Gattimela: ಸುಹಾಸಿನಿ ಮುಖವಾಡ ಬಯಲು ಮಾಡುತ್ತಾನಾ ಧ್ರುವ?
ಅಮೂಲ್ಯ ಹಾಗೂ ವಿಕ್ರಾಂತ್ ಗೆ ಸಿಸಿ ಕ್ಯಾಮರಾ ಫೂಟೇಜ್ ಸಿಕ್ಕೆ ಬಿಟ್ಟಿತು ಎನ್ನುವಷ್ಟರಲ್ಲಿ ಸುಹಾಸಿನಿಗೆ ಭಯ ಶುರು ಆಗಿ ಬಿಟ್ಟಿರುತ್ತದೆ. ಸುಹಾಸಿನಿ ಇನ್ನೇನು ಮಾಡುವುದು ಎಂದುಕೊಂಡು ಮೈನ್ ಸ್ವಿಚ್ ಆಫ್ ಮಾಡುತ್ತಾಳೆ. ಕರೆಂಟ್ ಹೋದ ಕೂಡಲೇ ಲ್ಯಾಪ್ ಟಾಪ್ ಕೂಡ ಬಂದ್ ಆಗಿ ಬಿಡುತ್ತದೆ. ಇದನ್ನು ನೋಡಿದ ವಿಕ್ರಾಂತ್ ಅದೇನು ಕರೆಂಟ್ ಹೋಗಿದ್ದು ಯುಪಿಎಸ್ ಕೂಡ ಆನ್ ಆಗುತ್ತಿಲ್ಲ ಯಾಕೆ ಎಂದು ನೋಡಲು ಹೋದಾಗ ಮೈನ್ ಸ್ವಿಚ್ ಆಫ್ ಆಗಿರುತ್ತದೆ.
ಇದನ್ನು ಕಂಡ ವಿಕ್ರಾಂತ್ ಗೆ ಆಶ್ಚರ್ಯ ಆಗುತ್ತದೆ. ಇದು ಹೇಗೆ ಸಾಧ್ಯ ಇಲ್ಲಿಗೆ ಯಾರಾದರೂ ಬಂದ್ರ ಎಂದು ಯೋಚನೆ ಮಾಡುತ್ತಾ ಇರುತ್ತಾನೆ. ಹಾಗೆಯೇ ಅಮೂಲ್ಯ ಬಳಿ ಯಾರೋ ಮೈನ್ ಸ್ವಿಚ್ ಆಫ್ ಮಾಡಿದ್ದಾರೆ ಎಂದು ಹೇಳುತ್ತಾನೆ. ಆಗ ಅಮೂಲ್ಯಗೆ ಶಾಕ್ ಆಗುತ್ತದೆ. ಪುನಃ ಲ್ಯಾಪ್ ಟಾಪ್ ಆನ್ ಮಾಡಿ ಫುಟೇಜ್ ಹುಡುಕಿದಾಗ ಅದರಲ್ಲಿ ಏನೂ ಇಲ್ಲದ್ದನ್ನು ಕಂಡು ಬೆರಗಾಗುತ್ತಾರೆ.

ಇನ್ನು ಸುಹಾಸಿನಿ ನೇರವಾಗಿ ದ್ರುವನ ರೂಮ್ ಗೆ ಬಂದು ದ್ರುವನ ಬಳಿ ಏನು ಆಶ್ಚರ್ಯ ಆಗುತ್ತಾ ಇದೆಯಾ ನನ್ನ ನೋಡಿ ನೀನು ನಗುತ್ತಾ ಇದ್ದೀಯಾ ನಿಮ್ಮೆಲ್ಲರನ್ನೂ ನಾನು ಕೊಂದು ಹಾಕುತ್ತೇನೆ, ನಿನ್ನ ಮಾತ್ರ ಸುಮ್ಮನೆ ಬಿಡುವುದಿಲ್ಲ ನನ್ನ ಮೊದಲನೇ ಬೇಟೆ ನೀನೇ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಧ್ರುವನಿಗೆ ಕೋಪ ಬರುತ್ತದೆ.
ಆತ ಕೋಪದಿಂದ ಎದ್ದು ನಿಂತು ಸುಹಾಸಿನಿ ಕಡೆ ಬರುತ್ತಾನೆ. ಆಕೆಯ ಕುತ್ತಿಗೆ ಹಿಡಿದುಕೊಳ್ಳಲು ಬರುವ ವೇಳೆ ದ್ರುವನನ್ನು ಸುಹಾಸಿನಿ ಕೆಳಗೆ ತಳ್ಳಿ ಬಿಡುತ್ತಾಳೆ. ದ್ರುವ ಕೆಳಗೆ ಬಿದ್ದು ನರಳಾಡುತ್ತ ಇರುವ ವೇಳೆ ದ್ರುವನೀಗೆ ಪೌಡರ್ ಚೆಲ್ಲಿರುವುದು ಕಾಣಿಸುತ್ತದೆ ಆತ ಕಷ್ಟ ಪಟ್ಟು ಅದರಲ್ಲಿ ಸುಹಾಸಿನಿ ಎಂದು ಬರೆಯಲು ಹೋಗುತ್ತಾನೆ. ಇನ್ನು ವೇದಾಂತ್ ಬಹಳ ಆತಂಕದಿಂದ ಕಾರ್ ಚಲಾಯಿಸುತ್ತ ಇರುತ್ತಾನೆ.
ಮನೆಗೆ ಬಂದ ವೇದಾಂತ್ ಅಮೂಲ್ಯ ಬಳಿ ಯಾರು ನನ್ನ ಕಿಡ್ನಾಪ್ ಮಾಡಿದ್ದು ತಿಳಿಯಿತ ಮಹಾದೇವನ ಫೋಟೋ ಸಿಕ್ಕಿತ ಎಂದೆಲ್ಲ ಕೇಳುತ್ತಾನೆ. ಇದನ್ನು ಕೇಳಿದಾಗ ವೇದಾಂತ್ ಗೆ ಏನು ಹೇಳಬೇಕು ಎಂದು ತಿಳಿಯದೇ ತಲೆ ಕೆಡಿಸಿಕೊಳ್ಳುತ್ತಾ ಇರುತ್ತಾರೆ. ವಿಕ್ರಾಂತ್ ವೇದಾಂತ್ ಬಳಿ ಸಿಸಿ ಕ್ಯಾಮರಾ ಫುಟೇಜ್ ಡಿಲೀಟ್ ಆಗಿರುವ ಬಗ್ಗೆ ಹೇಳುತ್ತಾನೆ. ಇದನ್ನು ಕೇಳಿದ ವೇದಾಂತ್ ಗೆ ಶಾಕ್ ಆಗುತ್ತದೆ. ಇದನ್ನು ವೇದಾಂತ ಜೊತೆ ಬಂದಿರುವಾತ ಇದು ಹ್ಯಾಕರ್ ಕೆಲಸ ಎಂದೆಲ್ಲ ಹೇಳುತ್ತಾನೆ. ಇನ್ನು ಸಿಸಿ ಕ್ಯಾಮರಾದಲ್ಲಿ ದ್ರುವ ಬಿದ್ದಿರುವುದು ಕಂಡು ಎಲ್ಲರೂ ಗಾಬರಿ ಬೀಳುತ್ತಾರೆ.

