Gattimela: ಆರತಿಗೆ ಗಂಡು ಮಗು ಜನನ; ಮಗನನ್ನು ಕಳೆದುಕೊಂಡ ವೈದೇಹಿ ಗೋಳಾಟಕ್ಕೆ ಕೊನೆ ಎಂದು?

By ಪೂರ್ವ

ಗಟ್ಟಿ ಮೇಳ ಧಾರವಾಹಿ ಬಹಳ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರ ಮನ ಸೆಳೆಯುವ ಹಾಗೆ ಮಾಡುತ್ತಿದೆ. ಇದೀಗ ವಿಕ್ರಾಂತ್ ಇನ್ನಿಲ್ಲ ಎಂಬ ವಿಚಾರವನ್ನು ವೇದಾಂತ ತನ್ನ ಅತ್ತೆ ಮಾವನ ಮನೆಯಲ್ಲಿ ಬಂದು ಹೇಳುತ್ತಾನೆ. ಆರತಿ ಇದಕ್ಕಿಂತ ಮುಂಚೆ ವಿಕ್ರಾಂತ್ ನ ಹುಡುಕಿಕೊಂಡು ಹೋಗಿದ್ದಳು.. ಇಂತಹದ್ದೇ ಘಟನೆಗಳು ಮರುಕಳಿಸದ ಹಾಗೆ ಇರಬೇಕು ಎಂದು ಹೇಳಿ ನಿಜ ವಿಚಾರವನ್ನು ಹೇಳಿದಾಗ ಪರಿಮಳ ಎದೆ ಹಿಡಿದುಕೊಂಡು ಕುಳಿತುಕೊಳ್ಳುತ್ತಾರೆ.

ತನ್ನ ಮಗಳಿಗೆ ಹೀಗೆ ಆಯಿತಲ್ಲ ಎಂದು ಬಹಳ ಬೇಶರಾಡಿಕೊಂದು ಇರುತ್ತಾರೆ.. ಪರಿಮಳ ಹಾಗೂ ಮಂಜುನಾಥ್.. ವಿಕ್ರಾಂತ್ ಬಂದೆ ಬಿಟ್ಟ ಎಂಬ ಖುಷಿಯಲ್ಲಿ ಆರತಿ ಓಡೋಡಿ ಬರುತ್ತಾಳೆ. ಆದರೆ ವಿಕ್ರಾಂತ್ ಫೋಟೋ ಗೆ ಹಾರ ಹಾಕಿರುವುದನ್ನು ನೋಡಿ ಗಾಬರಿ ಬೀಳುತ್ತಾಳೆ. ತಂದೆಯ ಬಳಿ ವಿಚಾರಣೆ ಮಾಡಿದಾಗ ವಿಕ್ರಾಂತ್ ಇನ್ನೂ ನೆನಪು ಮಾತ್ರ ಎಂಬ ವಿಚಾರ ಆಕೆಗೆ ತಿಳಿದು ಬಹಳ ವೇದನೆ ಪಡುತ್ತಾ ಇರುತ್ತಾಳೆ..

 Kannada serial Gattimela written update on 17th August

ಬಹಳ ಅಳುತ್ತಲೇ ಇರುತ್ತಾಳೆ ಆರತಿ... ಆ ವೇಳೆ ಆರತಿ ಗೆ ಹೆರಿಗೆ ನೋವು ಕೂಡ ಬಂದು ಬಿಡುತ್ತದೆ.. ಇನ್ನೂ ಇದನ್ನು ನೋಡಿದ ಪರಿಮಳ ಜೋರಾಗಿ ಹೇಳುತ್ತಾರೆ ಆರತಿ ಗೆ ಹೆರಿಗೆ ನೋವು ಶುರು ಆಗಿ ಬಿಟ್ಟಿದೆ ..ಸೂಲಗಿತ್ತಿ ಜಯಮ್ಮ ಅವರನ್ನು ಕರೆಯಿಸುವ ಏರ್ಪಾಡು ಮಾಡಿ ಎಂದು ಹೇಳಿ ವೇದಾಂತ ನ ಬಳಿ ಆರತಿಯನ್ನು ಬೇಡ ರೂಮ್ ಗೆ ಕರೆದುಕೊಂಡು ಹೋಗಲು ಹೇಳುತ್ತಾರೆ..

ವೇದಾಂತ ಆರತಿಯನ್ನು ಬೆಡ್ ನಲ್ಲಿ ಮಲಗಿಸುತ್ತಾರೆ. ಆರತಿ ಹೆರಿಗೆ ನೋವಿನಿಂದ ಬಹಳ ಅಳುತ್ತಾ ಇರಬೇಕಾದರೆ ಪರಿಮಳ ಮಾತ್ರ ತನ್ನ ಮಗಳಿಗೆ ಧೈರ್ಯದ ಮಾತುಗಳನ್ನು ಆಡುತ್ತಾಳೆ.. ಎನು ಆಗುವುದು ಇಲ್ಲ ಮಗಳೆ ಎಂದೆಲ್ಲ ಹೇಳುತ್ತ ಇರುತ್ತಾರೆ.. ಆಗ ಸೂಲಗಿತ್ತಿ ಜಯಮ್ಮ ಬರುತ್ತಾರೆ.. ಮಂಜುನಾಥ್ ಗೆ ಧೈರ್ಯ ಹೇಳಿದ ಜಯಮ್ಮ ಒಳಗೆ ಹೋಗಿ ಬಿಸಿ ನೀರು ತರಲು ಹೇಳುತ್ತಾರೆ.

ನೋವಿನಿಂದ ನರಳುತ್ತಾ ಇರುವ ಆರತಿಯನ್ನು ನೋಡಿದ ಜಯಮ್ಮ ಸಮಾಧಾನ ಮಾಡುತ್ತಾರೆ...ಇನ್ನೂ ಕೊನೆಗೆ ಜಯಮ್ಮ ಆರತಿ ಹೆರಿಗೆಯನ್ನು ಸುಲಲಿತವಾಗಿ ಮಾಡುತ್ತಾರೆ. ಇನ್ನೂ ಆರತಿಗೆ ಗಂಡು ಮಗು ಜನನ ಆಗುತ್ತದೆ. ಮಗುವನ್ನು ನೋಡಿ ಮನೆ ಮಂದಿ ಬಹಳ ಖುಷಿ ಪಡುತ್ತಾ ಇರುತ್ತಾರೆ.ವಿಕ್ರಾಂತ್ ಇದೀಗ ನೆನಪು ಮಾತ್ರ ಆದರೆ ಆತನ ಮಗುವನ್ನು ನೋಡಿಯಾದರೂ ಆತನನ್ನು ಮರೆಯುವ ಶಕ್ತಿ ಆರತಿ ಗೆ ಬರಲಿ ಎನ್ನುವುದು ಅಭಿಮಾನಿಗಳ ಹಾರೈಕೆ.

ಇನ್ನೂ ವಸಿಷ್ಠ ಕುಟುಂಬ ದವರು ಬಹಳ ದುಃಖ ಪಡುತ್ತಾ ಇರುತ್ತಾರೆ. ತನ್ನ ಮಗುವನ್ನು ಕಳೆದುಕೊಂಡ ವೈದೇಹಿ ಯ ಗೋಳಾಟ ಮಾತ್ರ ಹೇಳತೀರದು .. ಬಹಳ ಬೇಸರ ಮಾಡಿಕೊಂಡ ವೈದೇಹಿ ಮಾತ್ರ ತರ ಬಳಿಯೂ ಮಾತನಾಡದೆ ಮೌನವಾಗಿ ಇರುತ್ತಾಳೆ. ಇತ್ತ ಆರತಿ ಗೆ ಮಗು ಜನಿಸಿರುವ ಖುಷಿ..ಇನ್ನೊಂದು ಕಡೆ ವಿಕ್ರಾಂತ್ ಇನ್ನಿಲ್ಲ ಎನ್ನುವ ಬೇಸರವನ್ನು ಆರತಿ ಹಾಗೆಯೇ ವೈದೇಹಿ ಹೇಗೆ ತಡೆದುಕೊಳ್ಳುತ್ತಾರೆ. ಕಾದು ನೋಡಬೇಕಿದೆ.

More from Filmibeat

English summary
Kannada serial Gattimela written update on 17th August
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X