Gattimela: ಮಹದೇವಯ್ಯನ ಧ್ವನಿ ಅಮ್ಮುಗೆ ನೆನಪಾಗಿದೆ; ಇನ್ನಾದರೂ ಅಗ್ನಿಯಿಂದ ವೇದಾಂತನನ್ನು ಕಾಪಾಡುತ್ತಾಳಾ?

By Poorva

ಅಮೂಲ್ಯ ಬರಬೇಕಾದರೆ ಅಗ್ನಿ ಕೋರ್ಟ್‌ನಿಂದ ತೆರಳುತ್ತಾನೆ. ಇನ್ನು ವೇದಾಂತ ಬಳಿ ಅದ್ಯಾರು ಎಂದು ಕೇಳಿದಾಗ ಅವರು ನನಗೆ ಬೇಕಾದವರು, ಅಗ್ನಿ ಎಂಬುದು ಅವರ ಹೆಸರು ಎಂದು ಹೇಳುತ್ತಾನೆ. ಬಳಿಕ ಅಮೂಲ್ಯ ತಂದೆ ತಾಯಿಯನ್ನು ಮನೆಗೆ ಡ್ರಾಪ್ ಮಾಡಿ ಹೋಗೋಣ ಎಂದು ಹೇಳಿ ಅಲ್ಲಿಂದ ತೆರಳುತ್ತಾರೆ. ಮನೆಗೆ ಬಂದ ಮಂಜುನಾಥ್ ಸ್ವಲ್ಪ ಹೊತ್ತಿನ ಬಳಿಕ ಮನೆಯಿಂದ ಹೊರ ಹೋಗಲು ರೆಡಿ ಆಗುತ್ತಾನೆ..

ಆಗ ಅಲ್ಲಿಗೆ ಬಂದ ಪರಿಮಳ ಗಂಡನ ಬಳಿ ಎಲ್ಲಿ ಹೋಗುತ್ತಿರುವುದು ಎಂಬುವುದನ್ನು ವಿಚಾರಣೆ ಮಾಡುತ್ತಾಳೆ. ಆಗ ಮಂಜುನಾಥ್ ತಾನು ಕೆಲಸಕ್ಕೆ ಹೋಗಿ ಬರಬೇಕು, ಕೆಲಸಕ್ಕೆ ಹೋಗಲಿಲ್ಲ ಎಂದಾದರೆ ನಮಗೆ ತಿನ್ನಲು ಯಾರು ಕೊಡುತ್ತಾರೆ ಎಂದೆಲ್ಲ ಹೇಳಿದಾಗ ಪರಿಮಳ ಮಾತ್ರ ನೀವು ಎಲ್ಲಿಗೂ ಸಹ ಹೋಗುವುದು ಬೇಡ ಎಂದು ಖಡಕ್ ಆಗಿ ಹೇಳುತ್ತಾಳೆ. ಆದರೂ ಮಂಜುನಾಥ್ ಅದ್ಯಾವುದನ್ನೂ ಕೇಳಿಸಿಕೊಳ್ಳದೇ ಅಲ್ಲಿಂದ ಹೊರಡಬೇಕು ಎನ್ನುವಷ್ಟರಲ್ಲಿ ಅಲ್ಲಿಗೆ ಸೂಪರ್ ವೈಸರ್ ವಿಶ್ವನಾಥ್ ಬರುತ್ತಾರೆ. ವಿಶ್ವನಾಥ್ ಅವರನ್ನು ನೋಡಿ ಪರಿಮಳಗೆ ಶಾಕ್ ಆಗುತ್ತದೆ.

