Bhagya Lakshmi: ತಾಂಡವ್‌ನ ಅರೆಸ್ಟ್ ಮಾಡಿದ ಪೊಲೀಸರು: ಆತಂಕದಲ್ಲಿ ಭಾಗ್ಯ ಕುಟುಂಬ
ತಾಂಡವ್ ಇದೀಗ ಅಮ್ಮನ ಕೋಪಕ್ಕೆ ಸಿಲುಕಿದ್ದಾನೆ. ನಮ್ಮ ಕಷ್ಟ ಕಾಲಕ್ಕೆ ಮಗ ಇರಲಿಲ್ಲ ಎನ್ನುವ ನೋವು ಕುಸುಮಾಗೆ ಕಾಡಿತ್ತು. ಕೊನೆಗೂ ಕೂಡ ನಾನು ಆರಿಸಿದ ಸೊಸೆಯಿಂದ ನನ್ನ ಗಂಡನ ಪ್ರಾಣ ಉಳಿಯಿತು ಎಂದು ಹೇಳುತ್ತಾ ಇರುತ್ತಾಳೆ. ತಾಂಡವ್ ಮೇಲಿನ ಕೋಪಕ್ಕೆ ಕುಸುಮಾ ಕೆಂಡಾಮಂಡಲವಾಗಿ ಮಗನನ್ನು ತರಾಟೆಗೆ ತೆಗೆದುಕೊಳ್ಳುತ್ತಾಳೆ.
ಎಲ್ಲಿಗೆ ಹೋಗಿದ್ದೆ, ಏನಾಗುತ್ತಿದೆ, ನನಗೆ ಈಗ ತಿಳಿಯಬೇಕು. ಆಫೀಸ್‌ಗೆ ಹೋಗಿದ್ದೆ ಎಂದೆಲ್ಲ ಸುಳ್ಳು ಮಾತುಗಳನ್ನು ನನ್ನ ಮತ್ತು ಭಾಗ್ಯ ಮುಂದೆ ಆಡಬೇಡ ಎಂದಾಗ ತಾಂಡವ್‌ಗೆ ಏನು ಹೇಳಬೇಕು ಎಂದು ತಿಳಿಯದಂತಾಗುತ್ತದೆ. ಆ ಕೂಡಲೇ ತಾಂಡವ್ ತನ್ನ ತಾಯಿ ಬಳಿ ಹೇಳುತ್ತಾನೆ. ನನ್ನ ಗೆಳೆಯ ಆತ್ಮಹತ್ಯೆಗೆ ಪ್ರಯತ್ನ ಪಟ್ಟ ಎನ್ನುವ ವಿಷಯ ತಿಳಿಯಿತು.

ತಾಯಿ ಬಳಿ ಸುಳ್ಳು ಹೇಳಿದ ತಾಂಡವ್
ಗೆಳೆಯನ ಪ್ರಾಣ ಉಳಿಸಲು ಹೋಗಬೇಕಾಯಿತು. ಆತ ಮೈ ತುಂಬಾ ಸಾಲ ಮಾಡಿಕೊಂಡು ಇದ್ದ. ಆ ಕಾರಣಕ್ಕೆ ಅವನು ಸಾಯಲು ಹೊರಟಿದ್ದ ಆ ಕಾರಣದಿಂದ ನಾನು ಮನೆಗೆ ಬರಲು ಸಾಧ್ಯ ಆಗಲಿಲ್ಲ ಎಂದು ಹೇಳುತ್ತಾನೆ. ಆ ಕೂಡಲೇ ಕುಸುಮ ಹೇಳುತ್ತಾಳೆ ಯಾರು ಅದು ನಿನ್ನ ಗೆಳೆಯ ನನಗೆ ಫೋನ್ ಮಾಡಿಕೊಂಡು ನಾನು ಮಾತನಾಡಬೇಕು ಎಂದು ಹೇಳುತ್ತಾಳೆ. ಇದನ್ನು ಕೇಳಿದ ತಾಂಡವ್ ಕೊಂಚ ಗಲಿ ಬಿಲಿಗೊಳ್ಳುತ್ತಾನೆ.
ಅಮ್ಮನ ಮಾತಿಗೆ ತಾಂಡವ್ ಗಲಿಬಿಲಿ
ಆ ಬಳಿಕ ಫೋನ್ ಮಾಡಿ ಕೊಡುತ್ತಾನೆ. ಅತ್ತ ಫೋನ್‌ನಲ್ಲಿ ಕುಸುಮ ಏನಾಯಿತು ಎಂಬುವುದನ್ನು ವಿಚಾರ ಮಾಡಿದ ಬಳಿಕ ಆತನಿಗೆ ಬುದ್ದಿ ಮಾತನ್ನು ಹೇಳಿ ಫೋನ್ ಇಡುತ್ತಾಳೆ. ಇತ್ತ ತಾಂಡವ್ ಫೋನ್ ಮಾಡಿ ಕೊಟ್ಟಿರುವುದು ಬೇರೆ ಯಾರಿಗೂ ಅಲ್ಲ. ಶ್ರೇಷ್ಟನಿಗೆ. ಕುಸುಮಾಳನ್ನು ಯಾಮಾರಿಸಿದ ಶ್ರೇಷ್ಟ ಜೋರಾಗಿ ನಗುತ್ತಾಳೆ. ಆಗ ಆಕೆಯ ಗೆಳತಿ ಶ್ರೇಷ್ಠ ಬಳಿ ಬಂದು ಏನು ಶ್ರೇಷ್ಟ, ತಾಂಡವ್ ಫ್ಯಾಮಿಲಿಯನ್ನು ಮೋಸ ಮಾಡಿದ ಹಾಗೇ ಕಾಣುತ್ತಿದೆ ಎನ್ನುತ್ತಾಳೆ.
ಶ್ರೇಷ್ಠ ಮಾಡಿದ ಕೆಲಸಕ್ಕೆ ಕೋಪಗೊಂಡ ಗೆಳತಿ
ಮನಸ್ಸಾದರೂ ಹೇಗೆ ಬಂತು ಈ ಮನೆ ಹಾಳು ಮಾಡುವ ಬುದ್ದಿಯಿಂದ ಅಂತ ಗೆಳತಿ ಬೈಯ್ಯುತ್ತಾಳೆ. ಆದರೆ ಶ್ರೇಷ್ಠ ಮಾತ್ರ ಆಕೆಯ ಮಾತನ್ನು ಸೀರಿಯಸ್ ಆಗಿ ತೆಗೆದುಕೊಳ್ಳದೆ ತಾನು ಆಡಿದ್ದೆ ಆಟ ಅನ್ನುವ ಹಾಗೆ ಇರುತ್ತಾಳೆ. ಈ ವೇಳೆ ಶ್ರೇಷ್ಠ ತಾಯಿ ಆಕೆ ಇರುವ ಮನೆ ಮುಂದೆ ನಿಂತು ಎಲ್ಲಿ ನಿಮ್ಮ ಮನೆ ಎಂದು ಹೇಳುತ್ತಾರೆ. ಇದನ್ನುಕೇಳಿದ ಶ್ರೇಷ್ಠ ಅಮ್ಮ ನೀನು ಎಲ್ಲಿದ್ದಿಯಾ ಎಂದಾಗ ಬೆಂಗಳೂರಿಗೆ ಬಂದಿರುವ ವಿಚಾರ ತಿಳಿಯುತ್ತದೆ.

