ಬೆಡ್‌ನಿಂದ ಕೆಳಗೆ ಬಿದ್ದ ಧ್ರುವ; ಅಷ್ಟಕ್ಕೂ ಧ್ರುವನ ಬಗ್ಗೆ ಡಾಕ್ಟರ್ ಹೇಳಿದ್ದಾದರು ಏನು?

By Poorva

ದ್ರುವ ಕೆಳಗೆ ಬಿದ್ದು ಹೋಗುತ್ತಾನೆ. ಇದನ್ನು ನೋಡಿದ ವೈದೇಹಿಗೆ ಬಹಳ ಭಯ ಆಗುತ್ತದೆ. ದ್ರುವನಿಗೆ ಏನಾದರು ಆಯಿತಾ ಎಂದು ನೋಡುವಷ್ಟರಲ್ಲಿ ಮನೆ ಮಂದಿ ಎಲ್ಲಾ ಅಲ್ಲಿಗೆ ಬರುತ್ತಾರೆ. ದ್ರುವನನ್ನು ಬೆಡ್ ಮೇಲೆ ಮಲಗಿಸುತ್ತಾರೆ. ಇನ್ನು ವೇದಾಂತ್ ಧ್ರುವ ನೀನು ಹೇಗಿದಿಯ ಈಗ ಪರವಾಗಿಲ್ಲ ಅಲ್ವಾ ಎಂದು ಕೇಳುತ್ತಾನೆ. ಧ್ರುವ ಹಾ.. ಅಮ್ಮಾ ಎಂದು ಕೂಗುತ್ತಾನೆ. ಇದನ್ನು ನೋಡಿದ ಸುಹಾಸಿನಿ ತನ್ನ ಬಣ್ಣ ಎಲ್ಲಿ ಬಯಲಾಗಿಬಿಡುತ್ತದೆ ಎಂದು ಹೇಳಿ ಆತನ ಬಳಿ ಬಂದು ಕುಳಿತು ಹೌದು ಕಣಪ್ಪ ಅವಳು ನಿನ್ನ ಅಮ್ಮ ಅಲ್ಲ, ನಮ್ಮ ಬಳಿ ಸುಳ್ಳು ಹೇಳಿಕೊಂಡು ನಮ್ಮನ್ನೆಲ್ಲ ಮೋಸ ಮಾಡಿದ್ದಾಳೆ ಅದಕ್ಕೆ ನಾವು ಆಕೆಯನ್ನು ಹೊರಗೆ ಹಾಕಿದ್ದೇವೆ, ನನಗೆ ನಿನ್ನ ನೋವು ಏನು ಎಂಬುವುದು ತಿಳಿಯುತ್ತದೆ ಎಂದು ಆತನ ತಲೆ ನೇವರಿಸುತ್ತಾ ಇರುತ್ತಾಳೆ..

ಇದನ್ನು ನೋಡಿದ ಆದ್ಯ ದ್ರುವನಿಗೆ ಇನ್ನು ನಾವು ಅವರನ್ನು ಮನೆಯಿಂದ ಆಚೆ ಹಾಕಿರುವುದು ತಿಳಿದಿಲ್ಲ ಅನ್ನಿಸುತ್ತದೆ, ಅವರನ್ನೇ ಅಮ್ಮ ಎಂದು ಅಂದುಕೊಂಡು ಇದ್ದಾನೆ, ಅವರ ಬಗ್ಗೆ ನೆನಪು ಮಾಡಿಕೊಂಡಿದ್ದಾನೆ ಎಂದು ಅನ್ನಿಸುತ್ತದೆ ಎಂದು ಹೇಳಿದಾಗ ವೈದೇಹಿಗೆ ಕಣ್ಣಲ್ಲಿ ನೀರು ಬರುತ್ತದೆ. ಬಳಿಕ ವೇದಾಂತ್ ತಮ್ಮನ ಬಳಿ ಇಷ್ಟು ದಿನ ಈ ಮನೆಗೆ ಬಂದವರು ನಮ್ಮ ಅಮ್ಮ ಅಲ್ಲ ಅವರು ನಮ್ಮ ಆಸ್ತಿಯನ್ನು ಕಬಳಿಸಲು ಬಂದವರು ನಮಗೆ ಮೋಸ ಮಾಡಲು ಬಂದವರು, ಅವರಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳುತ್ತಾನೆ.

