Bhagyalakshmi:ತಾಂಡವ್ ಮಾತಿಗೆ ಕೋಪಗೊಂಡ ಸೀರಿಯಲ್ ಪ್ರೇಮಿಗಳು; ಭಾಗ್ಯಕ್ಕೆ ಯಾಕೆ ಈ ಕಷ್ಟ ಎಂದ ಫ್ಯಾನ್ಸ್?

By ಪೂರ್ವ

ಭಾಗ್ಯಾ ಹಾಗೂ ಕುಸುಮಾ ಬಹಳ ಅಚ್ಚುಮೆಚ್ಚಿನ ಅತ್ತೆ ಸೊಸೆಯರು. ಅವರಿಬ್ಬರ ತಂಟೆಗೆ ಯಾರೆ ಬಂದರೂ ಕೂಡ ಅವರನ್ನು ಸುಮ್ಮನೆ ಬಿಡುವ ಮಾತೆ ಇಲ್ಲ. ಕುಸುಮಾಗೆ ಇದೀಗ ತನ್ನ ಮಗನ ಬಂಡವಾಳ ಎಲ್ಲಾ ಗೊತ್ತಾಗಿದೆ. ತನ್ನ ಮಗನಿಂದ ಯಾರಿಗೂ ಅನ್ಯಾಯ ಆಗಬಾರದು ಎನ್ನುವ ಆಕೆಯ ಧೃಡ ನಿರ್ಧಾರ.

ಆದರೆ ಆತ ಕಟ್ಟಿಕೊಂಡ ಹೆಂಡತಿಗೂ ಕೂಡ ಮೋಸ ಮಾಡಲು ಶುರು ಮಾಡಿದ್ದ. ಬೇರೆ ಹುಡುಗಿಯ ಜೊತೆ ಅಫೇರ್ ಇಟ್ಟುಕೊಂಡು ಎರಡು ಮಕ್ಕಳ ತಂದೆ ಮಾಡುವ ಕೆಲಸನಾ ಎಂದು ಅಭಿಮಾನಿಗಳೆಲ್ಲಾ ಆತನಿಗೆ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ. ಭಾಗ್ಯಾ ಆಕೆಯ ಮಕ್ಕಳಿಬ್ಬರನ್ನು ಬಹಳ ತುಂಬಾ ಮುದ್ದಾಗಿ ಬೆಳೆಸಿದ್ದಾರೆ. ಆದರೆ ಇದೆಲ್ಲವನ್ನೂ ನೋಡಿದ ತಾಂಡವ ಮಾತ್ರ ತನ್ನ ಮಕ್ಕಳ ಬಗ್ಗೆ ಸ್ವಲ್ಪ ಕೂಡ ಕನಿಕರ ಇಲ್ಲದ ಹಾಗೆ ಮಾತನಾಡುತ್ತಾನೆ.

Kannada serial Bhagyalakshmi October 28th episode update

ಭಾಗ್ಯಾಗೆ ಎಮ್ಮೆ ಎಂದೆಲ್ಲ ಕರೆಯುತ್ತಿದ್ದಾನೆ. ಆದರೆ ಭಾಗ್ಯಾ ಮಾತ್ರ ಅದ್ಯಾವುದಕ್ಕೂ ರಿಯಾಕ್ಟ್ ಮಾಡದೇ ಸುಮ್ಮನೆ ಇರುತ್ತಾಳೆ. ತನ್ನ ಗಂಡ ಬೇರೆಯವಳ ಜೊತೆ ಅಫೇರ್ ಇಟ್ಟುಕೊಂಡು ಇದ್ದಾನೆ ಎನ್ನುವುದು ಕೂಡ ಆಕೆಗೆ ತಿಳಿಯುತ್ತಿಲ್ಲ. ಇದರಿಂದಾಗಿ ದಿನದಿಂದ ದಿನಕ್ಕೆ ತಾಂಡವನ ದುರ್ವರ್ತನೆ ಮಿತಿ ಮೀರುತ್ತಿದ್ದು, ಅದಕ್ಕೆ ಕಡಿವಾಣ ಹಾಕಲು ಕುಸುಮಾ ನಿರ್ಧಾರ ಮಾಡಿ ಬಿಟ್ಟಿದ್ದಾಳೆ. ಶ್ರೇಷ್ಠಾಳನ್ನು ಅದೆಷ್ಟೇ ಕುಸುಮಾ ಬಾಯಿ ಮುಚ್ಚಿಸಲು ಪ್ರಯತ್ನ ಪಟ್ಟರೂ, ಶ್ರೇಷ್ಠಾ ಆಗಾಗ ಬಾಲ ಬಿಚ್ಚುತ್ತಲೇ ಇರುತ್ತಾಳೆ. ಆಕೆಯ ಕುತಂತ್ರದಿಂದಾಗಿ ಇತ್ತ ತಾಂಡವ ಬಹಳಷ್ಟು ಸಲೀಸಾಗಿ ಎಲ್ಲಾ ಕೆಲಸವನ್ನು ಮಾಡುತ್ತಾನೆ. ಈಗಾಗಲೇ ಭಾಗ್ಯಾಗೆ ವಿಚ್ಛೇದನ ಕೊಡುವ ವಿಚಾರದಲ್ಲಿ ಬಹಳ ಮುಂದೇನೆ ಹೋಗಿದ್ದಾನೆ.

