Bhagya Lakshmi: ಭಾಗ್ಯ ಕಾಣದ್ದನ್ನು ಕಂಡು ಪ್ರಶ್ನಿಸಿದ ಕುಸುಮಾ: ಬೆಚ್ಚಿ ಬಿದ್ದ ತಾಂಡವ್

ಭಾಗ್ಯಳಿಗೆ ಅನ್ನಬಾರದ ಮಾತುಗಳನ್ನು ಹೇಳಿದ ತಾಂಡವ್ ಅಲ್ಲೇ ಆಕೆಯನ್ನೂ ಬಿಟ್ಟು ಹೋಗುತ್ತಾನೆ. ಭಾಗ್ಯ ಮಾತ್ರ ಏನು ಮಾಡಬೇಕು ಎಂದು ತಿಳಿಯದೇ ಬಹಳ ಆಘಾತಗೊಳ್ಳುತ್ತಾಳೆ. ತನ್ನ ಗಂಡ ಈ ರೀತಿ ಮಾತುಗಳನ್ನು ಆಡುತ್ತಾನೆ ಎಂದು ಆಕೆ ಕನಸು ಮನಸ್ಸಿನಲ್ಲೂ ಎಣಿಸಿರಲಿಲ್ಲ. ಆದರೂ ಅದನ್ನೆಲ್ಲ ಮನದಲ್ಲಿ ಯೋಚನೆ ಮಾಡುತ್ತಾ ರಸ್ತೆಯಲ್ಲಿ ಕುಳಿತುಕೊಂಡು ಬಿಡುತ್ತಾಳೆ.

ಬೇಸರದಿಂದ ಭಾಗ್ಯ ಜೋರಾಗಿ ಅಳುತ್ತಾಳೆ. ತನ್ನ ಗಂಡನ ಚುಚ್ಚು ಮಾತಿಗೆ ಹಾಗೆಯೇ ಮನೆಗೆ ಇನ್ನೂ ಮೇಲೆ ಬರಬೇಡ. ನೀನು ಬಂದರೆ ನಾನು ಆ ಮನೆಗೆ ಬರುವುದಿಲ್ಲ ಎನ್ನುವ ಮಾತುಗಳನ್ನು ಕೇಳಿದ ಭಾಗ್ಯಗೆ ಏನು ಮಾಡಬೇಕೆಂದು ತಿಳಿಯದಂತಾಗುತ್ತದೆ. ಆ ಬಳಿಕ ನಾನು ಮನೆಗೆ ಹೋಗಲೇ ಬೇಕು ಎಂದು ಎದ್ದು ನಿಂತ ವೇಳೆ ಜೋರಾಗಿ ಮಳೆ ಸುರಿಯುತ್ತದೆ. ಆಕೆ ಮಳೆಯನ್ನು ಲೆಕ್ಕಿಸದೇ ಅಲ್ಲಿಂದ ನಡೆದುಕೊಂಡು ಹೋಗುತ್ತಾಳೆ.

Kannada serial bhagya lakshmi written updated on 5th may

ಭಾಗ್ಯಳನ್ನು ನೋಡಿ ಕಾರು ನಿಲ್ಲಿಸಿದ ಶ್ರೇಷ್ಠ ಅಮ್ಮ

ಆಗ ಶ್ರೇಷ್ಠ ಅಮ್ಮ ಹಾಗೆಯೇ ಆಕೆಯ ಮಾವ ಕಾರಿನಲ್ಲಿ ಹೋಗುತ್ತಾ ಇರುತ್ತಾರೆ. ಆಗಲೇ ಭಾಗ್ಯ ತಲೆ ತಿರುಗಿ ಬೀಳುತ್ತಾಳೆ. ಇದನ್ನು ನೋಡಿದ ಶ್ರೇಷ್ಠ ತಾಯಿ ಹಾಗೂ ಮಾವ ಕಾರಿನಿಂದ ಇಳಿದು ಆಕೆಯನ್ನು ಎಚ್ಚರ ಪಡಿಸಲು ಹಲವು ಪ್ರಯತ್ನ ಮಾಡುತ್ತಾರೆ. ಆದರೆ ಆಕೆಗೆ ಎಚ್ಚರ ಆಗಲೇ ಇಲ್ಲ. ಆಕೆ ಕನವರಿಸುತ್ತಾಳೆ. ನನ್ನ ಮಗ ಹಾಗೂ ಅತ್ತೆ ಮಾವ ಏನು ಮಾಡುತ್ತಾ ಇದ್ದಾರೋ ನಾನು ಮನೆಗೆ ಹೋಗಬೇಕು ಎಂದು ಹೇಳಿ ಪ್ರಜ್ಞೆ ತಪ್ಪುತ್ತಾಳೆ.

