Bhagyalakshmi: ತಾಂಡವ್‌ಗೆ ಡಿವೋರ್ಸ್ ಕೊಡಲು ಒಪ್ಪಿದ ಭಾಗ್ಯ; ಮುಂದೇನು?
ನಾನು ಇಲ್ಲದೇ ಅದು ಹೇಗೆ ಇವರು ಮಕ್ಕಳನ್ನು ಅತ್ತೆ ಮಾವನನ್ನು ಸಾಕುತ್ತಾರೆ? ಎನ್ನುವುದೇ ಭಾಗ್ಯಗೆ ಬಹಳ ದೊಡ್ಡ ಪ್ರಶ್ನೆ ಆಗಿದೆ. ಇದರಿಂದ ಆತಂಕ ಕೂಡ ಮೂಡಿದೆ. ಶ್ರೇಷ್ಠಗೆ ಇದೀಗ ಆತಂಕ ಶುರು ಆಗಿದೆ. ತಾಂಡವ್ ತಂದೆ ಯಾವಾಗ ಆಫೀಸ್‌ಗೆ ಬಂದರೋ ಆ ವೇಳೆ ಶ್ರೇಷ್ಠಗೆ ನಡುಕ ಶುರು ಆಯಿತು. ಎಲ್ಲಿ ತಾಂಡವ್ ನನ್ನ ಮಾತು ಕೇಳದೇ ತಂದೆಯ ಮಾತು ಕೇಳಿ ಬಿಡುತ್ತಾನೆ ಎನ್ನುವ ಭಯ ಶುರು ಆಗಿ ಬಿಡುತ್ತದೆ . ತಾಂಡವ್ ಮದುವೆ, ಡಿವೋರ್ಸ್ ಕೇಸ್ ಎಲ್ಲಾ ತಿಳಿದರೆ ಖಂಡಿತ ನಿನ್ನ ತಂದೆ ನಿನ್ನನ್ನು ಸುಮ್ಮನೆ ಬಿಡುವುದು ಇಲ್ಲ ಎಂದು ಗೆಳತಿ, ಶ್ರೇಷ್ಠಗೆ ಹೇಳುತ್ತಾಳೆ.
ಗೆಳತಿ ಮಾತು ಶ್ರೇಷ್ಠಾಗೆ ಇನ್ನಷ್ಟು ಆತಂಕ ತರುತ್ತದೆ. ಏನು ಮಾಡಬೇಕು ಎಂದು ದಿಕ್ಕೇ ತೋಚದ ಹಾಗೆ ಆಗುತ್ತದೆ. ಭಾಗ್ಯ ಮಾತಿಗೆ ಕುಸುಮಾ ಮಾತ್ರ ಸೊಪ್ಪು ಹಾಕುವುದು ಇಲ್ಲ. ಭಾಗ್ಯ ನೀನು ಮಾಡುತ್ತಿರುವ ಕೆಲಸ ಸರಿ ಇಲ್ಲ ಎಂದರೂ ಅದನ್ನು ಕೇಳುವ ಸ್ಥಿತಿಯಲ್ಲಿ ಭಾಗ್ಯ ಇರುವುದಿಲ್ಲ. ಗೊಂದಲ ಶುರುವಾಗುತ್ತದೆ.

