Gattimela: ಸೀಮಂತದ ಸಂಭ್ರಮದಲ್ಲಿರುವ ವಸಿಷ್ಠ ಕುಟುಂಬದ ಖುಷಿಗೆ ಬೆಂಕಿ ಇಡ್ತಾಳಾ ಸುಹಾಸಿನಿ?
ಗಟ್ಟಿಮೇಳ ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಾ ಇದ್ದು ನೋಡುಗರ ಗಮನ ಸೆಳೆಯುವ ಹಾಗೆ ಮಾಡುತ್ತಿದೆ. ಇದೀಗ ತುಂಬು ಕುಟುಂಬವನ್ನು ಒಡೆಯಲು ಸುಹಾಸಿನಿ ಮಾಡುತ್ತಿರುವ ಕೆಲಸ ಅಷ್ಟಿಷ್ಟಲ್ಲ. ಆದರೂ ಅಣ್ಣ ತಮ್ಮಂದಿರು ಒಟ್ಟಾಗಿ ಜೀವನ ನಡೆಸುತ್ತಾ ಇದ್ದಾರೆ. ಅದರಲ್ಲೂ ಇದೀಗ ಅಮ್ಮುಗೆ ತಲೆ ಕೆಟ್ಟು ಹೋಗಿದೆ. ತಂಗಿ ಮದುವೆಯನ್ನು ಅದು ಹೇಗೆ ದ್ರುವ ಜೊತೆ ಮಾಡಲಿ ಎಂಬ ಟೆನ್ಶನ್ ಮನೆ ಮಾಡಿದೆ. ಅಮ್ಮು ಮನದಲ್ಲಿ ನೂರು ಆತಂಕ ಮನೆ ಮಾಡಿದೆ.
ತಂದೆಯ ಮಾತನ್ನು ನಡೆಸಿಕೊಡುವ ಭರದಲ್ಲಿ ಅಮ್ಮು ತನ್ನ ತಂಗಿ ಮನಸಿಗೆ ನೋವು ಮಾಡಿದಂತೆ ಆಗುತ್ತದೆ. ಆದ್ರೆ ಏನು ಮಾಡಲಾಗದ ಸ್ಥಿತಿಯಲ್ಲಿ ಅಮ್ಮು ಇದ್ದಾಳೆ. ಇದೀಗ ಆರತಿಯ ಸೀಮಂತ ಶಾಸ್ತ್ರ ಮಾಡಲು ಭರದ ಸಿದ್ಧತೆ ನಡೆಯುತ್ತಿದೆ. ಕಾಂತ ಬಳೆಗಾರನಾಗಿ ಬಂದಿರುವುದು ಎಲ್ಲರಿಗೂ ಖುಷಿ ನೀಡಿದೆ. ಆದರೆ ಬಳೆಗಾರನಾಗಿ ಕಾಂತ ಬಂದಿರುವುದು ಎಂದು ಯಾರಿಗೂ ತಿಳಿಯದಾಗಿತ್ತು. ಎಲ್ಲರೂ ಸೀಮಂತ ಶಾಸ್ತ್ರದ ಸಂಭ್ರಮದಲ್ಲಿ ಇರುವಾಗ ಬಳೆಗಾರ ಬಂದಿರುವುದರಿಂದ ಇದ್ದ ಖುಷಿ ಎರಡರಷ್ಟು ಆಗುತ್ತದೆ. ಆ ಬಳಿಕ ಕಾಂತನ ಧ್ವನಿಯಿಂದ ಸಾರ್ಥಕಗೆ ಗೊತ್ತಾಗುತ್ತದೆ ಇದು ಬೇರೆ ಅಲ್ಲ ಇದು ಕಾಂತ ಎಂದು. ಆತ ಎಲ್ಲರ ಮುಂದೆ ಹೇಳುತ್ತಾನೆ.

