BhagyaLakshmi: ಅಮ್ಮನ ಹತ್ತಿರ ಬರೆ ಹಾಕಿಸಿಕೊಂಡು ಮನೆ ಬಿಟ್ಟು ಹೋದ ತಾಂಡವ್, ಕುಡಿದ ಮತ್ತಿನಲ್ಲಿ ಭಾಗ್ಯಾ ಮೇಲೆ ಕಿಡಿ!

By Poorva

ಭಾಗ್ಯಲಕ್ಷ್ಮಿ ಧಾರಾವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರಿಗೆ ಬಹಳ ಖುಷಿ ನೀಡುತ್ತಿದೆ. ಇದೀಗ ಕುಸುಮಾ ತನ್ನ ಮಗನಿಗೆ ತಕ್ಕ ಬುದ್ಧಿಯನ್ನು ಕಲಿಸಿದ್ದಾಳೆ. ಎದುರು ಮಾತು ಆಡುತ್ತಿದ್ದ ಭಾಗ್ಯಾಳಿಗೆ ತಾಂಡವ್ ಹೊಡೆಯುತ್ತಾನೆ. ಇದನ್ನು ನೋಡಿದ ಗುಂಡಣ್ಣ ಮನೆಯವರಿಗೆಲ್ಲರಿಗೂ ಹೇಳುತ್ತಾನೆ

ತನ್ನ ಅಮ್ಮನಿಗೆ ತನ್ನ ತಂದೆ ಹೊಡೆಯುತ್ತಿರುವುದನ್ನು ನೋಡಿದ ಗುಂಡಣ್ಣನಿಗೆ ಶಾಕ್ ಆಗುತ್ತದೆ . ನನ್ನ ತಂದೆ ಇಷ್ಟು ಕೆಟ್ಟವರ ಎಂದು ಅನಿಸಿಬಿಡುತ್ತದೆ. ಇನ್ನು ಇದನ್ನು ಕೇಳಿಸಿಕೊಂಡ ಭಾಗ್ಯಾ ತಾಯಿ ಸುನಂದಾ ಕೂಡ ಬಹಳ ಕೋಪಗೊಳ್ಳುತ್ತಾರೆ . ಇನ್ನು ಕುಸುಮಾ ಮಾತ್ರ ಭಾಗ್ಯಾಗೆ ಹೊಡೆದ ತಾಂಡವ್ ಕೈಗೆ ಬರೆ ಎಳೆಯುತ್ತಾಳೆ .

Kannada serial BhagyaLakshmi written update on November 26th

ಹೆಂಡತಿಗೆ ಹೊಡೆದಿದ್ದಕ್ಕೆ ಮಗನಿಗೆ ಶಿಕ್ಷೆ ನೀಡಿದ ಕುಸುಮಾ

ತನ್ನ ಮುದ್ದಿನಂತ ಸೊಸೆಗೆ ಕಾಟ ಕೊಟ್ಟು ಬಿಟ್ಟಿಯಲ್ಲ. ಆಕೆಗೆ ಎಂದೆಲ್ಲ ಬಹಳ ಬೇಸರ ಮಾಡಿಕೊಂಡ ಕುಸುಮಾ ತಾಂಡವ್ ಕೈಗೆ ಬರೆ ಹಾಕಿದ್ದಾಳೆ. ಇದನ್ನು ನೋಡಿದ ತಾಂಡವ್ ಮಾತ್ರ ಮನದಲ್ಲಿ ಬಹಳ ಕೋಪಗೊಳ್ಳುತ್ತಾನೆ .ಇದೆಲ್ಲ ಆಗುತ್ತಿರುವುದು ಈ ಭಾಗ್ಯನಿಂದಲೇ. ಈ ಭಾಗ್ಯಾ ನನ್ನಿಂದ ಎಲ್ಲರನ್ನ ಕಸಿದುಕೊಂಡಿದ್ದಾಳೆ. ನನ್ನನ್ನು ಎಲ್ಲರ ಮುಂದೆ ದುಷ್ಟನನ್ನಾಗಿ ಮಾಡಿದ್ದಾಳೆ ಎಂದೆಲ್ಲ ಮನದಲ್ಲಿ ಅಂದುಕೊಂಡು ಮನೆ ಬಿಟ್ಟು ಹೊರ ಬಂದಿದ್ದಾನೆ.

