Chukki thaare: ಹಕ್ಕಿಯಂತೆ ಹಾರುವ ಚುಕ್ಕಿಯ ಕನಸಿಂದ ಕಣ್ಣೀರೇ ಜಾಸ್ತಿ!
ಚುಕ್ಕಿ ಎಂದರೆ ಅಪ್ಪ ಅಮ್ಮನಿಗೆ ಎಲ್ಲಿಲ್ಲದ ಪ್ರೀತಿ. ಅವಳಿಗೆ ಸ್ವಲ್ಪವೂ ನೋವಾಗದಂತೆ ಕಾಪಾಡುತ್ತಿದ್ದಾರೆ. ಕೆಳಗೆ ಬಿಟ್ಟರೆ ಮಗಳಿಗೆಲ್ಲಿ ನೋವಾಗುತ್ತದೆಯೋ ಎಂಬ ಕಾಳಜಿ ಅಪ್ಪ-ಅಮ್ಮನಿಗೆ ಇದೆ. ಆದರೆ ಅದರ ಹಿಂದಿನ ಕಾರಣ ಮಾತ್ರ ಚುಕ್ಕಿಗೆ ಅರ್ಥವಾಗುತ್ತಿಲ್ಲ. ಅಪ್ಪ-ಅಮ್ಮನು ಆ ಸತ್ಯ ಹೇಳುವುದಕ್ಕೆ ಸಿದ್ಧವಿಲ್ಲ.
'ಚುಕ್ಕಿ ತಾರೆ' ಧಾರಾವಾಹಿಯಲ್ಲಿ ನೋಡಿದಂತೆ ಇದು ಎರಡು ಮಕ್ಕಳ ಕಥೆ. ಆದರೆ ಎರಡು ಮಕ್ಕಳಿಗೂ ಒಂದೊಂದು ಕೊರತೆ ಇದೆ. ಇಬ್ಬರಿಗೂ ಇರುವುದು ಎಲ್ಲರಂತೆ ನಾನ್ಯಾವಾಗ ಖುಷಿಯಾಗಿರುವುದು ಎಂಬುದೇ ಚಿಂತೆ. ಆದರೆ ಆ ಖುಷಿಗೆ ಬೇರೆ ಬೇರೆ ಕಾರಣಗಳೇ ಇದೆ. ಒಬ್ಬಳಿಗೆ ಸ್ವತಂತ್ರ್ಯವಿಲ್ಲ, ಇನ್ನೊಬ್ಬಳಿಗೆ ಶಕ್ತಿ ಇಲ್ಲ.

