Bhagyalakshmi: ಮನೆಗೆ ಓಡೋಡಿ ಬಂದ ತಾಂಡವ್: ಅಮ್ಮನ ಮಾತಿಗೂ ಸೊಪ್ಪು ಹಾಕದ ಮಗನಿಗೆ ಭಾಗ್ಯಳ ಪ್ರಶ್ನೆಗಳ ಸರಮಾಲೆ!

By ಶೃತಿ ಹರೀಶ್ ಗೌಡ

ಭಾಗ್ಯಲಕ್ಷ್ಮಿ ಧಾರಾವಾಹಿ ದಿನದಿಂದ ದಿನಕ್ಕೆ ನೋಡುಗರ ಮನ ಸೆಳೆಯುತ್ತಿದೆ. ಸದ್ಯಕ್ಕೆ ತನ್ವಿಯನ್ನು ಡಿಸ್ಚಾರ್ಜ್ ಮಾಡಿಸಿಕೊಂಡು ಭಾಗ್ಯ ಮನೆಗೆ ಬಂದಿದ್ದಾಳೆ. ಆದರೆ ಭಾಗ್ಯ ಮನಸ್ಸಿನಲ್ಲಿ ವೈದ್ಯರು ಹೇಳಿದ ಮಾತೇ ಕೊರೆಯುತ್ತಿದೆ. ತನ್ವಿ ಯಾವುದೋ ಒಂದು ವಿಚಾರ ಮನಸ್ಸಿಗೆ ತೆಗೆದುಕೊಂಡು ಬಿಟ್ಟಿದ್ದಾಳೆ.‌ ಆದರಿಂದಾಗಿ ಈ ರೀತಿ ಆಡುತ್ತಾ ಇದ್ದಾಳೆ ಎಂದು ಹೇಳಿದ್ದಾರೆ. ಕಾಲ ಕ್ರಮೇಣ ಸರಿ ಹೋಗುತ್ತಾಳೆ ಎಲ್ಲದರಿಂದಲೂ ಕೂಡ ಅವಳನ್ನು ಹೊರಗಡೆ ನೀವೇ ಕರೆದುಕೊಂಡು ಬರಬೇಕು ಎಂದು ಭಾಗ್ಯಾಗೆ ಹೇಳಿದ್ದಾರೆ. ಈ ಮಾತು ಮನೆಗೆ ಬಂದ ಮೇಲೂ ಕೂಡ ಭಾಗ್ಯಳನ್ನು ಕಾಡುತ್ತಿದೆ. ಹಾಗಾದರೆ ತಾಂಡವ್ ಏನು ಮಾಡಿದರು ಎಂಬ ಪ್ರಶ್ನೆ ಈಗ ಭಾಗ್ಯ ಮನಸ್ಸಿನಲ್ಲಿ ಹುಟ್ಟಿಕೊಂಡಿದೆ.

ಇನ್ನು ತನ್ವಿಯ ವಿಚಾರದಲ್ಲಿ ಶ್ರೇಷ್ಠಾ ತನ್ನ ತಂದೆಯ ತಾಯಿಗೆ ಸುಳ್ಳು ಹೇಳಿದ್ದಾಳೆ. ತಾಂಡವ್ ಒಂದು ಅನಾಥ ಮಗುವನ್ನು ದತ್ತು ತೆಗೆದುಕೊಂಡು ಸಾಕುತ್ತಾ ಇದ್ದಾನೆ. ಆ ಮಗಳಿಗೆ ಆಕ್ಸಿಡೆಂಟ್ ಆಗಿದೆ ಎಂದು ತನ್ನ ತಂದೆ ತಾಯಿಯನ್ನು ನಂಬಿಸಿದ್ದಾಳೆ. ಇದರಿಂದಾಗಿ ಕಾವ್ಯ ಮನಸ್ಸಿಗೆ ಬಹಳ ನೋವಾಗಿದ್ದು ಕಾವ್ಯ ದೊಡ್ಡ ನಮಸ್ಕಾರ ಹೇಳಿ ಬೆಂಗಳೂರಿಗೆ ವಾಪಸ್ ಆಗಿದ್ದಾಳೆ. ಆದರೆ ಶ್ರೇಷ್ಠಾ ತನ್ನ ಮದುವೆ ನಡೆಯಲು ಸಾವಿರ ಅಲ್ಲ ಕೋಟಿ ಸುಳ್ಳು ಹೇಳಲು ಸಿದ್ದ ಎಂದಿದ್ದಾಳೆ. ಈ ಕಡೆ ತಾಂಡವ್‌ಗೆ ವಿಷಯ ತಿಳಿದ ಕೂಡಲೇ ತನ್ನ ಮನೆಗೆ ಮಗಳನ್ನ ನೋಡಬೇಕು ಎಂದು ಓಡೋಡಿ ಬಂದಿದ್ದಾನೆ.