ತಾಂಡವ್‌ಗೆ ಭಾಗ್ಯ ಷರತ್ತು
ಇನ್ನು ಭಾಗ್ಯ ತಾಂಡವ್‌ಗೆ ಒಂದು ಕಂಡೀಷನ್ ಕೂಡ ಹಾಕುತ್ತಾಳೆ. ಅದೇನೆಂದರೆ ನಾನು ಏಳು ದಿನಗಳ ಕಾಲ ಮನೆಯಲ್ಲಿ ಇರುತ್ತೇನೆ. ನೀವು ಮನೆಯವರನ್ನು ನಿಭಾಯಿಸಬೇಕು. ನೀವು ಮನೆಯವರನ್ನು ಮಕ್ಕಳನ್ನು ಸರಿಯಾಗಿ ನಿಭಾಯಿಸಿದರೆ, ನಾನು ಎಂಟನೇ ದಿನಕ್ಕೆ ಮನೆ ಬಿಟ್ಟು ಹೋಗುತ್ತೇನೆ ಎನ್ನುತ್ತಾಳೆ. ಇದನ್ನು ಕೇಳಿದ ತಾಂಡವ್‌ಗೆ ಬಹಳ ಖುಷಿ ಆಗುತ್ತದೆ. ಅಂತೂ ಇಂತೂ ಭಾಗ್ಯ ನನ್ನ ಜೀವನದಿಂದ ಹೊರಗಡೆ ಹೋಗುತ್ತಾ ಇದ್ದಾಳಲ್ಲ ಎಂದು ಬಹಳ ಖುಷಿ ಪಡುತ್ತಾನೆ.
ಗಂಡನ ಮಾತು ಕೇಳಿ ದುಃಖ ಪಟ್ಟ ಭಾಗ್ಯ
ಭಾಗತ್ಯ ಗಂಡನ ಮನೆಗೋಸ್ಕರ ಎಲ್ಲವನ್ನೂ ತ್ಯಾಗ ಮಾಡಿದ್ದಾಳೆ. ತ್ಯಾಗ ಮಯಿ ಭಾಗ್ಯ. ತನ್ನ ಅತ್ತೆಯನ್ನು ಸ್ವಂತ ತಾಯಿಯ ತರ ನೋಡಿಕೊಳ್ಳುತ್ತಿದ್ದಾಳೆ. ಆದರೆ ತಾಂಡವ್‌ಗೆ ಯಾವಾಗ ಶ್ರೇಷ್ಠ ಮೇಲೆ ಮನಸ್ಸಾಯಿತೋ ಅಲ್ಲಿಂದ ಎಲ್ಲಾ ಬದಲಾಯಿತು. ಇದರಿಂದ ಭಾಗ್ಯ ಮೇಲೆ ತಾಂಡವ್‌ಗೆ ಗಮನ ಇರಲಿಲ್ಲ. ಭಾಗ್ಯ ದಿನವಿಡೀ ತನ್ನ ಗಂಡ, ಮಕ್ಕಳು ಎಂದುಕೊಂಡೆ ದಿನದೂಡುತ್ತಿದ್ದಳು.

ತಪ್ಪು ಮಾಡಿದ ತಾಂಡವ್
ಆದರೆ ತಾಂಡವ್ ಮಾತ್ರ ಭಾಗ್ಯಳನ್ನು ಕ್ಯಾರೇ ಎನ್ನದೇ ಆತ ಮಾಡಿದ್ದೆ ಸರಿ ಎಂದು ವಾದಿಸುತ್ತಾ ಇರುತ್ತಾನೆ. ಇನ್ನು ಕುಸುಮಗೆ ಭಾಗ್ಯ ನಿರ್ಧಾರದಿಂದ ಬಹಳ ನೋವಾಗುತ್ತದೆ. ಭಾಗ್ಯ ಯಾವತ್ತೂ ಯಾರಿಗೂ ನೋವು ಮಾಡಿಲ್ಲ. ಆದರೆ ಭಾಗ್ಯಗೆ ದೇವರು ಕಷ್ಟದ ಮೇಲೆ ಕಷ್ಟ ಕೊಡುತ್ತಾ ಇದ್ದಾನಲ್ಲ ಎಂದು ಬಹಳ ಬೇಸರ ಮಾಡಿಕೊಂಡು ಇರುತ್ತಾರೆ. ತಾಂಡವ್ ತಂದೆ ಮಾತ್ರ ತನ್ನ ಮಗನ ಜೀವನದ ಬಗ್ಗೆ ಯೋಚನೆ ಮಾಡುತ್ತಾರೆ. ಹಾಗೆಯೇ ಭಾಗ್ಯಾಳನ್ನು ಮನೆಗೆ ಕರೆದುಕೊಂಡು ಬಂದು ನಾವು ತಪ್ಪು ಮಾಡಿದೆವು. ಆಕೆಗೆ ಒಂದು ಸುಂದರವಾದ ಬದುಕಿತ್ತು . ಅದೆಲ್ಲವನ್ನೂ ಆಕೆಯ ಕೈಯ್ಯಾರೆ ಹಾಳು ಮಾಡಿಕೊಂಡಳು ಎಂದು ಯೋಚನೆ ಮಾಡುತ್ತಾರೆ.


Click it and Unblock the Notifications