ಡ್ಯಾನ್ಸ್ ನೋಡಿ ಬೇಸರವಾದ ಚುಕ್ಕಿ
ಚುಕ್ಕಿಯ ಶಾಲೆಯಲ್ಲಿ ಸಂಭ್ರಮ. ಈ ಸಂಭ್ರಮಕ್ಕೆ ಚುಕ್ಕಿಯ ಅಪ್ಪ-ಅಮ್ಮ ಕೂಡ ಜೊತೆಯಾಗಿದ್ದಾರೆ. ಮಕ್ಕಳೆಲ್ಲಾ ಡ್ಯಾನ್ಸ್ ಮಾಡುವಾಗ, ಚುಕ್ಕಿ ಮಾತ್ರ ಮರವಾಗಿ ನಿಂತಿದ್ದಾಳೆ. ಆದರೆ ಚುಕ್ಕಿಗೆ ಸುಮ್ಮನೆ ಮರವಾಗಿ ನಿಲ್ಲುವುದು ಇಷ್ಟವಿಲ್ಲ. ದೂರದಲ್ಲಿ ನಿಂತಿದ್ದ ಅಪ್ಪ-ಅಮ್ಮನ ಬಳಿಯೂ ಅದನ್ನೇ ಕೇಳಿದ್ದಾಳೆ. ನಾನು ಡ್ಯಾನ್ಸ್ ಮಾಡುತ್ತೀನಿ ಎಂದಿದ್ದಾಳೆ. ಆದರೆ ಅಪ್ಪ ಅಮ್ಮನಿಗೆ ಅದು ಕೇಳಿಸಿದೆ, ಯಾವುದಕ್ಕೂ ಉತ್ತರ ನೀಡಲು ಆಗಿಲ್ಲ. ಆದರೆ ಅಷ್ಟೊತ್ತಿಗೆ ಎಡವಟ್ಟು ಆಗಿದೆ.
ಚುಕ್ಕಿ ಸ್ಥಿತಿ ಕಂಡು ಪೋಷಕರು ಶಾಕ್
ಚುಕ್ಕಿಗೆ ಸುಮ್ಮನೆ ನಿಂತುಕೊಳ್ಳುವುದು ಇಷ್ಟವಿಲ್ಲ. ತನ್ನ ಸಮಸ್ಯೆ ಗೊತ್ತಿಲ್ಲದೆ ಖುಷಿಗೆ ಡ್ಯಾನ್ಸ್ ಮಾಡಲು ಹೋಗಿದ್ದಾಳೆ. ಆದರೆ ಕ್ಷಣ ಮಾತ್ರದಲ್ಲಿಯೇ ಕೆಳಗೆ ಬಿದ್ದು ಹೋಗಿದ್ದಾಳೆ. ಇದರಿಂದ ಪ್ರಜ್ಞೆ ಕಳೆದುಕೊಂಡಿದ್ದಾಳೆ. ಕಾಲಿನ ಸ್ವಾಧೀನತೆ ಕಳೆದುಕೊಂಡ ಚುಕ್ಕಿ, ಡ್ಯಾನ್ಸ್ ಮಾಡುವಾಗ ಕೃತಕ ಕಾಲುಗಳು ಆ ಕಡೆ ಈ ಕಡೆ ಆಗಿದೆ. ತಂದೆ-ತಾಯಿ, ಆತ್ಮೀಯರು ಓಡಿ ಬಂದು ಚುಕ್ಕಿಯನ್ನು ಎತ್ತಿದ್ದಾರೆ. ಮನೆಗೆ ಕರೆದುಕೊಂಡು ಹೋಗೊ, ನೀರು ಚುಮುಕಿಸಿದಾಗಲೇ ಗೊತ್ತಾಗಿದ್ದು, ತಾನೂ ಬಿದ್ದೆ, ಆದರೆ ಆಮೇಲೆ ಏನಾಯ್ತು ಎಂಬುದು ಚುಕ್ಕಿಗೆ ಗೊತ್ತೆ ಇಲ್ಲ.
ಚುಕ್ಕಿ ಸ್ಥಿತಿಗೆ ತಂದೆ-ತಾಯಿ ಮರುಕ
ಚುಕ್ಕಿಯ ಸ್ಥಿತಿ ಕಂಡು ಅಪ್ಪ ಅಮ್ಮ ಕೂಡ ದಿನವೂ ಕೊರಗುತ್ತಾರೆ. ಆದರೆ ಮಗಳಿಗೆ ನೋವಾಗಬಾರದೆಂಬ ಕಾರಣಕ್ಕೆ ಏನನ್ನು ಹೇಳುವುದಿಲ್ಲ. ಚುಕ್ಕಿ ಸತ್ಯ ತಿಳಿಯದೆ ಕಣ್ಣೀರು ಹಾಕಿದ್ದಾಳೆ. ಮಗುವಾಗಿದ್ದಾಗಿನಿಂದ ಚುಕ್ಕಿ ತನ್ನ ಕಾಲಿನ ಸ್ವಾಧೀನವನ್ನೇ ಕಳೆದುಕೊಂಡಿದ್ದಾಳೆ. ಅಂದಿನಿಂದ ಕೃತಕ ಕಾಲಿನ ಸಹಾಯದಿಂದ ನಡೆಯುತ್ತಿದ್ದಾಳೆ. ಹಕ್ಕಿಯಂತೆ ಹಾರಾಡಬೇಕು ಎಂದು ಬಯಸಿದ್ದಾಳೆ. ಆದರೆ ತಂದೆಗೆ ಚುಕ್ಕಿಯ ಮನಸ್ಸು ನೋಯುವುದು ಇಷ್ಟವಿಲ್ಲ. ಹೀಗಾಗಿಯೇ ಅವಳನ್ನು ಸಮಾಧಾನ ಮಾಡಿ, ಅಮ್ಮನ ಬಗ್ಗೆಯೂ ನೆಪ ಹೇಳಿ ಚುಕ್ಕಿಯನ್ನು ಸಮಾಧಾನ ಮಾಡಿದ್ದಾರೆ. ಮಲಗುವಾಗಲೂ ಏನು ತಿಳಿಯದೆ ಕಣ್ಣೀರು ಹಾಕಿದ ಚುಕ್ಕಿಯನ್ನು ತಾನೇ ಕರೆದುಕೊಂಡು ಹೋಗಿ ಮಲಗಿಸಿದ್ದಾನೆ.

ಸತ್ಯ ಹೇಳಲು ಒದ್ದಾಟ
ಮಗಳಿಗೆ ಸತ್ಯ ಹೇಳಬೇಕು ಎಂಬ ತೊಳಲಾಟ ತಾಯಿಯದ್ದು. ಈಗಲೇ ಸತ್ಯ ಹೇಳಿ, ಅವಳಿಗೆ ಧೈರ್ಯ ತುಂಬೋಣ ಆಮೇಲೆ ಸರಿ ಆಗುತ್ತಾಳೆ ಎಂಬ ಅಭಿಪ್ರಾಯ. ಆದರೆ ತಂದೆಗೆ ಅದು ಇಷ್ಟವಿಲ್ಲ. ಕೋಪಗೊಂಡ ಚುಕ್ಕಿ ತಾಯಿ ಹೊರಗೆ ನಿಂತು ಹಾಡಿನ ಮೂಲಕ ತನ್ನ ಕೋಪವನ್ನು ಹೊರಗೆ ಹಾಕಿದ್ದಾಳೆ. ಮಗಳನ್ನು ಮಲಗಿಸಿ, ಓಡೋಡಿ ಬಂದು ಹೆಂಡತಿಯ ಬಾಯನ್ನು ಮುಚ್ಚಿಸಿದ್ದಾನೆ. ಆದರೆ ಚುಕ್ಕಿಯ ಹಕ್ಕಿಯಂತೆ ಹಾರಬೇಕು ಎಂಬ ಆಸೆಯೇ ಪೋಷಕರ ಮನಸ್ಸಿಗೆ ಘಾಸಿಯುಂಟು ಮಾಡಿದೆ.


Click it and Unblock the Notifications











