BhagyaLakshmi: ತಾಂಡವ್‌ಗೆ ಸಕತ್ ಚಳಿ ಬಿಡಿಸಿದ ಭಾಗ್ಯ: ತಾಯಿ, ಮಗಳಿಗೂ ಬೇಡವಾದ ತಾಂಡವ್..!
ತಾಂಡವ್ ಈಗ ಎಲ್ಲರ ನಿರ್ಲಕ್ಷ್ಯಕ್ಕೆ ಗುರಿಯಾಗಿದ್ದಾನೆ. ಶ್ರೇಷ್ಠಾಳ ಸಹವಾಸ ದೋಷದಿಂದಾಗಿ ತಾಂಡವ್ ಗೆ ಎಲ್ಲಾ ಕಡೆಯಿಂದಲೂ ಕೂಡ ಬರಿ ಅವಮಾನವೇ ಆಗುತ್ತಿದೆ. ಭಾಗ್ಯ ಒಮ್ಮೆ ಗಂಡನ ಎದುರು ಮಾತನಾಡಲು ಎದರುತ್ತಿದ್ದಳು. ಆದರೆ ಈಗ ಬಂದ ಎಲ್ಲಾ ಕಷ್ಟಗಳಿಂದ ನೊಂದು ಧೈರ್ಯವಂತೆ ಆಗಿದ್ದಾಳೆ. ಮಗಳು ಇವರು ಯಾಕೆ ಇಲ್ಲಿಗೆ ಬಂದರು ಎಂದು ಹೇಳಿದ ಕೂಡಲೇ ಭಾಗ್ಯ ಬಗ್ಗಿ ನೋಡಿದ್ದು, ಇವರು ಯಾಕೆ ಇಲ್ಲಿಗೆ ಬಂದರು ಎಂದು ಕೆಳಗೆ ಇಳಿದು ಬಂದಿದ್ದಾಳೆ. ಈ ವೇಳೆ ತಾಂಡವ್ ಕುಸುಮಾ ಜೊತೆಗೆ ವಾದ ಮಾಡುತ್ತಾ ಮಗಳ ನೋಡಲು ನನಗೆ ಯಾರ ಪರ್ಮಿಷನ್ ಬೇಡ ಎಂದು ಹೇಳಿ ಒಳಗೆ ಬಂದಾಗ ಭಾಗ್ಯ ನನ್ನ ಪರ್ಮಿಷನ್ ಬೇಕು ಎಂದು ಹೇಳಿದ್ದಾಳೆ.
ಶ್ರೇಷ್ಠಾ ತನ್ನ ಎಂಗೇಜ್ಮೆಂಟ್ ಆಗಿದೆ ಎಂದು ಖುಷಿಯಿಂದ ಇದ್ದಾಳೆ. ಆದರೆ ಈ ಕಡೆ ತಾಂಡವ್‌ಗೆ ಬಹಳ ಬೇಸರವಾಗುತ್ತಿದೆ. ತನ್ನ ಸ್ವಾರ್ಥಕ್ಕಾಗಿ ಮಗಳಿಗೆ ಈ ರೀತಿ ಆಯ್ತಲ್ಲ ಎಂದು ತಾಂಡವ್ ಬೇಸರ ಮಾಡಿಕೊಂಡಿದ್ದಾನೆ. ತನ್ನಿ ತನ್ನ ತಂದೆ ಮಾತನಾಡಿದ ರೀತಿ ಪದೇಪದೇ ನೆನಪನ್ನು ಮಾಡಿಕೊಳ್ಳುತ್ತಾ ಇದ್ದಾಳೆ ಆಘಾತದಿಂದ ಹೊರಗೆ ಬರಲು ತನ್ನಿಗೆ ಸಾಧ್ಯವಾಗುತ್ತಿಲ್ಲ. ಭಾಗ್ಯ ಡಾಕ್ಟರ್ ಹೇಳಿದಂತೆ ಮಗಳನ್ನು ಆರೈಕೆ ಮಾಡುತ್ತಾ ಇದ್ದಾಳೆ ತನ್ನ ಮಗಳಿಗೆ ಯಾವುದೇ ನೋವು ಆಗದಂತೆ ಪದೇಪದೇ ಮಾತನಾಡಿಸುವುದು ಎಲ್ಲವನ್ನು ಮಾಡುತ್ತಿದ್ದಾಳೆ ಆದರೆ ಈಗ ತನ್ನಿಗೆ ತನ್ನ ತಂದೆ ತನ್ನನ್ನ ನೋಡಲು ಬಂದಿರುವುದು ಬಹಳಷ್ಟು ಅಸಹ್ಯವನ್ನು ಉಂಟು ಮಾಡಿದೆ.

