Bhagyalakshmi: ತನ್ನವರಿಗೆ ಮೋಸ ಮಾಡಿದ ತಾಂಡವ್‌ಗೆ ಕಾಟ ಕೊಡುತ್ತಿರುವ ಡೂಪ್ಲಿಕೇಟ್ ಅಪ್ಪ ಅಮ್ಮ..!

By ಶೃತಿ ಹರೀಶ್ ಗೌಡ

ತಾಂಡವ್‌ಗೆ ಮೊದಲಿನಿಂದಲೂ ಕೂಡ ಭಾಗ್ಯಳನ್ನು ಕಂಡರೆ ಅಷ್ಟಕಷ್ಟೇ ಈಗಂತೂ ಅವಳ ಅಮ್ಮ ಕೂಡ ಭಾಗ್ಯಾಗೆ ಸಪೋರ್ಟ್ ಮಾಡುತ್ತಾ ಇರುವುದು ತಾಂಡವ್ ಕಣ್ಣುರಿಗೆ ಕಾರಣವಾಗಿದೆ. ಅಮ್ಮ ಮಗನನ್ನೇ ಕಡೆಗಣಿಸಿ ತನಗೆ ಸೊಸೆ ಬೇಕು ಎಂದು ಹಠ ಹಿಡಿದು ಮಗನನ್ನೇ ಮನೆಯಿಂದ ಹೊರ ಹಾಕಿರುವುದು ಕೋಪವನ್ನ ತರಿಸಿದೆ. ನಾನು ಇಲ್ಲದೆ ಆ ಮನೆಯಲ್ಲಿ ಒಂದು ಹುಲ್ಲು ಕಡ್ಡಿಯು ಅಲ್ಲಾಡುವುದಿಲ್ಲ ಎಂದು ತಾಂಡವ್ ಅಂದುಕೊಂಡಿದ್ದ. ಆದರೆ ಕುಸುಮಾ ತನ್ನ ಸ್ವಾಭಿಮಾನಕ್ಕೆ ಪೆಟ್ಟು ಬಿದ್ದರೆ ಯಾವುದನ್ನು ಕೂಡ ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ.

ತಾಂಡವ್ ಈಗ ಭಾಗ್ಯಳ ವಿರುದ್ಧ ನಿಂತುಕೊಂಡಿದ್ದಾನೆ. ಆದರೆ, ಕುಸುಮಾ ಇರುವವರೆಗೂ ತಾಂಡವ್ ಭಾಗ್ಯಾಗೆ ಏನು ಮಾಡಲು ಸಾಧ್ಯವಿಲ್ಲ. ಈ ಕಡೆ ಶ್ರೇಷ್ಠಾ ತನ್ನ ಬೇಳೆ ಬೇಯಿಸಿಕೊಳ್ಳಲು ಈಗ ಮೂಡಿಸುವ ಶಾಸ್ತ್ರವನ್ನು ಇಟ್ಟುಕೊಂಡಿದ್ದಾಳೆ. ಮೊದಲಿಗೆ ತಾಂಡವ್ ಪದವಿಯನ್ನು ಕುತ್ತುಕೊಂಡಿರುವ ಶ್ರೇಷ್ಠಾ ತಾಂಡವ್ ತನ್ನಿಂದ ದೂರವಾಗಬಾರದು ಎಂದುಕೊಂಡು ಸಮಾಧಾನದಿಂದಲೇ ತಾಂಡವ್ ಜತೆಗೆ ಇದ್ದಾಳೆ. ಸಮಯ ಸಿಕ್ಕಾಗೆಲ್ಲಾ ಭಾಗ್ಯ ಹಾಗೂ ಕುಸುಮಾ ವಿರುದ್ಧ ಮಾತನಾಡುತ್ತಿದ್ದಾಳೆ. ಇನ್ನು ತಾಂಡವ್ ಮದುವೆಯಾದರಂತೂ ತಾಂಡವ್ ಕಥೆ ಗೋವಿಂದವಾಗಲಿದೆ.

