BhagyaLakshmi: ಅತ್ತ ಮಗನ ನೋವಿಗೂ ಸ್ಪಂದಿಸದ ತಂದೆ, ಇತ್ತ ಕುಸುಮಾ ಕೈಗೆ ಸಿಗದ ಒಡವೆ!
ಭಾಗ್ಯ ಬಹಳ ಸಂಕಟದಲ್ಲಿ ಸಿಲುಕಿಕೊಂಡಿದ್ದಾಳೆ. ಹೌದು ಭಾಗ್ಯಗೆ ಇದೀಗ ಮನೆ ನಿಭಾಯಿಸುವ ಚಿಂತೆ ಜೊತೆಗೆ ಮಕ್ಕಳ ಚಿಂತೆ ಕೂಡ ಶುರುವಾಗಿದೆ. ಮಕ್ಕಳು ತನ್ನ ತಂದೆಯನ್ನು ಇನ್ನೂ ಮುಂದೆ ಯಾವತ್ತೂ ನೋಡುವುದು ಇಲ್ಲವೇನೋ ಎನ್ನುವ ನೋವಿನಲ್ಲಿ ಇರುತ್ತಾರೆ. ಅದರಲ್ಲೂ ಗುಂಡಣ್ಣ ತನ್ನ ತಾಯಿಯ ಜೊತೆಗೆ ಹೆಚ್ಚಾಗಿ ಇದ್ದರೂ ತನ್ನ ತಂದೆಯ ಬಗ್ಗೆ ಅಪಾರ ಪ್ರೀತಿ ಇಟ್ಟುಕೊಂಡಿದ್ದಾನೆ. ಆದರೆ ,ತನ್ವಿ ಮಾತ್ರ ಇದ್ಯಾವುದರ ಪರಿವೆ ಇಲ್ಲದೆ ಇದ್ದಾಳೆ.
ಗುಂಡಣ್ಣ ಶಾಲೆಯಲ್ಲಿ ಗೆಳೆಯರ ಮಾತಿಗೆ ಕಿವಿಗೊಡಲು ಆಗದೆ ಉಗ್ರ ರೂಪವನ್ನು ಎತ್ತಿರುತ್ತಾನೆ. ಯಾಕೆ ಎಂದರೆ ಆತನಿಗೆ ತನ್ನ ತಂದೆಯ ಬಗ್ಗೆ, ತಾಯಿಯ ಬಗ್ಗೆ ಕೆಟ್ಟದಾಗಿ ಮಾತನಾಡುವುದು ಸ್ವಲ್ಪವೂ ಇಷ್ಟ ಆಗುತ್ತಾ ಇರಲಿಲ್ಲ. ಅದಕ್ಕೆ ಶಾಲೆಯಲ್ಲಿ ಮಕ್ಕಳ ಜೊತೆ ಜಗಳವಾಡಿ ಕಣ್ಣಿನ ಭಾಗಕ್ಕೆ ಪೆಟ್ಟು ಮಾಡಿಕೊಂಡಿರುತ್ತಾನೆ. ಭಾಗ್ಯ ಮಗನ ಬಳಿ ಓಡೋಡಿ ಬಂದು ಗಾಯಕ್ಕೆ ಔಷಧಿ ಹಚ್ಚುವ ಪ್ರಯತ್ನ ಮಾಡುತ್ತಾಳೆ.

