Bhagyalakshmi: ಭಾಗ್ಯ ಮಾತು ಕೇಳಿ ಕೇಸ್ ವಾಪಸ್ ತೆಗೆದುಕೊಳ್ಳುತ್ತಾನಾ ಶಿವಶಂಕರ್ ?
ಭಾಗ್ಯ, ಶಿವ ಶಂಕರ್ ಮನೆಗೆ ಬಂದಿದ್ದಾಳೆ. ಮನೆಯ ಹೊರಗೆ ಆಕೆ ಗೂಂಡಾನ ಬಳಿ ಶಿವ ಶಂಕರ್ ಅವರಿಗೆ ಹಣ ನೀಡಲು ಬಂದಿದ್ದೇನೆ ಎಂದು ಸುಳ್ಳು ಹೇಳುತ್ತಾಳೆ. ಆಗ ಭಾಗ್ಯಳನ್ನು ಒಳಗೆ ಬಿಡುತ್ತಾರೆ. ಏನಮ್ಮ ಇಲ್ಲಿ ತನಕ ಬಂದಿದ್ದೀಯಾ ನಿನಗೆ ಇರುವ ವಿನಯ ನಿನ್ನ ಗಂಡನಿಗೆ ಇಲ್ಲ ಅಲ್ವಾ ಎಂದು ಶಿವಶಂಕರ್ ಕೇಳಿದ್ದಾನೆ.
ನಿನ್ನ ಗಂಡ ಹುಟ್ಟು ದುರಹಂಕಾರಿ. ಅವನ ಅಹಂಕಾರ ನೆತ್ತಿಗೇರಿದೆ ಎಂದು ಹೇಳಿದಾಗ ಭಾಗ್ಯ ಹೇಳುತ್ತಾಳೆ, ಇಲ್ಲ ಅಣ್ಣ ನನ್ನ ಯಜಮಾನರಿಗೆ ಕೊಂಚ ಕೋಪ ಜಾಸ್ತಿ ಆ ಕಾರಣಕ್ಕೆ ಅವರು ಆ ರೀತಿ ಮಾಡಿದ್ದಾರೆ ಎನ್ನುತ್ತಾಳೆ. ಅಷ್ಟರಲ್ಲಿ ಶಿವಶಂಕರ್ ಹೇಳುತ್ತಾನೆ ಸರಿ ಹಣ ಕೊಡಮ್ಮ ಎಂದು ಕೇಳಿದಾಗ ಭಾಗ್ಯ ಬಳಿ ಹಣ ಕೊಡಲು ದುಡ್ಡು ಇರುವುದು ಇಲ್ಲ. ಆಕೆ ನನ್ನ ಬಳಿ ದುಡ್ಡಿಲ್ಲವಲ್ಲ ಏನು ಮಾಡುವುದು ಎಂದು ಯೋಚನೆ ಮಾಡುತ್ತಾ ಇರುತ್ತಾಳೆ.

ಒಡವೆ ಕೊಡಲು ಮುಂದಾದ ಭಾಗ್ಯ
ಆ ಬಳಿಕ ತನ್ನ ಬಳಿ ಇದ್ದ ಒಡವೆಯನ್ನು ತೆಗೆದುಕೊಡುತ್ತಾಳೆ. ಆಗ ಶಿವಶಂಕರ್‌ನ ಹೆಂಡತಿ ಹೇಳುತ್ತಾಳೆ ಏನಮ್ಮ ನೀನು ಕೈಯಲ್ಲಿ ಇದ್ದ ಒಡವೇ ಎಲ್ಲಾ ಕೊಡುತ್ತಾ ಇದ್ದೀಯಾ ಈ ಹಣ ನಮಗೆ ಬೇಡ ಎನ್ನುತ್ತಾಳೆ. ಇದನ್ನು ಕೇಳಿದ ಭಾಗ್ಯ ಮಾತ್ರ ದಯಮಾಡಿ ಈ ಬಂಗಾರವನ್ನು ತೆಗೆದುಕೊಂಡು ನನ್ನ ಗಂಡನನ್ನು ಬಿಡಿಸಿ. ನನ್ನ ಗಂಡ ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಾ ಇದ್ದಾರೆ. ಮಾವನಿಗೆ ಹುಷಾರಿಲ್ಲದ ಕಾರಣ ನಾನು ಆ ಹಣವನ್ನು ತೆಗೆದುಕೊಳ್ಳಬೇಕಾಯಿತು ಎಂದೆಲ್ಲ ಭಾಗ್ಯ ಹೇಳುತ್ತಾಳೆ.