ಆದರೆ ಮಂಜುನಾಥ್ ಅವರನ್ನು ಒಳಗೆ ಕರೆಯುತ್ತಾನೆ. ಇದ್ಯಾವುದೂ ಪರಿಮಳಗೆ ಇಷ್ಟ ಆಗುವುದಿಲ್ಲ, ಆಕೆ ಕೋಪಗೊಂಡು ಒಂದೆರಡು ಮಾತುಗಳನ್ನು ಹೇಳುತ್ತಾಳೆ. ಆದರೆ ವಿಶ್ವನಾಥ್ ಅಳುತ್ತಾ ಹಾಗೆ ಆಗಲು ಕಾರಣ ತಿಳಿಸುತ್ತಾರೆ. ತನ್ನ ಹೆಂಡತಿ ಮಕ್ಕಳು ಸತ್ತು ಹೋಗುತ್ತ ಇದ್ದರು ಅದಕ್ಕಾಗಿ ಹಾಗೆ ಮಾಡಿದೆ, ಇದೀಗ ನಿಮ್ಮ ಮೇಲೆ ಸುಳ್ಳು ಆರೋಪ ಮಾಡಿದೆ ಎಂದು ನನ್ನ ಕೆಲಸ ಹೋಗುವ ಹಾಗಿದೆ, ಮಂಜುನಾಥ್ ನನ್ನ ಕೆಲಸ ಉಳಿಸಿಕೊಡಿ ಎಂದು ಹೇಳಿದಾಗ ಪರಿಮಳ ಮಂಜುನಾಥ್‌ನನ್ನು ನೋಡಿ ನೀವು ಕೆಲಸಕ್ಕೆ ಹೋಗುವುದು ಬೇಡ ಎಂದು ಹೇಳುತ್ತಾಳೆ.

ಆದರೆ ಮಂಜುನಾಥ್ ಪರಿಮಳಗೆ ಸಮಾಧಾನ ಮಾಡಿ ಅಲ್ಲಿಂದ ಆಫೀಸ್ಗೆ ತೆರಳುತ್ತಾನೆ. ಅವರಿಬ್ಬರೂ ಆಫೀಸ್‌ಗೆ ಹೋದ ಬಳಿಕ ಪರಿಮಳ ವಾಸ್ತವವನ್ನು ಅರ್ಥ ಮಾಡಿಕೊಂಡು ಸುಮ್ಮನೆ ಆಗುತ್ತಾಳೆ. ಇತ್ತ ಅಮೂಲ್ಯ ವೇದಾಂತ ನನ್ನು ತಬ್ಬಿ ಹಿಡಿದುಕೊಂಡು ಧನ್ಯವಾದ ಹೇಳುತ್ತಾಳೆ. ಇದನ್ನು ನೋಡಿದ ವೇದಾಂತಗೆ ಬಹಳ ಖುಷಿ ಆಗುತ್ತದೆ.

ಅಮೂಲ್ಯ ಜೊತೆ ಖುಷಿಯಲ್ಲಿ ಇರುವ ವೇದಾಂತ

ಅಮೂಲ್ಯ ಜೊತೆ ಖುಷಿಯಲ್ಲಿ ಇರುವ ವೇದಾಂತ

ಆತ ಕೂಡ ಹುಡುಗಾಟದ ಒಂದೆರಡು ಮಾತುಗಳನ್ನು ಮೆತ್ತಗೆ ಅಮೂಲ್ಯ ಕಿವಿಯಲ್ಲಿ ಹೇಳುತ್ತಾನೆ. ಬಳಿಕ ಅಮೂಲ್ಯ ಹಣೆಗೆ ಮುತ್ತಿಕ್ಕಿ ಅಲ್ಲಿಂದ ತೆರಳುತ್ತಾನೆ. ಇನ್ನು ವಿಕ್ರಾಂತ್ ಏನಾದರು ತಿನ್ನಬೇಕಂತೆ ಎಂದು ಹೇಳಿಕೊಂಡು ಆರತಿ ತಿಂಡಿ ಡಬ್ಬ ಹುಡುಕುತ್ತಾ ಇರುತ್ತಾಳೆ. ಡಬ್ಬ ಕೊಂಚ ಮೇಲೆ ಇದ್ದ ಕಾರಣ ಅದನ್ನು ತೆಗೆಯಲು ಸ್ಟೂಲ್ ಇಟ್ಟು ನೋಡುತ್ತಾಳೆ. ಸ್ಟೂಲ್‌ನಿಂದ ಆಯತಪ್ಪಿ ಬೇಳಬೇಕು ಎನ್ನುವಷ್ಟರಲ್ಲಿ ಅಲ್ಲಿಗೆ ವೈದೇಹಿ ಬಂದು ಆರತಿಗೆ ಒಂದೆರಡು ಮಾತು ಬುದ್ದಿವಾದ ಹೇಳುತ್ತ ಇರುವಾಗ ವಿಕ್ರಾಂತ್ ಅಲ್ಲಿಗೆ ಬರುತ್ತಾನೆ.

