Gattimela: ಅದಿತಿ - ದ್ರುವ ನಿಶ್ಚಿತಾರ್ಥ ಮಾಡಲು ವೇದಾಂತ್ ತಯಾರಿ
ಗಟ್ಟಿಮೇಳ ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಾ ಇದ್ದು ನೋಡುಗರಿಗೆ ಮುದ ನೀಡುತ್ತಿದೆ. ಇದೀಗ ಯಶಸ್ ಮಂಜುನಾಥ್ ಗೆ ಬಹಳ ಅವಮಾನ ಮಾಡಿದ್ದಾನೆ. ಅದನ್ನು ತಡೆದುಕೊಳ್ಳಲು ಆಗದ ಮಂಜುನಾಥ್ ದಂಪತಿ ಬಹಳ ಬೇಸರ ಮಾಡಿಕೊಂಡಿರುತ್ತಾರೆ. ಹಾಗೆಯೇ ಮದುವೆಗೆ ನಾವು ಇರುವುದೇ ಬೇಡ ಎಂದು ಆಲೋಚನೆ ಮಾಡುತ್ತಾ ಇರುತ್ತಾರೆ.
ಅಯ್ಯೋ ಇದೇನಾಯ್ತಪ್ಪ ಅಂತ ಅಂದುಕೊಳ್ಳುತ್ತಾ ಇದ್ದೀರಾ? ಹೌದು ಮಂಜುನಾಥ್ ಹಾಗೂ ಪರಿಮಳ ತಮ್ಮ ಮಕ್ಕಳಿಬ್ಬರನ್ನೂ ಬಿಟ್ಟು ದೂರ ಹೋಗಲು ರೆಡಿ ಆಗಿ ನಿಂತಿದ್ದಾರೆ. ನನ್ನ ಮಕ್ಕಳು ಖುಷಿಯಾಗಿ ಇರಲಿ ಅವಳ ಅಕ್ಕಂದಿರು ಆಕೆಯ ಕೈ ಬಿಡುವುದಿಲ್ಲ ಎಂದುಕೊಳ್ಳುತ್ತಾ ಮನೆ ಬಿಟ್ಟು ಹೋಗುವ ನಿರ್ಧಾರ ಮಾಡುತ್ತಾರೆ.

ಅದಿತಿ ಹಾಗೂ ಅನು ಮುಖವನ್ನು ನೋಡಿದಾಗ ಪರಿಮಳಗೆ ದುಃಖ ಉಮ್ಮಳಿಸಿ ಬರುತ್ತದೆ. ಇನ್ನು ಪರಿಮಳ ಹಾಗೂ ಮಂಜುನಾಥ್ ಮನೆ ಬಿಟ್ಟು ಹೊರಗೆ ಬರಬೇಕಾದರೆ ರಸ್ತೆ ಮಧ್ಯೆ ವೇದಾಂತ್ ನಿಂತುಕೊಂಡಿರುತ್ತಾನೆ. ವೇದಾಂತ್ ನೋಡಿದ ಪರಿಮಳ ಹಾಗೂ ಮಂಜುನಾಥ್ ಏನು ಹೇಳಬೇಕು ಎಂದು ತಿಳಿಯದೇ ನಿಂತು ಬಿಡುತ್ತಾರೆ. ಅಮ್ಮು ಹೇಳಿದ ಪ್ರಕಾರ ತನ್ನ ತಂದೆ ತಾಯಿಗೆ ಮದುವೆ ಇಷ್ಟ ಇಲ್ಲ ಎಂದು ಅನ್ನಿಸುತ್ತದೆ, ಅದಕ್ಕೆ ನನ್ನ ಬಳಿ ಅಷ್ಟೊಂದು ಮಾತನಾಡಲಿಲ್ಲ, ಏನಾಗಿದೆ ಎಂಬುವುದನ್ನು ವಿಚಾರಣೆ ಮಾಡಿ ಎಂದು ಹೇಳುತ್ತಾಳೆ. ಇದನ್ನು ಕೇಳಿದ ವೇದಾಂತ ಮಂಜುನಾಥ್ ಮನೆಗೆ ಹೊರಟಿರುತ್ತಾನೆ.
ಅದು ಅಲ್ಲದೆ ಅನು ಕೂಡ ಕರೆ ಮಾಡಿ ವೇದಾಂತ್ ಗೆ ಅಂದು ನಡೆದ ವಿಚಾರವನ್ನು ಹೇಳುತ್ತಾಳೆ. ಮಂಜುನಾಥ್ ಹಾಗೂ ಪರಿಮಳ ವೇದಾಂತ್ ಬಳಿ ನಮಗೆ ಬಹಳ ಅವಮಾನ ಆಗಿದೆ, ಮನೆಗೆ ಬಂದು ಯಶಸ್ ಕೆಟ್ಟದಾಗಿ ಮಾತನಾಡಿ ಹೋಗಿದ್ದಾನೆ, ಎಲ್ಲರೂ ನಮ್ಮನ್ನು ನೋಡಿ ಕೇಕೆ ಹಾಕಿ ನಕ್ಕರು ಎಂದು ಹೇಳುತ್ತಾರೆ. ಅದಕ್ಕಾಗಿ ನಾವು ಮನೆ ಬಿಟ್ಟು ಹೋಗುತ್ತಾ ಇದ್ದೇವೆ ಎಂದು ಹೇಳುತ್ತಾರೆ.

