Gattimela: ಅದಿತಿ - ದ್ರುವ ಮದುವೆ ಫಿಕ್ಸ್; ಮದುವೆಗೆ ಒಪ್ಪಿಗೆ ಕೊಟ್ಟ ಮಂಜುನಾಥ್
ಗಟ್ಟಿಮೇಳ ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ಇದೀಗ ಮಂಜುನಾಥ್ ದ್ರುವನ ಜೊತೆ ಅದಿತಿ ಮದುವೆ ಮಾಡಲು ಒಪ್ಪಿಗೆ ಕೊಟ್ಟಿದ್ದಾನೆ. ಅದಿತಿ ದ್ರುವನ ಮನೆಗೆ ಹೋಗಿರುವುದು ಮಂಜುನಾಥಗೆ ಗೊತ್ತಾಗಿ ಬಹಳ ಕೋಪಗೊಂಡಿರ್ತಾನೆ. ಮನೆಗೆ ಬಂದ ಮಂಜುನಾಥ್ ಅದಿತಿ ಎಂದು ಜೋರಾಗಿ ಕರೆಯುತ್ತಾನೆ. ಆದರೆ ಅದಿತಿ ಭಯ ಪಟ್ಟುಕೊಂಡು ರೂಂನೊಳಗೆ ಅತ್ತಿಂದಿತ್ತ ಹೋಗುತ್ತಾ ಇರುತ್ತಾಳೆ. ಇದನ್ನು ನೋಡಿದ ಅದಿತಿ ತಂಗಿ ಪ್ರೀತಿ ಮಾಡಿದ ಬಳಿಕ ಹೆದರಿಕೊಂಡು ಇರಬಾರದು ಹೋಗು ಎಂದು ಹೇಳುತ್ತಾಳೆ.
ಇನ್ನು ಮಂಜುನಾಥನ ಆರ್ಭಟ ಕೇಳಿ ಪರಿಮಳ ಓಡೋಡಿ ಬರುತ್ತಾಳೆ. ಆದರೂ ಮಂಜುನಾಥ್ ಪರಿಮಳಲತ್ತ ನೋಡದೆ ಆದಿತಿಯನ್ನು ಜೋರಾಗಿ ಕರೆಯುತ್ತಾನೆ. ಅಪ್ಪನ ಬಳಿ ಬಂದ ಅದಿತಿ ಬಳಿ ಮಂಜುನಾಥ್ ಬಹಳ ಕೋಪದಿಂದ ನಾನು ಈ ಮೊದಲೇ ಹೇಳಿದ್ದೆ ಅಲ್ವಾ ವಸಿಷ್ಠ ಮನೆಗೆ ಹೋಗಬಾರದು ಎಂದು ಯಾಕೆ ಹೋಗಿದ್ದೆ ಎಂದು ಹೊಡೆಯಲು ಮುಂದಾದಾಗ ವೇದಾಂತ ಬಂದು ಮಂಜುನಾಥ್ ಕೈ ಹಿಡಿದುಕೊಳ್ತಾನೆ. ವೇದಾಂತನನ್ನು ನೋಡಿದ ಮಂಜುನಾಥ್ ಗಕೊಂಚ ಶಾಕ್ ಆದರೂ ತನ್ನ ಮಗಳು ತಾನು ನೋಡಿದ ಹುಡುಗನನ್ನು ಮಾತನಾಡಿಸಬೇಕು ಭೇಟಿ ಮಾಡಬೇಕು ಎಂದು ಯೋಚನೆ ಮಾಡುತ್ತಾ ಇರುತ್ತಾನೆ.

