BhagyaLakshmi: ನೆತ್ತಿಗೇರಿದೆ ತಾಂಡವ್ ದುರಹಂಕಾರ, ಭಾಗ್ಯ ಮುಂದಿನ ನಡೆಯುತ್ತ ಎಲ್ಲರ ಚಿತ್ತ!

By Poorva

ದಿನದಿಂದ ದಿನಕ್ಕೆ ತಾಂಡವನ ದುರ್ವರ್ತನೆ ಹೆಚ್ಚು ಆಗುತ್ತಲೆ ಇದೆ. ಭಾಗ್ಯ ಹಾಗೂ ಮನೆ ಸಂಕಷ್ಟದಲ್ಲಿ ಇದೆ. ಎಲ್ಲವನ್ನೂ ನಿಭಾಯಿಸುವ ಶಕ್ತಿ ಭಾಗ್ಯಗೆ ಆ ದೇವರೇ ಕೊಡಬೇಕು. ಭಾಗ್ಯಗೆ ಈಗಾಗಲೇ ಮನೆ ನಿಭಾಯಿಸುವ ಬಹು ದೊಡ್ಡ ಜವಾಬ್ದಾರಿಯನ್ನು ಕೊಟ್ಟಿದ್ದಾರೆ ಕುಸುಮ.

ತನ್ನ ಗಂಡನ ಪೆನ್ಷನ್‌ನಲ್ಲಿ ಈ ಮನೆಯನ್ನು ನಿಭಾಯಿಸುತ್ತೇನೆ ಎಂದು ಭಾಗ್ಯ ಬಳಿ ಕುಸುಮ ಹೇಳುತ್ತಾಳೆ. ಮಗನ ಹಂಗಿನ ದುಡ್ಡಿಗೆ ಕೈ ಒಡ್ಡದೆ ಹೇಗಾದರೂ ಮಾಡಿ ಮನೆಯನ್ನು ನಿಭಾಯಿಸಬೇಕು ಎಂದು ಕುಸುಮ ಅಂದುಕೊಂಡರೆ ಮಗ ಮಾತ್ರ ಮನೆಯ ಇಎಮ್‌ಐ ಕಟ್ಟಲು ಕೂಡ ಮನೆ ಮಂದಿಗೆ ಇನ್ನೊಂದು ಭಾರ ಹರಿಸಿದ್ದಾನೆ.

Kannada Serial BhagyaLakshmi written update on 19th December

ಶ್ರೇಷ್ಠಾ ಹಿಂದೆ ಪದೇ ಪದೇ ಹೋಗುತ್ತಾ ಇದ್ದ ತಾಂಡವ ಇದೀಗ ತನ್ನ ಹೆಂಡತಿ ಭಾಗ್ಯ ಅಲ್ಲ ಶ್ರೇಷ್ಠಾ ಎಂದು ಹೇಳುತ್ತಿದ್ದಾನೆ. ಹೌದು ಶ್ರೇಷ್ಠಾ ತಾಂಡವಗೆ ಅದೆಷ್ಟೇ ಹಿಂಸೆ ಕೊಟ್ಟರು ತಾಂಡವ ಎಲ್ಲದುದನ್ನು ತಡೆದುಕೊಂಡು ಇರುತ್ತಾನೆ. ಒಮ್ಮೊಮ್ಮೆ ಶ್ರೇಷ್ಠಾ ಮುಂದೆ ಭಾಗ್ಯಳನ್ನು ಹೊಗಳುತ್ತಾನೆ. ಅದ್ಯಾವುದೂ ಶ್ರೇಷ್ಠಾಗೆ ಇಷ್ಟ ಆಗದೆ ಇದ್ದರೂ ಅದನ್ನು ತೋರ್ಪಡಿಸದೆ ಭಾಗ್ಯ ಹಾಗೂ ಕುಸುಮ ವಿರುದ್ದ ತಾಂಡವ್‌ನನ್ನು ಎತ್ತಿ ಕಟ್ಟುತ್ತಾಳೆ .