Kannada serial Bhagyalakshmi Written Update on 3rd January

ಭಾಗ್ಯ ಈಗ ಮಕ್ಕಳ ಭವಿಷ್ಯದ ಬಗ್ಗೆ ಯೋಚನೆ ಮಾಡುತ್ತಾ ಇದ್ದಾಳೆ. ತಾಂಡವ್ ತೆಗೆದುಕೊಂಡಿರುವ ನಿರ್ಧಾರ ತನ್ನ ಮಕ್ಕಳ ಭವಿಷ್ಯದ ಮೇಲೆ ಏನಾದರೂ ಪರಿಣಾಮ ಬೀರಲಿದ್ಯಾ? ಎಂದು ಯೋಚಿಸುತ್ತಾ ಇದ್ದಾಳೆ. ಇಷ್ಟು ದಿನ ಮನೆಯ ಎಲ್ಲ ಜವಾಬ್ದಾರಿಯನ್ನು ತಾಂಡವ್ ತೆಗೆದುಕೊಂಡಿದ್ದನು. ಮಕ್ಕಳ ಓದಿನಿಂದ ಹಿಡಿದು ಮನೆಗೆ ರೇಷನ್ ತರುವವರೆಗೂ ಕೂಡ ತಾಂಡವ್ ಎಲ್ಲವನ್ನು ಮಾಡುತ್ತಿದ್ದನು. ಆದರೆ ಈಗ ತಾಂಡವ್ ಆ ಮನೆಯಲ್ಲಿ ಇಲ್ಲದ ಕಾರಣ ಏನನ್ನು ಮಾಡುತ್ತಿಲ್ಲ. ಕುಸುಮ ಕೂಡ ಮಗನನ್ನ ದೂರವಿಟ್ಟಿದ್ದು ಮನೆಯ ಎಲ್ಲಾ ಜವಾಬ್ದಾರಿಯನ್ನು ತಾವೇ ವಹಿಸಿಕೊಳ್ಳುತ್ತೇವೆ ಎಂದು ತಾಂಡವ್ ಬಳಿಯಲ್ಲಿ ಹೇಳಿದ್ದಾರೆ. ಅಷ್ಟು ಅಲ್ಲದೆ ಈಗ ನಾವು ಮನೆಯೂ ಕೂಡ ಬೇಡ ಹಳೆಯ ಮನೆಗೆ ಬಾಡಿಗೆಗೆ ಹೋಗುತ್ತೇವೆ ಎಂದು ಹೇಳಿ ಬಂದಿದ್ದಾರೆ.

ತಾಂಡವ್‌ಗೆ ಕಿರಿಕಿರಿ ಮಾಡುತ್ತಿರುವ ಡೂಪ್ಲಿಕೇಟ್ ಅಪ್ಪ ಅಮ್ಮ

ತಾಂಡವ್- ಶ್ರೇಷ್ಠಾ ಮದುವೆ ಮಾಡಬೇಕು ಎಂದು ಅವರ ತಂದೆ ತಾಯಿ ಹೂ ಮೂಡಿಸುವ ಶಾಸ್ತ್ರವಿದೆ ನೀನು ನಿಮ್ಮ ತಂದೆ ತಾಯಿಯನ್ನ ಕರೆದುಕೊಂಡು ಊರಿಗೆ ಬಾ ಎಂದು ಹೇಳಿದ್ದಾರೆ. ಆದರೆ ತಾಂಡವ್‌ಗೆ ಇದ್ಯಾವುದಪ್ಪ ಇದು ಹೊಸ ತಲೆನೋವು ಎಂದುಕೊಂಡು ಆಯಿತು ಎಂದಿದ್ದಾನೆ. ಇನ್ನು ಮುಂದೆ ಮದುವೆ ಆಗುವ ತಯಾರಿಯನ್ನು ಮಾಡಿಕೊಳ್ಳಬೇಕಾಗಿದೆ ಇದಕ್ಕಾಗಿ ಡೂಪ್ಲಿಕೇಟ್ ಅಪ್ಪ ಅಮ್ಮನ ಜೊತೆಗೆ ಬಟ್ಟೆ ತೆಗೆದುಕೊಳ್ಳಲು ಬಂದಿದ್ದಾನೆ. ಇದೆ ವೇಳೆ ಸುಂದರಿ ಹಾಗೂ ಮಹೇಶ್ ಇಬ್ಬರೂ ಕೂಡ ತಾಂಡವ್‌ಗೆ ಕಿರಿಕಿರಿಯನ್ನ ಮಾಡುತ್ತಿದ್ದಾರೆ ನನಗೆ ಈ ಸೀರೆ ಬೇಕು ಈ ಪಂಚೆ ಬೇಕು ಎಂದು ಹೇಳಿದಾಗ ತಾಂಡವ್ ಅವರ ಮೇಲೆ ರೇಗಾಡಿದ್ದಾನೆ.

