಾನ ಮಾಡಿ ಕಳುಹಿಸಿದ್ದಾಳೆ.
ಆದರೆ ಇನ್ನೊಂದು ಕಡೆ ಕನ್ನಿಕಾ ತಂದೆ ರಾಮ್‌ದಾಸ್ ಕಾಮತ್ ಈ ಗಲಾಟೆಯಲ್ಲಿ ಮಧ್ಯ ಪ್ರವೇಶಿಸಿ ಕಿಶನ್ ಜೊತೆ ಭಾಗ್ಯ ಮನೆಗೆ ಹೋಗಿ ಭಾಗ್ಯ ಮನೆಯವರ ಬಳಿ ಕ್ಷಮೆ ಕೇಳಿದ್ದಾರೆ. ಆಗಿರುವ ವಿಷಯವನ್ನೆಲ್ಲ ಮರೆತು ಬಿಡಿ ಆ ಮನೆಯಲ್ಲಿ ನಿನ್ನ ತಂಗಿ ಪೂಜಾ ನೆಮ್ಮದಿಯಿಂದ ಸುಖವಾಗಿ ಆರಾಮಾಗಿ ಇರುತ್ತಾಳೆ ಎಂದು ಭಾಗ್ಯಾಗೆ ಮಾತು ಕೊಡುತ್ತಾರೆ.

ಇದರಿಂದ ಕೆರಳಿದ ಕನ್ನಿಕಾ ತನ್ನ ಅಣ್ಣ ಆದೀಶ್ವರ್ ಕಾಮತ್‌ಗೆ ಫೋನ್ ಮಾಡಿ ವಿದೇಶದಿಂದ ಕರಿಸಿದ್ದಾಳೆ. ಭಾಗ್ಯ ಮನೆಯವರು ಮಾಡಿರುವ ಚೀಪ್ ಎಮೋಷನಲ್ ಟ್ರಿಕ್ಗೆ ಅಪ್ಪ ಬಿದ್ದುಬಿಟ್ಟಿದ್ದಾರೆ. ಎಲ್ಲಿ ನಮ್ಮ ಫ್ಯಾಮಿಲಿ ಒಡೆದೋಗುತ್ತೋ ಅನ್ನೋ ಭಯ ಆಗ್ತಿದೆ ನೀನು ಬಾ ಎಂದು ಹೇಳಿದ್ದಾಳೆ.
ಕನ್ನಿಕಾ ಮಾತು ಕೇಳಿ ವಿದೇಶದಿಂದ ಸದ್ಯ ಆದೀಶ್ವರ್ ಕಾಮತ್ ಬಂದಿದ್ದು ಆತ ಕೂಡ ಕಿಶನ್ ಮತ್ತು ಪೂಜಾ ಮದುವೆಗೆ ಅಡ್ಡಗಾಲು ಹಾಕಿದ್ದಾನೆ. ಕಿಶನ್ ಮದುವೆನ ಯಾರದೋ ಜೊತೆ ಮಾಡೋಕೆ ಹೊರಟಿದ್ದೀರಿ ಅಲ್ವಾ.. ನಾನು ಅದನ್ನ ನಿಲ್ಲಿಸೋಕೆ ಬಂದಿದ್ದೀನಿ ಎಂದು ಹೇಳಿದ್ದಾನೆ. ಇದನ್ನು ಕೇಳಿ ರಾಮ್‌ದಾಸ್ ಕಾಮತ್‌ಗೆ ಶಾಕ್ ಆಗಿದೆ.
ಪೂಜಾಗೆ ಆದೀಶ್ವರ್ ಕಾಮತ್ ವಾರ್ನಿಂಗ್
ಒಡವೆ ವಿಚಾರದಲ್ಲಿ ಚರ್ಚೆ ನಡೆಯುತ್ತಿದ್ದ ಸಮಯದಲ್ಲಿ ಬರುವ ಆದೀಶ್ವರ್ ಕಾಮತ್ ಎಲ್ಲದಕ್ಕೂ ಒಂದು ಇತಿ-ಮಿತಿ ಅಂತ ಇರುತ್ತೆ. ಅದನ್ನು ಮೀರಿ ಯಾರೂ ಯಾವತ್ತೂ ಹೋಗಬಾರದು. ನಿಮ್ಗೆ ನೀವೇ ಒಂದು ಗೆರೆ ಎಳೆದುಕೊಂಡ್ರೆ ಅದಿ ನಿಮಗೂ ಒಳ್ಳೆಯದು ನಿಮ್ ಜೊತೆ ಇರೋರಿಗೂ ಒಳ್ಳೆಯದು ಎಂದು ಹೇಳಿ ಹೋಗಿದ್ದಾನೆ.