Kannada serial Bhagyalakshmi Written Update on january 15th episode

ಕುಸುಮಾಗೆ ಮಗನ ಮೇಲೆ ಈಗ ಯಾವುದೇ ವ್ಯಾಮೋಹವಿಲ್ಲ ಯಾಕೆಂದರೆ ತನ್ವಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಗಲೂ ಕೂಡ ತಾಂಡವ್ ಫೋನ್‌ಗೆ ಸಿಕ್ಕಿಲ್ಲ. ಈಗ ಚೆನ್ನಾಗಿ ಆದಮೇಲೆ ಬಂದರೆ ಏನು ಪ್ರಯೋಜನ ಎಂಬುದು ಕುಸುಮಾ ವಾದ. ನನಗೆ ಮಗನೇ ಬೇಡ ಎಂದು ಕುಸುಮ ನಿರ್ಧಾರ ಮಾಡಿದ್ದು, ಬೀಗತಿ ಸುನಂದ ಮಾತುಗಳು ಕೂಡ ಕುಸುಮ ಮನಸ್ಸು ಬದಲಿಸಿವೆ. ಮಗನ ಬಗ್ಗೆ ಅವರು ಆಡಿದ ಒಂದೊಂದು ಮಾತುಗಳು ಕೂಡ ಕುಸುಮ ಅವರ ಮನಸ್ಸಿಗೆ ಅಷ್ಟು ನೋವುಂಟು ಮಾಡಿದ್ದು ತಾಂಡವ್ ಬಗ್ಗೆ ಇದ್ದ ಎಲ್ಲಾ ಅಭಿಪ್ರಾಯ ಸತ್ತುಹೋಗಿದೆ.

ತನ್ವಿಯನ್ನು ನೋಡಲು ಓಡಿ ಬಂದ ತಾಂಡವ್

ಮಗನನ್ನೇ ಯಾರು ಎಂದು ಕೇಳಿದ ಕುಸುಮಾ

ಮಗಳಿಗೆ ಆಕ್ಸಿಡೆಂಟ್ ಆಗಿರುವ ವಿಚಾರ ತಿಳಿದಿದ್ದು ತನ್ವಿಯನ್ನು ನೋಡಲು ಮನೆ ಬಾಗಿಲಿಗೆ ಓಡೋಡಿ ಬಂದಿದ್ದಾನೆ. ಆದರೆ ಕುಸುಮ ಮಗನನ್ನ ಮನೆಯೊಳಗೆ ಬಿಟ್ಟುಕೊಳ್ಳುತ್ತಿಲ್ಲ ಯಾರಪ್ಪ ನೀನು ಇಲ್ಲಿಗೆ ದಾರಿ ತಪ್ಪಿ ಬಂದಿದಿಯಾ ನೋಡು ಬೇರೆ ಅಡ್ರೆಸ್ಸಿಗೆ ಹೋಗಬೇಕಾಗಿತ್ತೇನೋ ಎಂದು ಮಾತನಾಡಿ ಮಗನಿಗೆ ಕೆಣಕಿದ್ದಾರೆ. ಆದರೆ ತಾಂಡವ್ ತನ್ನ ಮೊಂಡುವಾದವನ್ನು ಬಿಡುತ್ತಿಲ್ಲ ಅಮ್ಮ ನಾನು ತನ್ವಿಯನ್ನು ನೋಡಲೇಬೇಕು ನಿನ್ನ ಡ್ರಾಮಾ ಆಮೇಲೆ ಇಟ್ಟುಕೋ ಎಂದು ಹೇಳಿದ್ದಾನೆ. ನಾನು ಮೊದಲು ನನ್ನ ಮಗಳನ್ನ ನೋಡಬೇಕು ಎಲ್ಲಾ ಪರಿಸ್ಥಿತಿಯಲ್ಲೂ ಕೂಡ ನೀನು ಒಂದೇ ರೀತಿ ಆಡಬೇಡ ಎಂದು ಕುಸುಮಾಗೆ ಎದುರುತ್ತರ ಕೊಟ್ಟಿದ್ದಾನೆ.

