BhagyaLakshmi: ಅಕ್ಕಮ್ಮಗೆ ಧೈರ್ಯ ತುಂಬಿದ ಲಡ್ಡು: ತಂಗಿಯ ಸ್ಫೂರ್ತಿ ಮಾತುಗಳಿಂದ ಡ್ಯಾನ್ಸ್ ಮಾಡಲು ಭಾಗ್ಯಾ ರೆಡಿ!

By Poorva

ಸೋಮವಾರದಿಂದ ಶನಿವಾರ ಕಲರ್ಸ್ ಕನ್ನಡದಲ್ಲಿ ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಭಾಗ್ಯಲಕ್ಷ್ಮೀ ವೀಕ್ಷಕರಿಗೆ ಮತ್ತೊಂದು ಸಂದೇಶ ಹೊತ್ತು ಬಂದಿದೆ. ಬಾರಿ ಹೆಣ್ಮಗಳಿಗೆ ಆತ್ಮಸ್ಥೈರ್ಯ, ಆತ್ಮವಿಶ್ವಾಸ ಇದ್ದರೆ ಯಾವುದನ್ನು ಬೇಕಾದ್ರೂ ಸಾಧಿಸುತ್ತಾರೆ ಎಂದು ಸಾಬೀತುಪಡಿಸುವ ಉದ್ದೇಶದಿಂದ ಹೊಸ ಟರ್ನ್ ತೆಗೆದುಕೊಳ್ಳುತ್ತಾ ಇದೆ ಭಾಗ್ಯಲಕ್ಷ್ಮೀ. ಇದೀಗ ತನ್ವಿ ಮಾಡಿದ ಅವಾಂತರದಿಂದ ಭಾಗ್ಯ ಇದೀಗ ಬೆಲೆ ತೆರಬೇಕಾಗಿದೆ. ಭಾಗ್ಯಕ್ಕೆ ಡ್ಯಾನ್ಸ್ ಅಂದರೆ ಅಷ್ಟಕಷ್ಟೇ ಆದರೆ ಇದೀಗ ಮಗಳು ಮಾಡಿದ ಕೆಲಸಕ್ಕೆ ಭಾಗ್ಯ ಡ್ಯಾನ್ಸ್ ಮಾಡಲೇಬೇಕಾದ ಪರಿಸ್ಥಿತಿ ಬಂದಿದೆ .

ಕುಸುಮಾ ಅದೆಷ್ಟೇ ಪ್ರಯತ್ನ ಪಟ್ಟರು ಭಾಗ್ಯ ಹೆಸರನ್ನ ಲಿಸ್ಟ್ ನಿಂದ ತೆಗೆಯಲು ಸಾಧ್ಯವಾಗಲಿಲ್ಲ. ಇಂಟರ್‌ಸ್ಕೂಲ್‌ ಡಾನ್ಸ್‌ ಕಾಂಪಿಟೇಷನ್‌ಗೆ ತನ್ವಿ ಭಾಗ್ಯಾಳ ಹೆಸರನ್ನ ಭಾಗ್ಯಾಳ ಒಪ್ಪಿಗೆ ಇಲ್ಲದೇ ಕೊಡುತ್ತಾಳೆ. ಅದು ಭಾಗ್ಯಾಗೆ ಗೊತ್ತಾಗಿ ತನ್ನ ಹೆಸರನ್ನ ತೆಗೆಯುವಂತೆ ಕನ್ನಿಕಾ ಬಳಿ ಕೇಳಿಕೊಂಡಾಗ ಅದಕ್ಕೆ ಒಪ್ಪದೇ ಬಹುಮಾನ ಗೆದ್ದು ಬಾರದೇ ಇದ್ದಲ್ಲಿ ತನ್ವಿಯನ್ನ ಸಸ್ಪೆಂಡ್‌ ಮಾಡೋದಾಗಿ ಎಚ್ಚರಿಕೆ ನೀಡಿದ್ದಾರೆ. ಕುಸುಮಾ ಮಾತಿಗೂ ಕನ್ನಿಕಾ ಬಗ್ಗೋದಿಲ್ಲ.