ಇನ್ನು ವೇದಾಂತ ಮಂಜುನಾಥ್ ಮುಂದೆ ದ್ರುವ ಹಾಗೂ ಅದಿತಿ ಪ್ರೀತಿ ಬಗ್ಗೆ ಮಾತನಾಡುತ್ತಾ ಇರುತ್ತಾನೆ. ಆದರೆ ಮಂಜುನಾಥ್ ಬಹಳ ಖಾರವಾಗಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ವೇಳೆ ವೇದಂತನಿಗೆ ಮನದಲ್ಲಿ ಒಂದು ತರಹದ ನೋವು ಆಗುತ್ತದೆ. ವೇದಾಂತ್ ಇದುವರೆಗೂ ಮಂಜುನಾಥ್ ಹಾಗೂ ಪರಿಮಳ ದಂಪತಿಯನ್ನು ತನ್ನ ತಂದೆ ತಾಯಿ ಹಾಗೆ ನೋಡಿಕೊಂಡಿರುತ್ತಾನೆ.
ಆದರೆ ಇದೀಗ ಮಂಜುನಾಥ್ ಮಾತು ಆತನನ್ನು ಮನೆಯ ಹೊರಗಡೆಯವನು ಎಂದು ಮಾಡುವ ಹಾಗೆ ಮಾತನಾಡುತ್ತಾ ಇದ್ದಾನೆ. ಇದು ನನಗೆ ಬೇಸರ ತಂದಿದೆ ಎಂದು ಹೇಳಿದಾಗ ಮಂಜುನಾಥ್ ಸಮಜಾಯಿಷಿ ನೀಡುತ್ತಾನೆ. ಆದರೂ ಕೂಡ ಮಂಜುನಾಥ್ ಆ ಬಗ್ಗೆ ಏನು ಮಾತನಾಡದೆ ಸುಮ್ಮನೆ ಇರುತ್ತಾನೆ. ವೇದಾಂತ್ ನಾವು ಅದಿತಿ ಹಾಗೂ ದ್ರುವನ ಮದುವೆ ಮಾಡಬೇಕು ಎಂದುಕೊಂಡಿದ್ದೆವು, ಅಮ್ಮ ಕೂಡ ಒಪ್ಪಿಗೆ ನೀಡಿದ್ದಾರೆ ಹಾಗೆಯೇ ಮನೆ ಮಂದಿ ಬಹಳ ಖುಷಿ ಪಡುತ್ತಾ ಇದ್ದಾರೆ ಎಂದೆಲ್ಲ ಹೇಳಿದಾಗ ಸುಹಾಸಿನಿ ಕೂಡ ವೇದಾಂತ್ ಒತ್ತಾಯಕ್ಕೆ ಮಣಿದು ಒಂದೆರಡು ಮಾತು ಆಡುತ್ತಾಳೆ.

ಆ ಬಳಿಕ ಪರಿಮಳ ತನ್ನ ಗಂಡನ ಬಳಿಗೆ ಬಂದು ಬಹಳ ಒತ್ತಾಯ ಮಾಡುತ್ತಾಳೆ. ಎಲ್ಲರೂ ಒತ್ತಾಯ ಮಾಡುವುದನ್ನು ನೋಡಿದ ಮಂಜುನಾಥ್ ಕೊನೆಗೆ ಮದುವೆಗೆ ಒಪ್ಪಪಡುತ್ತಾರ. ಅದಿತಿಗೆ ಬಹಳ ಖುಷಿ ಆಗುತ್ತದೆ. ಅದಿತಿ ತಂದೆಯನ್ನು ತಬ್ಬಿಕೊಂಡು ಬಹಳ ಖುಷಿ ಪಡುತ್ತಾಳೆ. ಇನ್ನು ವೇದಾಂತ್ ಹಾಗೂ ಸುಹಾಸಿನಿ ಅಲ್ಲಿಂದ ಹೊರಟು ಹೋಗುತ್ತಾರೆ. ಸುಹಾಸಿನಿ ಅಗ್ನಿ ಬಳಿ ಹೋದಾಗ ತೇಜಸ್ ಸುಹಾಸಿನಿ ತಲೆಗೆ ಗುರಿ ಇಟ್ಟು ಗನ್ ಹಿಡಿದುಕೊಂಡಿರುತ್ತಾನೆ.
ಇನ್ನು ಸುಹಾಸಿನಿ ತೇಜಸ್ ಅನ್ನು ಎಷ್ಟೇ ಸಮಾಧಾನ ಮಾಡಿದರೂ ಆತ ಮಾತ್ರ ನನಗೆ ಅದಿತಿ ಬೇಕು ನಾನು ಆಕೆಯನ್ನು ಎಷ್ಟು ಇಷ್ಟ ಪಡುತ್ತೇನೆ ಎಂದು ತಿಳಿದಿದೆ ಅಲ್ವಾ ಎಂದೆಲ್ಲ ಹೇಳುತ್ತಾನೆ. ಇದನ್ನು ಕೇಳಿದ ಸುಹಾಸಿನಿ ಹಾಗೂ ಅಗ್ನಿ ಒಂದು ಮಾಸ್ಟರ್ ಪ್ಲಾನ್ ಮಾಡಿಕೊಂಡಿರುತ್ತಾರೆ.
ಇನ್ನು ಅದಿತಿ ಮದುವೆ ಕೊನೆಗೂ ಫಿಕ್ಸ್ ಆಯಿತು ಎಂದು ಹೇಳಿ ಮನೆಯಲ್ಲಿ ಬಹಳ ಖುಷಿ ಪಟ್ಟುಕೊಂಡು ಡಾನ್ಸ್ ಮಾಡುತ್ತಾ ಇರುತ್ತಾಳೆ. ಇದನ್ನು ನೋಡಿದ ಮಂಜುನಾಥ್ ಹಾಗೂ ಪರಿಮಳ ಖುಷಿ ಪಡುತ್ತಾರೆ.


Click it and Unblock the Notifications











