ಭಾಗ್ಯಲಕ್ಷ್ಮೀ ಟೈಟಲ್ ಕಾರ್ಡ್ ಬದಲಾಯ್ತು; ಅಭಿಮಾನಿಗಳಲ್ಲಿ ಹೆಚ್ಚಿದ ಕಾತರ
'ಭಾಗ್ಯಲಕ್ಷ್ಮಿ' ಧಾರಾವಾಹಿ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ. ಅತ್ತೆ ಸೊಸೆ ಎಂದರೆ ಹೀಗಿರಬೇಕು ಎಂದು ತೋರಿಸಿಕೊಟ್ಟ ಧಾರಾವಾಹಿಯೇ ಭಾಗ್ಯಲಕ್ಷ್ಮಿ. ಸೊಸೆಯ ಒಳಿತಿಗಾಗಿ ಕುಸುಮಾ ಅದೆಷ್ಟು ಒದ್ಧಾಡಿ ಬಿಟ್ಟಿದ್ದಾಳೋ ಏನೋ? ಕುಸುಮಾಗೆ ಆಕೆಯ ಕುಟುಂಬ ಎಂದರೆ ಪಂಚಪ್ರಾಣ. ತನ್ನ ಮಗ ತಾನು ಹೇಳಿದ ಮಾತನ್ನು ಕೇಳುತ್ತಾನೆ. ತಾನು ಹೇಳಿದ ಕೆಲಸವನ್ನೆಲ್ಲ ಮಾಡುತ್ತಾನೆ. ಅವನು ಯಾವತ್ತೂ ಕೂಡ ನನ್ನ ಮರ್ಯಾದೆಯನ್ನು ತೆಗೆಯುವ ಕೆಲಸವನ್ನು ಮಾಡುವುದಿಲ್ಲ ಎಂದು ಕುಸುಮ ಅಂದುಕೊಂಡಿರುತ್ತಾಳೆ.
ಆದರೆ ಕುಸುಮಾಗೆ ತನ್ನ ಮಗನ ಎಲ್ಲಾ ದುರ್ಗುಣಗಳು ಗೊತ್ತಾಗಿದೆ. ಮುಂಚೆಲ್ಲಾ ಮಗ ಏನೇ ಮಾಡಿದರೂ ಕೂಡ ಆತನ ಸಪೋರ್ಟ್‌ಗೆ ನಿಲ್ಲುತ್ತಿದ್ದಳು ಕುಸುಮಾ. ಆದರೆ, ಇದೀಗ ಕುಸುಮಾಗೆ ಮಗ ಮಾಡುತ್ತಿರುವ ಕೆಟ್ಟ ಕೆಲಸ ತಿಳಿದುಹೋಗಿದೆ. ಶ್ರೇಷ್ಠ ಜೊತೆ ತಾಂಡವ್ ಮದುವೆಯಾಗಲು ರೆಡಿಯಾಗಿದ್ದಾನೆ. ಆದರೆ ಇದಕ್ಕೆ ಅಡ್ಡಿಯಾಗಿ ಕುಸುಮಾ ಹಾಗೂ ಪೂಜಾ ಇವರಿಬ್ಬರೂ ಕೂಡ ನಿಂತಿದ್ದಾರೆ.

ಇವರಿಬ್ಬರು ಸೇರಿಕೊಂಡು ಹೇಗಾದರೂ ಮಾಡಿ ಶ್ರೇಷ್ಠಾ ಹಾಗೂ ತಾಂಡವ್ ಮದುವೆಯನ್ನು ನಿಲ್ಲಿಸಿದ್ದಾರೆ. ಕುಸುಮಾ ತಾಂಡವನ ಏಳೆದುಕೊಂಡು ಹೊರಗೆ ಹೋಗುತ್ತಾಳೆ. ಏನು ಕುಸುಮಾ ಹಾಗೂ ಪೂಜಾ ಮೇಲೆ ಬಹಳ ಕೋಪ ಬಂದಿರುತ್ತದೆ. ಇಂತಹ ತಾಂಡವ್ ತನ್ನ ತಾಯಿಗೆ ಎದುರು ವಾದಿಸಿದ್ದಾನೆ.
ಹೇಗಾದರೂ ಮಾಡಿ ನಾನು ಶ್ರೇಷ್ಠನನ್ನು ಮದುವೆ ಆಗಿಯೇ ಆಗುತ್ತೇನೆ ಎಂದು ಹೇಳುತ್ತಾನೆ. ಇದನ್ನು ಕೇಳಿದ ಕುಸುಮಾ "ನೀನು ಮದುವೆಯಾಗಲು ನಾನು ಅಷ್ಟು ಸುಲಭವಾಗಿ ಬಿಡುವುದಿಲ್ಲ. ನೀನು ಭಾಗ್ಯಾಗೆ ಇನ್ನೊಂದು ಚಾನ್ಸ್ ಕೊಡಲೇಬೇಕು. ಆಕೆಯನ್ನು ನಾನು ಒಂದು ತಿಂಗಳಲ್ಲಿ ನಿನಗೆ ಹೇಗೆ ಬೇಕೋ ಹಾಗೆ ಚೇಂಜ್ ಮಾಡುತ್ತೇನೆ. ನಾನು ಕೂಡ ಬದಲಾಗುತ್ತೇನೆ" ಎಂದು ಹೇಳಿದಾಗ ತಾಂಡವ್ ಕೊನೆಗೆ ಆಯ್ತು ಎಂದು ಒಪ್ಪಿಕೊಳ್ಳುತ್ತಾನೆ.
