Gattimela: ಅನುಜನ ನೆನಪಲ್ಲಿರುವ ವಿಕ್ರಾಂತ್; ವೇದಾಂತ್ ಬೇಸರಕ್ಕೆ ಕಾರಣ ಹುಡುಕುತ್ತಿರುವ ಅಮ್ಮು
ಗಟ್ಟಿಮೇಳ ಧಾರಾವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರ ಮನ ಸೆಳೆಯುವ ಹಾಗೆ ಮಾಡುತ್ತಿದೆ. ಇದೀಗ ವಿಕ್ರಾಂತ್ ಕಳೆದುಕೊಂಡ ವೇದಾಂತ್‌ಗೆ ದಿಕ್ಕೇ ತೋಚದಂತಾಗಿದೆ. ತನ್ನ ಜೀವಕ್ಕೆ ಜೀವ ಆಗಿರುವ ತನ್ನ ಅನುಜ ಇನ್ನುಮುಂದೆ ಇಲ್ಲ ಎಂದು ಹೇಳಿದಾಗ ವೇದಾಂತ್‌ಗೆ ಬಹಳ ಆತಂಕ ಆಗುತ್ತದೆ. ವಿಕ್ರಾಂತ್ ನಾನು ಜೀವಕ್ಕೆ ಜೀವ ಇರುವ ಹಾಗೆ ಎಂದೆಲ್ಲ ಹೇಳುತ್ತ ಇರುತ್ತಿದ್ದ ವೇದಾಂತಗೆ ಇದೀಗ ವಿಕ್ರಾಂತ್ ಇಲ್ಲ.
ವಿಕ್ರಾಂತ್ ಮೃತದೇಹ ಮನೆಗೆ ತರೋ ಹಾಗೆ ಇಲ್ಲ. ಯಾಕೆಂದರೆ ವಿಕ್ರಾಂತ್ ಹೆಂಡತಿ ಗರ್ಭಿಣಿ. ಆಕೆಗೆ ಏನು ಆಘಾತ ಆಗದ ಹಾಗೆ ನೋಡಿಕೊಂಡಿರುತ್ತಾನೆ. ಇನ್ನು ಆರತಿ ಮಾತ್ರಾ ವಿಕ್ರಾಂ ಆಗಾತ್‌ಗೆ ಆಗಾಗ ಕರೆ ಮಾಡುತ್ತಾ ಇರುತ್ತಾನೆ. ಆದರೆ ಆರತಿಯ ಕರೆ ಪಿಕ್ ಮಾತ್ರ ಮಾಡುತ್ತಾ ಇರಲಿಲ್ಲ. ಇದೆಲ್ಲವನ್ನು ನೋಡಿದ ಆರತಿ ನೀವು ದುಬೈನಿಂದ ಬನ್ನಿ ಆಮೇಲೆ ನಿಮ್ಮನ್ನು ನೋಡಿಕೊಳ್ಳುತ್ತೇನೆ ಎಂದು ಹೇಳುತ್ತಾಳೆ.

ಇನ್ನು ವಿಕ್ರಾಂತ್ ಇಲ್ಲ ಎನ್ನುವ ವಿಚಾರ ಆರತಿಗೆ ಗೊತ್ತೇ ಇಲ್ಲ. ವೇದಾಂತ ಮನೆಗೆ ಬಂದ ಬಳಿಕ ಬಹಳ ಬೇಸರ ಮಾಡಿಕೊಂಡಿರುತ್ತಾನೆ . ಅಮೂಲ್ಯ ಅದೆಷ್ಟೇ ಪ್ರಯತ್ನ ಮಾಡಿದರೂ ವೇದಾಂತ ಏನು ಉತ್ತರ ಕೊಡದೆ ಸುಮ್ಮನೆ ಇರುತ್ತಾನೆ. ಹೇಗೋ ವೇದಾಂತನನ್ನು ಊಟಕ್ಕೆ ಕರೆದುಕೊಂಡು ಬರುತ್ತಾಳೆ ಅಮೂಲ್ಯ. ಆದರೆ ಅಲ್ಲಿ ವೇದಾಂತಗೆ ವಿಕ್ರಾಂತ್ ನೆನಪು ಆಗುತ್ತದೆ
ನೆನಪಲ್ಲೇ ಇರುವ ಆ ವೇಳೆ ವೇದಾಂತಗೆ ದುಃಖ ಉಮ್ಮಳಿಸಿ ಬರುತ್ತದೆ ತನ್ನ ತಮ್ಮ ಇಲ್ಲ ನಾನು ಹೇಗೆ ಇರಲು ಎಂದುಕೊಂಡು ಊಟ ಮಾಡುವಲ್ಲಿಂದ ಎದ್ದು ಹೊರಗೆ ಹೋಗುತ್ತಾನೆ. ಇನ್ನು ವಿಕ್ರಾಂತ್ ಆಲೋಚನೆಯಲ್ಲಿ ವೇದಾಂತ ಮಲಗುತ್ತಾನೆ. ಇದ್ದನ್ನು ನೋಡಿದ ಅಮ್ಮು ಅಲ್ಲಿಗೆ ಬರುತ್ತಾಳೆ. ಏನು ರಾಯರು ಮಲಗಿದ್ದಾರಲ್ಲ ಯಾಕೆ ಏನಾಯಿತು ಎಂದೆಲ್ಲ ಯೋಚನೆ ಮಾಡುತ್ತಾ ಇರುತ್ತಾಳೆ.
