BhagyaLakshmi: ಮನೆಯವರನ್ನು ಕಷ್ಟಕ್ಕೆ ತಳ್ಳಿದ ತಾಂಡವ್, ನೆಮ್ಮದಿಯಿಂದ ಇರಲು ಹೇಗೆ ಸಾಧ್ಯ?

By Poorva

ತಾಂಡವ್ ಮಾಡಿದ ಒಂದೇ ಒಂದು ಕೆಲಸಕ್ಕೆ ಇದೀಗ ಭಾಗ್ಯ ಬೆಲೆ ತೆರಬೇಕಾಗುತ್ತಿದೆ. ಕುಟುಂಬಸ್ಥರನ್ನು ಸಂಕಷ್ಟಕ್ಕೆ ದುಡಿದ ತಾಂಡವ್ ತನ್ನ ಮನೆಯಲ್ಲಿ ಇರಲಾಗದೆ ಶ್ರೇಷ್ಠಾ ಜೊತೆಯಲ್ಲೂ ಕೂಡ ಇರಲಾಗದೆ ಸಂಕಟ ಅನುಭವಿಸುತ್ತಿದ್ದಾನೆ. ಇನ್ನು ಭಾಗ್ಯ ಮನೆಯ ಇಎಂಐಯನ್ನು ಬ್ಯಾಂಕ್‌ಗೆ ಕಟ್ಟಬೇಕು ಎಂದು ಸೂಚನೆಯನ್ನು ಭಾಗ್ಯಗೆ ಬ್ಯಾಂಕ್ ಸಿಬ್ಬಂದಿ ತಿಳಿಸಿರುತ್ತಾರೆ.

ತನ್ನ ಬಳಿ ಇರುವುದು 30,000. ಆದರೆ ಬ್ಯಾಂಕ್‌ಗೆ ಕಟ್ಟಬೇಕಾಗಿ ಇರುವುದು ನಲವತ್ತು ಸಾವಿರ ಇದಕ್ಕಾಗಿ ಎನು ಮಾಡಬೇಕು ಎಂದು ತೋಚದೇ ಬಹಳ ತಲೆನೋವು ಮಾಡಿಕೊಂಡಿದ್ದಾಳೆ. ಏನು ಮಾಡಬೇಕು ಎಂದು ತಿಳಿಯದೇ ಬಹಳ ನೋವು ಪಡುತ್ತಿದ್ದಾಳೆ. ಈ ಬಗ್ಗೆ ಏನು ಮಾಡಬೇಕು ಎಂದು ತಿಳಿಯದೇ ಬಹಳ ಗಂಭೀರವಾಗಿ ಯೋಚನೆ ಮಾಡಿದಾಗ ಭಾಗ್ಯಗೆ ಹೊಳೆದಿದ್ದು ಒಂದೇ ಅದು ಚಿನ್ನ. ಬಂಗಾರವನ್ನು ಅಡವಿಟ್ಟು ಮನೆಯ ಇಎಂಐ ಕಟ್ಟೋಣ ಎಂದು ಯೋಚನೆ ಮಾಡುತ್ತಾಳೆ.

 Kannada Serial BhagyaLakshmi written update on 21th December

ಆಗ ಕುಸುಮ ಬಂದು ಪ್ರಶ್ನೆ ಮೇಲೆ ಪ್ರಶ್ನೆ ಮಾಡಿದಾಗ ಮಾತನಾಡಬೇಕು ಎಂದಿದ್ದು ಕೂಡ ಭಾಗ್ಯಗೆ ಮರೆತು ಹೋಗುತ್ತದೆ. ಏನೇ ಕಷ್ಟ ಆದರೂ ಭಾಗ್ಯ ಅತ್ತೆಗೆ ತಿಳಿಸುವುದು ಬೇಡ. ಅವರಿಗೆ ಕೂಡ ಆತಂಕ ಆಗಬಹುದು ಎಂದು ಮನದಲ್ಲಿ ಎಲ್ಲಾ ಕಷ್ಟವನ್ನು ಹುದುಗಿಸಿ ಇಟ್ಟುಕೊಂಡಿದ್ದಾಳೆ.

ಕುಸುಮ ಮಾತಿಗೆ ತೆಪ್ಪಗೆ ಇರುವ ಭಾಗ್ಯ

ಭಾಗ್ಯಳನ್ನು ನೋಡಿದ ಕುಸುಮ ಯಾಕೆ ಭಾಗ್ಯ ಮುಖ ಗಂಟು ಹಾಕಿಕೊಂಡು ಇರುತ್ತಿಯ...? ಯಾವುದರ ಬಗ್ಗೆಯೂ ನೀನು ಚಿಂತೆ ಮಾಡಬೇಡ ಮೂವತ್ತು ಸಾವಿರ ಹಣ ಕೊಟ್ಟಿದ್ದೇನೆ ಅಲ್ವಾ .. ಬಹಳ ಅದ್ದೂರಿಯಾಗಿ ನಾವು ಬದುಕಬಹುದು ಎಂದು ಹೇಳಿದಾಗ ಭಾಗ್ಯ ಸುಮ್ಮನೆ ಆಗುತ್ತಾಳೆ. ಇನ್ನೂ ತಾಂಡವ್‌ ಮನೆಗೆ ನಾಟಕ ಮಾಡಲು ಬಂದ ಬಾಡಿಗೆ ತಾಯಿ ಶ್ರೇಷ್ಠಾ ಚಿನ್ನದ ರಿಂಗ್ ಹಾಗೂ ತಾಂಡವನ ಪರ್ಸ್ ಕದ್ದು ಅಲ್ಲಿಂದ ಪರಾರಿ ಆಗುತ್ತಾಳೆ.

 Kannada Serial BhagyaLakshmi written update on 21th December

ತಾಂಡವ್ ಪರ್ಸ್ ಕಳವು

ಆಫೀಸ್‌ಗೆ ಹೊರಟ ತಾಂಡವ್‌ ತನ್ನ ಪರ್ಸ್‌ನ ಹುಡುಕಾಟದಲ್ಲಿ ಇದ್ದರೆ ಶ್ರೇಷ್ಠಾ ತನ್ನ ರಿಂಗ್ ಹುಡುಕಾಟದಲ್ಲಿ ಇರುತ್ತಾಳೆ. ಇದನ್ನೆಲ್ಲ ನೋಡಿದ ತಾಂಡವ್‌ ಮಾತ್ರ ಬಹಳ ಕೋಪಗೊಂಡಿದ್ದಾನೆ. ಶ್ರೇಷ್ಠಾ ನನ್ನ ಪರ್ಸ್ ಎಲ್ಲಿ ಎಂದೆಲ್ಲ ಕೇಳಿದಾಗ, ಶ್ರೇಷ್ಠಾ ನನ್ನ ರಿಂಗ್ ಕಾಣಿಸುತ್ತ ಇಲ್ಲ ಎಂದು ಕೊಂಚ ಜೋರಾಗಿ ಹೇಳುತ್ತಾಳೆ. ಇನ್ನೂ ಇಬ್ಬರ ವಸ್ತುಗಳು ಕಾಣೆ ಆಗಿದೆ. ಆದರೆ, ಕಳ್ಳಿ ಇದೀಗ ಪರಾರಿ ಆಗಿದ್ದಾಳೆ.

ಹಣವಿಲ್ಲದೆ ಭಾಗ್ಯ ಮನೆ ಉಳಿಸಿಕೊಳ್ಳುವುದು ಹೇಗೆ?

ಇತ್ತ, ಭಾಗ್ಯ ಮನೆಯ ಜವಾಬ್ದಾರಿ ಹೊತ್ತುಕೊಂಡಿದ್ದಾಳೆ. ಹಾಗೆಯೇ ಮನೆಯ ಇಎಂಐ ಕೂಡ ಕಟ್ಟಬೇಕು . ಹೇಗೆ ಇದನ್ನೆಲ್ಲ ನಿಭಾಯಿಸುತ್ತಾರೆ ಭಾಗ್ಯ ಎಂದು ಸೀರಿಯಲ್ ಪ್ರೇಮಿಗಳು ಆಲೋಚನೆ ಮಾಡುತ್ತಾ ಇದ್ದಾರೆ.

More from Filmibeat

English summary
BhagyaLakshmi serial 21th December episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X