ವಿಕ್ರಾಂತ್‌ಗೆ ಬುದ್ದಿ ಹೇಳಿದ ವೈದೇಹಿ

ವಿಕ್ರಾಂತ್‌ಗೆ ಬುದ್ದಿ ಹೇಳಿದ ವೈದೇಹಿ

ವೈದೇಹಿ ವಿಕ್ರಾಂತ್‌ಗೆ ಸರಿಯಾಗಿ ಕ್ಲಾಸ್ ತೆಗೆದುಕೊಳ್ಳುತ್ತಾಳೆ. ಬಸಿರು ಆಗಿರುವ ಹೆಂಡತಿಯನ್ನು ಬಹಳ ಮುದ್ದಾಗಿ ನೋಡಿಕೊಳ್ಳಬೇಕು, ಯಾವತ್ತೂ ಏನೂ ಕೊರತೆ ಬಾರದ ಹಾಗೆ ನೋಡಿಕೊಳ್ಳಬೇಕು, ನೀನು ನೋಡಿದರೆ ಅವಳಿಂದ ಕೆಲಸ ಮಾಡಿಕೊಳ್ಳುತ್ತಾ ಇದ್ದೀಯಾ ಇದು ಸರಿಯಲ್ಲ, ಆರತಿ ಎಲ್ಲಾದರೂ ಸ್ಟೂಲ್‌ನಿಂದ ಬಿದ್ದಿದ್ದರೆ ಏನು ಮಾಡುತ್ತಾ ಇದ್ದೆ ಎಂದು ಜೋರಾಗಿ ಹೇಳುತ್ತಾಳೆ.

ವಾಸ್ತವತೆ ಅರಿತ ವೈದೇಹಿ

ವಾಸ್ತವತೆ ಅರಿತ ವೈದೇಹಿ

ಇದನ್ನು ಕೇಳಿದ ವಿಕ್ರಾಂತ್ ವೈದೇಹಿ ಬಳಿ ಕ್ಷಮೆ ಕೇಳುತ್ತಾನೆ. ಇನ್ನು ವೈದೇಹಿ ಮೆತ್ತಗೆ ನಾನು ಕೆಲಸದಾಕೆ ಕೆಲಸದಾಕೆ ಎಷ್ಟು ಇರಬೇಕೋ ಅಷ್ಟು ಇರಬೇಕು ಅಮ್ಮ ಆಗಲು ಹೋಗಬಾರದು ಎಂದು ಮೆತ್ತಗೆ ಹೇಳಿದಾಗ ವಿಕ್ರಾಂತ್ ನೀವು ಅಮ್ಮನಿಗಿಂತ ಒಂದು ಪಟ್ಟು ಹೆಚ್ಚು ಎಂದು ಹೆಮ್ಮೆಯಿಂದ ಹೇಳುತ್ತಾನೆ. ಇದನ್ನು ಕೇಳಿ ವೈದೇಹಿಗೆ ಬಹಳ ಖುಷಿ ಆಗುತ್ತದೆ. ಅಮೂಲ್ಯ ಏನೋ ಯೋಚನೆ ಮಾಡುತ್ತಾ ಇರುತ್ತಾಳೆ. ಆಗ ಅಲ್ಲಿಗೆ ಬಂದ ವಿಕ್ರಾಂತ್ ಅಮೂಲ್ಯ ಕಾಲು ಎಳೆಯುತ್ತಾರೆ. ಆದರೆ ಅಮೂಲ್ಯ ಮಾತ್ರ ಕರೆಯಲ್ಲಿ ಯಾರು ಮಾತನಾಡಿ ಇರಬಹುದು ನನಗೆ ಅವರ ಧ್ವನಿ ಎಲ್ಲೋ ಕೇಳಿದ್ದೇನೆ ಯಾರು ಇರಬಹುದು ಎಂದು ಯೋಚನೆ ಮಾಡುತ್ತಾ ಇರುವಾಗ ವಿಕ್ರಾಂತ್ ಆಕೆಯ ಬಳಿ ಏನು ವಿಚಾರ ಎಂಬುವುದು ಕೇಳುತ್ತಾರೆ. ಆಕೆಗೆ ಮಹದೇವಯ್ಯನ ಧ್ವನಿ ನೆನಪಾಗಿ ನನ್ನ ಬಳಿ ಮಾತನಾಡಿದ್ದು ಮಹಾದೇವನಾ ಎಂದು ಒಮ್ಮೆಲೆ ವಿಕ್ರಾಂತ್ ಬಳಿ ಹೇಳುತ್ತಾಳೆ.

More from Filmibeat

English summary
Kannada serial gattimela written updated on 17th February
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X