BhagyaLakshmi : ಅಮ್ಮ ಮಗಳಾದ ಅತ್ತೆ - ಸೊಸೆ: ಮಗ ಕೊಟ್ಟ ನೋವಿಗೆ ಕುಗ್ಗಿ ಹೋದ ಕುಸುಮಾ

By Poorva

ಕುಸುಮಾ ಅದೆಷ್ಟೇ ಮಗನ ಮನಸ್ಸನ್ನು ಒಲಿಸಲು ಪ್ರಯತ್ನ ಪಟ್ಟರೂ ಫಲ ಮಾತ್ರ ಸೊನ್ನೆ. ತಾಂಡವ್‌ಗೆ ಅಮ್ಮ ಮಕ್ಕಳು ಹೆಂಡತಿಯ ಮೇಲೆ ಪ್ರೀತಿಯೇ ಇಲ್ಲ. ಆತನ ಗಮನ ಇರುವುದು ಶ್ರೇಷ್ಠಾ ಮೇಲೆ. ಶ್ರೇಷ್ಠಾಳನ್ನು ಮದುವೆ ಆಗಬೇಕು. ಆಕೆಯ ಜೊತೆ ಜೀವನ ಸಾಗಿಸಿದರೆ ಬದುಕಿಗೆ ಅರ್ಥ ಸಿಗುತ್ತದೆ ಎಂದೆಲ್ಲ ಯೋಚನೆ ಮಾಡುತ್ತಾ ಇರುತ್ತಾನೆ . ಹಾಗೆಯೇ ಶ್ರೇಷ್ಠಾ ನನಗಾಗಿ ಮಾಡುತ್ತಿರುವ ಕೆಲಸ ಬಹಳ ಒಳ್ಳೆಯದೇ ಎಂದೆಲ್ಲ ನಂಬಿಕೊಂಡಿರುತ್ತಾನೆ.

ಇತ್ತ ಕುಸುಮಾ, ತಾಂಡವ್ ನನ್ನ ಮಾತಿಗೆ ಬೆಲೆ ಕೊಡುತ್ತಾನೆ . ಆತ ಏನೇ ಆದರೂ ನನ್ನ ಜೊತೆ ನಿಲ್ಲುತ್ತಾನೆ ಎಂದು ಕುಸುಮ ಕೊಂಚ ವಿಶ್ವಾಸ ಇಟ್ಟುಕೊಂಡು ಇರುತ್ತಾಳೆ. ಅದಕ್ಕಾಗಿ ಸಣ್ಣ ನಾಟಕ ಆಡುತ್ತಾಳೆ. ಆದರೆ ತಾಂಡವ್ ಮಾತ್ರ ಕುಸುಮಾ ನಂಬಿಕೆಗೆ ದ್ರೋಹ ಮಾಡಿ ಬಿಡುತ್ತಾನೆ.

Kannada Serial Bhagya Lakshmi written update on 1st January

ಆತ ಅಮ್ಮ ಎಂದು ನೋಡದೆ ಆಕೆಯನ್ನು ತೊರೆದು ಶ್ರೇಷ್ಠಾ ಬಳಿ ಹೋಗುತ್ತಾನೆ. ಆದರೆ ಮಗನ ಮಾತು ಕೇಳಿದ ಕುಸುಮಾ ಜೋರಾಗಿ ಬಿಕ್ಕಿ ಬಿಕ್ಕಿ ಅಳುತ್ತಾಳೆ. ಅತ್ತೆಯ ಮುಖ ನೋಡಲು ಆಗದೆ ಭಾಗ್ಯ ಅದೆಷ್ಟೇ ಸಮಾಧಾನದ ಮಾತುಗಳನ್ನು ಆಡಿದರು.ಅದ್ಯಾವುದನ್ನು ಕೇಳದೆ ಸುಮ್ಮನೆ ಇರುತ್ತಾರೆ.

