ಸ್ಟಾರ್ ಸುವರ್ಣದ್ದಲ್ಲಿ ಪ್ರಸಾರ ಆಗಲಿದೆ ಹೊಚ್ಚ ಹೊಸ ಧಾರಾವಾಹಿ,ಪ್ರೋಮೋ ನೋಡಿ ಖುಷಿ ವ್ಯಕ್ತಪಡಿಸಿದ ಪ್ರೇಕ್ಷಕರು.!
ಸ್ಟಾರ್ ಸುವರ್ಣ ಚಾನೆಲ್ ನಲ್ಲಿ ಒಂದಲ್ಲ ಒಂದು ಹೊಸ ಧಾರಾವಾಹಿಗಳು ಪ್ರಸಾರ ಆಗುತ್ತಿದ್ದು , ಸೀರಿಯಲ್ ಪ್ರೇಮಿಗಳ ಕಣ್ಣಿಗೆ ಹಬ್ಬವೇ ಸರಿ. ಇತ್ತೀಚಿನ ದಿನಗಳಲ್ಲಿ ಸಾಂಸಾರಿಕ ಧಾರಾವಾಹಿಯನ್ನು ನೋಡುತ್ತಿದ್ದ ಅಭಿಮಾನಿಗಳಿಗೆ ಇದೀಗ ಸ್ಟಾರ್ ಸುವರ್ಣ ಚಾನೆಲ್ ನವರು ಇದೀಗ ಹೊಸದೊಂದು ಧಾರಾವಾಹಿಯ ಪ್ರೋಮೊವನ್ನು ಪ್ರಸಾರ ಮಾಡಿದ್ದಾರೆ. ಈ ಪ್ರೋಮೋ ನೋಡಿದ ಅಭಿಮಾನಿಗಳು ಬಹಳಷ್ಟು ಖುಷಿ ಆಗಿದೆ. ಬಹಳ ಡಿಫರೆಂಟ್ ಆಗಿ ಸ್ಟೋರಿ, ಒಬ್ಬ ಮಹಾ ನಾಯಕನ ಬಗೆಗಿನ ಸ್ಟೋರಿ ಶೀಘ್ರದಲ್ಲಿ ಪ್ರಸಾರ ಆಗಲಿದೆ.
ಈಗಾಗಲೇ ಜೀ ಕನ್ನಡ ವಾಹಿನಿಯಲ್ಲಿ ಮಹಾನಾಯಕ ಎಂಬ ಧಾರವಾಹಿ ಪ್ರಸಾರ ಆಗಿತ್ತು. ಅದೇ ರೀತಿಯಲ್ಲಿ ಇದೀಗ ಸ್ಟಾರ್ ಸುವರ್ಣ ಧಾರಾವಾಹಿಯಲ್ಲಿ ಕೂಡ ಡಾ.ಬಿ.ಆರ್. ಅಂಬೇಡ್ಕರ್ ಧಾರವಾಹಿ ಬಹಳ ಬೇಗ ಪ್ರಸಾರ ಆಗಲಿದೆ. ಈಗಾಗಲೇ ಈ ಧಾರಾವಾಹಿಯ ಪ್ರೊಮೊಗಳು ಪ್ರಸಾರ ಆಗಿದ್ದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಒಂದು ಬಾರಿ ಮಹಾನಾಯಕ ಎಂಬ ಧಾರವಾಹಿ ಪ್ರಸಾರ ಆದಾಗ ಅನೇಕ ಜನರು ಈ ಬಗ್ಗೆ ಸಾಕಷ್ಟು ತಗಾದೆ ತೆಗೆದಿದ್ದರು. ಹಾಗೆಯೇ ಧಾರವಾಹಿ ಮಧ್ಯದಲ್ಲಿ ನಿಂತು ಹೋಗಿತ್ತು.

