BhagyaLakshmi: ಭಾಗ್ಯಗೆ ಡೈವರ್ಸ್ ನೋಟಿಸ್ ಕಳುಹಿಸಿದ ತಾಂಡವ್; ಮಗನ ನಡೆಗೆ ತಂದೆ ಶಾಕ್

By Poorva

ಶ್ರೇಷ್ಠ ಮಾತು ಕೇಳಿ ತಾಂಡವ್ ಭಾಗ್ಯಗೆ ಇವಾಗ ಡೈವರ್ಸ್ ಪೇಪರನ್ನು ಕಳುಹಿಸಿದ್ದಾನೆ. ಆ ಪೇಪರ್ ನೇರವಾಗಿ ತಾಂಡವ್ ತಂದೆ ಕೈಗೆ ಸಿಕ್ಕಿದೆ . ಇದನ್ನು ನೋಡಿದ ಆತನಿಗೆ ಆಘಾತ ಆಗಿದೆ. ನನ್ನ ಮಗ ಎಂಥಾ ಕೆಲಸ ಮಾಡಿಬಿಟ್ಟಿದ್ದಾನೆ? ಎಂದು ಬಹಳ ಬೇಸರಗೊಳ್ಳತ್ತಾನೆ. ಹೇಗಾದರೂ ಮಾಡಿ ಇದನ್ನೆಲ್ಲ ತಡೆಯಬೇಕು ಎಂದು ಯೋಚನೆ ಮಾಡುತ್ತಿರುತ್ತಾನೆ.

ತಾಂಡವ್ ಬಳಿ ಈ ಬಗ್ಗೆ ಮಾತನಾಡಬೇಕೆಂದು ಹೋಗುವ ವೇಳೆ ಎದೆ ಹಿಡಿದುಕೊಂಡು ಕುಸಿದು ಬೀಳುತ್ತಾನೆ. ಕುಸಿದು ಬಿದ್ದ ತಾಂಡವ್‌ನ ತಂದೆಯನ್ನು ನೋಡಿದವರು ಎಚ್ಚರಿಸುವ ಪ್ರಯತ್ನ ಮಾಡುತ್ತಾಳೆ. ಆಗ ಭಾಗ್ಯ ಅದೇ ದಾರಿಯಲ್ಲಿ ಬರುತ್ತಾರೆ. ಮಾವ ಕುಸಿದು ಬಿದ್ದು ಇರುವುದನ್ನು ನೋಡಿ ಬಹಳ ಶಾಕ್ ಆಗುತ್ತದೆ. ಆಕೆ ಕೂಡಲೇ ಮಾವನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾಳೆ. ಇತ್ತ ಕುಸುಮಾ ಹಾಗೂ ಗುಂಡಣ್ಣ, ಶ್ರೇಷ್ಠ ತಾಯಿ ಬಳಿ ಭಾವಿ ಅಳಿಯನ ವಿಚಾರಿಸುತ್ತಾರೆ.

kannada serial BhagyaLakshmi written update 3rd February

ಶ್ರೇಷ್ಠಾ ತಾಯಿ ಮಗಳ ಎಂಗೇಜ್‌ಮೆಂಟ್ ಫೋಟೋವನ್ನು ಕುಸುಮಾ ಮೊಬೈಲ್‌ಗೆ ಕಳುಹಿಸುತ್ತಾಳೆ. ಆದರೆ ಅದನ್ನು ನೋಡುವ ಮುನ್ನವೇ ಕುಸುಮಾಗೆ ಭಾಗ್ಯ ಕರೆ ಮಾಡುತ್ತಾಳೆ. ಅತ್ತೆ ಮಾವ ಆಸ್ಪತ್ರೆಯಲ್ಲಿ ಇದ್ದಾರೆ ನೀವು ಬೇಗ ಬನ್ನಿ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಕುಸುಮಾಗೆ ಬಹಳ ಆಘಾತ ಆಗುತ್ತದೆ. ಇತ್ತ ಶ್ರೇಷ್ಠಾ ಮಾತ್ರ ಮನದಲ್ಲಿ ಯೋಚನೆ ಮಾಡುತ್ತಾ ಇರುತ್ತಾಳೆ. ನಾನು ತಾಂಡವ್‌ನನ್ನು ಮದುವೆ ಆಗಲೇಬೇಕು. ಇಲ್ಲವಾದರೆ ಕಟ್ಟಿಕೊಂಡಾಕೆ ಎನ್ನುವ ಬದಲು ಇಟ್ಟುಕೊಂಡಾಕೆ ಎನ್ನುವ ಹೆಸರು ಬರುತ್ತದೆ ಎಂದುಕೊಳ್ಳುತ್ತಾಳೆ.