ತಾಂಡವ್ ಬುದ್ದಿ ಭಾಗ್ಯಾಗೆ ತಿಳಿದಿಲ್ಲ
ಇನ್ನು ಭಾಗ್ಯಾಗೆ ಯಾವುದೇ ವಿಚಾರ ಕೂಡ ತಿಳಿಯುವುದಿಲ್ಲ. ಭಾಗ್ಯಾಗೆ ಮನೆಯಲ್ಲಿ ಏನೋ ಒಂದು ವಿಚಾರ ನಡೆಯುತ್ತಿದೆ ಎನ್ನುವುದು ಗೊತ್ತಿದೆ. ಆದರೆ, ಯಾವ ವಿಚಾರ ಎಂದು ತಿಳಿದಿಲ್ಲ. ಇನ್ನು 'ಭಾಗ್ಯಲಕ್ಷ್ಮಿ' ಧಾರಾವಾಹಿಯ ಟೈಟಲ್ ಕಾರ್ಡ್ ಕೂಡ ಬದಲಾಗುತ್ತಿದೆ. ಭಾಗ್ಯಾನೇ ಬದಲಾಗುತ್ತಿದ್ದಾಳೆ. ಅಂದ ಮೇಲೆ ಭಾಗ್ಯಲಕ್ಷ್ಮಿ ಎನ್ನುವ ಟೈಟಲ್ ಕಾರ್ಡ್ ಕೂಡ ಬದಲಾಗಬೇಕು ಎನ್ನುವುದು ಕೆಲವರ ಇಚ್ಛೆ. ಇನ್ನು ಧಾರಾವಾಹಿ ಪ್ರೇಮಿಗಳು ಅತ್ತೆ ಸೊಸೆ ಹೇಗೆ ಬದಲಾಗುತ್ತಾರೆ. ಸೊಸೆಯನ್ನು ಅತ್ತೆ ಯಾವ ರೀತಿ ಬದಲಾವಣೆ ಮಾಡುತ್ತಾಳೆ? ಎನ್ನುವುದನ್ನು ಬಹಳ ಕಾತರದಿಂದ ಜನರು ನೋಡುತ್ತಿದ್ದಾರೆ.
ಅತ್ತೆಯ ಮಾತಿಗೆ ಮೂಕಳಾದ ಭಾಗ್ಯಾ
ಅತ್ತೆ ಸೊಸೆ ಸೇರಿ ಏನಾದರೂ ಒಂದು ಮಾಡಿ ತಾಂಡವನ ಮನಸ್ಸನ್ನು ತಮ್ಮ ಕಡೆಗೆ ಒಲಿಸಿಕೊಳ್ಳುವ ಪ್ರಯತ್ನವನ್ನು ಮಾಡುವ ಪ್ರಯತ್ನ ನಡೆಯುತ್ತಿದೆ. ಇನ್ನು ಈಗಾಗಲೇ ಪ್ರೋಮೋ ಕೂಡ ಬಿಡುಗಡೆ ಆಗಿದೆ. ಪ್ರೋಮೊದಲ್ಲಿ ತಾಂಡವ್ ಹೇಳುತ್ತಾನೆ. ನನ್ನ ಹೆಂಡತಿ ಈ ನಡುವೆ ತುಂಬಾ ಚೇಂಜ್ ಆಗಿ ಬಿಟ್ಟಿದ್ದಾಳೆ. ಅಮ್ಮನೂ ತುಂಬಾ ಬದಲಾಗಿದ್ದಾಳೆ. ಅವಳ ಕಡೆಗೆ ವಾಲುತ್ತಿದ್ದಾರೆ. ಈ ಚೇಂಜ್ ಎಲ್ಲಾ ನನ್ನ ಜೀವನದಲ್ಲಿ ನಡೆಯಬೇಕಾದರೆ ಬದಲಾಗಬೇಕಾಗಿದೆ ಎನ್ನುತ್ತಾನೆ. ಇನ್ನು ಭಾಗ್ಯಾ ಕೂಡ "ಜೀವನ ಬದಲಾಗುತ್ತಿದೆ. ಜೀವನದ ನಿರ್ಧಾರಗಳು ಬದಲಾಗುತ್ತಿದೆ ಅಂದ ಮೇಲೆ ಟೈಟಲ್ ಕಾರ್ಡ್ ಬದಲಾಗಬೇಕಾಗಿದೆ ಅಲ್ವಾ? ಎಂದು ಈ ಪ್ರೋಮೋದಲ್ಲಿ ಹೇಳಿದ್ದಾರೆ. ಪ್ರೋಮೋ ಮೇಕಿಂಗ್ ಇಂಟ್ರೆಸ್ಟಿಂಗ್ ಮೂಡಿ ಬಂದಿದ್ದು ವೀಕ್ಷಕರಿಗೆ ಬಹಳ ಖುಷಿ ನೀಡಿದೆ. ಯಾರಿಗೂ ಜಗ್ಗಲ್ಲ ಭಾಗ್ಯಲಕ್ಷ್ಮೀ ಎನ್ನುವ ಟೈಟಲ್ ಕಾರ್ಡ್ ನೀಡಿದ್ದಾರೆ. ಅಭಿಮಾನಿಗಳು ಇದನ್ನು ನೋಡಿ ಬಹಳ ಖುಷಿಯನ್ನು ವ್ಯಕ್ತಪಡಿಸಿದ್ದಾರೆ.


Click it and Unblock the Notifications











