Bhagyalakshmi: ತಾಂಡವ್ ನಿರೀಕ್ಷೆಯಲ್ಲಿ ಕುಸುಮಾ: ತನ್ವಿ ಜೀವ ಉಳಿಸಲು ಬಂದ ಚಿಕ್ಕಪ್ಪ

By Poorva

ಮನೆಯಲ್ಲಿ ಸೂತಕದ ವಾತಾವರಣ ಇದ್ದರೆ ತಾಂಡವ್ ಮಾತ್ರ ಜೇಷ್ಠ ಮನೆಯಲ್ಲಿ ಅದ್ದೂರಿಯಾಗಿ ನಿಶ್ಚಿತಾರ್ಥ ಇಟ್ಟುಕೊಂಡಿದ್ದಾನೆ. ಆತನಿಗೆ ತನ್ನ ಮಗಳಿಗಿಂತ ತನ್ನ ಕುಟುಂಬಕ್ಕಿಂತ ಶ್ರೇಷ್ಠಾ ಮುಖ್ಯವಾಗಿ ಬಿಟ್ಟಳು. ಇನ್ನು ಶ್ರೇಷ್ಠಾ ಹೆಣೆದ ಬಲಿಯಲ್ಲಿ ತಾಂಡವ್ ಬಿದ್ದಿದ್ದಾನೆ.

ನನಗೆ ಈ ರೀತಿ ಆಗಲು ಕಾರಣ ಭಾಗ್ಯ. ಭಾಗ್ಯ ಮಾಡಿದ ತಪ್ಪಿನಿಂದ ನಾನು ಶಿಕ್ಷೆ ಅನುಭವಿಸುತ್ತಾ ಇದ್ದೇನೆ ಎಂದುಕೊಂಡು ಹೆಂಡತಿಗೆ ಶಾಪ ಹಾಕುತ್ತಿರುತ್ತಾನೆ. ಆದರೆ ಭಾಗ್ಯ ಮಾತ್ರ ಗಂಡನ ಪ್ರೀತಿ ಇಲ್ಲದೇ, ಬೆಂಬಲ ಇಲ್ಲದೇ ಒದ್ದಾಡುತ್ತಾ ಇರುತ್ತಾಳೆ. ಆಕೆಗೆ ಮನದಲ್ಲಿ ಬಹಳ ನೋವು ಇರುತ್ತದೆ. ಏನು ಮಾಡುವುದು ಎಂದು ತಿಳಿಯದೇ ದಿಕ್ಕು ತೋಚದಂತಾಗಿದೆ.

kannada serial BhagyaLakshmi written 10th January episode

ಮಗಳು ಆಕೆಯ ತಾಂಡವ್ ಬಳಿ ಸ್ಕೂಲ್ ಟ್ರಿಪ್‌ಗೆ ಹಣ ಕೇಳಲು ಹೋದರೆ ಬೈದು ಕಳುಹಿಸುತ್ತಾನೆ. ಅದೇ ನೋವಿನಲ್ಲಿ ಇದ್ದ ತನ್ವಿಗೆ ಅಪಘಾತ ಆಗುತ್ತದೆ. ಆದರೆ ಭಾಗ್ಯಗೆ ಈ ವಿಚಾರ ಶಾಕಿಂಗ್ ಆಗಿರುತ್ತದೆ. ಆಕೆಗೆ ಏನು ಮಾಡಬೇಕು ಎಂದು ತಿಳಿಯದೇ ಗಂಡನಿಗೆ ಕರೆ ಮಾಡಿದರೆ ಆತನಿಂದಲೂ ಯಾವುದೇ ಉತ್ತರ ಬಾರದಿರುವುದು ಕಂಗಾಲು ಆಗುವಂತೆ ಮಾಡಿದೆ.

