Gattimela: ಅಮೂಲ್ಯ ಮುಂದೆ ಸುಹಾಸಿನಿ ಬಂಡವಾಳ ಬಯಲು; ಅಗ್ನಿಯನ್ನು ಕಾಡುತ್ತಿರುವ ವೇದಾಂತನ ಮುಂದಿನ ಗುರಿ ಏನು?
ಗಟ್ಟಿ ಮೇಳ ಧಾರಾವಾಹಿ ನೋಡುಗರಿಗೆ ಕುತೂಹಲ ಮೂಡಿಸುತ್ತಿದೆ. ಹೌದು ಇದೀಗ ಅಮ್ಮು ಸುಹಾಸಿನಿ ಮುಖವಾಡ ಕಳಚಿ ಎಳೆ ಎಳೆಯಾಗಿ ಬಿಚ್ಚಿಡುತ್ತಿದ್ದಾಳೆ. ವೇದಾಂತ್ ಅಗ್ನಿಯ ಚಳಿ ಬಿಡಿಸುತ್ತಿದ್ದಾನೆ. ಅಗ್ನಿ ವೇದಾಂತನನ್ನು ನೋಡಿ ಬಹಳ ಭಯ ಪಟ್ಟುಕೊಂಡಿರುತ್ತಾನೆ.
ಹೌದು ವಿಕ್ರಾಂತ್ ನನ್ನು ಕೊಲೆ ಮಾಡಿಸಿದ್ದು ಅಗ್ನಿ ಹಾಗೂ ಸುಹಾಸಿನಿ. ಅದ್ಯಾಕೋ ವೇದಾಂತನಿಗೆ ಅಗ್ನಿಯ ಮೇಲೆ ಅನುಮಾನ ಶುರು ಆದ ಹಾಗೆ ಕಾಣುತ್ತಿದೆ. ವೇದಾಂತ ಕ್ಷಣ ಕ್ಷಣಕ್ಕೂ ಅಗ್ನಿಯನ್ನು ಕಾಡುತ್ತಾ ಇರುತ್ತಾನೆ. ಇನ್ನು ಸುಹಾಸಿನಿ ಹತ್ತಿರ ಬಂದ ಅಮೂಲ್ಯ ಇಂಚಿಂಚು ಸುಹಾಸಿನಿ ಮಾಡಿರುವ ಕೆಸಸವನ್ನು ಬಿಚ್ಚಿಡುತ್ತಾಳೆ.

ಸುಹಾಸಿನಿ ವೇದಾಂತನ ಬಳಿ ಸಿಕ್ಕಾಪಟ್ಟೆ ಹಣ ಪಡೆದುಕೊಂಡಿರುತ್ತಾಳೆ. ಸುಹಾಸಿನಿ ಚಾರಿಟಬಲ್ ಟ್ರಸ್ಟ್ ಎನ್ನುವಂತಹ ಒಂದು ಸುಳ್ಳನ್ನು ಹೇಳಿಕೊಂಡು ಸಿಕ್ಕಾಪಟ್ಟೆ ಹಣ ಮಾಡಿಕೊಂಡಿರುತ್ತಾಳೆ. ಇದೆಲ್ಲದಕ್ಕೂ ಒಂದು ನಕಲಿ ಸರ್ಟಿಫಿಕೇಟ್ ಅನ್ನು ಮಾಡಿಸಿಕೊಂಡಿರುತ್ತಾಳೆ. ಇದೆಲ್ಲವನ್ನೂ ಒಂದು ಫೈಲ್ ನಲ್ಲಿ ಇಟ್ಟಿರುತ್ತಾರೆ ಕೂಡ. ಆ ಫೈಲ್ ಎಷ್ಟು ಹುಡುಕಿದರೂ ಕೈಗೆ ಸಿಗುವುದಿಲ್ಲ.