ಇದನ್ನು ಕೇಳಿದ ವೇದಾಂತ್ ಹೇಗಾದರೂ ಮಾಡಿ ಯಶಸ್ ಗೆ ಪಾಠ ಕೇಳಿಸಲೇ ಬೇಕು ಎಂದು ಯೋಚನೆ ಮಾಡಿ ಅದಿತಿ ಹಾಗೂ ದ್ರುವ ನಿಶ್ಚಿತಾರ್ಥವನ್ನು ಮಾಡಿ ಮುಗಿಸುವಂತೆ ಅತ್ತೆ ಮಾವನ ಬಳಿ ಕೇಳಿದಾಗ ಮಂಜುನಾಥ್ ಹಾಗೂ ಪರಿಮಳ ಅದಕ್ಕೆ ಒಪ್ಪಿಗೆಯನ್ನು ನೀಡುತ್ತಾರೆ. ಇನ್ನು ಯಶಸ್ ಸುಹಾಸಿನಿ ಬಳಿ ಮಾತನಾಡುತ್ತಾ ಇರುತ್ತಾನೆ.
ಆ ವೇಳೆ ಮಂಜುನಾಥ್ ಹಾಗೂ ಪರಿಮಳ ಮನೆ ಬಿಟ್ಟು ಹೋಗುವುದನ್ನು ತಪ್ಪಿಸುದುದರ ಬಗ್ಗೆ ಸುಹಾಸಿನಿ ಆತನಿಗೆ ಹೇಳಿದಾಗ ಆತ ಕೈಲಾಗದವನ ಹಾಗೆ ಜೋರಾಗಿ ಕಿರುಚಿ ಬಿಡುತ್ತಾನೆ.
ನಾಳೆ ದ್ರುವ ಹಾಗೂ ಅದಿತಿ ನಿಶ್ಚಿತಾರ್ಥ ಎಂದಾಗ ಕೂಡ ಕೋಪ ಮಾಡಿಕೊಂಡ ಯಶಸ್ ಬಳಿ ಏನು ಮಾತನಾಡದೆ ಸುಹಾಸಿನಿ ಫೋನ್ ಇಡುತ್ತಾಳೆ. ಇನ್ನು ಮಂಜುನಾಥ್ ಹಾಗೂ ಮಕ್ಕಳು ಒಟ್ಟಾಗಿ ಕುಳಿತು ಊಟ ಮಾಡಬೇಕು ಎನ್ನುವಷ್ಟರಲ್ಲಿ ಮಂಜುನಾಥ್ ಆದಿತಿ ಇವತ್ತು ನಿನಗೆ ನಾನು ಊಟ ಮಾಡಿಸಲಾ ಎಂದಾಗ ಅದಿತಿ ಅದೆಲ್ಲ ನೀವು ಕೇಳಬಾರದು ನೀವು ನನ್ನ ಅಪ್ಪ ನೀವು ಊಟ ಕೊಡಲು ಕೇಳಬೇಕೆ ಎಂದಾಗ ಮಂಜುನಾಥ್ ಖುಷಿಯಾಗಿ ಊಟ ಮಾಡಿಸುತ್ತಾನೆ. ಆಗ ಅನು ಕೂಡ ಊಟ ಮಾಡಿಸುವಂತೆ ತಂದೆ ಬಳಿ ಕೇಳಿದಾಗ ಮಂಜುನಾಥ್ ನಾನು ಇವತ್ತು ಅದಿತಿಗೆ ಮಾತ್ರ ಊಟ ಕೊಡೋದು ಎಂದು ಹೇಳಿ ನಗುತ್ತಾನೆ.


Click it and Unblock the Notifications











