BhagyaLakshmi: ಮನೆ ನಡೆಸಲು ಯಾರ ಸಹಾಯವೂ ಬೇಡ ಎಂದ ಕುಸುಮಾ, ಮತ್ತೆ ಮಗನನ್ನು ಕ್ಷಮಿಸುವುದಿಲ್ಲವೇ?

By Poorva

ಭಾಗ್ಯಲಕ್ಷ್ಮಿ ಧಾರಾವಾಹಿ ಅದ್ಬುತವಾಗಿ ಮೂಡಿ ಬರುತ್ತಿದ್ದು ನೋಡುಗರಿಗೆ ಬಹಳ ಖುಷಿ ನೀಡುತ್ತಿದೆ. ಇದೀಗ ತಾಂಡವ್ ಭಾಗ್ಯಗೆ ಹೇಗಾದರೂ ಮಾಡಿ ಬುದ್ಧಿ ಕಲಿಸಲೇಬೇಕು ಎಂದು ಮನೆ ಬಿಟ್ಟು ಹೋಗಿರುತ್ತಾನೆ. ಆದರೆ ಇದೀಗ ಶ್ರೇಷ್ಠಾಗಿಂತ ಭಾಗ್ಯನೇ ಬೆಸ್ಟ್ ಎಂದು ತಾಂಡವ್‌ಗೆ ಮನವರಿಕೆಯಾಗಿದೆ. ಟೀ ಬೇಕು ಎಂದು ಕೇಳಿದಾಗ ಮಾಡಿಕೊಡಲು ತಯಾರಿಲ್ಲ ಆದರೆ ಭಾಗ್ಯ ಆಗಿದ್ದರೆ ಅದಾಗಲೇ ಟೀ ಮಾಡಿಕೊಂಡು ಬಂದು ತನ್ನ ಗಂಡನಿಗೆ ಕೊಡುತ್ತಿದ್ದಳು.

ಆ ವೇಳೆ ಕುಪಿತಗೊಂಡ ತಾಂಡವ್ ನಿನಗಿಂತ ಆ ಭಾಗ್ಯನೇ ಎಷ್ಟೋ ಬೆಸ್ಟ್ ಎಂದು ಹೇಳುತ್ತಾನೆ. ಇದನ್ನು ಕೇಳಿಸಿಕೊಂಡ ಶ್ರೇಷ್ಠಾಗೆ ಕೋಪ ಕೂಡ ಬರುತ್ತದೆ. ಇನ್ನು ಭಾಗ್ಯ ಮನೆಗೆ ಬರುತ್ತಿದ್ದಂತೆಯೇ ಭಾಗ್ಯನ ಮಗ ಅದ್ದೂರಿಯ ಸ್ವಾಗತ ಕೋರುತ್ತಾನೆ. ತನ್ನ ತಾಯಿ ಅದ್ಭುತವಾದ ಭರತನಾಟ್ಯ ನೃತ್ಯವನ್ನು ಮಾಡಿ ಜನರ ಮನ ಗೆದ್ದಿದ್ದರು ಆದ ಕಾರಣ ಖುಷಿಗೊಂಡ ಮಗ ಅಮ್ಮನಿಗಾಗಿ ಸ್ಪೆಷಲ್ ಅರೇಂಜ್ಮೆಂಟ್ ಮಾಡುತ್ತಾನೆ.

Kannada serial BhagyaLakshmi written update on 16th December

ಇದನ್ನೆಲ್ಲ ನೋಡಿದ ಭಾಗ್ಯ ಬಹಳ ಖುಷಿ ಪಡುತ್ತಾಳೆ. ಭಾಗ್ಯ ಮನದಲ್ಲಿ ತಾಂಡವ ಬಗ್ಗೆ ನೆನಪಿಸಿಕೊಳ್ಳುತ್ತಾಳೆ ತಾಂಡವ ಮನೆಯಲ್ಲಿದ್ದರೆ ಎಷ್ಟೊಂದು ಚೆನ್ನಾಗಿತ್ತು ಎಂದೆಲ್ಲ ಹೇಳುತ್ತಾಳೆ. ಇನ್ನು ತನ್ವಿಯನ್ನ ನೋಡಿದ ಕುಸುಮ ಬಹಳ ಕುಪಿತಗೊಂಡು ಕಷ್ಟದಲ್ಲಿ ತನ್ವಿ ತನ್ನ ತಾಯಿಯ ಕಾಲು ಹಿಡಿಯುತ್ತಾಳೆ.