ಇದನ್ನು ನೋಡಿದ ಅಮೂಲ್ಯ ಒಂದು ಫೈಲ್ ಅನ್ನು ಅವರ ಮುಂದೆ ತಂದು ಇಡುತ್ತಾಳೆ. ಇದನ್ನು ನೋಡಿದ ಸುಹಾಸಿನಿ ಗೆ ಶಾಕ್ ಆಗಿ ಹಿಂದೆ ತಿರುಗಿ ನೋಡಿದಾಗ ಅಮೂಲ್ಯ ಇರುತ್ತಾಳೆ. ಅಮೂಲ್ಯಳನ್ನು ನೋಡಿದ ಸುಹಾಸಿನಿ ಮಾತ್ರ ಒಮ್ಮೆಗೇ ಏನು ಹೇಳುವುದು ಎಂದು ತಿಳಿಯದೇ ಅಮೂಲ್ಯ ಮುಖ ನೋಡುತ್ತಾಳೆ. ಅಮೂಲ್ಯ ಯಾಕತ್ತೆ ಸುಳ್ಳು ಮೇಲೆ ಸುಳ್ಳು ಹೇಳುತ್ತ ಇದ್ದೀರಿ ಇದರಿಂದ ನಿಮಗೆ ಆಗುವ ಲಾಭ ಆದರೂ ಏನು ಎಂದು ಕೇಳಿದಾಗ ಸುಹಾಸಿನಿ ಏನು ಸುಳ್ಳು ಹೇಳದೆ ಇರುವವರ ಹಾಗೆ ನಾಟಕ ಮಾಡುತ್ತ ಇರುತ್ತಾಳೆ.
ಇದನ್ನು ನೋಡಿದ ಅಮೂಲ್ಯ ಹೇಳದೆ ಬಡ ಮಕ್ಕಳಿಗೆ ಸಹಾಯ ಆಗುತ್ತೆ ಎಂದು ಟ್ರಸ್ಟ್ ಓಪನ್ ಮಾಡುತ್ತೇನೆ ಎಂದು ಹೇಳಿ ಸುಳ್ಳು ಹೇಳಿದಿರಿ ಯಾಕೆ ಹಾಗೆಯೇ ವೇದಾಂತನ ಬಳಿ ಅಷ್ಟೆಲ್ಲ ಹಣ ಕೇಳುವ ಅನಿವಾರ್ಯತೆ ಏನಿತ್ತು, ಹಾಗೆಯೇ ನಿಮ್ಮ ಅಕೌಂಟ್‌ನಿಂದ ಅಗ್ನಿ ಗೆ ಹಣ ಹಾಕಿದ್ದು ಯಾಕೆ ಎಂದೆಲ್ಲ ಪ್ರಶ್ನೆ ಮೇಲೆ ಪ್ರಶ್ನೆ ಮಾಡಿದಾಗ ಸುಹಾಸಿನಿಗೆ ಮಾತ್ರ ಏನು ಹೇಳಬೇಕು ತಿಳಿಯದ ಹಾಗೆ ಆಗುತ್ತದೆ .
ಇತ್ತ ಅಗ್ನಿ ಒಬ್ಬನೇ ಕುಳಿತಿರುತ್ತಾನೆ. ಯಾಕೋ ಏನೋ ಬಾಯಾರಿಕೆ ಆಗುತ್ತದೆ. ಆಗ ಆತನ ಜೊತೆಗಾರರರನ್ನು ಕರೆಯುತ್ತಾನೆ. ಆದರೆ ಅಲ್ಲಿ ಯಾರೂ ಇರದ್ದನ್ನು ಕಂಡು ಗಾಬರಿ ಆಗುತ್ತಾನೆ.. ಆಗ ಅಲ್ಲಿಗೆ ವೇದಾಂತ ಬಂದು ನಿಂತಿದ್ದನ್ನು ಕಂಡ ಅಗ್ನಿ ಭಯದಿಂದ ತತ್ತರಿಸಿ ಹೋಗುತ್ತಾನೆ.. ತನ್ನ ತಮ್ಮನ ಸಾವಿಗೆ ಕಾರಣ ಈತನೇ ಯಾಕೆ ನನ್ನ ತಮ್ಮನನ್ನು ಕೊಂದ ... ಕಾರಣ ಆದರೂ ಎನು ಎಂದೆಲ್ಲ ಕೇಳಬೇಕು ಎನ್ನಿಸಿದರೂ ವೇ ಮಾತ್ರ ಆತನನ್ನು ಸಾಯಿಸಿ ಬಿಡುವಷ್ಟರ ಮಟ್ಟಿಗೆ ಕೋಪ ಬಂದಿರುತ್ತದೆ.


Click it and Unblock the Notifications