ಭಾಗ್ಯ ಮಾತಿಗೆ ಸಿಡುಕಿದ ತಾಂಡವ್
ಇಷ್ಟು ದಿನ ಅಮ್ಮನೇ ಬೇಕು ಎನ್ನುತ್ತಿದ್ದ ಗುಂಡಣ್ಣ, ಅಮ್ಮ ನನಗೆ ಇದನ್ನೆಲ್ಲ ಹಚ್ಚಲು ಬರಬೇಡ. ನನಗೆ ಅಪ್ಪ ಬೇಕು ಈಗಲೇ ಅಪ್ಪನನ್ನು ಇಲ್ಲಿಗೆ ಕರೆದುಕೊಂಡು ಬಾ ಆಮೇಲೆ ನಾನು ಔಷಧ ಹಚ್ಚಿಕೊಳ್ಳುತ್ತೇನೆ ಎಂದು ಹೇಳುತ್ತಾನೆ. ಇದನ್ನು ಕೇಳಿದ ಭಾಗ್ಯಗೆ ದಿಕ್ಕೇ ತೋಚದ ಹಾಗೆ ಆಗುತ್ತದೆ. ಕೊನೆಗೆ ತಾಂಡವ್‌ಗೆ ಭಾಗ್ಯ ಕರೆ ಮಾಡಿ ಗುಂಡಣ್ಣ ಗಲಾಟೆ ಮಾಡಿ ಏಟು ಮಾಡಿಕೊಂಡಿದ್ದಾನೆ. ನೀವು ಇಲ್ಲಿಗೆ ಬರಲೇಬೇಕು ಎಂದು ಹಠ ಮಾಡುತ್ತಿದ್ದಾನೆ ಎಂದು ಹೇಳುತ್ತಾಳೆ. ಇದನ್ನು ಕೇಳಿ ತಾಂಡವ್ ಪಿತ್ತ ನೆತ್ತಿಗೆರುತ್ತದೆ. ಹೌದು ತಾಂಡವ ಜೋರಾಗಿ ಭಾಗ್ಯ ಮೇಲೆ ಸಿಟ್ಟು ಮಾಡಿಕೊಂಡಿದ್ದಾನೆ.
ತಾಂಡವ್ ಮಾತಿಗೆ ತಕ್ಕ ಉತ್ತರ ಕೊಟ್ಟ ಭಾಗ್ಯ
ಭಾಗ್ಯಾ ಮೇಲೆ ಕಿಡಿ ಕಾರಿದ ತಾಂಡವ್, ಯಾಕೆ ಭಾಗ್ಯ ನೀನು ನನಗೆ ಪದೇ ಪದೇ ಕರೆ ಮಾಡುತ್ತಾ ಇದ್ಯ. ಮಕ್ಕಳ ವಿಚಾರ ತೆಗೆದು ನಾನು ಮನೆಗೆ ಬರುವ ಹಾಗೆ ಮಾಡುತ್ತಿದ್ದೀಯ. ಇರಲಿ ನಿನ್ನ ಆಟ ನನಗೆ ತಿಳಿದಿದೆ ಎಂದು ಬಾಯಿಗೆ ಬಂದ ಹಾಗೆ ಮಾತನಾಡುತ್ತಾನೆ. ಆಗ ಭಾಗ್ಯಗೆ ಬಹಳ ಸಿಟ್ಟು ಬಂದು ಜೋರಾಗಿ ಬೈದು ಬಿಡುತ್ತಾಳೆ. ಆದರೆ ತಾಂಡವ್ ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ.
ಬಂಗಾರದ ಹುಡುಕಾಟದಲ್ಲಿ ಕುಸುಮ
ನ್ನು ಬಾಗ್ಯ ಹೇಗಾದರೂ ಮಾಡಿ ಮಗನನ್ನು ಸಮಾಧಾನ ಮಾಡಿದರೆ, ಇತ್ತ ಕುಸುಮ ಬೀರು ಬಾಗಿಲು ತೆಗೆದು ಚಿನ್ನದ ಹುಡುಕಾಟದಲ್ಲಿ ಇರುತ್ತಾಳೆ. ಬೀರುವಿನಲ್ಲಿ ಚಿನ್ನ ಇರದೆ ಇರುವುದನ್ನು ಕಂಡ ಕುಸುಮ ಕಂಗಾಲಾಗಿ ಹೋಗುತ್ತಾಳೆ. ಬೀರುವಿನಲ್ಲಿ ಇಟ್ಟಿದ್ದ ನನ್ನ, ಭಾಗ್ಯ ಮಕ್ಕಳದ್ದು ಚಿನ್ನ ಕಾಣಿಸುತ್ತಿಲ್ಲ. ನಿನ್ನೆ ತಾನೇ ದೇವರ ಬಳಿ ಈ ಚಿನ್ನ ಇಟ್ಟಿದ್ದೇವು.ಇದೀಗ ಅದ್ಯಾವುದೂ ಕಾಣಿಸುತ್ತಿಲ್ಲ ಎಂದರೆ ಇದರ ಅರ್ಥ ಎನು? ಎಂದೆಲ್ಲ ಪ್ರಶ್ನೆ ಮೇಲೆ ಪ್ರಶ್ನೆ ಮಾಡುತ್ತಾ ಇರುತ್ತಾಳೆ. ಸುನಂದಾಗೆ ಕೂಡ ಶಾಕ್ ಆಗುತ್ತದೆ.

ಸುನಂದಾ ಮೇಲೆ ಅನುಮಾನಗೊಂಡ ಕುಸುಮ
ಇನ್ನು ಮಾತನಾಡುತ್ತಾ ಮಾತನಾಡುತ್ತಾ ಕುಸುಮಗೆ ಸುನಂದಾ ಮೇಲೆ ಅನುಮಾನ ಬರುತ್ತದೆ. ಬೀಗರೆ ನೀವು ಏನಾದರೂ ಕದ್ದಿದ್ದರೆ ಅದನ್ನು ಕೊಟ್ಟುಬಿಡಿ.. ಮೊದಲೆಲ್ಲ ನೀವು ನನ್ನ ತಂಗಿಯ ಒಡವೆ ಕದ್ದಿದ್ದು ಇದೆ. ಆದಕ್ಕೆ ಕೇಳುತ್ತಿದ್ದೇನೆ ಎಂದಾಗ ಸುನಂದಾಗೆ ಬಹಳ ಶಾಕ್ ಆದರೂ ಎನು ಮಾತನಾಡದೆ ಸುಮ್ಮನೆ ಇರುತ್ತಾಳೆ .
ಕೊನೆಗೆ ನಾನು ಯಾವುದನ್ನು ಕದ್ದಿಲ್ಲ.. ನನಗೆ ಸರ ಕದಿಯುವ ಅಗತ್ಯ ಇಲ್ಲ. ಮಗಳ ಮನೆಯಲ್ಲಿ ಇಂಥ ಕೆಲಸ ಮಾಡಲು ನನ್ನಿಂದ ಆಗುವುದು ಇಲ್ಲ ಎಂದು ಜೋರಾಗಿ ಹೇಳಿ ಬಿಡುತ್ತಾಳೆ . ಆದರೆ ತಾಂಡವ್ ಮಾತ್ರ ತನ್ನ ಹೆಂಡತಿ ಮಕ್ಕಳು ಎಂದು ನೋಡದೆ ಯಾರೋ ಮೂರನೇಯವರ ಮಾತು ಕಟ್ಟಿಕೊಂಡು ಹೋಗಿರುವುದು ವಿಪರ್ಯಾಸವೇ ಸರಿ.


Click it and Unblock the Notifications











