Gattimela: ಮಂಜುನಾಥ್ ದಂಪತಿಗೆ ಮಗಳ ಸೀಮಂತ ನೋಡುವ ಭಾಗ್ಯ ಇಲ್ಲ?
ಗಟ್ಟಿಮೇಳ ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರ ಮನ ಸೆಳೆಯುವ ಹಾಗೆ ಮಾಡುತ್ತಿದೆ. ಇದೀಗ ಅಮೂಲ್ಯ ಹಾಗೂ ವೇದಾಂತ್ ಮಗು ಮಾಡಿಕೊಳ್ಳಲೇಬೇಕು ಎಂದು ಮನೆ ಮಂದಿ ಧರಣಿ ಕುಳಿತಿದ್ದಾರೆ. ತಮ್ಮನಿಗೆ ಮಗು ಆಗುತ್ತಿದೆ ಆದರೆ ಅಣ್ಣನಿಗೆ ಇನ್ನೂ ಮಗು ಆಗಿಲ್ಲ ಎಂಬುದನ್ನು ಜನ ಕೇಳುತ್ತಿದ್ದಾರೆ ಆ ಕಾರಣಕ್ಕೆ ಇಬ್ಬರ ಬಳಿಯೂ ಮಗು ಬೇಕು ಎಂದು ಹಠ ಹಿಡಿಯುತ್ತಾ ಇರುತ್ತಾರೆ.
ಇದನ್ನು ನೋಡಿದ ವೇದಾಂತ್ ಅಮೂಲ್ಯಗೆ ಏನು ಮಾಡಬೇಕು ಎಂದು ತೋಚದೇ ಮನೆ ಮಂದಿಯ ಜೊತೆ ಜಗಳ ಆಡುತ್ತಾರೆ. ಇನ್ನು ಮನೆಗೆ ಹಾಸ್ಪಿಟಲ್ ಸಿಬ್ಬಂದಿಯನ್ನು ಕರೆಯಿಸಿ ವೇದಾಂತ್ ಹಾಗೂ ಅಮೂಲ್ಯ ಜೊತೆ ಮಾತನಾಡಿಸುತ್ತಾರೆ. ಆಸ್ಪತ್ರೆಯ ಬಿಲ್ ಈ ರೀತಿ ಎಲ್ಲಾ ಆಗುತ್ತದೆ ಪ್ಯಾಕೆಜ್ ಈಗಲೇ ತೆಗೆದುಕೊಂಡರೆ ಒಳ್ಳೆಯದು ಎಂದೆಲ್ಲ ಹೇಳುತ್ತ ಇರುತ್ತಾರೆ. ಇದನ್ನು ಕೇಳಿದ ವೇದಾಂತ್ ಅಮೂಲ್ಯಗೆ ಅನುಮಾನ ಆಗುತ್ತದೆ.

ಯಾರು ಇವರನ್ನು ಇಲ್ಲಿಗೆ ಕರೆಯಿಸಿದ್ದು ಎಂದು ನೋಡುತ್ತಾ ಇರುವಾಗ ಕಾಂತ, ಸಾರ್ಥಕ ಎಲ್ಲ ನಾವೇ ಕರೆಯಿಸಿದ್ದು ಎಂದು ಹೇಳಿದಾಗ ವೇದಾಂತ್ ಗೆ ಇನ್ನೂ ಕೋಪ ಹೆಚ್ಚು ಆಗುತ್ತದೆ. ಇನ್ನು ಅಜ್ಜಿ ಕೂಡ ಧರಣಿ ಮಾಡುತ್ತಾ ಇರುವುದನ್ನು ನೋಡಿ ಏನು ಮಾಡಬೇಕು ಎಂದು ತಿಳಿಯದೇ ವೇದಾಂತ್ ಹಾಗೂ ಅಮೂಲ್ಯ ಸೇರಿ ಒಂದು ನಿರ್ಧಾರಕ್ಕೆ ಬರುತ್ತಾರೆ.
ನಾವು ಮಕ್ಕಳು ಮಾಡಿಕೊಳ್ಳುತ್ತೇವೆ ಆದರೆ ಎರಡು ವರುಷ ಬಿಟ್ಟು ಎಂದು ಹೇಳುತ್ತಾರೆ. ಇದನ್ನು ಕೇಳಿದ ಮನೆ ಮಂದಿಗೆ ಏನು ಹೇಳಬೇಕು ಎಂದು ತಿಳಿಯದೇ ಸುಮ್ಮನೆ ಆಗುತ್ತಾರೆ. ಆ ಬಳಿಕ ಸಾರ್ಥಕ ಈ ಬಗ್ಗೆ ನಾವು ಮನೆಯವರು ಚರ್ಚೆ ಮಾಡಿ ಹೇಳುತ್ತೇನೆ ಎಂದು ಹೇಳುತ್ತಾರೆ. ಇದನ್ನು ಕೇಳಿದ ವೇದಾಂತ್ ಸುಮ್ಮನೆ ಇರುತ್ತಾನೆ .