Kannada serial BhagyaLakshmi written update on 09th December

ಸಿಟ್ಟಲ್ಲಿ ಕುಸುಮಾಳೂ ತನ್ನ ಸೊಸೆ ಡಾನ್ಸ್‌ ಮಾಡುತ್ತಾಳೆ ಅಂತ ಕನ್ನಿಕಾಗೆ ಚಾಲೆಂಜ್‌ ಮಾಡುತ್ತಾಳೆ. ಹೀಗಾಗಿ ನೀನು ಈ ಒಂದು ಸ್ಪರ್ಧೆಯಲ್ಲಿ ಭಾಗವಹಿಸಲೇಬೇಕು ನನ್ನ ಮರ್ಯಾದೆಯನ್ನು ನೀನು ಕಾಪಾಡಲೇಬೇಕು ಎಂದೆಲ್ಲ ಹೇಳಿ ಭಾಗ್ಯಗೆ ಧೈರ್ಯ ತುಂಬುತ್ತಾಳೆ. ಆದರೆ ಭಾಗ್ಯ ಮಾತ್ರ ತನಗೆ ಏನು ಬರುವುದಿಲ್ಲ ನಾನೇನು ಮಾಡಿ ತೋರಿಸಲಿ ಎಂದೆಲ್ಲ ಆಗಾಗ ಹೇಳುತ್ತಿರುತ್ತಾಳೆ. ಆದರೆ ಕುಸುಮಾ ಮಾತಿನ ದರ್ಪಕ್ಕೆ ಭಾಗ್ಯ ಏನು ಮಾತನಾಡದಿರುತ್ತಾಳೆ . ಇನ್ನು ಸ್ಪರ್ಧೆಯ ದಿನ ಬಂದೇ ಬಿಟ್ಟಿದೆ . ಎಲ್ಲಿ ನೋಡಿದರೂ ಭಾಗ್ಯ ಕಾಣಿಸುತ್ತಲೇ ಇಲ್ಲ. ಭಾಗ್ಯಗೆ ಬಹಳ ಭಯವಾಗಿಬಿಟ್ಟಿದೆ. ಅದಕ್ಕಾಗಿ ಆಕೆ ಲಕ್ಷ್ಮಿಗೆ ಕರೆ ಮಾಡುತ್ತಾಳೆ. ಲಕ್ಷ್ಮಿ ಭಾಗ್ಯಗೆ ಧೈರ್ಯವನ್ನು ತುಂಬುತ್ತಾಳೆ.

ಲಕ್ಷ್ಮೀ ಧೈರ್ಯದ ಮಾತು ಕೇಳಿ ಭಾಗ್ಯ ಫುಲ್ ಹ್ಯಾಪಿ

ನೀನು ಈ ಸ್ಪರ್ಧೆಯಲ್ಲಿ ಭಾಗಿಯಾಗಲೇಬೇಕು. ಡ್ಯಾನ್ಸ್ ಮಾಡುವ ಎಲ್ಲಾ ಕಲೆ ನಿನಗೆ ಕರಗತವಾಗಿದೆ. ನೀನು ನಮಗೆಲ್ಲ ಟೀಚರ್ ಡ್ಯಾನ್ಸ್ ಹೇಳಿಕೊಡುವುದನ್ನು ನೀನು ಕದ್ದು ನೋಡಿ ಏಕಲವ್ಯ ಹೇಗೆ ಬಿಲ್ ವಿಧ್ಯೆಯನ್ನು ಕಲಿತನೋ ಹಾಗೆ ನೀನು ಕೂಡ ಭರತನಾಟ್ಯವನ್ನು ಅಭ್ಯಾಸ ಮಾಡಿದ್ದೀಯಾ. ಅದನ್ನ ಇದೀಗ ನೀನು, ನಿನ್ನ ಶಾಲೆಯಲ್ಲಿ ಪ್ರದರ್ಶನ ಮಾಡು ಗೆದ್ದು ಬಾ ಎಂದೆಲ್ಲ ಹೇಳುತ್ತಾಳೆ ಇದನ್ನು ಕೇಳಿದ ಭಾಗ್ಯಗೆ ಹೌದೇನಿಸಿಬಿಡುತ್ತದೆ .