ಅಮ್ಮನ ಬಳಿ ಸುಳ್ಳು ಹೇಳಿದ ಶ್ರೇಷ್ಠ
ಆಗ ಅಮ್ಮನ ಬಳಿ ಶ್ರೇಷ್ಠ ಸುಳ್ಳು ಹೇಳುತ್ತಾಳೆ. ಅಮ್ಮ ನಾನು ಮನೆಯಲ್ಲಿ ಇಲ್ಲ, ಒಂದು ವಾರ ಚೆನೈನಲ್ಲಿ ಇರುತ್ತೇನೆ ಎಂದು ಹೇಳಿದಾಗ ಆಕೆಯ ತಾಯಿ ಸರಿ ಎಂದು ಹೇಳಿ ಪುನಃ ಮನೆ ಕಡೆ ಹೋಗುತ್ತಾರೆ. ಇನ್ನು ತಾಂಡವ್ ಬಳಿ ಆಕೆಯ ಹೆಂಡತಿಯನ್ನು ಕುಸುಮ ಹೊಗಳುತ್ತಾ ಇರುತ್ತಾರೆ. ಆ ವೇಳೆ ಮನೆ ಬಾಗಿಲು ಬಡಿದ ಸದ್ದು ಕೇಳಿಸುತ್ತದೆ.
ಪೊಲೀಸರನ್ನು ನೋಡಿ ಅವಕ್ಕಾದ ಭಾಗ್ಯ
ಭಾಗ್ಯ ಬಾಗಿಲು ತೆಗೆದು ನೋಡಿದಾಗ ಪೊಲೀಸ್ ಇರುತ್ತಾರೆ. ಅವರನ್ನು ನೋಡಿ ಬಹಳ ಶಾಕ್ ಆಗುತ್ತಾರೆ. ಪೊಲೀಸರು ಮನೆಗೆ ಬಂದು ತಾಂಡವ್‌ನನ್ನು ಅರೆಸ್ಟ್ ಮಾಡಲು ನೋಡುತ್ತಾರೆ. ಆಗ ಯಾಕೆ ಏನು ಎಂದೆಲ್ಲ ಪ್ರಶ್ನೆ ಮಾಡುತ್ತಾನೆ. ತಾಂಡವ್‌ಗೆ ಪೊಲೀಸ್ ಉತ್ತರ ಕೊಡುತ್ತಾರೆ. ಶಿವಶಂಕರ್ ಕಂಪ್ಲೇಂಟ್ ಕೊಟ್ಟಿದ್ದಾರೆ. ನಿಮ್ಮನ್ನು ವಿಚಾರಣೆ ಮಾಡಲು ಪೊಲೀಸ್ ಸ್ಟೇಷನ್‌ಗೆ ಕರೆದುಕೊಂಡು ಹೋಗಲು ಬಂದಿದ್ದೇವೆ ಎಂದು ಹೇಳುತ್ತಾರೆ. ಆ ಬಳಿಕ ತಾಂಡವ್‌ನನ್ನು ಅರೆಸ್ಟ್ ಮಾಡಿ ಕರೆದುಕೊಂಡು ಹೋಗುತ್ತಾರೆ.


Click it and Unblock the Notifications