ಬಳಿಕ ಅಜ್ಜಿ ಜೊತೆ ಡಿಸ್ಕಷನ್ ಮಾಡಿ ಇಲ್ಲ ಒಂದೇ ವರುಷ ನಾವು ಟೈಮ್ ಕೊಡುತ್ತೇವೆ ಅಷ್ಟರಲ್ಲಿ ಮಗು ಆಗಬೇಕು ಎಂದು ಹೇಳುತ್ತಾಳೆ. ಇದನ್ನು ಕೇಳಿದ ವೇದಾಂತ್ ಹಾಗೂ ಅಮ್ಮು ಬೇರೆ ವಿಧಿ ಇಲ್ಲದೆ ಸುಮ್ಮನೆ ಒಪ್ಪಿಕೊಳ್ಳುತ್ತಾರೆ. ಇನ್ನು ಪರಿಮಳ ಹಾಗೂ ಮಂಜುನಾಥ್ ಬಳಿ ಸುಹಾಸಿನಿ ಯಾರೇ ಬಂದರೂ ನೀವು ಆರತಿ ಸೀಮಂತ ಕಾರ್ಯಕ್ರಮಕ್ಕೆ ಬರಬಾರದು ಎಂದು ಹೇಳುತ್ತಾಳೆ. ಇದನ್ನು ಕೇಳಿದ ಪರಿಮಳ ಮಂಜುನಾಥ್ ಗೆ ಬಹಳ ನೋವು ಆಗುತ್ತದೆ.
ಅದಕ್ಕೆ ಪರಿಮಳ ಹಾಗೂ ಮಂಜುನಾಥ್ ವಸಿಷ್ಠ ಮನೆಗೆ ಹೋಗಲು ರೆಡಿ ಆಗುತ್ತಾರೆ. ಆರತಿಗೆ ತವರು ಮನೆಯಿಂದ ಏನೆಲ್ಲ ಸಿಗಬೇಕು ಅದೆಲ್ಲವನ್ನೂ ತೆಗೆದುಕೊಂಡು ಹೋಗಲು ರೆಡಿ ಆದಾಗ ಅನು ಬರುತ್ತಾಳೆ. ಅಮ್ಮ ನಾನು ಬರುತ್ತೇನೆ ಎಂದು ಹಠ ಹಿಡಿಯುತ್ತಾಳೆ. ಆದರೆ ಮಂಜುನಾಥ್ ಅಲ್ಲಿ ಅನೇಕ ಅವಮಾನಗಳು ಎದುರಾಗುತ್ತದೆ, ಆದರೆ ಅದೆಲ್ಲವನ್ನೂ ತಡೆದುಕೊಳ್ಳಲು ನಮ್ಮಿಂದ ಸಾಧ್ಯ ಆಗುವುದಿಲ್ಲ ಆ ಕಾರಣಕ್ಕೆ ನೀನು ಬರುವುದು ಬೇಡ ಎಂದು ಹೇಳುತ್ತಾನೆ. ಇದನ್ನು ಕೇಳಿದ ಅನು ಸುಮ್ಮನೆ ಆಗುತ್ತಾಳೆ..
ಬಳಿಕ ಮಂಜುನಾಥ್ ಹಾಗೂ ಪರಿಮಳ ಸುಹಾಸಿನಿ ಮನೆಗೆ ಹೋದರೂ ಆಕೆ ಮನೆಯ ಒಳಗೆ ಬಿಡದೆ ಇರುವ ಕಾರಣ ಅವರು ಮಗಳಿಗೆ ತಂದಿದ್ದ ಉಡುಗೊರೆಯನ್ನು ವಾಚ್ ಮ್ಯಾನ್ ಕೈಯಲ್ಲಿ ಕೊಟ್ಟು ಹೋಗುತ್ತಾರೆ. ಇದನ್ನು ನೋಡಿದ ವೈದೇಹಿಗೆ ಬಹಳ ನೋವು ಆಗುತ್ತದೆ. ಅವರು ಕೊಟ್ಟ ಎಲ್ಲಾ ತಿನಿಸನ್ನು ವೈದೇಹಿ ಮನೆ ಒಳಗೆ ತೆಗೆದುಕೊಂಡು ಹೋಗುತ್ತಾಳೆ.


Click it and Unblock the Notifications