Kannada serial Bhagyalakshmi Written Update on 3rd January

ಇದೇ ವೇಳೆ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುವವರು ನಿಮ್ಮ ತಂದೆ ತಾಯಿಗೆ ಒಂದು ಜೊತೆ ಬಟ್ಟೆ ಕೊಡಿಸಲು ಆಗೋದಿಲ್ವ ಎಂಬ ಮಾತನ್ನು ಆಡಿದ್ದಾರೆ. ಇದೇ ವೇಳೆ ಸುಂದರಿ ಮತ್ತಷ್ಟು ನಾಟಕವನ್ನು ಮಾಡುತ್ತಿದ್ದು, ಅವರ ಕಿರಿಕಿರಿಯನ್ನ ತಡೆದುಕೊಳ್ಳಲು ಆಗುತ್ತಿಲ್ಲ ಇದಕ್ಕಾಗಿ ಇಬ್ಬರ ಮೇಲೂ ರೇಗಿದ್ದಾನೆ. ಇದಕ್ಕೆ ಬಟ್ಟೆ ಅಂಗಡಿಯವರು ನಿಮ್ಮ ಮದುವೆ ಅನ್ನುತ್ತೀರಾ ತಂದೆ ತಾಯಿಗೆ ಒಂದು ಜೊತೆ ಬಟ್ಟೆ ಕೊಡಿಸಲು ಆಗುವುದಿಲ್ಲ ಎಂದು ಮತ್ತೊಮ್ಮೆ ಹೇಳಿದಾಗ ತಾಂಡವ್‌ಗೆ ರೇಗಿ ಹೋಗಿದೆ. ಇದಕ್ಕೆ ಬಟ್ಟೆ ಅಂಗಡಿ ಅವರಿಗೆ ತಾಂಡವ್ ಬೈದಿದ್ದು ಶ್ರೇಷ್ಠಾ ತಡೆದಿದ್ದಾಳೆ. ನಿಮಗೆ ಏನು ಬೇಕೋ ಅದನ್ನ ತೆಗೆದುಕೊಳ್ಳಿ ಎಂದಿದ್ದಾಳೆ.

ಎಲ್ಲದಕ್ಕೂ ಯೋಚನೆ ಮಾಡುತ್ತಿರುವ ಕುಸುಮಾ

ಕುಸುಮಾ ಹಾಗೂ ಭಾಗ್ಯ ಇಬ್ಬರೂ ಕೂಡ ತಿಂಗಳ ದಿನಸಿ ಸಾಮಗ್ರಿಯನ್ನ ತರಲು ಪಟ್ಟಿಯನ್ನ ಮಾಡುತ್ತಾ ಇದ್ದಾರೆ. ಕೆಜಿಗೆ ಎಷ್ಟು ಎಂದು ಲೆಕ್ಕಾಚಾರ ಮಾಡಿ ಎಷ್ಟು ಗ್ರಾಂ ತರಬೇಕು ಎಷ್ಟು ಕಿಲೋ ತರಬೇಕು ಎಂಬುದನ್ನು ಕೂಡ ಲೆಕ್ಕ ಹಾಕುತ್ತಿದ್ದಾರೆ. ಕುಸುಮಾ ಅವರು ಭಾಗ್ಯ ಬಳಿ ದಿನಸಿ ಸಾಮಗ್ರಿಗಳ ಬೆಲೆಯನ್ನ ಕೇಳುತ್ತಿದ್ದು ಕುಸುಮಾ ಅವರೇ ಮುಂದೆ ನಿಂತು ದಿನಸಿ ಸಾಮಾಗ್ರಿಯನ್ನು ಎಷ್ಟು ತರಬೇಕು ಎಂದು ಲೆಕ್ಕಾಚಾರ ಮಾಡಿದ್ದಾರೆ.

ಇಷ್ಟು ದಿನ ಮನೆಗೆ ಸಾಮಾಗ್ರಿಗಳನ್ನು ತಾಂಡವ್ ತರುತ್ತ ಇದ್ದನು. ಭಾಗ್ಯ ದಿನಸಿ ಸಾಮಗ್ರಿಗಳನ್ನು ಮಾತ್ರ ಬರೆದು ಇಡುತ್ತಿದ್ದಳು. ಆದರೆ ಈಗ ಬೇರೆಯದ್ದೇ ಲೆಕ್ಕ ಆಗಿದ್ದು ಅತ್ತೆ ಸೊಸೆ ಇಬ್ಬರೂ ಕೂಡ ಮನೆಯ ಜವಾಬ್ದಾರಿಯನ್ನ ನಿಭಾಯಿಸಲು ಟೊಂಕ ಕಟ್ಟಿ ನಿಂತಿದ್ದಾರೆ. ಯಾವುದೇ ಕಾರಣಕ್ಕೂ ಮಗನ ಮುಂದೆ ಸೋಲಬಾರದು ಎಂದುಕೊಂಡಿರುವ ಕುಸುಮಾ ಕಷ್ಟವೋ ನಷ್ಟವೋ ತಾನೇ ಎಲ್ಲವನ್ನ ನಿಭಾಯಿಸಬೇಕು ಎಂದು ನಿರ್ಧಾರ ಮಾಡಿಯಾಗಿದೆ.

More from Filmibeat

English summary
Bhagyalakshmi serial 3rd January episode details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X