Bhagyalakshmi: ಮೊಮ್ಮಗಳಿಗೆ ಕಪಾಳ ಮೋಕ್ಷ ಮಾಡಿದ ಕುಸುಮಾ
ಭಾಗ್ಯ ತನ್ನ ಮಗಳು ಮಾಡುತ್ತಿರುವ ಎಲ್ಲಾ ಘನಂದಾರಿ ಕೆಲಸವನ್ನು ತನ್ನ ಅತ್ತೆಯ ಮುಂದೆ ಬಿಚ್ಚಿಡುತ್ತಿದ್ದಾಳೆ. ಓದುವ ಹುಡುಗಿ ಮಾಡಬೇಕಾದ ಕೆಲಸ ಏನು ತನ್ನ ಮಗಳು ಮಾಡುತ್ತಿರುವ ಕೆಲಸ ಏನೆಂದು ತನ್ನ ಅತ್ತೆಗೆ ಬಿಡಿಬಿಡಿಯಾಗಿ ಭಾಗ್ಯ ಹೇಳುತ್ತಿದ್ದಾಳೆ.
ತನ್ವಿ ಮಾತ್ರ ಬುದ್ದಿ ಕಲಿಯುವ ಹಾಗೆ ಕಾಣುತ್ತಿಲ್ಲ. ಅಪ್ಪ ಹಿಡಿದ ದಾರಿಯನ್ನೇ ಆಲೋಚನೆ ಮಾಡುತ್ತಾ ಇದ್ದಾಳೆ. ಭಾಗ್ಯ ಶಾಲೆಗೆ ಓದಲು ಹೋಗುವ ಮುನ್ನ ತನ್ವಿ ಶಾಲೆಗೆ ಹೋಗುವುದೇ ಇಲ್ಲ ಎನ್ನುವುದು ಭಾಗ್ಯ ಗಮನಕ್ಕೆ ಬರಲೇ ಇಲ್ಲ. ಆದರೆ ಇದೀಗ ಭಾಗ್ಯ ಶಾಲೆಗೆ ಹೋಗುತ್ತಿದ್ದಾಳೆ. ತನ್ವಿ ಇಲ್ಲದೇ ಇರುವುದನ್ನು ಕಂಡು ಭಾಗ್ಯ ತನ್ವಿಯನ್ನ ಹುಡುಕಿಕೊಂಡು ಹೋದಾಗ ಪಾರ್ಕ್‌ನಲ್ಲಿ ಮೊಬೈಲ್ ನೋಡಿಕೊಂಡು ಮಜಾ ಮಾಡುತ್ತಿರುತ್ತಾಳೆ. ಇದನ್ನೆಲ್ಲಾ ನೋಡಿದ ಭಾಗ್ಯ, ತನ್ವಿಗೆ ಆಗಾಗ ವಾರ್ನಿಂಗ್ ಮಾಡುತ್ತಿರುತ್ತಾಳೆ.

ತನ್ವಿ ಅಮ್ಮನ ಮಾತು ಕೇಳದೆ ಇರುವುದರಿಂದ ಭಾಗ್ಯ ಬಂದು ತನ್ನ ಅತ್ತೆಯ ಬಳಿ ಎಲ್ಲಾ ವಿಚಾರವನ್ನು ಹೇಳುತ್ತಾಳೆ. ಹಾಗೆಯೇ ನನ್ನನ್ನು ಕೂಡ ಶಾಲೆಯಿಂದ ಹೊರಗೆ ಹಾಕಲು ಬಹಳ ಸಂಚು ರೂಪಿಸಿದ್ದಾಳೆ. ಎಂದು ಕುಸುಮ ಬಳಿ ಭಾಗ್ಯ ಹೇಳಿದಾಗ ಆಕೆಗೆ ಆ ಮಾತನ್ನು ನಂಬಲು ಆಗಲಿಲ್ಲ.
