Gattimela: ಮಗುವಿಗಾಗಿ ಮನೆ ಮಂದಿ ಧರಣಿ; ವೇದಾಂತ್ ಅಮ್ಮುಗೆ ಬಿಗ್ ಶಾಕ್!
ಗಟ್ಟಿಮೇಳ ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರ ಗಮನ ಸೆಳೆಯುವ ಹಾಗೆ ಮಾಡುತ್ತಿದೆ. ಇದೀಗ ಮನೆ ಮಂದಿ ಎಲ್ಲರೂ ನಮಗೆ ಮಗು ಬೇಕು ಎಂದು ಹಠ ಮಾಡುತ್ತಾ ಇದ್ದಾರೆ. ಹಾಗೆಯೇ ವೇದಾಂತ್ ಹಾಗೂ ರೌಡಿ ಬೇಬಿ ಅಮೂಲ್ಯ ಬಳಿ ಮನೆ ಮಂದಿ ಗಲಾಟೆ ಮಾಡುತ್ತಾ ಇದ್ದಾರೆ. ಅಜ್ಜಿ ನನಗೆ ಮೊಮ್ಮಗ ಬೇಕೆ ಬೇಕು ಎಂದು ಹಠ ಮಾಡಿದರೆ ಮತ್ತೆ ಕೆಲವರು ನಿಮ್ಮ ಇಬ್ಬರಿಗೂ ಮಕ್ಕಳು ಆಗಬೇಕು ಎಂದು ಹೇಳುತ್ತಾರೆ.
ಇದನ್ನು ಕೇಳಿದ ವೇದಾಂತ್ ತಲೆ ಕೆಟ್ಟು ಹೋಗುತ್ತದೆ. ಸಡನ್ ಆಗಿ ನಮಗೆ ಮಕ್ಕಳು ಬೇಕು ಅಂದರೆ ಮಗುವನ್ನು ಕೊಡುವುದಾದರೆ ಹೇಗೆ ಈ ಯೋಚನೆ ಯಾಕೆ ಆದರೂ ಇವರ ಮನಸ್ಸಿಗೆ ಬಂದಿದೆಯೋ ನಾನು ಕಾಣೆ ಎಂದು ಸಿಡಿಮಿಡಿಗೊಳ್ತಾನೆ. ಹಾಗೆಯೇ ರೂಮಿಗೆ ಬಂದು ನೋಡಿದರೆ ತೊಟ್ಟಿಲು ಅದರ ಒಳಗೆ ಬೇಬಿ ಡಾಲ್ ಹಾಗೆಯೇ ಮಗುವಿನ ಸಣ್ಣ ಸಣ್ಣ ಬಟ್ಟೆಗಳು ಇದೆಲ್ಲವನ್ನೂ ನೋಡಿದ ಅಮೂಲ್ಯ ಕಳೆದು ಹೋದರೆ ವೇದಾಂತ ಮಾತ್ರ ಸಿಡುಕುತ್ತ ಇರುತ್ತಾನೆ.

ಮನೆಯವರೆಲ್ಲ ಯಾಕೆ ಬುದ್ದಿ ಇಲ್ಲದವರ ಹಾಗೆ ಆಡುತ್ತಿದ್ದಾರೆ ಎಂದು ತಲೆಕೆಡಿಸಿಕೊಂಡಿಕೊಂಡಿರುತ್ತಾನೆ. ಇನ್ನು ಪರಿಮಳ ಹಾಗೂ ಮಂಜುನಾಥ್‌ಗೆ ಇನ್ನೊಂದು ಚಿಂತೆ ತನ್ನ ಮಗಳ ಸೀಮಂತದ ಚಿಂತೆ. ಮಗಳ ಸೀಮಂತಕ್ಕೆ ಸುಹಾಸಿನಿ ಬರಬೇಡ ಎಂದು ಹೇಳಿದ್ದಾಳೆ, ಅದು ಹೇಗೆ ಆಗುತ್ತದೆ ಎಂದು ಪರಿಮಳ ಹೇಳುತ್ತ ಇರುತ್ತಾಳೆ.
ಇತ್ತ ಮಂಜುನಾಥ್ ಹೆಣ್ಣು ಕೊಟ್ಟಿದ್ದೇವೆ ಆದರೆ ಕೊಟ್ಟ ಹೆಣ್ಣು ಕುಲದಿಂದ ಹೊರಕ್ಕೆ ಅವರು ಬರಬೇಡಿ ಎಂದು ಹೇಳಿದ ಬಳಿಕ ಅಲ್ಲಿಗೆ ಹೋಗುವುದು ಸರಿ ಇಲ್ಲ ಹಾಗೆಯೇ ಅದಿತಿ ಬಗ್ಗೆ ಕೆಟ್ಟದಾಗಿ ಆಡಿರುವ ಮಾತಿನಿಂದ ಪರಿಮಳಗೆ ಬಹಳ ಬೇಸರ ಆಗಿರುತ್ತದೆ, ಆದರೆ ಈ ವಿಚಾರ ಎಲ್ಲಾ ಮಂಜುನಾಥ್‌ಗೆ ಮೊದಲೇ ತಿಳಿದಿತ್ತು, ಆದರೆ ಯಾರಿಗೆ ತಿಳಿಯಬಾರದು ಎಂದುಕೊಂಡು ಇದ್ದಾನೋ ಅವರಿಗೆ ತಿಳಿದೇ ಹೋಯಿತು ಆ ಕಾರಣಕ್ಕೆ ಬಹಳ ಬೇಸರ ಪಟ್ಟುಕೊಂಡಿರುತ್ತಾನೆ.

