BhagyaLakshmi: ಭರತನಾಟ್ಯ ಮೂಲಕ ಎಲ್ಲರ ಮನಗೆದ್ದ ಭಾಗ್ಯ, ಸೊಸೆಯನ್ನು ಹಾಡಿ ಹೊಗಳಿದ ಕುಸುಮಾ
ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ಈಗ ಭರತನಾಟ್ಯ ಡ್ಯಾನ್ಸ್ ಮಾಡಿ ಮಾತನಾಡುವವರ ಬಾಯಿ ಮುಚ್ಚಿಸಿದ್ದಾಳೆ ಭಾಗ್ಯ. ಕನ್ನಿಕಾ ಕುಸುಮಾ ಬಳಿ ಭಾಗ್ಯ ಹೆಸರನ್ನು ಲಿಸ್ಟ್ ನಿಂದಾ ತೆಗೆಯುವುದಿಲ್ಲ. ಆಕೆ ಡಾನ್ಸ್ ಮಾಡಬೇಕು ಇಲ್ಲವಾದರೆ ನೇರವಾಗಿ ಮನೆಗೆ ಹೋಗಬೇಕು ಎಂದೆಲ್ಲ ಖಡಕ್ ಆಗಿ ಮಾತನಾಡಿದಾಗ ಕುಸುಮಾಗೆ ಕೋಪ ಬಹಳ ಬರುತ್ತದೆ.
ಆಕೆಗೆ ಎನು ಮಾಡಬೇಕು ಎಂದು ತಿಳಿಯದೇ ಅದನ್ನೇ ಚಾಲೆಂಜ್ ಆಗಿ ತೆಗೆದುಕೊಂಡು ನನ್ನ ಸೊಸೆ ಖಂಡಿತವಾಗಿ ಬಂದೆ ಬರುತ್ತಾಳೆ. ಡಾನ್ಸ್ ಮಾಡಿಯೇ ಮಾಡುತ್ತಾಳೆ ಎಂದು ಹೇಳುತ್ತಾಳೆ. ಇದನ್ನು ಕೇಳಿಸಿಕೊಂಡ ಭಾಗ್ಯ ಅಯ್ಯಯ್ಯೋ ಅತ್ತೆ ಬೇಡ ಅತ್ತೆ ನನ್ನಿಂದ ಡಾನ್ಸ್ ಮಾಡಲು ಆಗುವುದು ಇಲ್ಲ ಎಂದು ಹೇಳುತ್ತಾಳೆ. ಇದು ಯಾವುದನ್ನು ಕುಸುಮಾ ತನ್ನ ಕಿವಿಗೆ ಹಾಕಿಕೊಳ್ಳುವುದಿಲ್ಲ.

ಭಾಗ್ಯ ಅತ್ತೆಯ ಮನಸನ್ನು ಒಲಿಸಲು ಅದೆಷ್ಟೇ ಪ್ರಯತ್ನ ಪಟ್ಟರೂ ವೆಸ್ಟ್ ಆಗುತ್ತದೆ. ಕೊನೆಗೆ ಡಾನ್ಸ್ ಕಾಂಪಿಟೇಶನ್ ದಿನ ಬಂತು ಭಾಗ್ಯ ಹೆಸರನ್ನು ಕರೆದಾಗ ಕುಸುಮಾಗೆ ಭಯ ಆಗುತ್ತದೆ. ಕೊನೆಗೆ ಭಾಗ್ಯ ಸ್ಟೇಜ್ ಮೇಲೆ ಬಂದು ಡಾನ್ಸ್ ಮಾಡುತ್ತಾಳೆ. ಇದನ್ನು ನೋಡಿದ ತಾಂಡವ್‌ಗೆ ಮೈಯೆಲ್ಲ ಉರಿಯುತ್ತದೆ.
ಭಾಗ್ಯ ನೋಡಿ ತಾಂಡವ್‌ಗೆ ಎಲ್ಲಿಲ್ಲದ ಕೋಪ!
ತಾಂಡವ್ ಮಾತ್ರ ಭಾಗ್ಯ ಡಾನ್ಸ್ ಮಾಡುತ್ತಾಳೆ ಎಂದುಕೊಂಡಿರಲಿಲ್ಲ. ಭಾಗ್ಯ ಡಾನ್ಸ್ ನೋಡಿದ ಕನ್ನಿಕಾಗಂತು ಬಹಳ ಆಶ್ಚರ್ಯ ಆಗುತ್ತದೆ. ಹಾಗೆಯೇ ಬಹಳ ಶಾಕ್ ಆಗುತ್ತದೆ. ಕನ್ನಿಕಾ ಮಾತಿಗೆ ಇದೀಗ ಕುಸುಮಾ ತಿರುಗೇಟು ನೀಡಲು ಸಜ್ಜಾಗಿದ್ದಾಳೆ.

ಇನ್ನು ಭಾಗ್ಯ ಮಾಡಿದ ಭರತನಾಟ್ಯದ ನೃತ್ಯ ನೋಡಿ ಬಹಳ ಖುಷಿ ಪಡುತ್ತಾ ಇದ್ದರೆ ತಾಂಡವ್ ಎದ್ದು ಹೋಗಲು ರೆಡಿ ಆಗುತ್ತಾನೆ. ತಾಂಡವ್‌ನನ್ನು ನೋಡಿದ ಕುಸುಮಾ ಕೂರುವಂತೆ ಸೂಚನೆ ನೀಡುತ್ತಾಳೆ. ಆದರೆ ಅಮ್ಮ ಖುಷಿ ಆಗಿರುವ ಮುಖ ನೋಡಿ ತಾಂಡವ್‌ಗೆ ಬಹಳ ಮುಜುಗರ ಆಗುತ್ತದೆ. ಭಾಗ್ಯ ಬಹಳ ಅದ್ಭುತವಾಗಿ ಡಾನ್ಸ್ ಮಾಡಿರುವುದನ್ನು ನೋಡಿದ ಕುಸುಮಾ ಸೊಸೆಗೆ ಬೇಷ್ ಎಂದು ಹೇಳುತ್ತಾಳೆ.
ಅತ್ತೆ ಮಾತಿಗೆ ಖುಷಿಪಟ್ಟ ಭಾಗ್ಯ
ಹಾಗೆಯೇ ನೀನು ಇಷ್ಟು ಚೆನ್ನಾಗಿ ಡಾನ್ಸ್ ಮಾಡುತ್ತೀಯಾ ಎನ್ನುವುದೇ ನನ್ನ ಅರಿವಿಗೆ ಬಂದೆ ಇರಲಿಲ್ಲ ಎಂದು ಕುಸುಮಾ ಹೇಳುತ್ತಾಳೆ. ಈಗ ಯಾರೇ ಬಂದರು ನಾನು ಭಾಗ್ಯ ಪರ ನಿಲ್ಲುತ್ತೇನೆ . ಭಾಗ್ಯ ಯಾವತ್ತೂ ಯಾವುದೇ ನಿರ್ಧಾರ ತೆಗೆದುಕೊಂಡರೂ ಬಹಳ ಗಟ್ಟಿ ಆಗಿರುತ್ತದೆ. ಇನ್ನು ಅಮ್ಮ ಚೆನ್ನಾಗಿ ಡಾನ್ಸ್ ಮಾಡುತ್ತಾ ಇರುವುದನ್ನು ನೋಡಿ ತನ್ವಿ ಹಣೆ ಚಚ್ಚಿಕೊಂಡು ಕೂರುತ್ತಾಳೆ.


Click it and Unblock the Notifications











