Gattimela: ಧ್ರುವನ ಕೆನ್ನೆಗೆ ಮುತ್ತು ಕೊಟ್ಟ ಅದಿತಿ; ವೇದಾಂತ್‌ಗೆ ಶಾಕ್!

By Poorva

ಗಟ್ಟಿಮೇಳ ಧಾರವಾಹಿ ಉತ್ತಮವಾಗಿ ಮೂಡಿ ಬರುತ್ತಿದ್ದು ನೋಡುಗರ ಮನ ಸೆಳೆಯುತ್ತಿದೆ. ಇದೀಗ ಅಮೂಲ್ಯ ಹಾಗೂ ವಿಕ್ರಾಂತ್ ಸುಹಾಸಿನಿ ಹುಟ್ಟು ಅಡಗಿಸುವ ಎಲ್ಲಾ ಪ್ರಯತ್ನ ಮಾಡುತ್ತಿದ್ದಾರೆ, ಇದು ಎಷ್ಟರ ಮಟ್ಟಿಗೆ ಫಲ ನೀಡುತ್ತದೆ ಕಾದು ನೋಡಬೇಕಿದೆ. ಸುಹಾಸಿನಿ ವೇದಾಂತ್ ಜೊತೆ ಬಹಳ ಅನ್ಯೋನ್ಯವಾಗಿ ಇರುವ ಹಾಗೆ ನಟನೆ ಮಾಡುತ್ತಾಳೆ. ಆದರೆ ಆಕೆಯ ಮನಸ್ಸಲ್ಲಿ ಆತನ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ, ಇದನ್ನೆಲ್ಲ ನೋಡಿ ವಿಕ್ರಾಂತ್ ಹಾಗೂ ಅಮೂಲ್ಯಗೆ ಸುಹಾಸಿನಿ ಬಂಡವಾಳವನ್ನು ಹೇಗಾದರೂ ವೇದಾಂತ್ ಮುಂದೆ ಬಿಚ್ಚಿ ಇಡಬೇಕು ಚಂದ್ರನ ಹಾಗೆ ಸುಹಾಸಿನಿ ಕೂಡ ಸಿಕ್ಕಿ ಬೀಳಬೇಕು ಎಂದು ಮನದಲ್ಲಿ ಅಂದುಕೊಂಡು ಇರುತ್ತಾರೆ.

ಸುಹಾಸಿನಿಗೆ ