Bhagyalakshmi: ಮಗನ ಮಾತಿಗೆ ತಾಂಡವ್ ಸ್ತಬ್ಧ: ಮಗನ ಪರ ಕುಸುಮಾ ಬ್ಯಾಟಿಂಗ್
ಸುನಂದಾ ಕಳ್ಳಾಟ ಆಡುತ್ತಿರುವ ತಾಂಡವ್‌ನ ತರಾಟೆಗೆ ತೆಗೆದುಕೊಂಡಿದ್ದಾಳೆ. ಆಕೆಗೆ ತನ್ನ ಮಗಳ ಮೇಲಿರುವ ಕಾಳಜಿ ಪ್ರೀತಿ, ತನ್ನ ಮಗಳ ಸಂಸಾರ ಎಲ್ಲಿ ಹಾಳಾಗಿ ಹೋಗುತ್ತದೋ ಎಂಬ ಭೀತಿ ಸುನಂದಾಗೆ ಶುರುವಾಗಿದೆ.
ತನ್ನ ಅಳಿಯ ನನ್ನ ಬಳಿ ಇಷ್ಟೆಲ್ಲ ಕೆಟ್ಟದಾಗಿ ನಡೆದುಕೊಂಡವರು. ನನ್ನ ಮಗಳ ಬಳಿ ಇನ್ನೆಷ್ಟು ಕೆಟ್ಟದಾಗಿ ನಡೆದುಕೊಂಡು ಇರಬೇಡ? ಎಂದು ಯೋಚನೆ ಮಾಡಿ ಬಹಳ ಬೇಸರ ಪಟ್ಟುಕೊಂಡಿತ್ತಾಳೆ. ಆದರೆ ಈ ವಿಚಾರ ಭಾಗ್ಯ ಅತ್ತೆ ಕುಸುಮಾಗೆ ಬಹಳ ಕೋಪ ತರುತ್ತದೆ . ನನ್ನ ಮಗನ ಬಗ್ಗೆ ಈ ರೀತಿ ಹೇಳುತ್ತಾ ಇದ್ದಾರಲ್ಲ ಎಂದು ಬೇಸರ ಪಟ್ಟುಕೊಂಡು ಇರುತ್ತಾಳೆ ಕುಸುಮಾ. ಇನ್ನೂ ಸುನಂದಾ ಮಾತ್ರ ನನಗೆ ತಾಂಡವ್ ಮೇಲೆ ಅನುಮಾನ ಹೋಗಿಲ್ಲ ಎಂದಿದ್ದಾಳೆ.

ಸುನಂದಾ ಅವರೇ ನಿಮ್ಮ ಮಗಳು ಇಲ್ಲಿ ಆರಾಮವಾಗಿ ಇದ್ದಾಳೆ. ಆಕೆಯನ್ನು ಯಾವತ್ತೂ ನನ್ನ ಸೊಸೆ ಎಂದುಕೊಂಡು ಇಲ್ಲ, ಮಗಳಂತೆ ಪ್ರೀತಿ ಮಾಡುತ್ತೇನೆ, ಆದರೆ ನೀವು ನನ್ನ ಮಗನ ಮೇಲೆ ಸಂಶಯ ಮೂಡಿಸುತ್ತಾ ಇರುವುದು ಸರಿ ಅಲ್ಲ, ಆತ ಲವ್ ಮಾಡಿರುವುದು ಇಪ್ಪತ್ತು ವರುಷಗಳ ಹಿಂದೆ, ಆದರೆ ಇದೀಗ ಅದನ್ನು ಮುನ್ನೆಲೆಗೆ ತಂದು ಏನು ಪ್ರಯೋಜನ? ಎನ್ನುತ್ತಿದ್ದಾಳೆ. ಸುನಂದಾ ಮಾತ್ರ ಅಳಿಯನ ಮೇಲೆ ನಂಬಿಕೆ ಇಟ್ಟುಕೊಂಡ ಹಾಗೆ ಕಾಣಿಸುತ್ತಿಲ್ಲ.
ಅತ್ತೆಯ ಮಾತಿಗೆ ಮರುಗಿದ ಭಾಗ್ಯ
ಅಷ್ಟರ ಮಟ್ಟಿಗೆ ತಾಂಡವ್ ತನ್ನ ಅತ್ತೆಯ ಜೊತೆ ಮಾತನಾಡಿ ಇರುತ್ತಾನೆ. ಆದರೂ ಅದರ ಬಗ್ಗೆ ಎನು ಮಾತನಾಡದೇ ಸುಮ್ಮನೆ ಇರುತ್ತಾಳೆ ಸುನಂದಾ. ಇನ್ನೂ ಭಾಗ್ಯ ಮಾತ್ರ ಮನದಲ್ಲಿ ಬಹಳ ಬೇಸರ ಮಾಡಿಕೊಂಡು ಇರುತ್ತಾಳೆ. ನನಗೆ ನನ್ನ ಗಂಡನ ಬಗ್ಗೆ ತಿಳಿದಿದೆ, ಅವರು ಯಾರನ್ನು ಪ್ರೀತಿ ಮಾಡುತ್ತಿದ್ದಾರೆ ಎಂಬುವುದು ಕೂಡ ತಿಳಿದಿದೆ. ಆದರೆ ಅದನ್ನು ಹೇಳುವ ಪರಿಸ್ಥಿತಿಯಲ್ಲಿ ನಾನಿಲ್ಲ. ಅತ್ತೆ ನಿಮ್ಮ ಮಗ ನೀವು ಅಂದುಕೊಂಡು ಇರುವಷ್ಟು ಒಳ್ಳೆಯವರು ಅಲ್ಲ, ಎಂದು ಮನದಲ್ಲಿ ಹೇಳಿ ಬಹಳ ಬೇಸರ ಮಾಡಿಕೊಳ್ಳುತ್ತಾಳೆ .

ತಪ್ಪೇ ಮಾಡದವನಂತೆ ನಿಂತ ತಾಂಡವ್
ಇನ್ನೂ ತಾಂಡವ್ ಮಾತ್ರ ಏನು ಅರಿಯದ ಹಾಗೆ ಸುಮ್ಮನೆ ನಿಂತುಕೊಂಡು ಇರುತ್ತಾನೆ. ನಿಮ್ಮ ಮಗಳ ಜೊತೆ ನನ್ನ ಮಗ ಮದುವೆ ಆಗಿ 15 ವರುಷವಾಗಿದೆ, ಹಾಗೆಯೇ ಅವರಿಗೆ ಇಬ್ಬರು ಮಕ್ಕಳು ಬೇರೆ ಇದ್ದಾರೆ, ನಿಮ್ಮ ಮಗಳನ್ನು ನನ್ನ ಮಗ ಪ್ರೀತಿಯಿಂದ ನೋಡಿಕೊಂಡು ಇದ್ದಾನೆ. ಇಷ್ಟರ ಮೇಲೂ ನಿಮಗೆ ನನ್ನ ಮಗನ ಮೇಲೆ ನಂಬಿಕೆ ಇಲ್ಲ, ಎಂದು ಕುಸುಮಾ ಹೇಳಿದಾಗ ಭಾಗ್ಯಳ ಮಗನ ತಂದೆಯ ಬಳಿ ಓಡೋಡಿ ಬರುತ್ತಾನೆ.
ತಂದೆಯ ಬಳಿ ಓಡೋಡಿ ಬಂದ ಮಗ
ಡ್ಯಾಡಿ ನೀವು ಅಮ್ಮನ ಬಿಟ್ಟು ಹೋಗುತ್ತೀರಾ? ಎಂದು ಜೋರಾಗಿ ಅಳುತ್ತಾ ತಾಂಡವನ ಪ್ರಶ್ನೆ ಮಾಡಿದಾಗ ತಾಂಡವ್‌ಗೆ ಎನು ಹೇಳಬೇಕು ತಿಳಿಯದೇ ಸುಮ್ಮನೆ ನಿಂತುಕೊಂಡು ಇರುತ್ತಾನೆ. ಆದರೆ ಮಗನ ಮಾತಿಗೆ ತಾಂಡವ್ ಬಳಿ ಉತ್ತರವೇ ಇಲ್ಲದಾಗಿದೆ.


Click it and Unblock the Notifications