ಆದರೆ ಕುಸುಮಾಳಿಂದ ತಾಂಡವ ಸುಮ್ಮನೆ ಇದ್ದಾನೆ. ಕುಸುಮಾ ಹೇಳುವ ಕೆಲಸವನ್ನು ತಾಂಡವ ಮಾಡಬೇಕಾಗಿದೆ. ಭಾಗ್ಯಾಗೆ ಈಗಾಗಲೇ ಕಾರು ಕಲಿಯುವ ಟಾಸ್ಕ್ . ಹಾಗೆಯೇ ತಾಂಡವ್‌ಗೆ ಡ್ಯಾನ್ಸ್ ಮಾಡುವ ಟಾಸ್ಕ್ ಅನ್ನು ಕುಸುಮಾ ನೀಡಿದ್ದಾಳೆ. ಯಾವತ್ತೂ ಭಾಗ್ಯಾಳನ್ನು ತುಚ್ಛವಾಗಿ ನೋಡುವ ತಾಂಡವ್ ಮನ:ಸ್ಥಿತಿಗೆ ಸೀರಿಯಲ್ ಪ್ರೇಮಿಗಳು ಬಹಳ ಕೋಪ ಮಾಡಿಕೊಂಡಿದ್ದಾರೆ. ಹುಡುಗಿಯರು ಯಾವತ್ತೂ ಕೂಡ ತನ್ನೆಲ್ಲಾ ಕೆಲಸಗಳನ್ನು ಮಾಡಿಕೊಂಡು ಫ್ಯಾಮಿಲಿ ಜೊತೆ ಸರಿದೂಗಿಸಿಕೊಂಡು ಹೋಗುತ್ತಿರುತ್ತಾರೆ. ಅಂತಹದರಲ್ಲಿ ಭಾಗ್ಯಾ ಕೂಡ ಎಲ್ಲಾ ಕೆಲಸಗಳನ್ನೂ ಮಾಡುತ್ತಾ ಎಲ್ಲವನ್ನೂ ನಿಭಾಯಿಸಿಕೊಂಡು ಫ್ಯಾಮಿಲಿಯನ್ನು ನೋಡಿಕೊಂಡರೆ ತಾಂಡವ್‌ಗೆ ಮಾತ್ರ ಅದ್ಯಾವುದನ್ನೂ ಸಹಿಸಲು ಆಗುತ್ತಿಲ್ಲ.

Kannada serial Bhagyalakshmi October 28th episode update

ದಡ್ಡಿಯ ಹಾಗೆ ಭಾಗ್ಯಳನ್ನು ಬಿಂಬಿಸಿದ್ದಕ್ಕೆ ಕೋಪ

ಭಾಗ್ಯಾಗೆ ಏನು ಗೊತ್ತಿಲ್ಲ. ಆಕೆ ದಡ್ಡಿ ಎಂದೆಲ್ಲ ತಾಂಡವ್ ಬೈಯ್ಯುತ್ತಾನೆ. ಆದರೆ ಭಾಗ್ಯಾ ಮಾಡುವ ಒಂದು ಕೆಲಸವನ್ನು ತಾಂಡವ್‌ನಿಂದ ಮಾಡಲು ಆಗುತ್ತಿಲ್ಲ. ಇದೀಗ ಕುಸುಮಾ ಹಾಕಿದ ಷರತ್ತುಗಳ ಪ್ರಕಾರ ಇದೀಗ ತಾಂಡವ್ ದಿನ ದೂಡುತ್ತಿದ್ದಾನೆ. ತಾಂಡವ್‌ಗೆ ತನ್ನ ಹೆಂಡತಿಯ ಬೆಲೆ ತೋರಿಸಬೇಕು. ಕುಟುಂಬಕ್ಕೆ ಆಕೆಯ ಬೆಲೆಯೇನು ಅನ್ನೋದನ್ನು ತೋರಿಸಬೇಕು ಎಂದೆಲ್ಲ ಕುಸುಮಾ ಅಂದುಕೊಂಡಿರುತ್ತಾಳೆ. ಆದರೆ ಆತ ಮಾಡುತ್ತಿರುವುದನ್ನು ನೋಡಿ ಕುಸುಮಾಗೆ ಈಗಾಗ ತಲೆ ಕೆಟ್ಟು ಹೋಗಿದೆ. ಭಾಗ್ಯಾ ಏನೇ ಮಾಡಿದರೂ ಶ್ರೇಷ್ಠಾ ಅಡ್ಡಗಾಲು ಹಾಕುತ್ತಲೇ ಇದ್ದಾಳೆ. ಇದೆಲ್ಲವನ್ನೂ ನೋಡಿದ ಸೀರಿಯಲ್ ಪ್ರೇಮಿಗಳು ರೋಸಿ ಹೋಗಿದ್ದಾರೆ.

ತಾಯಿಯ ಮಾತಿಗೆ ತೆಪ್ಪಗಿರುವ ತಾಂಡವ್

ಈ ಧಾರಾವಾಹಿಯನ್ನು ಆದಷ್ಟು ಬೇಗ ಎಂಡ್ ಮಾಡಿ ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ. ತಾಂಡವ್ ಬದಲಾಗುವುದಿಲ್ಲ. ಭಾಗ್ಯಾಗೆ ತನ್ನ ಗಂಡನ ಬಂಡವಾಳ ತಿಳಿಯುವುದಿಲ್ಲ. ಹಾಗೆಯೇ ಶ್ರೇಷ್ಠ ತನ್ನ ಕುತಂತ್ರ ಬುದ್ದಿ ಬಿಡುವುದಿಲ್ಲ. ಇದರ ಮಧ್ಯೆ ಕುಸುಮಾ ಕಷ್ಟ ಪಡುತ್ತಿರುವುದನ್ನು ನೋಡಿದ ಅಭಿಮಾನಿಗಳು ಬೇಸರಗೊಂಡಿದ್ದಾರೆ.

More from Filmibeat

English summary
Kannada serial Bhagyalakshmi October 28th episode update;
Read more about: serial poorva filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X