ಮೂರು ಒಡವೆ ಕೂಡ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ
ಮತ್ತೊಂದು ಕಡೆ ಭಾಗ್ಯ ಹಾಗೂ ಕುಸುಮಾ ಅವರ ಕಡೆಯಿಂದ ಒಡವೆ ತೆಗೆದುಕೊಳ್ಳುವುದು ಬೇಡ ಎಂದು ತಮ್ಮಲ್ಲಿರುವ ಹಣವನ್ನೆಲ್ಲ ಒಟ್ಟುಗೂಡಿಸಿ ಚಿನ್ನದ ಅಂಗಡಿಗೆ ಭಾಗ್ಯ ಮತ್ತು ಕುಸುಮಾ ತೆರಳಿರುತ್ತಾರೆ. ಹಣವಿಲ್ಲದೆ ಮೂರು ಒಡವೆ ಕೂಡ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ, ಪೂಜಾನ ಮದುವೆಗೆ ಇನ್ನೂ ತುಂಬಾ ಒಡವೆ ತೆಗೆದುಕೊಳ್ಳಬೇಕು, ಅದ್ರ ಜೊತೆಗೆ ಇನ್ನೂ ತುಂಬಾ ಖರ್ಚು ಇದೆ ಎಂದು ಕುಸುಮಾ ಹೇಳಿದಾಗ ಹಣಕ್ಕೆ ಏನು ಮಾಡುವುದು ಎಂದು ಭಾಗ್ಯಾಗೆ ಆತಂಕವಾಗುತ್ತೆ.
ಆದೀಶ್ವರ್ ಕಾಮತ್ ಮುಖಕ್ಕೆ ಮಂಗಳಾರತಿ ಎತ್ತಿದ ಕುಸುಮಾ
ಮಾರ್ಗ ಮಧ್ಯದಲ್ಲಿ ಆದೀಶ್ವರ್ ಕಾಮತ್ - ಭಾಗ್ಯ ಮತ್ತು ಕುಸುಮಾ ಮುಖಾಮುಖಿಯಾಗಿದ್ದು, ಆದೀಶ್ವರ್ ಕಾಮತ್‌ನನ್ನು ಕುಸುಮಾ ತರಾಟೆಗೆ ತೆಗೆದುಕೊಂಡಿದ್ದಾಳೆ. ಯಾಕೆ ಕಾಲ್ ಕೆರ್ಕೊಂಡು ನಮ್ಮ ಹತ್ರ ಜಗಳಕ್ಕೆ ಬರ್ತಿಯಾ ಎಂದು ಕುಸುಮಾ ಕ್ಲಾಸ್ ತೆಗೆದುಕೊಂಡಿದ್ದು ಕೋಲು ಕೊಟ್ಟು ಹೊಡೆಸಿಕೊಳ್ಳುವ ಬುದ್ದಿ ನಿನಗ್ಯಾಕೇ ಎಂದು ಕೇಳುತ್ತಾಳೆ. ನೀನು ಸೂಟು ಬೂಟು ಹಾಕಿಕೊಂಡಿದ್ದು ನೋಡಿ ನಿನಗೆ ಭಾರಿ ಕೆಲಸ ಇರುತ್ತೆ ಅಂದುಕೊಂಡಿದ್ದೇ ಆದರೆ ಏನೂ ಇಲ್ಲ ಎಂದು ಹಂಗಿಸುತ್ತಾಳೆ. ಬರೀ ನಮ್ಮ ಹಿಂದೆ ಹಿಂದೆ ಬರುವುದೇ ನಿನ್ನ ಕೆಲಸಾನಾ ಎಂದು ಕೇಳುತ್ತಾಳೆ.
ಇದಕ್ಕೆ ನನಗೂ ಮಾಡೋಕೆ ತುಂಬಾ ಕೆಲಸ ಇದೆ ಎಂದು ಆದೀಶ್ವರ್ ಕಾಮತ್ ಹೇಳುತ್ತಾನೆ. ಆಗ ಹಾಗಿದ್ದರೆ ಹೋಗಿ ಕೆಲಸ ಮಾಡು ಎನ್ನುವ ಕುಸುಮಾ ಇನ್ಮುಂದೆ ನನ್ನ ಕಣ್ಣ ಮುಂದೆ ಯಾವತ್ತು ಕಾಣಿಸಿಕೊಳ್ಳಬೇಡ ಎಂದು ಆದೀಶ್ವರ್ ಕಾಮತ್‌ಗೆ ಹೇಳುತ್ತಾಳೆ.


Click it and Unblock the Notifications











