Gattimela: ಕಿಡಿಗೇಡಿಗಳನ್ನು ಮಣಿಸಿದ ವೇದಾಂತ್ ವಸಿಷ್ಠ ; ಅಮೂಲ್ಯಗೆ ಅಗ್ನಿ ನೋಡಿದ ನೆನಪಾಗುತ್ತಾ?
ಕಿಡಿಗೇಡಿಗಳ ವಿರುದ್ದ ಇದೀಗ ಸೆಣಸಾಡಲು ವೇದಾಂತ ಸಿದ್ಧವಾಗಿ ನಿಂತಿದ್ದಾನೆ. ವೇದಾಂತ ತನ್ನ ಮಾವನನ್ನು ಉಳಿಸಿಕೊಳ್ಳುವುದಕ್ಕೆ ದಾಖಲೆಗಳನ್ನೆಲ್ಲ ತೆಗೆದುಕೊಂಡು ಕೋರ್ಟ್ ಗೆ ಬರುತ್ತಾನೆ. ಮಾವನ ಮೇಲೆ ಅಪವಾದ ಮಾಡುತ್ತಾ ಇರುವವರನ್ನು ವಿಚಾರಣೆಗೆ ಕರೆಯಿಸಿ ವಿಚಾರಣೆ ನಡೆಸುತ್ತಾನೆ. ನಿಮಗೆ ಹೇಗೆ ಗೊತ್ತು ಅವರು ಶ್ರೀ ಗಂಧದ ತುಂಡುಗಳನ್ನು ಇಟ್ಟುಕೊಂಡಿದ್ದರು ಎಂದೆಲ್ಲ ಪ್ರಶ್ನೆ ಮಾಡಿದಾಗ ಮಂಜುನಾಥ್ ಅವರ ಮೇಲೆ ಆಪಾದನೆ ಮಾಡುತ್ತಿರುವಾಗ ಕಕ್ಕಾ ಬಿಕ್ಕಿ ಆಗಿ ಹೋಗುತ್ತಾರೆ. ಆ ವೇಳೆ ಅಲ್ಲಿಗೆ ಬಂದ ಇನ್ನೊಬ್ಬ ಲಾಯರ್ ವೇದಾಂತ ಅವರು ಬ್ಯುಸಿನೆಸ್ ಮೆನ್ ಹೌದು ಹಾಗೆಯೇ ಅವರು ಒಳ್ಳೆಯ ಮಾತುಗಾರ ಕೂಡ ಆದರೆ ಇಲ್ಲಿ ಕೇವಲ ಮಾತು ಮಾತ್ರ ಅಲ್ಲ ಇಲ್ಲಿ ಸಾಕ್ಷಿ ಬೇಕು ಎಂದು ಹೇಳುತ್ತಾನೆ. ಆದರೆ ಆ ಕೂಡಲೇ ವೇದಾಂತ ಎದುರಾಳಿ ವಕೀಲರ ಬಾಯಿ ಮುಚ್ಚಿಸಿ ಬಿಡುತ್ತಾನೆ.
ಇನ್ನು ಅಲ್ಲಿಗೆ ಅಂದು ಮಂಜುನಾಥ್ ಜೊತೆ ಮಾತನಾಡಿದ ಆಟೋ ಡ್ರೈವರ್ ಅನ್ನು ಕರೆಸುತ್ತಾರೆ. ಆ ವೇಳೆ ಮಂಜುನಾಥ್ ಈತನೇ ನನ್ನ ಬಳಿ ಬಂದಿದ್ದು ಎಂದೆಲ್ಲ ಹೇಳಿದಾಗ ವೇದಾಂತ ಮಂಜುನಾಥ್ ಬಳಿ ಬಂದು ಇದು ನೀವು ಹಾಗೂ ಆತ ಮಾತನಾಡುತ್ತಾ ಇರುವ ವಿಡಿಯೋ ಎಂದು ವಿಡಿಯೋ ತೋರಿಸುತ್ತಾನೆ.

ತನ್ನ ಬಳಿ ಇದ್ದ ವಿಡಿಯೋ ಮಂಜುನಾಥ್‌ಗೆ ತೋರಿಸಿದ ವೇದಾಂತ
ಆದರೆ ಮಂಜುನಾಥ್ ಈ ರೀತಿ ನಾನು ಮಾತನಾಡಿಲ್ಲ ಎಂದು ಹೇಳಿದಾಗ ವೇದಾಂತ ಜಡ್ಜ್‌ಗೆ ಆ ವಿಡಿಯೋ ನೋಡಲು ಕೊಡುತ್ತಾರೆ. ಜಡ್ಜ್ ಕೂಡ ಆ ವಿಡಿಯೋ ನೋಡಿದರು. ಇನ್ನು ವೇದಾಂತ ಮಂಜುನಾಥ್ ಅವರನ್ನು ಅಪರಾಧಿ ಎಂದು ಬಿಂಬಿಸಲು ಅವರ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಲಾಗಿದೆ ಎಂದೆಲ್ಲ ಹೇಳುತ್ತಾನೆ. ಇದನ್ನೆಲ್ಲ ಕೇಳಿದ ಪರಿಮಳ ಹಾಗೂ ಅಮೂಲ್ಯಗೆ ಬಹಳ ಬೇಸರ ಆಗುತ್ತದೆ. ಇನ್ನು ವೇದಾಂತ ಜಡ್ಜ್ ಬಳಿ ಮಂಜುನಾಥ್ ಅವರ ಮನೆಯಲ್ಲಿ ಸಿಸಿ ಕ್ಯಾಮರಾ ಇಲ್ಲ, ಇವರಿಬ್ಬರೂ ಮಾತನಾಡುವುದನ್ನು ಯಾರೋ ಬೇಕು ಅಂತಲೇ ದೂರದಿಂದ ರೆಕಾರ್ಡ್ ಮಾಡಿ ಇವರು ಮಾತನಾಡಿದ್ದನ್ನು ಎಡಿಟ್ ಮಾಡಿ ಹಾಕಿದ್ದಾರೆ ಎಂದು ಹೇಳುತ್ತಾನೆ.