ಭಾಗ್ಯ ಬಳಿ ಮನದ ಮಾತು ಹೇಳಿಕೊಂಡ ಕುಸುಮಾ

ಮಗ ಮಗ ಎಂದು ಎಷ್ಟೆಲ್ಲ ಪ್ರೀತಿ ಮಾಡಿದೆ. ಆತನನ್ನು ಹೊಟ್ಟೆಯಿಂದ ತೆಗೆಯುವ ವೇಳೆ ನನಗೆ ಸ್ವಲ್ಪ ನೋವು ಆಗಿತ್ತು. ಆದರೆ ಖುಷಿ ಬಹಳ ಇತ್ತು . ಆದರೆ ಇವತ್ತು ನನ್ನ ಮಗ ಬಹಳ ದೊಡ್ಡ ನೋವು ನೀಡಿದ್ದಾನೆ ಎಂದು ನೊಂದುಕೊಂಡಿರುತ್ತಾರೆ. ತಾಂಡವ್‌ನ ತಂದೆ ಬಂದು ಆತನ ಬಗ್ಗೆ ಕೇಳಿದರೆ ನಾನು ಎನು ಹೇಳಲಿ ಭಾಗ್ಯ ಎದುರು ಜೋರಾಗಿ ಅಳುತ್ತಾಳೆ. ಕೊನೆಗೆ ಆಕೆಯೇ ತನ್ನನ್ನು ತಾನು ಸಮಾಧಾನ ಮಾಡಿಕೊಳ್ಳುತ್ತಾಳೆ.

ಅತ್ತೆ ಮಾತಿಗೆ ನೊಂದ ಭಾಗ್ಯ

ಬಳಿಕ ಭಾಗ್ಯ ಬಳಿ, ಭಾಗ್ಯ ನಿನ್ನ ಹಾಗೂ ನಿನ್ನ ಮಕ್ಕಳನ್ನು ನಾನೇ ನೋಡಿಕೊಳ್ಳುತ್ತೇನೆ . ನೀನು ಎನು ತಲೆ ಕೆಡಿಸಿಕೊಳ್ಳಬೇಡ ಎಂದೆಲ್ಲ ಸಮಾಧಾನ ಮಾಡುತ್ತಾಳೆ. ಆಗ ಭಾಗ್ಯ ಹೇಳುತ್ತಾಳೆ ಅತ್ತೆ ನಿಮ್ಮನ್ನು ನಾವು ನೋಡಿಕೊಳ್ಳಬೇಕು. ಅಂಥದರಲ್ಲಿ ನಮ್ಮನ್ನು ನೀವು ನೋಡಿಕೊಳ್ಳುವುದಾ..? ಬೇಡ ಅತ್ತೆ ನೀವು ಹಾಗೆ ಯೋಚನೆ ಮಾಡಬೇಡಿ ನಾನು ನಿಮ್ಮನ್ನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡುತ್ತಾಳೆ.

Kannada Serial Bhagya Lakshmi written update on 1st January

ಮಗನ ಮಾತನ್ನು ಧಿಕ್ಕರಿಸದಿದ್ದ ಕುಸುಮಾ

ಭಾಗ್ಯ ಮಾತಿಗೆ ಕುಸುಮಾ ಜೋರಾಗಿ ಅಳುತ್ತಾಳೆ. ಆಕೆಯ ಮನದಲ್ಲಿ ಇದ್ದ ನೋವನ್ನು ಭಾಗ್ಯ ಬಳಿ ಹೊರ ಹಾಕುತ್ತಾಳೆ. ಮಗನ ಮಾತನ್ನು ಕುಸುಮಾ ಯಾವತ್ತೂ ಧಿಕ್ಕರಿಸಿದ್ದಿಲ್ಲ. ಭಾಗ್ಯ ಬಳಿ ಕುಸುಮ ಹೇಳುತ್ತಾಳೆ. ಎಲ್ಲರೂ ಹೇಳುತ್ತಿದ್ದರು ಕುಸುಮಾ ಬೆಳೆಸಿದ ರೀತಿ ಮಗನನ್ನು ಬೆಳೆಸಬೇಕು ಎಂದು. ಆದರೆ, ಇನ್ನೂ ನನ್ನನ್ನು ನೋಡಿ ಎಲ್ಲರೂ ಆಡಿಕೊಂಡು ನಗುತ್ತಾರೆ. ನನಗೆ ನಾಚಿಕೆ ಆಗುತ್ತದೆ. ಇನ್ನು ಎಲ್ಲರೂ ಹೇಳುತ್ತಾರೆ ನೀನು ಎನು ಬೇಕಾದರೂ ಆಗು. ಆದರೆ, ಕುಸುಮಾ ಮಗನ ಹಾಗೆ ಮಾತ್ರಆಗಬೇಡ ಎಂದು ಹೇಳುತ್ತಾರೆ ಎನ್ನುತ್ತಾಳೆ ಅಗ ಭಾಗ್ಯಗೆ ಬಹಳ ದುಃಖ ಆಗುತ್ತದೆ.

More from Filmibeat

English summary
Bhagya Lakshmi serial written update on 1st January
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X