ಮಗ ಸೊಸೆ ಕಾಣದೇ ಕಂಗಾಲಾದ ಕುಸುಮಾ

ಇನ್ನು ಕುಸುಮಾ ಮಾತ್ರ ಮಗ ಹಾಗೂ ಸೊಸೆಯ ದಾರಿ ಕಾಯುತ್ತಾ ಇರುತ್ತಾಳೆ. ಇಷ್ಟು ಹೊತ್ತಾದರೂ ಯಾಕೆ ಮನೆಗೆ ಬರಲಿಲ್ಲ ಎಂದು ಯೋಚನೆ ಕಾಡುತ್ತಿರುತ್ತದೆ. ಆದರೆ ಕುಸುಮ ಗಂಡ ಮಾತ್ರ ಅವರಿಬ್ಬರೂ ಸುತ್ತಾಡಲಿ ಬಿಡು ನೀನು ಯಾಕೆ ತಲೆ ಕೆಡಿಸಿಕೊಂಡು ಇರುತ್ತೀಯಾ ಸುಮ್ಮನೆ ಇರು ಎಂದು ಯೋಚನೆ ಮಾಡುತ್ತಾ ಇರುವ ಕುಸುಮಾಗೆ ಹೇಳುತ್ತಾನೆ. ಆದರೂ ನನಗೆ ಇದು ಸರಿ ಕಾಣುತ್ತಿಲ್ಲ. ಸುತ್ತಾಡಲು ನಾನು ನೀವು ಎಲ್ಲರೂ ಹೋಗಬಹುದಿತ್ತು. ಅವರಿಬ್ಬರೂ ಹೋಗುವುದು ನನಗೆ ಸರಿ ಬರುತ್ತಿಲ್ಲ ಎಂದು ಹೇಳಿದಾಗ ತಾಂಡವ್ ಬರುತ್ತಾನೆ.

ಸೊಸೆ ತವರಿಗೆ ಹೋಗಿದ್ದಾಳೆ ಎಂದುಕೊಂಡ ಕುಸುಮ

ಈ ವೇಳೆ ಕುಸುಮಾಗೆ ಬಹಳ ಖುಷಿ ಆಗುತ್ತದೆ. ದೊಡ್ಡ ಗಂಡಾಂತರದಿಂದ ಪಾರಾಗಿದ್ದನ್ನು ನೋಡಿದ ಕುಸುಮಾಗೆ ಖುಷಿಯಾಗುತ್ತಿದೆ. ಇನ್ನೊಂದು ಕಡೆ ಸೊಸೆ ಕಾಣದಿದ್ದನ್ನು ನೋಡಿ ಎಲ್ಲಿ ಹೋದಳು ಎಂದು ಮಾತು ಹೇಳದೇ ಎಂದೆಲ್ಲ ಪ್ರಶ್ ಮಾಡುತ್ತಾಳೆ. ಆಕೆ ತವರು ಮನೆಗೆ ಹೋಗಿದ್ದಾಳೆ ಎಂದು ತಾಂಡವ್ ಸುಳ್ಳು ಹೇಳುತ್ತಾನೆ.