ತನ್ವಿ ಮಾತಿಗೆ ಕೋಪಗೊಂಡ ಭಾಗ್ಯ
ಬಳಿಕ ತನ್ವಿ ತನ್ನ ತಾಯಿಯಿಂದ ನನಗೆ ಅವಮಾನವಾಗುತ್ತಿದೆ ಎಂದು ಹೇಳಿದಾಗ ಕುಸುಮ ಮಾತ್ರ ಭಾಗ್ಯ ಬಳಿ ಹೇಳುತ್ತಾಳೆ. ನೀನು ಶಾಲೆಗೆ ಹೋದರು ತಪ್ಪು, ಶಾಲೆಗೆ ಹೋಗದೆ ಇದ್ದರೂ ತಪ್ಪು ಎಂದೆಲ್ಲ ಹೇಳಿ ತನ್ವಿಯ ಮಾತಿಗೆ ಆಕೆ ಕೊಡುತ್ತಿದ್ದ ಎದುರುತ್ತರದ ಮಾತುಗಳನ್ನು ಕೇಳಿದ ಕುಸುಮಾ ಮೊಮ್ಮಗಳ ಕಪಾಳಕ್ಕೆ ಬಾರಿಸುತ್ತಾಳೆ. ಇನ್ನು ಕಪಾಳ ಮೋಕ್ಷದ ಬಳಿಕ ತನ್ವಿ, ಜೋರಾಗಿ ಅಜ್ಜಿ ಎಂದು ಕಿರುಚಿಕೊಳ್ಳುತ್ತಾಳೆ.
ಅಜ್ಜಿಗೆ ಎದುರುತ್ತರ ನೀಡುತ್ತಿದ್ದ ತನ್ವಿ
ತನ್ವಿ ಜೋರಾಗಿ ಅಜ್ಜಿ ಸಾಕು ನಿಲ್ಲಿಸಿ ಎಂದು ಹೇಳುತ್ತಾಳೆ. ಕುಸುಮಾಗೆ ತನ್ನ ಮೊಮ್ಮಗಳ ದುರ್ವರ್ತನೆ ನೋಡಿ ಬಹಳ ಬೇಸರವಾಗುತ್ತದೆ. ಹಾಗೆ ಬಹಳ ಕೋಪ ಬರುತ್ತದೆ. ಅಮ್ಮ ನಿನ್ನಿಂದಾಗಿ ಶಾಲೆಯಿಂದ ಹೊರಗೆ ಉಳಿಯುವ ಹಾಗೆ ಆಯಿತು ಎಂದು ಜೋರಾಗಿ ಮಾತನಾಡುತ್ತಿರುತ್ತಾಳೆ. ಇದನ್ನು ಕೇಳಿಸಿಕೊಂಡ ಕುಸುಮಾ, ಭಾಗ್ಯ ನೀನು ಏನೇ ಆದರೂ ಶಾಲೆಯಲ್ಲಿ ಡ್ಯಾನ್ಸ್ ಮಾಡು ನಿನ್ನಿಂದಾಗಿ ಯಾರಿಗೂ ತೊಂದರೆ ಆಗುವುದು ಬೇಡ ಎಂದು ಹೇಳುತ್ತಾಳೆ. ಇದನ್ನು ನೋಡಿದ ತನ್ವಿ ಜೋರಾಗಿ ನಗುತ್ತಾಳೆ.