ಇನ್ನೂ ಮುಂದುವರಿದು ನಮ್ಮ ತಾಯಿಯನ್ನು ಹುಡುಕಬೇಕು ಎಂದೇನಿಲ್ಲ ಸುಹಾಸಿನಿ ಅಮ್ಮ ಹಾಗೂ ವೈ ಜಯಂತಿ ಅಮ್ಮನೇ ಎಲ್ಲ ಎಂದು ಹೇಳುತ್ತಾನೆ. ಆದ್ಯ ದ್ರುವ ಅವಳು ಆ ತರ ಮೋಸ ಮಾಡುತ್ತಾಳೆ ಎಂದು ನಮಗೆ ಗೊತ್ತೇ ಇರಲಿಲ್ಲ, ಅವಳನ್ನು ಆಚೆ ಹಾಕಿ ಆಗಿದೆ ನೀನು ಧೈರ್ಯವಾಗಿರು ಎಂದು ಹೇಳಿ ಸಮಾಧಾನ ಮಾಡುತ್ತಾಳೆ. ಆದರೆ ಅವರು ಯಾರಿಗೂ ತಿಳಿಯದ ಸತ್ಯ ಆತನಿಗೆ ತಿಳಿದಿದೆ, ತನ್ನ ಅಮ್ಮ ವೈದೇಹಿ ಅವರೇ ಎಂದು ಸತ್ಯ ಗೊತ್ತಾದ ಕಾರಣ ಸುಹಾಸಿನಿ ದ್ರುವನ ಪ್ರಾಣ ತೆಗೆಯುವ ಸಂಚು ಕೂಡ ಮಾಡಿದ್ದಾಳೆ ಎಂಬುದೆಲ್ಲಾ ತಿಳಿದುಬಿಟ್ಟಿದೆ. ದ್ರುವ ಬೆಡ್ ಬಿದ್ದ ಕೂಡಲೇ ಅಲ್ಲಿಗೆ ಬಂದ ವೇದಾಂತ ವೈದೇಹಿಗೆ ಬಯ್ಯುತ್ತಾನೆ.

ವೈದೇಹಿಗೆ ಬೈದ ವೇದಾಂತ

ವೈದೇಹಿಗೆ ಬೈದ ವೇದಾಂತ

ಆದರೆ ಸುಹಾಸಿನಿ ಮಾತ್ರ ವೈದೇಹಿ ತಂಗಿ ಆಗಿ ಹೇಳಿದ್ದು ಕೆಲಸದವರು ಎಷ್ಟು ನೋಡಿಕೊಂಡರು ಅಷ್ಟೇ ಎನ್ನುತ್ತಾಳೆ. ಇದನ್ನು ಕೇಳಿ ಅರಗಿಸಿಕೊಳ್ಳಲು ಆಗದೆ ಇದ್ದರೂ ವೈದೇಹಿ ಅಳುತ್ತಾ ಸುಮ್ಮನಿರುತ್ತಾಳೆ. ಸುಹಾಸಿನಿ ವೇದಾಂತಗೆ ವೇದಾಂತ ಡಾಕ್ಟರ್ ಗೆ ಕರೆ ಮಾಡುವುದು ಒಳ್ಳೆಯದು ದ್ರುವನ ಆರೋಗ್ಯ ಹೇಗಿದೆ ಎಂಬುವುದು ಗೊತ್ತಾಗುತ್ತದೆ ಅಲ್ವಾ ಎಂದಾಗ ವೇದಾಂತ ಡಾಕ್ಟರ್ ಗೆ ಕರೆ ಮಾಡುತ್ತಾನೆ. ಇನ್ನು ಮನೆಗೆ ಬಂದ ಡಾಕ್ಟರ್ ದ್ರುವನ ಹೆಲ್ತ್ ಚೆಕ್ ಮಾಡುತ್ತಾರೆ. ಬಳಿಕ ವೇದಾಂತ ಬಳಿ ಇವರು ಚೇತರಿಕೆಯಾಗುತ್ತಿರುವ ಸ್ಪೀಡ್ ನೋಡಿದರೆ ಇವರು ಆದಷ್ಟು ಬೇಗ ಸರಿಯಾಗಿ ಆಗುತ್ತಾರೆ ಎನ್ನುತ್ತಾರೆ.