ಇದು ಬೇರೆ ಯಾರ ಧ್ವನಿ ಹಾಗೆ ಕೇಳುತ್ತಿಲ್ಲ ಇದು ನಮ್ಮ ಕಿತ್ತು ಹೋದ ಕಾಂತಾನ ಧ್ವನಿ ಇದ್ದ ಹಾಗೆ ಇದೆ ಎಂದು ಹೇಳುತ್ತಾನೆ. ಇದನ್ನು ಕೇಳಿದ ಕಾಂತ ಜೋರಾಗಿ ನಗುತ್ತಾನೆ. ಕಾಂತ ಅಮೂಲ್ಯ ಮೇಡಂ ಬಳೆಗಾರನನ್ನು ಕರೆದುಕೊಂಡು ಬರಲು ಹೇಳಿದರು ಆದರೆ ಬಳೆಗಾರ ಬಾರದೆ ಇರುವುದರಿಂದ ನಾನೇ ಬೆಳೆಗಾರನ ವೇಷ ತೊಡ ಬೇಕಾಯಿತು ಎಂದು ಹೇಳುತ್ತಾನೆ. ಆಗ ಎಲ್ಲರೂ ಬಳೆ ತೊಡಿಸುವವರು ಯಾರು ಹಾಗಾದರೆ ಎಂದು ಹೇಳಿದಾಗ ಅವರವರ ಗಂಡಂದಿರು ಬಹಳ ಪ್ರೀತಿಯಿಂದ ಬಳೆ ತೊಡಿಸುತ್ತಾರೆ.
ಇದನ್ನೆಲ್ಲ ನೋಡಿದ ಮನೆ ಮಂದಿಗೆ ಬಹಳ ಖುಷಿ ಆಗುತ್ತದೆ. ಇನ್ನು ಸೀಮಂತಕ್ಕೆ ಭರದ ಸಿದ್ಧತೆ ಕೂಡ ನಡೆಯುತ್ತಿದೆ. ಸೀರೆಯವರನ್ನು ಮನೆಗೆ ಕರೆಯಿಸಿ ಸೀರೆ ಕೊಳ್ಳಲು ತಮ್ಮ ತಮ್ಮ ಹೆಂಡತಿಯರಿಗೆ ಸಹಾಯ ಮಾಡುತ್ತಾರೆ. ಮನೆಯವರಿಗೆ ಎಲ್ಲರಿಗೂ ಸೀರೆ ಕೊಳ್ಳುವ ಯೋಜನೆ ಮಾಡಿದ್ದು ಮೊದಲು ವೇದಾಂತನ ಮಾತಿಗೆ ಒಪ್ಪಿದ ಮನೆ ಮಂದಿ ಬಹಳ ಖುಷಿ ಪಡುತ್ತಾರೆ. ಬಳಿಕ ಇನ್ನೂ ಸುಹಾಸಿನಿ ಹಾಗೂ ವೈದೇಹಿಗೆ ಕೂಡ ವೇದಾಂತ ಸೀರೆಯನ್ನು ಸೆಲೆಕ್ಟ್ ಮಾಡಿ ಕೊಡುತ್ತಾನೆ

ಇದನ್ನು ನೋಡಿದ ಸುಹಾಸಿನಿಗೆ ಕೋಪ ಬರುತ್ತದೆ. ಆದರೂ ಅದನ್ನು ತಡೆದುಕೊಂಡ ಸುಹಾಸಿನಿ ಸುಮ್ಮನೆ ಇರುತ್ತಾಳೆ. ಅಜ್ಜಿಗೆ ಕೂಡ ವೇದಾಂತ ಒಳ್ಳೆಯ ಸೀರೆಯನ್ನು ಕೊಡುತ್ತಾನೆ. ಇದನ್ನು ನೋಡಿದ ವೇದಂತನಿಗೆ ಹಾಗೂ ಮನೆ ಮಂದಿಗೆ ಖುಷಿ ಆಗುತ್ತದೆ. ಇನ್ನು ಸೀರೆ ನೋಡಿದ ಅಜ್ಜಿ ನನಗೆ ಇದು ಬಹಳ ಇಷ್ಟ ಆಯಿತು ಎಂದೆಲ್ಲ ಹೇಳುತ್ತ ಇರುವಾಗ ವೈದೇಹಿ ಹೇಳುತ್ತಾಳೆ ಅಮ್ಮ ನಿನಗೆ ಕಣ್ಣು ಕಾಣುವುದಿಲ್ಲ ಯಾಕೆ ಹೀಗೆ ಮಾಡುತ್ತಾ ಇದ್ದೀಯಾ ಎಂದು ಹೇಳುತ್ತಾರೆ.
ಇನ್ನು ಅಮ್ಮು ಎಲ್ಲರಿಗೂ ಚೆನ್ನಾಗಿ ಇರುವ ಸೀರೆ ಸೆಲೆಕ್ಟ್ ಮಾಡಿದ್ದೀಯಾ ನನಗೂ ಒಂದು ಸೀರೆ ಸೆಲೆಕ್ಟ್ ಮಾಡು ಚೆನ್ನಾಗಿ ಇರಬೇಕು ಎಂದು ಹೇಳುತ್ತಾಳೆ .ಆಗ ಆಕೆಗೂ ಒಂದು ಚನ್ನಾಗಿ ಇರುವ ಸೀರೆಯನ್ನು ಕೊಡುತ್ತಾನೆ. ಇದನ್ನು ನೋಡಿದ ಮನೆ ಮಂದಿಗೆ ಬಹಳ ಖುಷಿ ಆಗುತ್ತದೆ.


Click it and Unblock the Notifications