ಆಳುತ್ತಿರುವ ಭಾಗ್ಯಳನ್ನು ಸಂತೈಸಿದ ಮಗ

ಇನ್ನು ತಾಯಿಯ ನಡೆಯಿಂದ ಕೋಪದಲ್ಲಿ ತಾಂಡವ್ ಮಾತ್ರ ನಾನು ಮನೆಬಿಟ್ಟು ಹೋಗುತ್ತೇನೆ ಎಂದು ಹೋಗುತ್ತಾನೆ. ಇದನ್ನು ಕುಸುಮಾ ತಡೆಯುವುದಿಲ್ಲ. ನನ್ನ ಮಗ ಒಳ್ಳೆಯ ತಂದೆಯಾಗಲಿಲ್ಲ ಹಾಗೆ ಒಳ್ಳೆಯ ಗಂಡನಾಗಲಿಲ್ಲ ಹೆಂಡತಿಗೆ ಹೊಡೆದು ಬಿಟ್ಟನಲ್ಲ ಎಂದು ಬಾಳ ಬೇಸರ ಮಾಡಿಕೊಂಡಿರುತ್ತಾರೆ. ಇನ್ನು ಭಾಗ್ಯಾ ಮಾತ್ರ ಏನು ಮಾತನಾಡದೆ ಅಳುತ್ತಿರುತ್ತಾಳೆ. ಗಂಡನಿಗೆ ಫೋನ್ ಮಾಡಲು ಪ್ರಯತ್ನಿಸುತ್ತಾಳೆ. ಇತ್ತ ಗುಂಡಣ್ಣ ಆಕೆಗೆ ಏಟು ಬಿದ್ದ ಕೆನ್ನೆಗೆ ಎಣ್ಣೆ ಹಚ್ಚುತ್ತಾನೆ. ಇದನ್ನು ನೋಡಿದ ಭಾಗ್ಯ ಪ್ರೀತಿಯಿಂದ ಆತನನ್ನು ಅಪ್ಪಿಕೊಳ್ಳುತ್ತಾಳೆ.

Kannada serial BhagyaLakshmi written update on November 26th

ಕುಡಿದ ನಶೆಯಲ್ಲಿ ಅರಚಾಡಿದ ತಾಂಡವ್

ಇನ್ನು, ತಾಂಡವ್ ಮಾತ್ರ ಮನೆಯಿಂದ ಹೊರ ಬಂದು ರಸ್ತೆಯಲ್ಲಿ ನಿಂತಿರುತ್ತಾನೆ. ಆಗ ಅಲ್ಲಿಗೆ ಆತನ ನಕಲಿ ಅಪ್ಪ ಮಹೇಶ ಬರುತ್ತಾನೆ. ಇದಾದ ನಂತರ ತಾಂಡವ್ ಸೀದಾ ಬಾರ್ ಗೆ ಹೋಗಿ ಕುಳಿತುಕೊಳ್ಳುತ್ತಾನೆ . ಅಲ್ಲಿ ಚೆನ್ನಾಗಿ ಕುಡಿದು ತೂರಾಡುತ್ತಾನೆ . ಬಾರ್‌ನಲ್ಲಿ ಕುಳಿತುಕೊಂಡರೂ ತಾಂಡವ್‌ಗೆ ಭಾಗ್ಯಳದ್ದೇ ನೆನಪು... ಎಲ್ಲಾ ಮಾಡಿದ್ದು ಭಾಗ್ಯ ಎಂದು ಉರಿದುಬೀಳುತ್ತಾನೆ.

More from Filmibeat

English summary
BhagyaLakshmi serial November 26th episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X