ಮದುವೆಗೆ ಮುಹೂರ್ತಕ್ಕೆ ತಂದೆಗೆ ಮನವಿ

ತಂದೆ ತಾಯಿಗೆ ಕರೆ ಮಾಡಿದ ಶ್ರೇಷ್ಠಾ ನನ್ನ ಮದುವೆಗೆ ಮುಂದಿನ ವಾರವೇ ಮುಹೂರ್ತ ಇದ್ದರೆ ಹೇಳಿ ಎಂದು ಒತ್ತಾಯ ಮಾಡುತ್ತಾಳೆ. ಇದನ್ನು ನೋಡಿದ ಆಕೆಯ ತಂದೆ ಏನು ಮಾತನಾಡದೇ ಸುಮ್ಮನಾಗುತ್ತಾರೆ. ಅವರಿಗೆ ಈ ಮದುವೆಯೇ ಇಷ್ಟ ಇರುವುದು ಇಲ್ಲ. ಇನ್ನು ಕುಸುಮಾ ಆಸ್ಪತ್ರೆಗೆ ಬಂದು ಜೋರಾಗಿ ಅಳುತ್ತಾಳೆ. ಆಕೆಗೆ ತನ್ನ ಗಂಡ ಹೇಗಿದ್ದಾರೆ ಏನೋ ಎನ್ನುವ ಚಿಂತೆ, ಏನು ಮಾಡಬೇಕು ಎಂದು ತಿಳಿಯದಂತಾಗುತ್ತದೆ. ನನ್ನ ಗಂಡನಿಗೆ ಏನಾಯಿತು ಎಂದು ಜೋರಾಗಿ ಅತ್ತಾಗ ಅವರಿಗೆ ಸಾಂತ್ವನ ಹೇಳಿದ್ದು ಭಾಗ್ಯ.

ತಾಂಡವ್ ಹೆಸರು ಕೇಳಿ ಕುಸುಮಾ ಗರಂ

ಭಾಗ್ಯ ತನ್ನ ಗಂಡನ ಬಳಿ ಮಾವನಿಗೆ ಹುಷಾರಿಲ್ಲ ಎಂದು ಹೇಳುತ್ತೇನೆ ಎಂದಾಗ ಕುಸುಮಾ ಮಾತ್ರ ಬೇಡವೆಂದು ತಡೆಯುತ್ತಾಳೆ. ಬೇಡ ನನ್ನ ಮಗ ಯಾವತ್ತೂ ನನ್ನ ಸಹಾಯಕ್ಕೆ ಆಗುವವನು ಅಲ್ಲ. ಅವನು ಯಾವತ್ತೂ ನನ್ನ ಮಗ ಅಲ್ಲ ಎಂದು ಬಹಳ ಕೋಪಗೊಂಡು ಮಾತನಾಡುತ್ತಾ ಇರುವ ವೇಳೆ ಅಲ್ಲಿಗೆ ಡಾಕ್ಟರ್ ಬರುತ್ತಾರೆ. ಡಾಕ್ಟರ್ ಬಳಿ ಕುಸುಮಾ ಗಂಡ ಆರೋಗ್ಯದ ವಿಚಾರಿಸುತ್ತಾಳೆ.

kannada serial BhagyaLakshmi written update 3rd February

ಭಾಗ್ಯ ನೋಡಿ ನೊಂದುಕೊಂಡ ಮಾವ

ಮಾವ ಆರೋಗ್ಯವಾಗಿ ಇದ್ದಾರೆ ಎಂದು ತಿಳಿದ ಭಾಗ್ಯ ಕೊಂಚ ರಿಲ್ಯಾಕ್ಸ್ ಆಗುತ್ತಾಳೆ. ಆಕೆಗೆ ಬಹಳ ರಿಲೀಫ್ ಆಗುತ್ತದೆ. ಇನ್ನು ಕುಸುಮಾ ಗಂಡನನ್ನು ಈಗಲೇ ನೋಡಬೇಕು ಎಂದು ಹಠ ಹಿಡಿಯುತ್ತಾಳೆ. ಇನ್ನು ತಾಂಡವ್‌ ತಂದೆ ಕುಸುಮಾ ಜೊತೆ ಮಾತನಾಡುತ್ತಾಳೆ, ಮಗಳೇ ನಾವೆಲ್ಲ ನಿನಗೆ ಮೋಸ ಮಾಡಿದೆವು, ನೀನು ಎಲ್ಲೋ ಖುಷಿಯಾಗಿ ಇರುತ್ತಿದ್ದೆ. ನಿನ್ನ ಬಂಗಾರದಂಥ ಜೀವನವನ್ನು ನಾವು ಹೇಳು ಮಾಡಿ ಬಿಟ್ಟೆವು ಎಂದು ಹೇಳಿ ಅಳುತ್ತಾನೆ.

More from Filmibeat

English summary
BhagyaLakshmi serial today update;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X