ಕಟಕಟೆಗೆ ಬಂದ ಅಮೂಲ್ಯ
ಇನ್ನು ಸೈಟ್ ವಿಚಾರಕ್ಕೆ ಬಂದರೆ ಅಮೂಲ್ಯ ಕಟಕಟೆಗೆ ಬಂದು ಸೈಟು ತೆಗೆದುಕೊಂಡಿದ್ದು ನನ್ನ ದುಡ್ಡಿಂದ, ನನ್ನ ತಂದೆ ತೆಗೆದುಕೊಂಡದ್ದು ಅಲ್ಲ ಎಂದು ಹೇಳುತ್ತಾಳೆ. ಇನ್ನು ಆಟೋ ಡ್ರೈವರ್ ಬಗ್ಗೆಯೂ ವಿಚಾರಣೆ ಮಾಡುತ್ತಾನೆ. ಆಟೋ ಡ್ರೈವರ್ ಬಳಿ ವೇದಾಂತ ನಿಮ್ಮ ಬಳಿ ಈ ರೀತಿ ಮಾಡಲು ಯಾರು ಹೇಳಿದರು ಎಂದೆಲ್ಲ ಹೇಳಿದಾಗ ಆತ ಯಾರು ಏನು ಗೊತ್ತಿಲ್ಲ ಆದರೆ ಕೈ ತುಂಬಾ ಹಣ ಕೊಡುತ್ತೇನೆ ಎಂದು ಹೇಳಿದರು ಅದಕ್ಕೆ ಮಾಡಿದೆ ಎಂದು ಹೇಳಿ ತಪ್ಪೊಪ್ಪಿಕೊಳ್ಳುತ್ತಾನೆ. ಅದನ್ನು ಕೇಳಿದ ಜಡ್ಜ್ ಎಲ್ಲಾ ನೊಟ್ ಮಾಡಿ ಇಟ್ಟುಕೊಳ್ತಾರೆ.

ವೇದಾಂತಗೆ ಅಭಿನಂದನೆ ಸಲ್ಲಿಸಿದ ಅಗ್ನಿ
ಆ ಬಳಿಕ ಮಂಜುನಾಥ್ ನಿರಪರಾಧಿ ಎಂದು ಘೋಷಣೆ ಮಾಡುತ್ತಾರೆ. ಬಳಿಕ ಎಲ್ಲರೂ ವೇದಾಂತಗೆ ಅಭಿನಂದನೆ ಹೇಳುತ್ತಾರೆ. ಅಗ್ನಿ ಕೂಡ ಅಭಿನಂದನೆ ಹೇಳುತ್ತಾನೆ. ಅಷ್ಟರಲ್ಲಿ ಅಲ್ಲಿಗೆ ಬಂದ ಅಮೂಲ್ಯ ಅಗ್ನಿಯನ್ನು ಹಿಂದೆಯಿಂದ ನೋಡಿ ಈತನನ್ನು ಎಲ್ಲಿಯೋ ನೋಡಿದ್ದೇನೆ ಎಂದು ಯೋಚನೆ ಮಾಡುತ್ತಾ ಇರುತ್ತಾಳೆ. ಇನ್ನು ಮಂಜುನಾಥ್ ನಿರಪರಾಧಿ ಎಂದು ತಿಳಿಯುತ್ತಾ ಇರುವಾಗಲೇ ಪರಿಮಳ ಹಾಗೂ ಅಮೂಲ್ಯ ಸಂತಸದಿಂದ ಕುಣಿದು ಕುಪ್ಪಳಿಸುತ್ತಾ ತನ್ನ ತಂದೆ ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದಾರೆ ಎನ್ನುವ ಕೊರಗು ಅಮೂಲ್ಯಗೆ ಕಾಡುತ್ತಿತ್ತು ಆದರೆ ಅದನ್ನೆಲ್ಲ ವೇದಾಂತ ನಿವಾರಿಸುತ್ತಾನೆ. ಪರಿಮಳ ತನ್ನ ಗಂಡನನ್ನು ಬಾಚಿ ತಬ್ಬಿಕೊಂಡು ಕಣ್ಣೀರು ಇಡುತ್ತಾಳೆ. ಮುಂದೇನು ಕಾದು ನೋಡಬೇಕಿದೆ.


Click it and Unblock the Notifications