ಇದೀಗ ಮತ್ತೊಮ್ಮೆ ಸಂವಿದಾನ ಶಿಲ್ಪಿ ಡಾ. ಅಂಬೇಡ್ಕರ್ ಬಗ್ಗೆ ಧಾರವಾಹಿ ನೋಡಲು ಪ್ರೇಕ್ಷಕ ವರ್ಗ ಬಹಳಷ್ಟು ಕಾತರರಾಗಿದ್ದಾರೆ.ಆಯುಧವಿದ್ದ ಕೈಗಳಿಗೆ ಪುಸ್ತಕಗಳನ್ನಿಟ್ಟ ಮಹಾನಾಯಕ "ಡಾ.ಬಿ.ಆರ್. ಅಂಬೇಡ್ಕರ್" ಮಹಾನ್ ವ್ಯಕ್ತಿಯ ಅದ್ಭುತಗಾಥೆ ಶೀಘ್ರದಲ್ಲಿ ಎಂದು ಪ್ರೋಮೋ ಹೇಳಲಾಗಿದೆ. ಡಾ ಬಿ ಆರ್ ಅಂಬೇಡ್ಕರ್ ಬಗ್ಗೆ ಎಲ್ಲರೂ ಕೂಡ ತಿಳಿದುಕೊಳ್ಳಲೇಬೇಕಾದ ಸಾಕಷ್ಟು ವಿಚಾರಗಳು ಈ ಧಾರಾವಾಹಿಯಲ್ಲಿ ಪ್ರಸಾರ ಆಗುವುದು ಮಾತ್ರ ಖಂಡಿತ ಎಂದು ಹೇಳಲಾಗುತ್ತಿದೆ.
ಅಂಬೇಡ್ಕರ್ ಬೆಳೆದು ಬಂದ ಹಾದಿ ಹೇಗಿತ್ತು ಗೊತ್ತಾ?
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಏಪ್ರಿಲ್ 14 ರಂದು ಜನಿಸುತ್ತಾರೆ. ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ಸುಬೇದಾರ್ ರಾಮ್‌ಜಿ ಮಾಲೋಜಿ ಸಕ್ಪಾಲ್ ಅವರ ಮಗ. ಅಂಬೇಡ್ಕರ್ ಅವರು ಆರನೇ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಳ್ಳುತ್ತಾರೆ. ಬಹಳಷ್ಟು ನೋವು ಪಡುತ್ತಾರೆ. ಶಾಲೆಗಳಲ್ಲಿ ಕೂಡ ಅಸ್ಪೃಶ್ಯತೆಗೆ ಒಳಗಾಗುತ್ತಾರೆ. ಅಂಬೇಡ್ಕರ್ ಅವರಿಗೆ ತನ್ನ ತಂದೆಯ ಬೆಂಬಲ ಬಹಳಷ್ಟು ಇತ್ತು. ತನ್ನ ಮಗ ಏನೇ ಮಾಡಿದರೂ ಕೂಡಾ ಸರಿಯಾಗಿಯೇ ಮಾಡುತ್ತಾನೆ ಎನ್ನುವ ಭರವಸೆ ಅವರ ತಂದೆಗೆ.
ಸಮಾಜಕ್ಕೆ ಕೊಡುಗೆ ನೀಡಿದ ಅಂಬೇಡ್ಕರ್
ಹೀಗೆ ಅಂಬೇಡ್ಕರ್ ಬಗ್ಗೆ ಬಹಳಷ್ಟು ಕನಸು ಕಂಡಿದ್ದ ತಂದೆಗೆ ಬಹಳಷ್ಟು ಖುಷಿ ಹಾಗೆಯೇ ಗೌರವವನ್ನು ಮಗ ತಂದುಕೊಟ್ಟಿದ್ದಾರೆ. ಅಸಮಾನತೆಯ ವಿರುದ್ಧ ವಿರುದ್ಧ ಗಟ್ಟಿ ಧ್ವನಿ ಎತ್ತಿದ ಅಂಬೇಡ್ಕರ್ ಅವರು ನ್ಯಾಯ ಶಾಸ್ತ್ರಜ್ಞರಾಗಿ, ಅರ್ಥಶಾಸ್ತ್ರಜ್ಞರಾಗಿ, ಸಮಾಜ ಸುಧಾಕರಾಗಿ ಈ ಸಮಾಜಕ್ಕೆ ನೀಡಿದ ಕೊಡುಗೆಗಳು ಅಗಾಧ. ಅಂಬೇಡ್ಕರ್ ಅವರ ಬಗ್ಗೆ ತಿಳಿದುಕೊಳ್ಳಬೇಕಾದ ವಿಚಾರ ಬಹಳಷ್ಟಿದೆ ಅದನ್ನು ಜನರಿಗೆ ತೋರಿಸುವ ನಿಟ್ಟಿನಲ್ಲಿ ಧಾರಾವಾಹಿಯನ್ನು ಪ್ರಸಾರ ಆಗಲಿದೆ.


Click it and Unblock the Notifications











