ಬುರ್ಜ್ ಖಲೀಫಾ.. ಬೆಂಗಳೂರು ನಾಟಿಮನೆ.. 'ಗಟ್ಟಿಮೇಳ' ನಟಿಯ ದುಬೈ ಪ್ರವಾಸ ಮಸ್ತ್ ಮಸ್ತ್

By ಪೂರ್ವ

'ಗಟ್ಟಿಮೇಳ' ಧಾರಾವಾಹಿ ನೋಡಿದವರಿಗೆ ನಟಿ ಪ್ರಿಯಾ ಜೆ ಆಚಾರ್ಯ ಚೆನ್ನಾಗಿ ಪರಿಚಯವಿರುತ್ತೆ. ಈ ಧಾರಾವಾಹಿಯಲ್ಲಿ ನಾಯಕನ ತಂಗಿಯ ಪಾತ್ರದಲ್ಲಿ ನಟಿಸಿ, ವೀಕ್ಷಕರ ಮನಸ್ಸು ಗೆದ್ದಿದ್ದರು. ಕ್ಯೂಟ್ ಹಾಗೂ ಬಬ್ಲಿ ನಟನೆಯಿಂದ ಮನ ಸೆಳೆದಿದ್ದರು.

ಪಟ ಪಟ ಅಂತ ಮಾತನಾಡುವ ದುಂಡಗಿನ ಮುಖದ ಚೆಲುವೆ ಪ್ರಿಯಾ. ತಮ್ಮ ಅಭಿನಯದಿಂದಲೇ ಪ್ರಿಯಾ ಕನ್ನಡ ಕಿರುತೆರೆಯಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಈ ನಟಿ ಕನ್ನಡ ಕಿರುತೆರೆಯ ಜನಪ್ರಿಯ ನಟ ಸಿದ್ದು ಮೂಲಿಮನಿಯವರನ್ನು ವಿವಾಹವಾಗಿದ್ದಾರೆ. ವೃತ್ತಿ ಬದುಕಿನ ಜೊತೆ ಜೊತೆ ಕೌಟುಂಬಿಕ ಜೀವನವನ್ನೂ ಖುಷಿ ಖುಷಿಯಾಗಿಯೇ ನಿಭಾಯಿಸುತ್ತಿದ್ದಾರೆ.

Kannada serial Gattimela actress Priya J Achar Dubai trip with husband Siddu Moolimani

ಕಿರುತೆರೆ ಇರಲಿ, ಸಿನಿಮಾ ಇರಲಿ. ತಾರೆಯರು ಬಿಡುವು ಸಿಕ್ಕಾ ಎಲ್ಲಾದರೂ ಒಂದು ಕಡೆ ಪ್ರಯಾಣ ಮಾಡುತ್ತಲೇ ಇರುತ್ತಾರೆ. ಪ್ರಿಯಾ ಕೂಡ ತಮ್ಮ ಪತಿ ಸಿದ್ದು ಮೂಲಿಮನಿ ಹಾಗೂ ಕುಟುಂಬದೊಂದಿಗೆ ಇತ್ತೀಚೆಗೆ ದುಬೈ ಪ್ರವಾಸ ಮಾಡಿದ್ದರು. ಆ ವಿಡಿಯೋವನ್ನು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಜಾಲಿ ಮೂಡ್‌ನಲ್ಲಿ ಕಿರುತೆರೆ ನಟಿ ಪ್ರಿಯಾ

ಪ್ರಿಯಾ ಧಾರಾವಾಹಿ ಮೂಡ್‌ನಿಂದ ಕೊಂಚ ಹೊರ ಬಂದು ದುಬೈ ಪ್ರವಾಸ ಮಾಡಿ ಬಂದಿದ್ದಾರೆ. ದುಬೈಗೆ ಹಾರುವುದಕ್ಕಿಂತ ಮುನ್ನ ಬೆಂಗಳೂರಿನ ಅಂತರಾಷ್ಟ್ರೀಯ ಏರ್‌ಪೋರ್ಟ್‌ನಿಂದ್ಲೇ ಪ್ರವಾಸದ ಕ್ಷಣಗಳನ್ನು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿಯಲು ಆರಂಭಿಸಿದ್ದರು.

Kannada serial Gattimela actress Priya J Achar Dubai trip with husband Siddu Moolimani

ಪ್ರಿಯಾ ದುಬೈ ಪ್ರವಾಸವನ್ನು ತನ್ನ ಪರಿವಾರದ ಜೊತೆ ಮಾಡಿದ್ದರು. ಪತಿ ಸಿದ್ದು ಮೂಲಿಮನಿ ಹಾಗೂ ಕುಟುಂಬದೊಂದಿಗೆ ದುಬೈ ಪ್ರವಾಸ ಮಾಡಿ ಎಂಜಾಯ್ ಮಾಡಿದ್ದಾರೆ. ದುಬೈನ ಗಲ್ಲಿ ಗಲ್ಲಿ ಸುತ್ತಿದ ಪ್ರಿಯಾ ಮತ್ತು ಸಿದ್ದು ಸಖತ್ ಎಂಜಾಯ್ ಮಾಡಿದ್ದರು. ಅದೇ ವಿಡಿಯೋವನ್ನು ಕೆಲವೇ ದಿನಗಳ ಹಿಂದಷ್ಟೇ ತಮ್ಮ ಯೂಟ್ಯೂನ್ ಚಾನೆಲ್‌ನಲ್ಲಿ ಹಂಚಿಕೊಂಡಿದ್ದಾರೆ.

ಬುರ್ಜ್ ಖಲೀಫಾ ನೋಡಿ ದಂಗಾದ ಬ್ಯೂಟಿ

ದುಬೈನಲ್ಲಿ ಬುರ್ಜ್ ಖಲೀಫಾ ಫೇಮಸ್. ಈ ಬೃಹತ್ ಕಟ್ಟಡವನ್ನು ನೋಡವುದಕ್ಕೆಂದೇ ಪ್ರವಾಸ ಮಾಡುವುದು ಉಂಟು. ಪ್ರಿಯಾ ಜೆ ಆಚಾರ್ ಕೂಡ ಬುರ್ಜ್ ಖಲೀಫಾಗೆ ವಿಸಿಟ್ ಹಾಕಿದ್ದರು. ಅಲ್ಲೊಂದು ಅಡ್ವೆಂಚರ್ ಟ್ರಿಪ್ ಮಾಡಿದ್ದರು. ಆದರೆ, ಆ ದೃಶ್ಯಗಳನ್ನು ಅಷ್ಟಾಗಿ ಸೆರೆ ಹಿಡಿಯುವುದಕ್ಕೆ ಸಾಧ್ಯವಾಗಿಲ್ಲ. ಆದರೆ, ದುಬೈನ ಹಲವು ಸ್ಥಳಗಳನ್ನು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.

ಪ್ರಿಯಾ ಜೆ ಆಚಾರ್ ವಿದೇಶದಲ್ಲಿ ಅಡ್ವೆಂಚರಸ್ ರೈಡ್ ಮಾಡಿ ಖುಷಿ ಪಟ್ಟಿದ್ದಾರೆ. ದುಬೈನ ಮರಳುಗಾಡಿನಲ್ಲಿ ಪತಿ ಸಿದ್ಧು ಜೊತೆ ಒಂಟೆಯ ಮೇಲೆ ಕುಳಿತು ಒಂದು ರೈಡ್ ಹೋಗಿ ಬಂದಿದ್ದಾರೆ. ಆ ಸುಂದರ ಕ್ಷಣಗಳು ಕೂಡ ಕ್ಯಾಮರಾದಲ್ಲಿ ಸೆರೆಯಾಗಿದೆ.

ದುಬೈನಲ್ಲಿ ಶಾಪಿಂಗ್

ಪ್ರಿಯಾ ಜೆ ಆಚಾರ್ ದುಬೈನಲ್ಲಿ ಶಾಪಿಂಗ್‌ ಕೂಡ ಮಾಡಿದ್ದರು. ದುಬೈ ಬೀದಿ ಬೀದಿಯಲ್ಲಿ ಶಾಪಿಂಗ್ ಮಾಡಿ ಎಂಜಾಯ್ ಮಾಡಿದ್ದಾರೆ. ಹಾಗೇ ದುಬೈನಲ್ಲಿರೋ ಅಪ್ಪಟ ಕನ್ನಡದ ರೆಸ್ಟೋರೆಂಟ್ ಬೆಂಗಳೂರು ನಾಟಿಮನೆಗೂ ಭೇಟಿ, ಅಲ್ಲಿನ ರುಚಿಯನ್ನು ಸವೆದಿದ್ದಾರೆ. ಅಲ್ಲಿನ ಊಟ ಸವೆದು ಪ್ರಿಯಾ ಸುಸ್ತಾಗಿದ್ದಾರೆ . ಒಟ್ಟಿನಲ್ಲಿ ಪ್ರಿಯಾ ದಂಪತಿ ವಿದೇಶದಲ್ಲಿ ಸಖತ್ ಎಂಜಾಯ್ ಮಾಡುತ್ತಾ ಇದ್ದಾರೆ.

ಪ್ರಿಯಾ ನಟನೆಯಲ್ಲೂ ವೀಕ್ಷಕರನ್ನು ಸೆಳೆದಿದ್ದಾರೆ. ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ 'ಗಟ್ಟಿಮೇಳ' ಧಾರಾವಾಹಿಯ ಮೂಲಕ ತರಲೆ ತಂಗಿಯೂ ಮನಗೆದ್ದಿದ್ದಾರೆ. ಹಾಗೆಯೇ ಧ್ರುವನ ಮೆಚ್ಚಿನ ಹೆಂಡತಿಯಾಗಿ ಮಿಂಚುತ್ತಿದ್ದಾರೆ.ಧ್ರುವಗೆ ಎಷ್ಟೇ ಕಷ್ಟ ಬಂದರೂ ಅದೆಲ್ಲವನ್ನೂ ಮೆಟ್ಟಿ ನಿಲ್ಲುವ ಧೀರ ಹೆಂಡತಿ ಅದಿತಿಯಾಗಿ ನಟಿಸಿದ್ದು ಜನರು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ .

More from Filmibeat

English summary
Kannada serial Gattimela actress Priya J Achar Dubai trip with husband Siddu Moolimani, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X