ತನ್ವಿಗೆ ಚಳಿ ಬಿಡಿಸಿದ ಕುಸುಮಾ

ಕುಸುಮ ಒತ್ತಾಯಕ್ಕೆ ಮಣಿದು, ತಾಯಿಯ ಕಾಲು ಹಿಡಿದು ಕ್ಷಮೆ ಕೇಳುತ್ತಾಳೆ. ಇನ್ನು ತನ್ವಿ ತನ್ನ ಅಜ್ಜಿಯ ಬಳಿ ಹೇಳುತ್ತಾಳೆ ಇನ್ನು ಅಪ್ಪ ಇಲ್ಲಿಗೆ ಬರುತ್ತಾರೆ ಇಲ್ಲವೋ ಗೊತ್ತಿಲ್ಲ ಮನೆ ನಡೆಸುವುದಾದರೂ ಹೇಗೆ ಎಂದೆಲ್ಲ ಮಾತನಾಡುತ್ತಿರುವಾಗ ಕುಸುಮಾ ಬಹಳ ಕೋಪಗೊಂಡು ತನ್ನಿಗೆ ಈಗ 16 ವರ್ಷ ಅಲ್ಲ 60 ವರ್ಷ. ಆ ರೀತಿ ತನ್ವಿ ಮಾತನಾಡುತ್ತಿದ್ದಾಳೆ ಎಂದು ಹೇಳುತ್ತಾಳೆ.

ಅಜ್ಜಿಯ ಮಾತು ಕೇಳಿ ಪರದಾಡಿದ ತನ್ವಿ

ಇದನ್ನು ಕೇಳಿದ ಸುನಂದ ಕೂಡ ತನ್ವಿ ಹೇಳುತ್ತಿರುವುದು ನಿಜ ಅಲ್ವಾ ಬೀಗರೆ. ಇನ್ನು ಮನೆ ನಿಭಾಯಿಸುವುದಾದರೂ ಹೇಗೆ? ಅಳಿಯಂದಿರು ಮನೆಗೆ ಬಂದಿದ್ದರೇ ಒಳ್ಳೆಯದಿತ್ತು ಎಂದು ಹೇಳುತ್ತಾರೆ. ಯಾರು ಇರಲಿ ಯಾರು ಬರಲಿ ಮನೆಯನ್ನ ನಾವೇ ನಿಭಾಯಿಸುತ್ತೇನೆ. ನನ್ನ ಗಂಡನಿಗೆ ಪೆನ್ಷನ್ ಬರುತ್ತದೆ ಅದರಿಂದಲೇ ನಾನು ಈ ಮನೆಯನ್ನ ನೋಡಿಕೊಳ್ಳುತ್ತೇನೆ ಎಂದು ಹೇಳುತ್ತಾಳೆ.

ಶ್ರೇಷ್ಠ ಮಾತು ಕೇಳಿ ಕೆಟ್ಟ ತಾಂಡವ

ನಾನು ನನ್ನ ಮಗನ ಕಾಲು ಹಿಡಿಯಲು ನಾನು ಹೋಗುವುದಿಲ್ಲ ನನಗೆ ಅದು ಬೇಕಾಗಿ ಕೂಡ ಇಲ್ಲ ಆದ ಕಾರಣ ನನ್ನ ಮನೆಯನ್ನು ನಾನೇ ನೋಡಿಕೊಂಡು ಹೋಗುತ್ತೇನೆ ಯಾರ ಸಹಾಯವು ನನಗೆ ಬೇಡ ಎಂದು ಖಡಾ ಖಂಡಿತವಾಗಿ ಹೇಳುತ್ತಾರೆ. ಇದನ್ನು ಕೇಳಿದ ಸುನಂದ ಏನು ಮಾತನಾಡದೆ ಅಲ್ಲಿಂದ ಹೋಗುತ್ತಾಳೆ. ಆದರೆ ಭಾಗ್ಯಗೆ ಮಾತ್ರ ಬಹಳ ಬೇಸರವಾಗುತ್ತದೆ ತನ್ನ ಗಂಡ ನನ್ನ ಜೊತೆ ಇದ್ದರೆ ಇಷ್ಟು ಸುಲಭ ಆಗುತ್ತಿತ್ತು ಎಂದು ಮನದಲ್ಲಿ ವ್ಯಥೆಪಡುತ್ತಾಳೆ. ಇನ್ನು ಶ್ರೇಷ್ಠಾ ತಾಂಡವ್ ಕಿವಿಗೆ ಬೇಡದಿರುವುದನು ಹೇಳಿ ತಲೆಕೆಡಿಸಿಬಿಡುತ್ತಾಳೆ.

More from Filmibeat

English summary
BhagyaLakshmi serial 16th December update
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X