ನಾನು ಹೀಗೆ ಹೆದರಿಕೊಂಡು ಕೂತರೆ, ಯಾವುದಕ್ಕೂ ಸಾಧ್ಯ ಆಗುವುದಿಲ್ಲ ನಾನು ಎಲ್ಲವನ್ನು ಎದುರಿಸಿ ನಿಲ್ಲಬೇಕು ಇಲ್ಲವಾದರೆ ಬಹಳ ಕಷ್ಟವಾಗುತ್ತದೆ ಎಂದುಕೊಳ್ಳುತ್ತಾಳೆ. ಅಷ್ಟರಲ್ಲಿ ಲಕ್ಷ್ಮಿ ಆಕೆಗೆ ಭರತನಾಟ್ಯದ ಬಟ್ಟೆಗಳನ್ನು ಕಳುಹಿಸಿ ಒಂದು ಪತ್ರವನ್ನು ಕೂಡ ಕಳುಹಿಸಿರುತ್ತಾಳೆ. ಅದರಲ್ಲಿ ಶಶಿಕಲ ಟೀಚರ್ ಭಾಗ್ಯಗೆ ಧೈರ್ಯ ತುಂಬುವಂತ ಮಾತುಗಳನ್ನ ಆಡಿರುತ್ತಾರೆ.

Kannada serial BhagyaLakshmi written update on 09th December

ಶ್ರೇಷ್ಠಾ ಮಾತಿಗೆ ಶಾಕ್ ಆದ ತಾಂಡವ

ಇತ್ತ, ಭಾಗ್ಯ ಸ್ಟೇಜಿಗೆ ಬರದೆ, ಇರುವುದನ್ನ ನೋಡಿದ ಕುಸುಮ ಬಹಳ ಮುಜುಗರದಿಂದ ಇರುತ್ತಾಳೆ. ಕಾಂಪಿಟೇಷನ್‌ ದಿನ ಭಾಗ್ಯ ಎಲ್ಲೂ ಕಾಣದೇ ಇದ್ದಾಗ ಕುಸುಮಾ ಹಾಗೂ ಪೂಜಾಗೆ ಗಾಬರಿಯಾಗುತ್ತದೆ. ಅದೇ ಸ್ಪರ್ಧೆಗೆ ಜಡ್ಜಸ್‌ ಆಗಿ ಬಂದಿರುವ ತಾಂಡವ್‌ ಶ್ರೇಷ್ಠಾ ಇದೆಲ್ಲವೂ ಖುಷಿ ಕೊಡುತ್ತಿದೆ. ಗನನ್ನ ಸೊಸೆಯಾಗಿ ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ ಎಂದು ಕುಸುಮಾ ಬೇಸರ ಮಾಡಿಕೊಳ್ಳುತ್ತಾಳೆ.

ಅಮ್ಮನ ಮುಖ ನೋಡಿ ನಕ್ಕ ತಾಂಡವ್

ಇನ್ನು ಅಮ್ಮನ ಮುಖ ನೋಡಿ ತಾಂಡವ್ ನಗುತ್ತಾನೆ. ಈ ಭಾಗ್ಯನನ್ನ ನಂಬಿದರೆ ಇದೇ ಕಥೆ ಎನ್ನುವುದು ಅಮ್ಮನಿಗೆ ಕೂಡ ಗೊತ್ತಾಗಲಿ ಎಂದು ಮನದಲ್ಲಿ ಅಂದುಕೊಳ್ಳುತ್ತಾನೆ. ಇತ್ತ ಭಾಗ್ಯ ಎಲ್ಲಾ ಸವಾಲನ್ನು ಮೆಟ್ಟಿ ನಿಲ್ಲಬೇಕಾಗಿದೆ. ತನ್ನ ಮಗಳ ಮುಂದೆ ನಾನು ಯಾವುದಕ್ಕೂ ಕಮ್ಮಿ ಇಲ್ಲ ಎಂಬುವುದನ್ನು ತೋರಿಸಬೇಕಾಗಿದೆ . ಎಲ್ಲರಿಗೂ ಆಶ್ಚರ್ಯವಾಗುವಂತೆ ಭಾಗ್ಯಾ ಧೈರ್ಯವಾಗಿ ಭರತನಾಟ್ಯ ಮಾಡುತ್ತಾಳೆ ಮತ್ತು ಎಲ್ಲರಿಂದ ಪ್ರಶಂಸೆ ಪಡೆಯುತ್ತಾಳೆ. ಆದರೆ ಇದೆಲ್ಲದರ ಕೊನೆಗೆ ಭಾಗ್ಯಾಗೆ ಬಹುಮಾನ ಸಿಗುತ್ತದಾ ? ಮಗಳು ಹಾಗೂ ತಾನು ಸ್ಕೂಲ್‌ಗೆ ಹೋಗೋ ಅವಕಾಶವನ್ನ ಉಳಿಸಿಕೊಳ್ತಾಳಾ ? ಕಾದು ನೋಡಬೇಕಿದೆ.

More from Filmibeat

English summary
BhagyaLakshmi serial 09th December episode update.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X