ಈ ಕಡೆ ಕುಸುಮಾ ತಮ್ಮ ಮಗನಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ ನನ್ನ ಮಗ ಯಾವುದಕ್ಕೂ ಕೂಡ ಬಂದಿಲ್ಲ ನನಗೆ ಮಗ ಇದ್ದಾನೆ ಎಂಬುದನ್ನೇ ನಾನು ಮರೆತು ಹೋಗಿದ್ದೇನೆ ಎಂದೆಲ್ಲಾ ಹೇಳಿದ್ದಾರೆ. ಭಾಗ್ಯ ಏನಾದರೂ ಒಂದು ಅನಾಹುತ ಆಗುವ ಮೊದಲೇ ಮಗಳ ರಕ್ಷಣೆ ಮಾಡಬೇಕು ಎಂದುಕೊಂಡಿದ್ದಾಳೆ. ಇದಕ್ಕಾಗಿ ತಾಂಡವ್ ತನ್ನ ಮಗಳನ್ನು ನೋಡುವುದನ್ನು ತಡೆಯಬೇಕು ಎಂದುಕೊಂಡು ಕೆಳಗಡೆ ಓಡೋಡಿ ಬಂದಿದ್ದು ತನ್ನ ಗಂಡನನ್ನೇ ಎದುರಿಸಲು ಸಜ್ಜಾಗಿದ್ದಾಳೆ. ನನ್ನ ಮಗಳನ್ನು ನೀವು ನೋಡೋದು ಬೇಡ ನನಗೂ ಕೂಡ ಇಷ್ಟವಿಲ್ಲ ಎಂದು ತಾಂಡವ್ ಬಳಿಯಲ್ಲಿ ಭಾಗ್ಯ ಹೇಳಿದ್ದಾಳೆ.
ನನ್ನ ಪಾಲಿಗೆ ಮಗನೇ ಇಲ್ಲ ಎಂದ ಕುಸುಮಾ
ಭಾಗ್ಯ ಕೂಡ ತನ್ವಿಯನ್ನು ನೋಡುವುದು ಬೇಡ ಎಂದು ತಾಂಡವ್‌ನನ್ನು ತಡೆದಿದ್ದಾಳೆ. ಇದೆ ವೇಳೆ ತನ್ವಿಗೆ ಅಪಘಾತವಾದಾಗ ಎದುರಿಸಿದ ಕಷ್ಟದ ಬಗ್ಗೆ ತಾಂಡವ್ ಮುಂದೆ ವಿವರಿಸಿದ್ದಾಳೆ. ತನ್ನಿಗೆ ಬ್ಲಡ್ ಬೇಕು ಎಂದಾಗ ಭಾಗ್ಯ ನಾನು ಎಲ್ಲರೂ ಎಷ್ಟು ಕಷ್ಟ ಪಟ್ಟರು ನಿಮಗೆ ಕಾಲ್ ಮಾಡಿ ಮೆಸೇಜ್ ಎಲ್ಲವನ್ನು ಮಾಡಿದೆವು ಆದರೆ ನೀವು ಯಾವುದಕ್ಕೂ ಕೂಡ ರೆಸ್ಪೋನ್ ಮಾಡಲಿಲ್ಲ ಎಂದು ಹೇಳಿದ್ದಾಳೆ ನಿಮ್ಮನ್ನು ನೋಡಲು ಕೂಡ ಇಷ್ಟವಿಲ್ಲ ಎಂಬ ಮಾತನ್ನು ಕೂಡ ಆಡಿದ್ದಾಳೆ.
