'ಗಟ್ಟಿಮೇಳ' ಧಾರಾವಾಹಿಯ ಮಾಜಿ ನಟಿ ಅಶ್ವಿನಿಯೀಗ ಉದ್ಯಮಿ: ಈಗೇನು ಮಾಡ್ತಿದ್ದಾರೆ ನೋಡಿ!

By ಅನಿತಾ ಬನಾರಿ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ 'ಗಟ್ಟಿಮೇಳ'ದಲ್ಲಿ ನಾಯಕಿ ಅಮೂಲ್ಯ ಅಕ್ಕ ಆರತಿಯಾಗಿ ಅಭಿನಯಿಸಿ ವೀಕ್ಷಕರ ಮನ ಸೆಳೆದಿರುವ ಚೆಂದುಳ್ಳಿ ಚೆಲುವೆಯ ಹೆಸರು ಅಶ್ವಿನಿ.

ಮನೋಜ್ಞ ನಟನೆಯ ಮೂಲಕ ವೀಕ್ಷಕರ ಮನ ಸೆಳೆದಿರುವ ಅಶ್ವಿನಿ ಮುಂದೆ ಕಾರಣಾಂತರಗಳಿಂದ ಆರತಿ ಪಾತ್ರಕ್ಕೆ ವಿದಾಯ ಹೇಳಿದ್ದರು. 'ಗಟ್ಟಿಮೇಳ' ಧಾರಾವಾಹಿಯ ಆರತಿಯಾಗಿ ಕರ್ನಾಟಕದಾದ್ಯಂತ ಮನೆ ಮಾತಾಗಿದ್ದ ಅಶ್ವಿನಿ ಸದ್ಯ ಬಣ್ಣದ ಲೋಕದ ನಂಟಿನಿಂದ ದೂರವಿದ್ದಾರೆ.

Kannada Serial Gattimela actress Ashwini got promoted as a business woman

ಉದ್ಯಮಿಯಾಗಿ ಭಡ್ತಿ ಪಡೆದ ಅಶ್ವಿನಿ

ಇಷ್ಟು ದಿನ ನಟನೆಯ ಮೂಲಕ ಗುರುತಿಸಿಕೊಂಡಿದ್ದ ನಟಿ ಅಶ್ವಿನಿ‌ ಈಗ ಉದ್ಯಮಿಯಾಗಿ ಭಡ್ತಿ ಪಡೆದಿದ್ದಾರೆ. ವಿಧವಿಧವಾದ ಕಾಳುಗಳನ್ನು ಉಪಯೋಗಿಸಿ ಮಾಲ್ಟ್ ತಯಾರಿಸಿ ಅದನ್ನು ಮಾರಾಟ ಮಾಡುವ ಉದ್ಯಮ ಶುರು ಮಾಡಿಕೊಂಡಿದ್ದಾರೆ ನಟಿ ಅಶ್ವಿನಿ. ಈ ಕುರಿತ ವಿಡಿಯೋವನ್ನು ಸ್ವತಃ ಅವರೇ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದ್ದರು. ಅವರ ಈ ಪ್ರಯತ್ನಕ್ಕೆ ಮನೆಯವರೆಲ್ಲರ ಸಹಕಾರ ಇರುವುದು ಕೂಡಾ ತುಂಬಾ ವಿಶೇಷವಾದ ಸಂಗತಿ.

ಮಾದರಿ ಎಂದೆನಿಸುವ ಜೀವನಶೈಲಿ

ಅಂದ ಹಾಗೇ ಜಿಮ್ ಎಂದರೆ ಅಷ್ಟೊಂದು ಇಷ್ಟಪಡದ ನಟಿ ಅಶ್ವಿನಿ ಮನೆಯಲ್ಲಿ ಯೋಗದ ಜೊರೆಗೆ ಒಂದಷ್ಟು ವ್ಯಾಯಾಮ ಮಾಡುವುದನ್ನು ತಪ್ಪಿಸುವುದಿಲ್ಲ. ಪ್ರತಿದಿನ ಮೂರಿರಿಂದ ನಾಲ್ಕು ಲೀಟರ್‌ನಷ್ಟು ನೀರು ಕುಡಿಯುವ ಆಕೆ ಪ್ರೋಟಿನ್ ಯುಕ್ತ ಆಹಾರಗಳಿಗೆ ಪ್ರಾಮುಖ್ಯತೆ ಜಾಸ್ತಿ ನೀಡುತ್ತಾರೆ. ಒಟ್ಟಿನಲ್ಲಿ ಎಲ್ಲರಿಗೂ ಮಾದರಿ ಎನಿಸುವ ಜೀವನಶೈಲಿ ಆಕೆಯದ್ದು.