ಶಿವಶಂಕರ್ ಬಳಿ ಗಂಡನಿಗಾಗಿ ಬೇಡಿದ ಭಾಗ್ಯ
ಆದರೆ ಆ ರೌಡಿ ಮಾತ್ರ ಅದ್ಯಾವುದನ್ನೂ ಒಪ್ಪಿಕೊಳ್ಳದೇ ನನಗೆ ಈ ಬಂಗಾರ ಬೇಡ. ತಾಂಡವ್ ನನ್ನ ಕಾಲಿಗೆ ಬಿದ್ದು ತಪ್ಪಾಯಿತು ಎಂದು ಕೇಳಬೇಕು ಆಗ ಆತನನ್ನು ಬಿಟ್ಟು ಕಳುಹಿಸುತ್ತೇನೆ ಎನ್ನುತ್ತಾನೆ. ಶಿವಶಂಕರ್ ಮಾತಿಗೆ ಭಾಗ್ಯ ಮಾತ್ರ ಕೋಪಗೊಂಡು ಯಾವುದೇ ಕಾರಣಕ್ಕೂ ನನ್ನ ಗಂಡ ನಿಮ್ಮ ಕಾಲಿಗೆ ಬೀಳುವುದು ಇಲ್ಲ. ಮಾಡದ ತಪ್ಪಿಗೆ ನಿಮ್ಮ ಕಾಲು ಹಿಡಿಯಲು ಸಾಧ್ಯ ಇಲ್ಲ ಎಂದು ಯೋಚನೆ ಮಾಡುತ್ತಾ ಇರುತ್ತಾಳೆ.

ಭಾಗ್ಯಗೆ ಮಾತು ಕೊಟ್ಟ ಶಿವಶಂಕರ್
ಬಳಿಕ ಅಲ್ಲಿಂದ ಭಾಗ್ಯ ಹೊರಡಲು ಅನುವಾಗುತ್ತಾಳೆ. ಆಗ ಭಾಗ್ಯಳನ್ನೂ ತಡೆಯುತ್ತಾನೆ ಶಿವಶಂಕರ್. ಅರಶಿಣ ಕುಂಕುಮ ತೆಗೆದುಕೊಂಡು ಹೋಗಲು ಹೇಳುತ್ತಾನೆ. ಹಾಗೆಯೇ ಆಕೆ ಕೊಟ್ಟ ಒಡವೆಗಳನ್ನು ತೊಟ್ಟುಕೊಳ್ಳಲು ಹೇಳುತ್ತಾರೆ. ಆದರೆ ಭಾಗ್ಯ ತನ್ನ ಗಂಡನಿಗೆ ಆಪತ್ತು ಬಯಸುವವರ ಮನೆಯಲ್ಲಿ ನಾನು ಅರಶಿಣ ಕುಂಕುಮ ಹೇಗೆ ತೆಗೆದುಕೊಳ್ಳಲಿ ಎಂದೆಲ್ಲ ಹೇಳುತ್ತಾರೆ. ಅದಕ್ಕೆ ಶಿವಶಂಕರ್ ಹೇಳುತ್ತಾನೆ ಸರಿ ನಾನು ತಾಂಡವನನ್ನು ಬಿಡುತ್ತೇನೆ . ಪೊಲೀಸರ ಬಳಿಯಿಂದ ಕೇಸ್ ವಾಪಸ್ ತೆಗೆದುಕೊಳ್ಳುವುದಾಗಿ ಹೇಳುತ್ತಾನೆ .
ಶಿವಶಂಕರ್ ಮಾತಿಗೆ ಖುಷಿಪಟ್ಟ ಭಾಗ್ಯ
ಇನ್ನೂ ಭಾಗ್ಯಗೆ ಬಹಳ ಖುಷಿ ಆಗುತ್ತದೆ. ಇನ್ನು ಗುಂಡ ಮಾತ್ರ ತಂದೆ ತಾಯಿ ಬರುವಿಕೆಗಾಗಿ ಕಾಯುತ್ತಾ ಇರುತ್ತಾಳೆ. ಆಗ ತಾತ ಒಂದು ಕಡೆ ಸಮಾಧಾನ ಮಾಡಿಕೊಂಡು ಇರುತ್ತಾರೆ. ಇತ್ತ ಕುಸುಮ ಮಾತ್ರ ತನ್ನ ಮಗನನ್ನು ಪೊಲೀಸ್ ಹಿಡಿದುಕೊಂಡು ಹೋಗಿರುವ ಕಾರಣ ಗೊತ್ತಿಲ್ಲದೇ ಪರದಾಡುತ್ತಿದ್ದಾಳೆ. ಎಷ್ಟು ಬಾರಿ ಈ ವಿಚಾರವನ್ನು ಗುಂಡ ಕೇಳಿದ ಎಂದು ಗೊತ್ತಿಲ್ಲ. ಆದರೂ ಆ ಪುಟ್ಟ ಮಗುವಿಗೆ ತಿಳಿ ಹೇಳುವ ಎಲ್ಲಾ ಪ್ರಯತ್ನ ಮಾಡುತ್ತಾರೆ.


Click it and Unblock the Notifications











