Gattimela: ಅಮೂಲ್ಯಗೆ ಮಹಾದೇವನ ಮೇಲೆ ಅನುಮಾನ; ವೇದಾಂತ್ ಎದುರು ಸಿಕ್ಕಿಹಾಕಿಕೊಳ್ತಾಳಾ ಸುಹಾಸಿನಿ?
ಸುಹಾಸಿನಿ, ಅಮೂಲ್ಯ ಹಾಗೂ ವಿಕ್ರಾಂತ್ ಬೆಂಕಿ ಮಹಾದೇವನೇ ಅಗ್ನಿ ಎಂದು ಅನುಮಾನಗೊಂಡು ಸಿಸಿ ಕ್ಯಾಮರಾ ಚೆಕ್ ಮಾಡಲು ಹೋಗುತ್ತಾರೆ. ಆದರೆ ಅಮೂಲ್ಯ ಹಾಗೂ ವಿಕ್ರಾಂತ್ ಮಾತನಾಡುತ್ತಾ ಇರುವುದನ್ನು ಕೇಳಿಸಿಕೊಂಡ ಸುಹಾಸಿನಿಗೆ ಬಹಳ ಭಯ ಆಗುತ್ತದೆ. ಹಾಗೆಯೇ ಮಾತೇ ಹೊರಡದ ಹಾಗೆ ಆಗುತ್ತದೆ. ಇನ್ನು ಅಮೂಲ್ಯ ಹಾಗೂ ವಿಕ್ರಾಂತ್ ಸಿಸಿ ಕ್ಯಾಮರಾ ಫುಟೇಜ್ ಅನ್ನು ಹುಡುಕುತ್ತಾ ಇರುತ್ತಾರೆ. ಇಷ್ಟಿರುವಾಗ ಯಾವ ದಿನಾಂಕದಂದು ಬೆಂಕಿ ಮಹಾದೇವ ಬಂದಿರಬಹುದು ಮನೆಗೆ ಎಂದು ಯೋಚನೆ ಮಾಡುತ್ತಾ ಇರುತ್ತಾರೆ.
ಇನ್ನು ವೇದಾಂತ ಹಾಗೂ ಅಗ್ನಿ ಸರಕಾರಿ ಜಾಮೀನು ಖರೀದಿ ಮಾಡಲು ಬಿಡ್ಡಿಂಗ್ ಇರುತ್ತದೆ ಬಿಡ್ಡಿಂಗ್ ಮಾಡುವ ವೇಳೆ ಅನೇಕ ಜನ ಇದು ನಮಗೆ ಆಗುವ ಕೆಲಸ ಅಲ್ಲ ಎಂದುಕೊಂಡು ಅಲ್ಲಿಂದ ಹೋದರೆ ಅಗ್ನಿ ಹಾಗೂ ವೇದಾಂತ ಮಾತ್ರ ಒಬ್ಬರಾದ ಮೇಲೆ ಒಬ್ಬರು ಬಿಡ್ಡಿಂಗ್ ಕರೆಯುತ್ತಾ ಇರಬೇಕಾದರೆ ವೇದಾಂತ ಬಿಡ್ಡಿಂಗ್ ಕರೆಯುವುದು ನಿಲ್ಲಿಸುತ್ತಾನೆ. ಯಾಕೆ ಎಂದರೆ ಇನ್ನೂ ಇದಕ್ಕೆ ಬೆಲೆ ಜಾಸ್ತಿ ಕೊಟ್ಟರೆ ನನಗೆ ಲಾಸ್ ಎಂದು ಹೇಳುತ್ತಾನೆ. ಇದನ್ನು ನೋಡಿದ ಅಗ್ನಿಗೆ ನಗು ಬರುತ್ತದೆ. ಅಗ್ನಿ ಹತ್ತಿರ ಬಂದ ವೇದಾಂತ ಕಂಗ್ರಾಜುಲೇಶನ್ ಎಂದು ಹೇಳುತ್ತಾನೆ.
