Gattimela: ಈ ಧಾರಾವಾಹಿಗೆ ನಾಲ್ಕು ವರ್ಷ .. ಟ್ರೋಲ್ ಇಲ್ಲ, ನಿಲ್ಲಿಸಿ ಅಂತಿಲ್ಲ.. ಸಂಭ್ರಮ ಹೇಗಿದೆ ನೋಡಿ!

By ಎಸ್ ಸುಮಂತ್

ಇದು ಕಿರುತೆರೆ ಕಾಲ.. ಧಾರಾವಾಹಿಗಳನ್ನು ನೋಡುಗರ ಸಂಖ್ಯೆ ದಿನೇ ದಿನೇ ಹೆಚ್ಚಾಗ್ತಾನೆ ಇದೆ. ಹೀಗಾಗಿಯೇ ಧಾರಾವಾಹಿಗಳಲ್ಲೂ ಕಾಂಪಿಟೇಷನ್ ಕೂಡ ಹಂಗೆ ಇದೆ. ಅದಕ್ಕೆಂದೇ ಒಂದಕ್ಕಿಂತ ಒಂದು ಧಾರಾವಾಹಿ ರಿಚ್ ಆಗಿಯೇ ತಯಾರಾಗುತ್ತಿವೆ. ಹಬ್ಬ-ಹರಿದಿನಗಳು, ಮದುವೆ, ಸಭೆ -ಸಮಾರಂಭಗಳು ಹೀಗೆ ಧಾರಾವಾಹಿಯಲ್ಲಿನ ದೃಶ್ಯಗಳು ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತವೆ. ಇಷ್ಟೆಲ್ಲ ಹೇಳೋದಕ್ಕೆ ಒಂದು ಸೂಪರ್ ಕಾರಣವಿದೆ. ಅದುವೆ 'ಗಟ್ಟಿಮೇಳ' ಧಾರಾವಾಹಿ.

ಜೀ ಕನ್ನಡದಲ್ಲಿ ಹಲವು ಹೊಸ ಹೊಸ ಧಾರಾವಾಹಿಗಳು ಬರ್ತಾನೆ ಇರುತ್ತವೆ. ಅದರಲ್ಲೂ ಒಂದಕ್ಕಿಂತ ಒಂದು ಸೂಪರ್ ಧಾರಾವಾಹಿಯಾಗಿದೆ. ಹೊಸ ಧಾರಾವಾಹಿಗೂ ಪ್ರೇಕ್ಷಕರು ಕಾಯುತ್ತಿರುತ್ತಾರೆ. ಆದರೆ, ಮೊದಲಿನಿಂದಾನೂ ಧಾರಾವಾಹಿಯನ್ನು ವೀಕ್ಷಕರು ಕೈ ಬಿಟ್ಟಿಲ್ಲ. ಕಥೆಯೂ ಕೈ ಬಿಡುವಂತೆ ಇರಲ್ಲ. ಅದಕ್ಕೆ ಉದಾಹರಣೆ 'ಗಟ್ಟಿಮೇಳ' ಧಾರಾವಾಹಿ.

'ಗಟ್ಟಿಮೇಳ' ಧಾರಾವಾಹಿಗೆ ನಾಲ್ಕು ವರ್ಷ

'ಗಟ್ಟಿಮೇಳ' ಧಾರಾವಾಹಿಗೆ ನಾಲ್ಕು ವರ್ಷ

ಧಾರಾವಾಹಿ ಆರಂಭಕ್ಕೂ ಮುನ್ನ ಕಥೆ ಹೀಗೆ ಸಾಗುತ್ತೆ ಅನ್ನೋ ಅಂದಾಜು ನಿರ್ದೇಶಕರಿಗೆ ಇರುತ್ತೆ. ಶುರುವಾಗುವ ಮುನ್ನ ಒಂದಷ್ಟು ಎಪಿಸೋಡ್‌ಗಳನ್ನು ಮಾಡಿಕೊಂಡು ಹೋಗುತ್ತೆ. ಆದರೂ, ಧಾರಾವಾಹಿ ಸಾಗುತ್ತಾ ಸಾಗುತ್ತಾ ಕಥೆ ತೆಗೆದುಕೊಂಡು ಹೋಗುವುದು ಬಹಳ ಚಾಲೆಂಜ್. ಆ ಕಥೆಯ ಸಾಗುವಿಕೆ ಕೊಂಚ ಬೇಸರವೆನಿಸಿದರೂ, ಪ್ರೇಕ್ಷಕರು ಬೇರೆ ಕಡೆಗೆ ಗಮನ ಹರಿಸಿ ಬಿಡುತ್ತಾರೆ. ಹೀಗಾಗಿ ನೋಡುಗರಿಗೆ ಇಂಟ್ರೆಸ್ಟಿಂಗ್ ಎನಿಸುವಂತೆ ಕಥೆಯನ್ನು ಹೆಣೆದುಕೊಂಡು ಹೋಗಬೇಕು. ಅದರಲ್ಲಿ 'ಗಟ್ಟಿಮೇಳ' ಧಾರಾವಾಹಿ ಗೆದ್ದಿದೆ. ಒಂದಲ್ಲ ಎರಡಲ್ಲ ಬರೋಬ್ಬರಿ ನಾಲ್ಕು ವರ್ಷ ಯಶಸ್ವಿ ಪಯಣದಲ್ಲಿ ಸಾಗುತ್ತಾ ಇದೆ.