Kannada serial Bhagyalakshmi Written Update on january 15th episode

ಈ ಕಡೆ ಬೀಗತಿ ಮಾತನಾಡಿದ್ದನ್ನು ಕೇಳಿಸಿಕೊಂಡ ಸುನಂದ ಅಲ್ಲಿಗೆ ಬಂದಿದ್ದು ಏನಪ್ಪಾ ನಿನಗೆ ಮನೆ ಈಗ ನೆನಪಾಯ್ತಾ ಎಂದು ಅಳಿಯನಿಗೆ ಕೇಳಿದ್ದಾರೆ.‌ ಕುಸುಮ ಕಲ್ಲು ಮನಸ್ಸು ಮಾಡಿಕೊಂಡಿದ್ದು ಬಾಗಿಲನ್ನು ಮುಚ್ಚಲು ಹೋದಾಗ ತಾಂಡವ್ ನನ್ನ ಮಗಳನ್ನು ನೋಡಲು ನನಗೆ ಯಾರ ಅಪ್ಪಣೆಯು ಬೇಕಾಗಿಲ್ಲ ಎಂದು, ಕುಸುಮ ಅವರನ್ನೇ ಜೋರಾಗಿ ತಳ್ಳಿ ಮನೆಯ ಒಳಗೆ ಹೋಗಲು ಪ್ರಯತ್ನಿಸಿದ್ದಾನೆ. ಇನ್ನೇನು ಕುಸುಮ ಅವರು ಬೀಳಬೇಕು ಎಂದಾಗ ಅಲ್ಲಿಗೆ ಬಂದ ಭಾಗ್ಯ ಅತ್ತೆಯನ್ನು ಹಿಡಿದುಕೊಂಡಿದ್ದಾಳೆ.

ಗಂಡನನ್ನು ಖಡಕ್ ಆಗಿ ಪ್ರಶ್ನೆ ಮಾಡಿದ ಭಾಗ್ಯ

ತನ್ನ ಅತ್ತೆಯ ಮೇಲೆ ಪ್ರಾಣವನ್ನೇ ಇಟ್ಟುಕೊಂಡಿರುವ ಭಾಗ್ಯ ತನ್ನ ಗಂಡ ಅತ್ತೆಯನ್ನೇ ತಳ್ಳಿಕೊಂಡು ಒಳಗಡೆ ಬಂದಿದ್ದಕ್ಕೆ ಕೋಪ ಮಾಡಿಕೊಂಡಿದ್ದಾಳೆ. ತನ್ನ ಮಗಳಿಗೆ ಮಾನಸಿಕ ಆಘಾತವಾಗಿದೆ ಎಂದು ತಿಳಿದಾಗಿನಿಂದ ಭಾಗ್ಯ ಮನಸ್ಸಿನಲ್ಲಿ ಹಲವಾರು ಯೋಜನೆಗಳೆ ಮೂಡಿದ್ದು, ಈಗ ತಾಂಡವ್ ಮನೆಗೆ ಬಂದಿದ್ದರಿಂದ ಅದೆಲ್ಲವನ್ನು ಕೂಡ ಕೇಳಲು ಸರ್ವಸನ್ನದ್ಧಳಾಗಿದ್ದಾಳೆ. ಭಾಗ್ಯ ಎಂದಿಗೂ ಕೂಡ ತನ್ನ ಗಂಡನ ಮುಂದೆ ನಿಂತು ಜೋರಾಗಿ ಮಾತನಾಡಿದವಳೇ ಅಲ್ಲ ಆದರೆ ಈಗ ಅಂತಹ ಪರಿಸ್ಥಿತಿ ಭಾಗ್ಯಗೆ ಬಂದಿದ್ದು ಗಂಡನನ್ನು ಪ್ರಶ್ನೆ ಮಾಡುತ್ತಿದ್ದಾಳೆ.

ಭಾಗ್ಯ ತನ್ನ ಮುಂದೆ ನಿಂತುಕೊಂಡು ಮಾತನಾಡುತ್ತಿರುವುದನ್ನು ತಾಂಡವ್ ಸಹಿಸುತ್ತಿಲ್ಲ. ಭಾಗ್ಯಗೆ ಕೂಡ ತಾಂಡವ್ ಕ್ಲಾಸ್ ತೆಗೆದುಕೊಳ್ಳಲು ನೋಡಿದಾಗ ಮನೆಯ ಎಲ್ಲರೂ ಕೂಡ ತಾಂಡವ್‌ಗೆ ಕ್ಲಾಸ್ ತೆಗೆದುಕೊಂಡಿದ್ದು ತನ್ವಿಯನ್ನು ನೋಡಬಾರದು ಎಂದು ಷರತ್ತು ಹಾಕಿದ್ದಾರೆ. ಈಗ ತಾಂಡವ್ ಕೋಪ ಮತ್ತೇನು ಮಾಡಿಸುತ್ತದೆ ಎಂಬುವುದೇ ಕುತೂಹಲ.

More from Filmibeat

English summary
Bhagyalakshmi serial tjanuary 15th episode update.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X