Kannada serial bhagya lakshmi written updated on 5th may

ಸೊಸೆಯ ಮೇಲೆ ಸಿಟ್ಟಾದ ಅತ್ತೆ

ಆಕೆಯನ್ನು ಎಲ್ಲಿ ಬಿಡಬೇಕು ಅಲ್ಲಿ ಬಿಟ್ಟು ಬಂದಿದ್ದೇನೆ ಎಂದು ಹೇಳುತ್ತಾನೆ . ಇದನ್ನೆಲ್ಲ ಕೇಳಿದ ಕುಸುಮ ಹೇಳುತ್ತಾರೆ ಯಾರನ್ನು ಕೇಳಿ ಆಕೆಯನ್ನು ತವರು ಮನೆಗೆ ಬಿಟ್ಟೆ. ಗಂಡ ಸ್ವಲ್ಪ ಹೊತ್ತು ಜೊತೆಗೆ ಇದ್ದ ಕಾರಣಕ್ಕೆ ತವರು ಮನೆಗೆ ಹೋಗಬೇಕು ಎನ್ನುವ ಖ್ಯಾತೆ ತೆಗೆದಿದ್ದಾರೆ. ಎಂದೆಲ್ಲ ಸಿಡುಕುವಾಗ ಆಕೆಯ ಗಂಡ ಸಮಾಧಾನ ಮಾಡಿದ್ದಾನೆ. ಭಾಗ್ಯ ಮಗ ಮಾತ್ರ ಅಮ್ಮ ಎಲ್ಲಿಗೆ ಹೋಗಿದ್ದಾರೆ ಎಂದು ಯೋಚನೆ ಮಾಡುತ್ತಾ ಇರುತ್ತಾರೆ.

ಸರಿಯಾಗಿ ಅಡುಗೆ ಮಾಡದ ಕುಸುಮ

ಮರುದಿನ ತಾಂಡವ್ ಮನೆಯಲ್ಲಿ ತಿಂಡಿ ರೆಡಿ ಮಾಡುತ್ತಾ ಇರುತ್ತಾಳೆ ಕುಸುಮಾ. ಆ ತಿಂಡಿಯನ್ನು ತಿನ್ನಲು ಆಗದೇ ಮನೆ ಮಂದಿಗೆ ಸುಸ್ತಾಗುತ್ತದೆ. ಆಗ ಕುಸುಮ ಹೇಳುತ್ತಾಳೆ ನನಗೆ ಹೀಗೆಯೇ ಅಡುಗೆ ಮಾಡಲು ಬರುವುದು. ಇದನ್ನು ಕೇಳಿದ ಆಕೆಯ ಗಂಡ ಮಾತ್ರ ಸುಮ್ಮನೆ ಆಗುತ್ತಾರೆ. ಬಳಿಕ ತಾಂಡವ್ ಆಫೀಸ್‌ಗೆ ಹೊರಟು ನಿಂತಾಗ ತಾಯಿ ಬಳಿ ಡಬ್ಬಿ ಕೇಳುತ್ತಾನೆ. ಇದನ್ನು ನೋಡಿದ ತಾಂಡವ್ ತಂದೆ, ನಿನ್ನ ಅಮ್ಮ ಇವತ್ತು ಅಡುಗೆ ಮಾಡಿಲ್ಲ ಎನ್ನುತ್ತಾರೆ. ಇದನ್ನು ಕೇಳಿ ತಾಂಡವ್‌ಗೆ ಏನು ಹೇಳಬೇಕು ಎಂದು ತಿಳಿಯದೇ ಸುಮ್ಮನೆ ಆಗುತ್ತಾರೆ. ಇನ್ನು ಭಾಗ್ಯ ತವರಿಂದ ಮರುಳುವವರೆಗೂ ಅಡುಗೆ ಮಾಡುವುದೇ ಇಲ್ಲ ಎಂದು ಕುಸುಮಾ ಹೇಳುತ್ತಾಳೆ. ಇನ್ನು ತಾಂಡವ್ ನೇರವಾಗಿ ಆಫೀಸ್‌ಗೆ ಹೋಗುತ್ತಾನೆ.

More from Filmibeat

English summary
Kannada serial Bhagya Lakshmi written updated on 6th may. here is details about Tandav lies to his mother about his wife Bhagya. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X