ಆ ಬಳಿಕ ವೇದಾಂತ ಹತ್ತಿರಕ್ಕೆ ಬಂದು ತೊಂದರೆ ಕೊಡುತ್ತಾ.. ತುಂಟಾಟ ಮಾಡುತ್ತಾ ಇರುತ್ತಾಳೆ. ಆದರೆ ವೇದಾಂತನಿಗೆ ಇದು ತಿಳಿಯುತ್ತದೆ ಆದರೂ ಗಾಢ ನಿದ್ದೆಯಲ್ಲಿರುವ ಹಾಗೆ ನಟನೆಯನ್ನು ಮಾಡುತ್ತಾನೆ. ಆದರೆ ಅಮೂಲ್ಯ ಮಾತ್ರ ಏನೇನೋ ಶಬ್ದಗಳನ್ನು ಮಾಡುತ್ತಾ ಇರುತ್ತಾಳೆ.
ಅಮೂಲ್ಯ ಮಾತ್ರ ವೇದಾಂತನನ್ನು ಎಚ್ಚರಗೊಳಿಸುವವರೆಗೂ ಸುಮ್ಮನೆ ಕೂರದೆ ಏನೇನೋ ತುಂಟಾಟ ಮಾಡುತ್ತ ಇರುತ್ತಾಳೆ. ಇನ್ನು ಅಮೂಲ್ಯ ತುಂಟಾಟ ತಡೆದುಕೊಳ್ಳದೆ ವೇದಾಂತ ಅಲ್ಲಿಂದ ಹೊರಟು ಹೋಗುತ್ತಾನೆ. ವೇದಾಂತ ಯಾವತ್ತೂ ಈ ರೀತಿ ನಡೆದುಕೊಂಡವನೆ ಅಲ್ಲ ಆದರೆ ಇದೀಗ ಯಾಕೆ ಈ ತರ ನಡೇದುಕೊಳ್ಳುತ್ತ ಇದ್ದಾರೆ ಏನಾಯಿತು. ನನ್ನ ಬಳಿ ಕೂಡವೇನು ವಿಚಾರ ಎನು ಹೇಳುತ್ತ ಇಲ್ಲ, ಹೇಗೆ ನಿಜ ಬಾಯಿ ಬಿಡಿಸುವುದು ಎಂದು ಯೋಚನೆ ಮಾಡುತ್ತಾ ಇರುತ್ತಾಳೆ.
ಸುಹಾಸಿನಿ ಅಟ್ಟಹಾಸಕ್ಕೆ ವಿಕ್ರಾಂತ್ ಹಾಗೂ ಆತನ ಗೆಳೆಯನ ಪ್ರಾಣ ಹಾರಿ ಹೋಗಿದೆ. ಆರತಿ ವಿಧವೆ ಆಗಿದ್ದಾಳೆ. ಹೊಟ್ಟೆಯಲ್ಲಿ ಮಗುವನ್ನು ಇಟ್ಟುಕೊಂಡ ಆರತಿ ತನ್ನ ಗಂಡನ ದಾರಿ ಕಾಯುತ್ತಾ ಇದ್ದಾಳೆ. ಯಾವತ್ತೂ ಹೀಗೆಲ್ಲ ನಡೆದುಕೊಂಡವರೆ ಅಲ್ಲ ಯಾವತ್ತೂ ಪ್ರೀತಿಯಿಂದ ಇರುತ್ತದ್ದರು ದಿನಕ್ಕೆ ಹತ್ತು ಬಾರಿ ಕರೆ ಮಾಡುತ್ತಾ ಇದ್ದರು, ಆದರೆ ಫೋನ್ ಇಲ್ಲ ಏನು ಇಲ್ಲ ಎಂದು ಯೋಚನೆ ಮಾಡುತ್ತಾ ಇರುತ್ತಾಳೆ ಆರತಿ. ವಿಕ್ರಾಂತ್ ಮಾತನಾಡಲು ಸಿಗಲಿಲ್ಲ ಎಂದು ಮನೆಯವರ ಮೇಲೆ ಕೂಗಾಡುತ್ತ ಇರುತ್ತಾಳೆ ಆರತಿ. ಇನ್ನು ಆರತಿಗೆ ನಿಜ ಗೊತ್ತಾದರೆ ಏನು ಗತಿ?


Click it and Unblock the Notifications