ಬಡತನದಲ್ಲೇ ಬೆಳೆದ ಪರಿಮಳ ಕುಟುಂಬ

ಬಡತನದಲ್ಲೇ ಬೆಳೆದ ಪರಿಮಳ ಕುಟುಂಬ

'ಗಟ್ಟಿಮೇಳ' ಧಾರಾವಾಹಿ ಕೂಡು ಕುಟುಂಬದ ಧಾರಾವಾಹಿ. ನಾಲ್ಕು ಜನ ಹೆಣ್ಣು ಮಕ್ಕಳು. ಬಡತನ, ಸಣ್ಣ ಪುಟ್ಟ ಕೆಲಸ ಮಾಡುವ ಅಪ್ಪ ಅಮ್ಮ. ಪೋಷಕರಿಗೂ ತೊಂದರೆಯಾಗದಂತೆ ಹೆಗಲು ಕೊಟ್ಟವರೇ ಈ ಹೆಣ್ಣು ಮಕ್ಕಳು. ಈಗ ಇಬ್ಬರು ಹೆಣ್ಣು ಮಕ್ಕಳು ತಾವಿಷ್ಟ ಪಟ್ಟವರನ್ನೇ ಮದುವೆಯಾಗಿದ್ದಾರೆ. ಅಪ್ಪ ಅಮ್ಮನಿಗೆ ತಮ್ಮದೇ ಹಣದಲ್ಲಿ ಸೈಟ್ ಕೂಡ ತೆಗೆದುಕೊಟ್ಟಿದ್ದಾರೆ. ಸ್ವಾಭಿಮಾನಿ ಬದುಕನ್ನೇ ಬದುಕುತ್ತಿದ್ದಾರೆ. ಈಗ ಮೂರನೇ ಮಗಳು ಅಧಿತಿ ಲವ್ ಸ್ಟೋರಿ ಕೂಡ ಅದೇ ಮನೆಯಲ್ಲಿ ನಡೆಯುತ್ತಾ ಇದೆ.

'ಗಟ್ಟಿಮೇಳ' ಕೆಳಗಿಳಿದಿದ್ದೇ ಇಲ್ಲ

'ಗಟ್ಟಿಮೇಳ' ಕೆಳಗಿಳಿದಿದ್ದೇ ಇಲ್ಲ

'ಗಟ್ಟಿಮೇಳ' ಧಾರಾವಾಹಿ 11-3-2019ರಲ್ಲಿ ಆರಂಭವಾಗಿತ್ತು. ಆರಂಭದಿಂದ ನಂಬರ್ ಒನ್ ಸ್ಥಾನವನ್ನೇ ಅಲಂಕರಿಸಿತ್ತು. ಬಳಿಕ ಬಂದ 'ಹಿಟ್ಲರ್ ಕಲ್ಯಾಣ', 'ಪುಟ್ಟಕ್ಕನ ಮಕ್ಕಳು' ಆ ಸ್ಥಾನವನ್ನು ಅಲಂಕರಿಸಿದ್ದವು. ಆದರೆ, 'ಗಟ್ಟಿಮೇಳ' ಮತ್ತೆ ಕಾಂಪಿಟೇಷನ್‌ಗೆ ಇಳಿದಿತ್ತು. ಅದರ ಪರಿಣಾಮ ಇತ್ತೀಚೆಗೆ ಹಲವು ಬಾರಿ ನಂಬರ್ ಒನ್ ಸ್ಥಾನಕ್ಕೆ ಹತ್ತೋದು ಇಳಿಯೋದನ್ನು ಮಾಡಿದೆ.

ದುಪ್ಪಟ್ಟಾಯ್ತು ಟೀಂ ಸಂಭ್ರಮ

ದುಪ್ಪಟ್ಟಾಯ್ತು ಟೀಂ ಸಂಭ್ರಮ

ಒಂದು ಧಾರಾವಾಹಿ ಮೊದ ಮೊದಲಿಗೆ ನೋಡುವುದಕ್ಕೆ ಅದ್ಭುತವಾಗಿರುತ್ತೆ. ಆಮೇಲೆ ಆಮೇಲೆ ಕೆಲವೊಂದಿಷ್ಟು ಬೇಸರವಾಗುತ್ತೆ. ಎಷ್ಟೋ ಸಲ ಈ ಧಾರಾವಾಹಿಗಳನ್ನು ನಿಲ್ಲಿಸ್ರಪ್ಪಾ, ಇನ್ನು ಎಷ್ಟು ಓಡಿಸ್ತೀರಾ ನಿಲ್ಲಿಸಿ ಬಿಡಿ ಅಂತೆಲ್ಲಾ ಟ್ರೋಲ್ ಮಾಡ್ತಾರೆ. ಆದರೆ, 'ಗಟ್ಟಿಮೇಳ' ಸರಿ ಸುಮಾರು ನಾಲ್ಕು ವರ್ಷ ಸಾಗ್ತಾ ಇದೆ. ಒಂದು ದಿನ ಕೂಡ ಗಟ್ಟಿಮೇಳದ ಬಗ್ಗೆ ನೆಗೆಟಿವ್ ಕಮೆಂಟ್ ಆಗ್ಲಿ, ಟ್ರೋಲ್ ಆಗ್ಲಿ ಕೇಳಿ ಬಂದಿಲ್ಲ. ಹೀಗಾಗಿ ಈ ಸಂಭ್ರಮದಲ್ಲಿಯೇ ಇಡೀ ತಂಡ ಖುಷಿ ಪಡ್ತಾ ಇದೆ.

More from Filmibeat

English summary
Kannada Serial Gattimela Completed 4 years Team Celebrate With Crew Members, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X