ಮನೆಗೆ ಆಗಮಿಸಿದ ಡಾಕ್ಟರ್

ಮನೆಗೆ ಆಗಮಿಸಿದ ಡಾಕ್ಟರ್

ನನ್ನ ಸರ್ವಿಸ್ ನಲ್ಲೆ ಇಷ್ಟು ಬೇಗ ಚೇತರಿಕೆ ಆಗುವ ಪೇಷಂಟ್ ನ ನಾನು ನೋಡೇ ಇಲ್ಲ ಎಂದು ಹೇಳಿದಾಗ ಸುಹಾಸಿನಿಗೆ ತಲೆ ಕೆಟ್ಟುಹೋಗುತ್ತದೆ, ಮನೆ ಮಂದಿಗೆಲ್ಲ ಡಾಕ್ಟರ್ ಮಾತು ಕೇಳಿ ಬಹಳ ಖುಷಿ ಆಗುತ್ತದೆ. ವೇದಾಂತ ಬಳಿ ಡಾಕ್ಟರ್ ಇವರ ಕೈ ಕಾಲಿನ ನರಗಳು ಸರಿ ಹೋಗುತ್ತಾ ಇದೆ, ಅದಕ್ಕೆ ಇವರು ಆಗಾಗ ಹೀಗೆ ಎದ್ದು ಓಡಾಡಲು ಟ್ರೈ ಮಾಡುತ್ತ ಇದ್ದಾರೆ, ಅದು ಬಿಟ್ಟರೆ ಬೇರೆ ಏನು ತೊಂದರೆ ಇಲ್ಲ ಎಂದಾಗ ಎಲ್ಲರ ಸಂತೋಷಕ್ಕೆ ಪಾರವೇ ಇರುವುದಿಲ್ಲ. ಡಾಕ್ಟರ್ ದ್ರುವನನ್ನು ನೋಡಿ ಬೇಗ ಹುಷಾರು ಆಗುತ್ತಾರೆ ಎಂದಾಗ ದ್ರುವ ಆತನ ತಾಯಿಯನ್ನು ನೋಡಿ ಅಮ್ಮ ಎಂದು ಕಷ್ಟಪಟ್ಟು ಹೇಳುತ್ತಾನೆ.

ಮಗನನ್ನು ನೋಡಿ ಖುಷಿಪಟ್ಟ ವೈದೇಹಿ

ಮಗನನ್ನು ನೋಡಿ ಖುಷಿಪಟ್ಟ ವೈದೇಹಿ

ಇದನ್ನು ಕೇಳಿದ ವೈದೇಹಿಗೆ ಖುಷಿಯಾಗುತ್ತದೆ. ಆಕೆಯ ಖುಷಿಗೆ ಪಾರವೇ ಇರುವುದಿಲ್ಲ. ಡಾಕ್ಟರ್ ನಿಮ್ಮ ತಮ್ಮ ರಿಕವರ್ ಆದ ಬಳಿಕ ವಾಕಿಂಗ್ ಗೆ ಕರೆದುಕೊಂಡು ಹೋಗಿ ಎಂದು ಹೇಳಿ ಅಲ್ಲಿಂದ ಹೊರಡುತ್ತಾರೆ. ಆದ್ಯ ಅದಿತಿ ಹಾಗೂ ಧ್ರುವನನ್ನು ಹೇಗೆ ಒಂದು ಮಾಡುವುದು ಎಂದು ಯೋಚನೆ ಮಾಡುತ್ತಾ ಇರುತ್ತಾಳೆ. ಇನ್ನು ಮನದಲ್ಲಿ ಸುಹಾಸಿನಿ ದ್ರುವ ಪೂರ್ತಿ ಸರಿ ಹೋಗುತ್ತಾನೆ ಅಂದರೆ ನನಗೆ ಅಪಾಯ ತಪ್ಪಿದ್ದಲ್ಲ, ಇವನು ಹೀಗೆ ಇದ್ದುಕೊಂಡೇ ನನ್ನ ನೋಡಿ ದೊಡ್ಡ ಕಣ್ಣು ಮಾಡುತ್ತಾನೆ ಇನ್ನೂ ಪೂರ್ತಿ ಸರಿ ಹೋದರೆ ನನ್ನನ್ನು ಸುಮ್ಮನೆ ಮಾತ್ರ ಬಿಡುವುದಿಲ್ಲ, ಇದಕ್ಕೆ ನಾನು ಏನಾದರು ಮಾಡಲೇ ಬೇಕು ಎಂದುಕೊಳ್ಳುತ್ತಾ ಇರುತ್ತಾಳೆ .

More from Filmibeat

English summary
Kannada serial Gattimela written update on 25th January
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X