ಯೂಟ್ಯೂಬ್ ನಲ್ಲೂ ಅಶ್ವಿನಿ ಹವಾ

ಇದರ ಜೊತೆಗೆ ಯೂಟ್ಯೂಬ್ ಚಾನೆಲ್ ಶುರು ಮಾಡಿರುವ ಅಶ್ವಿನಿ ಜನರಿಗೆ ಉಪಯುಕ್ತವಾಗಿರುವಂತಹ ಮಾಹಿತಿಗಳನ್ನು ಶೇರ್ ಮಾಡುತ್ತಿರುತ್ತಾರೆ. ಈಗಾಗಲೇ ಒಂದು ಲಕ್ಷ ಸಬ್ ಸ್ಕ್ರೈಬರ್ ಅನ್ನು ಆಕೆ ಹೊಂದಿದ್ದು "ನಾನು ಎಲ್ಲೇ ಹೋದರೂ ಬಂದರೂ ಇದೇ ರೀತಿ ಪ್ರೀತಿ ತೋರಿಸುತ್ತೀರಾ, ನಿಮ್ಮ ಪ್ರೀತಿಗೆ ನಾನು ಎಂದು ಚಿರಋಣಿ A Nimma Ashwini youtube channel ಈಗ 1 ಲಕ್ಷ ಜನರ ಪ್ರೀತಿ ಗಳಿಸಿದೆ. ಖಂಡಿತ ಮುಂದಿನ ದಿನಗಳಲ್ಲಿ ನಿಮ್ಮೆಲ್ಲರಿಗೂ ಉಪಯುಕ್ತವಾಗುವ ಅನೇಕ ಒಳ್ಳೆಯ ವಿಷಯಗಳು ಹಾಗೂ ಉಪಯುಕ್ತ ಮಾಹಿತಿಗಳನ್ನು ನೀಡುವ ಮೂಲಕ ನಿಮ್ಮೆಲ್ಲರಿಗೂ ಧನ್ಯವಾದಗಳನ್ನು ತಿಳಿಸುತ್ತೇನೆ. ನಿಮ್ಮೆಲ್ಲರ ಈ ಪ್ರೀತಿ ಹಾಗೂ ಪ್ರೋತ್ಸಾಹಕ್ಕೆ ತುಂಬು ಹೃದಯದ ಧನ್ಯವಾದಗಳು" ಎಂದು ಬರೆದುಕೊಂಡಿದ್ದಾರೆ.

Kannada Serial Gattimela actress Ashwini got promoted as a business woman

ಬೆರಳೆಣಿಕೆಯಷ್ಟು ಧಾರಾವಾಹಿಗಳಲ್ಲಿ ನಟನೆ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಾಧಾ ರಮಣ' ಧಾರಾವಾಹಿಯಲ್ಲಿ ಅವನಿಯಾಗಿ ನಟಿಸುವ ಮೂಲಕ ಕಿರುತೆರೆಗೆ ಕಾಲಿಟ್ಟ ಅಶ್ವಿನಿ ಮುಂದೆ 'ಗಟ್ಟಿಮೇಳ' ಧಾರಾವಾಹಿಯಲ್ಲಿ ಆರತಿಯಾಗಿ ನಟಿಸಿ ಸೈ ಎನಿಸಿಕೊಂಡರು. ಮುಂದೆ ತೆಲುಗಿನ ನಾಗಭೈರವಿ ಧಾರಾವಾಹಿಯಲ್ಲಿ ನಾಗಿಣಿಯಾಗಿ ನಟಿಸಿದ್ದ ಈಕೆ ದ್ವಿಪಾತ್ರದ ಮೂಲಕ ವೀಕ್ಷಕರನ್ನು ರಂಜಿಸಿದ್ದರು. ಆದರೆ ಕೊರೊನಾ ಸಮಯದಲ್ಲಿ ಅನಿವಾರ್ಯ ಕಾರಣಗಳಿಂದ ಆ ಪಾತ್ರಕ್ಕೆ ವಿದಾಯ ಹೇಳಿದರು.

More from Filmibeat

English summary
Gattimela serial actress Ashwini got promoted as business woman:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X