ಧ್ರುವ ಬಿದ್ದಿರುವುದನ್ನು ಕಂಡು ಅಲ್ಲಿಗೆ ಮೊದಲು ಓಡಿ ಬಂದಿದ್ದು ವೈದೇಹಿ. ವೈದೇಹಿ ದ್ರುವ ಬಿದ್ದಿರುವುದನ್ನು ಕಂಡು ಎತ್ತಲು ಪ್ರಯತ್ನ ಪಡುತ್ತಾಳೆ. ಆದರೆ ಅದು ಸಾಧ್ಯ ಆಗದೆ ಮನೆಯವರನ್ನೆಲ್ಲ ಜೋರಾಗಿ ಕರೆಯುತ್ತಾಳೆ. ಎಲ್ಲರೂ ಓಡಿ ಬರುತ್ತಾರೆ. ಬಳಿಕ ದ್ರುವ ಯಾಕೆ ಇಲ್ಲಿ ಬಿದ್ದಿದ್ದಾನೆ ಎಂದು ಎಲ್ಲರೂ ತಲೆ ಕೆಡಿಸಿಕೊಳ್ಳುತ್ತ ಇರುತ್ತಾರೆ. ಈ ವೇಳೆ ವೇದಾಂತ್ ಗೆ ದ್ರುವ ಏನೋ ಬರೆದಿರುವುದು ಕಾಣಿಸುತ್ತದೆ . ದ್ರುವ ಏನು ಬರೆದಿರಬಹುದು ಎಂದು ನೋಡುತ್ತಾ ಇರುವಾಗ ಅದು ವೇದಾಂತ್ ಗೆ ತಿಳಿಯೋದಿಲ್ಲ. ಆತ ಅದರ ಫೋಟೋ ಕ್ಲಿಕ್ಕಿಸಿಕೊಳ್ತಾನೆ. ಬಳಿಕ ದ್ರುವ ನಡೆಯಲು ಶುರು ಮಾಡಿದ್ದಾನೆ, ಅಲ್ವಾ ಹಾಗೆ ಏನಾದರು ನಡೆಯಲು ಪ್ರಯತ್ನ ಪಟ್ಟು ಬಿದ್ದಿರಬೇಕು ಎಂದು ಸಾರ್ಥಕ್ ಹೇಳುತ್ತಾನೆ. ಇದನ್ನು ಕೇಳಿ ಎಲ್ಲರೂ ಸುಮ್ಮನೆ ಆಗುತ್ತಾರೆ. ಇನ್ನು ವಿಕ್ರಾಂತ್ ಹಾಗೂ ಆರತಿ ತಮ್ಮ ಮಗು ಬಗ್ಗೆ ಬಹಳ ಕನಸು ಕಟ್ಟಿಕೊಂಡು ಇರುತ್ತಾರೆ. ನಮ್ಮ ಮಗಳು ಏಳು ತಿಂಗಳು ಆದಾಗ ಹೇಗೆ ಬೆಳವಣಿಗೆ ಆಗುತ್ತದೆ ಎಂಬುವುದರ ಬಗ್ಗೆ ಮಾತನಾಡುತ್ತಾ ಇರುತ್ತಾರೆ. ಇದನ್ನು ಕೇಳಿದ ವಿಕ್ರಾಂತ್ ಮಾತ್ರ ಆರತಿಗೆ ಮುಚ್ಚು ಮರೆಯಿಲ್ಲದೆ ಎಲ್ಲಾ ಹೇಳಿ ಬಿಡುತ್ತಾನೆ. ಮುಂದೇನು ಕಾದು ನೋಡಬೇಕಿದೆ.


Click it and Unblock the Notifications