ಇದನ್ನು ಕೇಳಿದ ಅಗ್ನಿ ಮೆತ್ತಗೆ ಏನು ವೇದಾಂತ ಅವರೇ ಬೇಸರ ಪಟ್ಟುಕೊಂಡು ಇದ್ದೀರಾ ನಿಮ್ಮ ತಂಗಿಗಾಗಿ ಈ ಆಸ್ತಿಯನ್ನು ತೆಗೆದುಕೊಳ್ಳಲು ಬಂದಿದ್ದೀರಾ ಅದು ಕೈ ತಪ್ಪಿ ಹೋಯಿತು ಎಂದು ಬೇಸರವೇ, ಹಾಗಾದರೆ ನಿಮಗೆ ನಾನು ಈ ಆಸ್ತಿಯನ್ನು ಕೊಡುತ್ತೇನೆ ಎಂದಾಗ ವೇದಾಂತ ಅಗ್ನಿ ಬಳಿ ನಾನು ನಿಮಗೆ ಹತ್ತು ಲಕ್ಷ ಜಾಸ್ತಿ ಕೊಡುತ್ತೇನೆ ಹಾಗಿದ್ದರೆ ಮಾತ್ರ ಎಂದಾಗ ಆಯಿತು ಎಂದು ಹೇಳಿದಾಗ ಅಗ್ನಿ ಒಪ್ಪಿಕೊಳ್ಳುತ್ತಾನೆ. ಈ ವೇಳೆ ಸುಹಾಸಿನಿ ಅಗ್ನಿಗೆ ಕರೆ ಮಾಡಿ ಇವತ್ತು ನಾವು ಸಿಕ್ಕಿ ಹಾಕಿಕೊಳ್ಳುವ ಪ್ರಸಂಗ ಬಂದಿದೆ ವಿಕ್ರಾಂತ್ ಹಾಗೂ ಅಮೂಲ್ಯಗೆ ಇದೀಗ ಸಂಶಯ ಬಂದಿದೆ ಎನ್ನುತ್ತಾಳೆ.

ಅಮ್ಮು ವರ್ತನೆ ನೋಡಿ ಭಯಗೊಂಡ ಸುಹಾಸಿನಿ
ಇಬ್ಬರೂ ಸಿಸಿ ಕ್ಯಾಮರಾವನ್ನು ಅವರು ಚೆಕ್ ಮಾಡುತ್ತ ಇದ್ದಾರೆ ಎಂದು ಗಾಬರಿಗೊಂಡ ಸುಹಾಸಿನಿ ಹೇಳುತ್ತಾಳೆ. ಇದನ್ನು ಕೇಳಿದ ಅಗ್ನಿ ನೀನು ಸಿಸಿ ಕ್ಯಾಮರಾದ ಪಾಸ್ವರ್ಡ್ ಅನ್ನು ಕೊಡು ನಾನು ಅದನ್ನು ಡಿಲೀಟ್ ಮಾಡಿಸುತ್ತೇನೆ ಎನ್ನುತ್ತಾನೆ. ಇದನ್ನು ಕೇಳಿದ ಸುಹಾಸಿನಿ ಪಾಸ್ವರ್ಡ್ ಅನ್ನು ಹೇಳುತ್ತಾಳೆ. ಬಳಿಕ ಸುಮ್ಮನೆ ಆಗುತ್ತಾರೆ. ಅಮೂಲ್ಯ ಇದೇ ಸಮಯಕ್ಕೆ ವೇದಾಂತನಿಗೆ ಕರೆ ಮಾಡಿ ವೇದಾಂತ ನಿಮ್ಮನ್ನು ಕಿಡ್ನಾಪ್ ಮಾಡಿದವರು ತೊಂಬತ್ತು ಪರ್ಸೆಂಟ್ ಸಿಕ್ಕಿ ಹಾಕಿಕೊಳ್ಳತ್ತಾ ಇದ್ದಾರೆ ನೀವು ಆದಷ್ಟು ಬೇಗ ಮನೆಗೆ ಬನ್ನಿ ಎಂದು ಹೇಳಿದಾಗ ವೇದಾಂತಗೆ ತಲೆ ಕೆಟ್ಟು ಹೋಗುತ್ತದೆ.

ಅಗ್ನಿ ಮೇಲೆ ವೇದಾಂತನಿಗೆ ಮೂಡುತ್ತಾ ಅನುಮಾನ?