ಈ ಕಡೆ ಕುಸುಮಾ ನನ್ನ ಮಗ ಅವನ ತಂದೆಗೆ ಹುಷಾರಿಲ್ಲ ಇಲ್ಲದಿದ್ದಾಗಲೂ ಕೂಡ ಮನೆಗೆ ಬಂದಿಲ್ಲ. ಈಗ ಮಗಳ ಪ್ರಾಣ ಹೋಗುತ್ತಿದೆ ಎಂದಾಗಲು ಕೂಡ ನೆರವಾಗಿಲ್ಲ. ಆದರೆ ಇದೆಲ್ಲವಕ್ಕೂ ಕೂಡ ನೆರವಾಗಿದ್ದು ಚಿಕ್ಕಪ್ಪ ಮಾತ್ರ ನನ್ನ ಎರಡನೆಯ ಮಗ ನಮ್ಮ ಕಷ್ಟಕ್ಕೆ ನೆರವಾದ ಎಂದು ಹೇಳಿದ್ದಾರೆ. ನಾನೇನು ಅವನಿಗೆ ಯಾವುದೇ ವಿಚಾರವನ್ನು ಹೇಳಿರಲಿಲ್ಲ . ಆದರೆ ಅವನೇ ಎಲ್ಲವನ್ನ ತಿಳಿದುಕೊಂಡು ಬಂದು ಬ್ಲಡ್ ಕೊಟ್ಟು ನನ್ನ ಮೊಮ್ಮಗಳನ್ನು ಉಳಿಸಿದ್ದಾನೆ ಎಂದು ವೈಷ್ಣವ್ ಬಗ್ಗೆ ಹೇಳಿದ್ದಾರೆ. ನೀನು ಯಾವಾಗಲೂ ಬ್ಯುಸಿ ಎಂದುಕೊಂಡೆ ನಿನ್ನ ಜೀವನವನ್ನು ಕಳೆಯುತ್ತಿದ್ದೀಯಾ ನಿನ್ನಂತಹ ಮಗ ಬೇಡವೇ ಬೇಡ ಎಂದು ಕುಸುಮ ಹೇಳಿದ್ದಾರೆ.

ಶ್ರೇಷ್ಠಾ ಆಂಟಿ ಜೊತೆಯೇ ಇರಿ ಎಂದು ಚಾಟಿ ಬೀಸಿದ ತನ್ವಿ
ಮನೆಯ ಎಲ್ಲರನ್ನು ಕನ್ವಿನ್ಸ್ ಮಾಡಿದ ತಾಂಡವ್ ತನ್ವಿಯನ್ನು ನೋಡಲು ಬಂದಿದ್ದಾನೆ. ಇದೇ ವೇಳೆ ತನ್ವಿ ಈಗ ಯಾಕೆ ಬಂದ್ರಿ ಎಂದು ತಂದೆಯನ್ನೇ ಪ್ರಶ್ನೆ ಮಾಡಿದ್ದಾಳೆ ಮಗಳ ಮೇಲೆ ಪ್ರೀತಿ ಇರುವವರು ನಿನ್ನೆಯೇ ಬರುತ್ತಿದ್ದಿರಿ. ಆದರೆ ನಿಮಗೆ ಪ್ರೀತಿ ಇಲ್ಲ ನೀವು ಇಲ್ಲಿಂದ ಹೊರಟಿ ನನಗೆ ನಿಮ್ಮನ್ನ ನೋಡಲು ಇಷ್ಟವಿಲ್ಲ ಎಂದು ಹೇಳಿದ್ದಾಳೆ. ನೀವು ಹೋಗಿ ಶ್ರೇಷ್ಠಾ ಆಂಟಿ ಜೊತೆಗೆ ಇರಿ ನಿಮಗೆ ಅವರ ಮಾತೇ ಹೆಚ್ಚಾಗಿ ಹೋಗಿದೆ ಅದಕ್ಕಾಗಿ ನನ್ನನ್ನೇ ದೂರ ಮಾಡಿದ್ರಿ ಎಂಬ ಮಾತನ್ನು ಕೂಡ ಮನೆಯ ಎಲ್ಲರ ಮುಂದೆ ಈಗ ತಾಂಡವ ತಪ್ಪಿತಸ್ಥನಾಗಿದ್ದಾನೆ.
ಶ್ರೇಷ್ಠಾ ಮೇಲೆ ಸುನಂದ ಒಂದು ಕಣ್ಣನ್ನು ಇಟ್ಟಿದ್ದರು ಆದರೆ ಈಗ ಮೊಮ್ಮಗಳು ಹೇಳಿರುವ ಮಾತು ಎಲ್ಲರ ಮನಸ್ಸಲ್ಲೂ ಕೂಡ ಅನುಮಾನದ ಸುಳಿಯನ್ನು ಬಿತ್ತಿದೆ. ಸುನಂದಾ ಮಾತ್ರ ಈಗ ತಾಂಡವನನ್ನು ಬಿಡುವಂತೆ ಕಾಣಿಸುತ್ತಿಲ್ಲ ಯಾಕೆಂದರೆ ಸುನಂದಾಗೆ ಮೊದಲಿಂದಲೂ ಕೂಡ ಶ್ರೇಷ್ಠಾ ಹಾಗೂ ತಾಂಡವ್ ಮೇಲೆ ಅನುಮಾನವಿದೆ. ಈಗ ತಾಂಡವ್ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳುತ್ತಾನೆ ಎಂಬುದೇ ಕುತೂಹಲವಾಗಿದೆ.


Click it and Unblock the Notifications