ಭಾಗ್ಯಗೆ ಡಾನ್ಸ್ ಕಲಿಸಲು ಮುಂದಾದ ಪೂಜಾ
ಅಮ್ಮನಿಗೆ ಡ್ಯಾನ್ಸ್ ಮಾಡಲು ಬರುವುದಿಲ್ಲ. ಒಂದೇ ದಿನದಲ್ಲಿ ಡ್ಯಾನ್ಸ್ ಕಲಿತು ಡ್ಯಾನ್ಸ್ ಮಾಡ್ತಾಳೆ ಅನ್ನೋ ಅನುಮಾನ ನನಗೆ ಎಂದು ಜೋರಾಗಿ ನಗುತ್ತಾಳೆ. ಪೂಜಾ ಬಂದು ನಾನು ನನ್ನ ಅಕ್ಕನಿಗೆ ಡಾನ್ಸ್ ಹೇಳಿ ಕೊಡುತ್ತೇನೆ. ಆಕೆ ಶಾಲೆಯಲ್ಲಿ ಡ್ಯಾನ್ಸ್ ಮಾಡಲಿ ಎಂದು ಹೇಳುತ್ತಾಳೆ. ಇದನ್ನು ಕೇಳಿಸಿಕೊಂಡ ತನ್ವಿಯ ಮುಖ ಗಂಟಿಕಿ ಕೊಳ್ಳುತ್ತದೆ. ಇನ್ನು ಭಾಗ್ಯ ಹಾಗೂ ಆಕೆಯ ಮಗಳ ಮಾತುಕತೆ ನೋಡಿದ ನೆಟ್ಟಿಗರು ಬಹಳ ಬೇಸರ ಮಾಡಿಕೊಂಡಿದ್ದಾರೆ. ಇದೇನು ತಾಯಿ ಮಗಳ ಮಧ್ಯೆ ಇಷ್ಟೆಲ್ಲ ನಡೆಯುತ್ತಾ ಇದೆಯಲ್ಲ. ತಾಯಿ ಆರಾಧ್ಯ ದೈವ. ಮಗಳು, ತಾಯಿಯನ್ನೇ ದ್ವೇಷ ಮಾಡುವುದು, ಹಾಗೆಯೇ ತಾಯಿಯ ಶಿಕ್ಷಣ ಮುಂದುವರಿಯಬಾರದು ಎಂದು ಕುತಂತ್ರ ಮಾಡುವುದು ನೋಡಿದ ಜನರು ಬಹಳ ಬೇಸರ ಮಾಡಿಕೊಂಡು ಇದ್ದಾರೆ.
ತನ್ವಿಗೆ ಭಾಗ್ಯ ಲಗಾಮು
ತಾಯಿಯೇ ದೇವರು. ಆದರೆ ಈ ತನ್ವಿಗೆ ಅಮ್ಮನ ತ್ಯಾಗದ ಬಗ್ಗೆ ಅರಿವೇ ಇಲ್ಲ. ಬಾಯಿಗೆ ಬಂದ ಹಾಗೆ ಮಾತನಾಡುತ್ತಾಳೆ. ಇನ್ನು ತನ್ವಿ ಮಾತಿಗೆ ಲಗಾಮನ್ನು ಕುಸುಮಾ ಮಾತ್ರ ಹಾಕಬಲ್ಲಳು ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ತಾಯಿಗೆ ಸತ್ಯ ಹೇಳಿದ ಪೂಜಾ
ಇತ್ತ ಸುನಂದಾ ಪೂಜಾ ಬಳಿ ಬಂದು ಅಳಿಯಂದಿರನ್ನು ಕರೆದುಕೊಂಡು ಬರುತ್ತೇನೆ ಎಂದು ಹೇಳಿದೆ ಅಲ್ವಾ? ಎಲ್ಲಿ ಎಂದು ಕೇಳುತ್ತಾಳೆ. ಸುನಂದಾಗೆ ಭಯ ತನ್ನ ಅಳಿಯಂದಿರು ಎಲ್ಲಿ ಮಗಳ ಕೈ ತಪ್ಪಿ ಹೋಗಿ ಬಿಡುತ್ತಾನೆ ಎನ್ನುವುದು . ಆದರೆ ಇದೀಗ ಪೂಜಾ ನಿಜ ವಿಚಾರವನ್ನು ಸುನಂದಾ ಬಳಿ ಅಳುತ್ತಾ ಹೇಳಿದ್ದಾಳೆ.


Click it and Unblock the Notifications