ಶ್ರೇಷ್ಠಾ ಮಾತು ಕೇಳಿ ಕೆಟ್ಟ ತಾಂಡವ್

ತಾಂಡವ್‌ ಮನದಲ್ಲಿ ಅಮ್ಮ ಮಕ್ಕಳ ಬಗ್ಗೆ ಮೃದು ಧೋರಣೆ ಇರುತ್ತದೆ. ಆದರೆ ಭಾಗ್ಯ ಅಂದರೆ ಉರಿದು ಬೀಳುತ್ತಾನೆ. ಇದನ್ನೇ ಶ್ರೇಷ್ಠಾ ಬಹುದೊಡ್ಡ ಅಸ್ತ್ರವಾಗಿ ಇಟ್ಟುಕೊಂಡು ಕುಸುಮ ಭಾಗ್ಯ ವಿರುದ್ದ ಚೂ ಬಿಟ್ಟಿದ್ದಾಳೆ. ಇನ್ನು ಭಾಗ್ಯಗೆ ಬ್ಯಾಂಕ್ ಕಡೆಯವರು ಕರೆ ಮಾಡುತ್ತಾರೆ. ಮನೆಗೆ ತೆಗೆದುಕೊಂಡ ಲೋನ್ ಕಟ್ಟಬೇಕು ತಿಂಗಳು ತಿಂಗಳು 40,000 ವನ್ನ ನೀವು ಕಟ್ಟಬೇಕು ಎಂದೆಲ್ಲ ಹೇಳುತ್ತಾರೆ.

Kannada Serial BhagyaLakshmi written update on 19th December

ಭಾಗ್ಯ ಹೆಗಲೇರಿದೆ ಮನೆಯ ಜವಾಬ್ದಾರಿ

ಭಾಗ್ಯಗೆ ಎನು ಅರ್ಥ ಆಗದೆ ಪುನಃ ಪುನಃ ಕೇಳುತ್ತಾಳೆ ಆಗ ಬ್ಯಾಂಕ್ ನವರು ಹೇಳಿದ ಮಾತಿಗೆ ತಲೆ ಒಂದು ಬಾರಿ ಚಕ್ಕರ್ ಬಂದ ಹಾಗೆ ಆಗುತ್ತದೆ. ಬಳಿಕ ಗಂಡನಿಗೆ ಕರೆ ಮಾಡಿ ಈ ಬಗ್ಗೆ ವಿಚಾರಣೆ ಮಾಡಿದಾಗ ಲೋನ್ ನೀವೇ ಕಟ್ಟಿ. ಅತ್ತೆ ಸೊಸೆ ಸೇರಿಕೊಂಡು ನನಗೆ ಬಯ್ಯುತ್ತಿರಿ ಅಲ್ವಾ .. ಇನ್ನೂ ಮುಂದೆ ನೀವೇ ಇಎಮ್ಐ ಕಟ್ಟಿ ಎಂದು ಹೇಳುತ್ತಾನೆ. ಭಾಗ್ಯಗೆ ಎನು ಮಾಡಬೇಕು ಎಂದು ತಿಳಿಯದೇ ಬಹಳ ಆತಂಕ ಆಗುತ್ತದೆ.

ಗಂಡನ ಮಾತಿಗೆ ಶಾಕ್ ಆದ ಭಾಗ್ಯ

ಈ ವಿಚಾರವನ್ನು ಅತ್ತೆಯ ಬಳಿ ಹೇಳಿದರೆ ಎಲ್ಲಿ ಹೆದರಿಕೊಂಡು ಬಿಡುತ್ತಾರೆ ಎಂದು ಏನು ಹೇಳದೆ ತಲೆ ಕೆಡಿಸಿಕೊಂಡಿರುತ್ತಾಳೆ. ತಾನು ಕಟ್ಟಿಕೊಂಡ ಗಂಡ ಹೆಂಡತಿ ಮಕ್ಕಳನ್ನು ತಂದೆ ತಾಯಿ ಯನ್ನು ನಡು ನೀರಿನಲ್ಲಿ ಬಿಟ್ಟು ಅದ್ಯವಳ ಹಿಂದೆ ಹೋಗಿ ಬಿಟ್ಟನೆಂದು ಬಹಳ ನೊಂದುಕೊಳ್ಳುತ್ತಾಳೆ. ಇನ್ನು, ಭಾಗ್ಯ ಆ ನೋವನ್ನು ಯಾರಿಗೂ ಹೇಳದೆ ತನ್ನೊಳಗೆ ಹುದುಗಿಸಿಕೊಂಡು ಇರುತ್ತಾಳೆ. ಭಾಗ್ಯ ಸ್ಥಿತಿ ನೆನೆದು ಸುನಂದಾ ಮಾತ್ರ ಬಹಳ ವ್ಯಥೆ ಪಡುತ್ತಿರುತ್ತಾಳೆ. ನನ್ನ ಮಗಳ ಜೀವನ ಹೀಗಾಯಿತಲ್ಲ ಎಂದು ಮರುಗುತ್ತಾರೆ.

More from Filmibeat

English summary
BhagyaLakshmi serial 19th December episode update.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X