ತನ್ವಿ ಸ್ಥಿತಿ ಗಂಭೀರ

ಸದ್ಯ ಆಸ್ಪತ್ರೆಯಲ್ಲಿರುವ ತನ್ವಿಗೆ ಬ್ಲಡ್ ಅವಶ್ಯಕತೆಯಿದೆ. ಎಲ್ಲೂ ಸಿಗುತ್ತಿಲ್ಲ. ತಾಂಡವ್ ಬ್ಲಡ್ ಕೊಡಬಹುದು ಎಂದು ಭಾಗ್ಯ ಅಂದುಕೊಂಡಿದ್ದಾಳೆ. ಆದರೆ ಮಗಳಿಗೆ ರಕ್ತ ನೀಡಲು ತಂದೆಗೆ ಭಾಗ್ಯ ಇಲ್ಲದ ಹಾಗೆ ಆಗಿದೆ. ತಾಂಡವನಿಗೆ ನಕಲಿ ತಂದೆ ತಾಯಿ ಆಡುತ್ತಿರುವ ನಾಟಕ ಕಿರಿ ಕಿರಿ ಹೆಚ್ಚಾಗಿದೆ. ಆದರೆ ಅದನ್ನು ಯಾರ ಜೊತೆಯೂ ಹೇಳಲು ಆಗದೇ ಸಂಕಟ ಅನುಭವಿಸುತ್ತಾ ಇರುತ್ತಾನೆ. ಆದರೆ ಅದೆಲ್ಲವೂ ಶ್ರೇಷ್ಠಗೆ ಗೊತ್ತಾಗುತ್ತದೆ.

kannada serial BhagyaLakshmi written 10th January episode

ಶ್ರೇಷ್ಠ ಜೊತೆ ನಿಶ್ಚಿತಾರ್ಥ

ತನ್ವಿ ಗೆ ಆಕ್ಸಿಡೆಂಟ್ ಆಗಿರುವ ವಿಚಾರ ಶ್ರೇಷ್ಠಗೆ ತಿಳಿದಿರುತ್ತದೆ. ಆದರೆ ತಾಂಡವ್‌ಗೆ ತಿಳಿಯದ ಹಾಗೆ ಶ್ರೇಷ್ಠ ನೋಡಿಕೊಂಡಿರುತ್ತಾಳೆ. ಇನ್ನು ನಿಶ್ಚಿತಾರ್ಥಕ್ಕೆ ಊರಿನ ಮಂದಿಗೆ ಆಹ್ವಾನ ನೀಡಲಾಗಿದೆ. ಆದರೆ ತಾಂಡವ್ ಯಾರಿಗೂ ಹೇಳದೇ ನಿಶ್ಚಿತಾರ್ಥ ಮಾಡಿಕೊಳ್ಳಬೇಕು ಎಂದು ಹೇಳಿರುತ್ತಾನೆ. ಆದರೆ ನಿಶ್ಚಿತಾರ್ಥದಲ್ಲಿ ಎಲ್ಲರನ್ನೂ ನೋಡಿ ತಾಂಡತ್ ಮಾತ್ರ ಗರಂ ಆಗುತ್ತಾನೆ.

ಜನರನ್ನು ನೋಡಿ ತಾಂಡವ್ ಕೆಂಡಾಮಂಡಲ

ಯಾರನ್ನೂ ಕೇಳಿ ಇವರನ್ನೆಲ್ಲ ಕರೆಸಿದ ಶ್ರೇಷ್ಠ ಎಂದಾಗ ತಾಂಡವ್ ಮಾತಿಗೆ ಉತ್ತರ ನೀಡಲು ಆಗದೆ ತಡಬಡಾಯಿಸುತ್ತ ಸುಮ್ಮನಾಗುತ್ತಾಳೆ. ಅಷ್ಟರಲ್ಲಿ ಶ್ರೇಷ್ಠ ಅತ್ತೆ ಮಗ ಹಾಗೂ ಆಕೆಯ ಗೆಳತಿ ಇದಲ್ಲವನ್ನು ಕೇಳಿಸಿಕೊಂಡು ಪ್ರಶ್ನಿಸುತ್ತಾರೆ. ಯಾಕೆ ತಾಂಡವ್ ಅವರೇ ಊರಿನವರನ್ನು ಕರೆದರೆ ಏನಾಗುತ್ತದೆ? ಎಂದಾಗ ಏನು ಮಾತನಾಡಬೇಕು ಎಂದು ತಿಳಿಯದೇ ತಾಂಡವ್ ಸುಮ್ಮನಾಗುತ್ತಾನೆ.

ತನ್ವಿಗಾಗಿ ಬಂದ ಚಿಕ್ಕಪ್ಪ

ದೇವರ ಮೊರೆ ಹೋದ ಕುಸುಮಾ ಹಾಗೂ ಭಾಗ್ಯಗೆ ಈಗ ವೈಷ್ಣವ್ ದೇವರಂತೆ ಬಂದಿದ್ದಾನೆ. ನನ್ನದು ಅದೇ ಬ್ಲಡ್‌ ಗ್ರೂಪ್ ಅಲ್ವಾ? ಮರೆತುಬಿಟ್ರಾ? ಎಂದು ಕೇಳಿದ್ದಾನೆ.

More from Filmibeat

English summary
BhagyaLakshmi kannada serial today episode update;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X