ಇನ್ನು ವೇದಾಂತ್‌ಗೆ ಹೊಟ್ಟೆ ಹಸಿವು ಆಗುತ್ತದೆ. ಅಮ್ಮು ಹಾಗೂ ವೇದಾಂತ ಊಟ ಮಾಡಲು ಡೈನಿಂಗ್ ರೂಮ್ ಗೆ ಬರುತ್ತಾರೆ. ಆಗ ಮನೆ ಮಂದಿ ಎಲ್ಲಾ ಕುಳಿತಿರುತ್ತಾರೆ. ಕಾಂತನ ಬಳಿ ಊಟ ಆಯಿತಾ ಕಾಂತ ಎಂದು ಕೇಳುತ್ತಾರೆ. ಇದನ್ನು ಕೇಳಿದ ಕಾಂತ ಎರಡು ಬಾರಿ ಆಯಿತು ಎಂದು ಹೇಳುತ್ತಾನೆ. ಇದನ್ನು ಕೇಳಿದ ವೇದಾಂತ ವೈದೇಹಿ ಬಳಿ ತುಂಬಾ ಹಸಿವು ಆಗುತ್ತಿದೆ ಊಟ ಕೊಡುತ್ತೀರಾ ಎಂದು ಕೇಳುತ್ತಾನೆ. ಇದನ್ನು ಕೇಳಿದ ವೈದೇಹಿ ಊಟ ತರಲು ಹೋಗುತ್ತಾಳೆ .
ಬಳಿಕ ಚಿಕ್ಕ ಚಿಕ್ಕ ಬೌಲ್ ನಲ್ಲಿ ಊಟ, ಸಾಂಬಾರ್ ಇದೆಲ್ಲವನ್ನೂ ತರುತ್ತಾಳೆ. ಇದನ್ನು ನೋಡಿದ ವೇದಾಂತ ಅಮ್ಮುಗೆ ಶಾಕ್ ಆಗುತ್ತದೆ ಏನಿದು ನನಗೆ ತುಂಬಾ ಹೊಟ್ಟೆ ಹಸಿವು ಆಗುತ್ತಿದೆ ದಯವಿಟ್ಟು ನನಗೆ ಊಟ ಕೊಡಿ ಎಂದಾಗ ಆದ್ಯ ನಗುತ್ತಾಳೆ. ಅಣ್ಣ ನೀವಿಬ್ಬರೂ ಮಗು ಮಾಡಿಕೊಳ್ಳಬೇಕು, ಸ್ವಲ್ಪ ಆ ಕಡೆಗೂ ಗಮನ ಕೊಡಬೇಕು ಎಂಬುವುದು ನಮ್ಮ ಆಸೆ ಹಾಗೂ ಆರ್ಡರ್ ಕೂಡ, ನೀನು ಅದಕ್ಕೆ ಆಯಿತು ಅನ್ನುವವರೆಗೂ ನಮ್ಮ ಧರಣಿ ನಡೆಯುತ್ತಲೇ ಇರುತ್ತದೆ, ದಯವಿಟ್ಟು ಒಪ್ಪಿಕೊ ಎಂದಾಗ ವೇದಾಂತಗೆ ಇದೆಂತ ದೊಡ್ಡ ತಲೆ ನೋವು ಎಂದು ಯೋಚನೆ ಮಾಡುತ್ತಾ ಇರುತ್ತಾನೆ.
ಬಳಿಕ ಅಜ್ಜಿ ಮಾತ್ರ ಮಗು ಬೇಕು ಎಂಬ ಘೋಷಣೆ ಕೂಗುತ್ತ ಇರುತ್ತಾರೆ. ಬೇಕೆ ಬೇಕು ಮಗು ಬೇಕು ಎಂದು ಹೇಳುತ್ತ ಇರುತ್ತಾರೆ. ಇದನ್ನು ಕೇಳಿದ ಅಮ್ಮು ವೇದಾಂತ ಮುಂದೆ ಎನು ಮಾಡುತ್ತಾರೆ ಕಾದು ನೋಡಬೇಕಿದೆ.


Click it and Unblock the Notifications