ಇನ್ನು ವೇದಾಂತ ಅಲ್ಲಿಂದ ಹೋರಾಡಬೇಕಾದರೆ ಅಗ್ನಿ ನೀನು ಎಷ್ಟೇ ಕೆಲಸ ಮಾಡಿದರೂ ನಿನ್ನನು ತುಳಿಯಲು ನಾನು ರೆಡಿ ಆಗಿ ಇದ್ದೇನೆ ಎಂದು ನಗುತ್ತಾ ಅಂದುಕೊಳ್ಳುತ್ತಾ ಇರುವಾಗ ವೇದಾಂತ ಹೊರಡಲು ಅನುವಾಗುತ್ತಾ ಇರುತ್ತಾನೆ. ಇನ್ನು ವೇದಾಂತನ ಹತ್ತಿರ ಬಂದ ಅಗ್ನಿ ಹಾಗಾದರೆ ನಾವಿನ್ನು ಬರುತ್ತೇವೆ ಎಂದು ಹೇಳಿದಾಗ ಸಾರ್ಥಕ್ ಅಗ್ನಿಗೆ ಧನ್ಯವಾದ ಹೇಳಿ ಅಲ್ಲಿಂದ ಹೊರಡುತ್ತಾರೆ. ದಾರಿಯುದ್ದಕ್ಕೂ ವೇದಾಂತನಿಗೆ ಅಮೂಲ್ಯ ಹೇಳಿದ್ದೇ ನೆನಪು ಆಗುತ್ತಾ ಇರುತ್ತದೆ. ನನ್ನ ಕಿಡ್ನಾಪ್ ಮಾಡಿರುವುದು ಯಾರು ಇರಬಹುದು ಎಂದೆಲ್ಲ ಯೋಚನೆ ಮಾಡುತ್ತಾ ಇರುತ್ತಾನೆ. ಅಷ್ಟರಲ್ಲಿ ಸಾರ್ಥಕ ವೇದಾಂತ ಅಗ್ನಿ ಒಳ್ಳೆಯ ಸಹಾಯ ಮಾಡಿದ್ದಾರೆ ನನಗೆ ಅದು ಬಹಳ ಖುಷಿ ಆಯಿತು ಎಂದೆಲ್ಲ ಹೇಳುತ್ತ ಇರುವಾಗ ವೇದಾಂತ ಅಮ್ಮು ಹೇಳಿದುದರ ಬಗ್ಗೆ ತಲೆ ಕೆಡಿಸಿಕೊಂಡು ಹೋಗುತ್ತಾ ಇರುತ್ತಾನೆ.

ಸಿಸಿ ಕ್ಯಾಮರಾ ಫುಟೇಜ್ ಹುಡುಕುತ್ತಿರುವ ವಿಕ್ರಾಂತ್
ಇತ್ತ ಅಮ್ಮು ಹಾಗೂ ವಿಕ್ರಾಂತ್ ವಿಡಿಯೋ ಫುಟೇಜ್ ತೆಗೆಯುತ್ತಾ ಇರಬೇಕಾದರೆ ಅಗ್ನಿ ಮನೆಗೆ ಬಂದಿರುವ ವಿಡಿಯೋ ಸಿಗುತ್ತದೆ. ಅದನ್ನು ನೋಡಿದ ಅಮೂಲ್ಯಗೆ ಖುಷಿ ಆದರೆ ಸುಹಾಸಿನಿಗೆ ಭಯ ಆಗುತ್ತದೆ. ವೇದಾಂತನ ಎದುರು ತನ್ನ ಬಂಡಾವಾಳ ಬಯಲಾಗುವ ಎಲ್ಲಾ ಸಂದರ್ಭ ಕಾಣುತ್ತಿದೆ ಎಂದು ಯೋಚನೆ ಮಾಡುತ್ತಾ ಇರುತ್ತಾಳೆ. ಅತ್ತ ಅಗ್ನಿ ವಿಡಿಯೋವನ್ನು ಡಿಲೀಟ್ ಮಾಡಲು ಎಲ್ಲಾ ತಯಾರಿ ಮಾಡುತ್ತಾ ಇರುತ್ತಾನೆ. ಮುಂದೇನು ಕಾದು ನೋಡಬೇಕಿದೆ.


Click it and Unblock the Notifications











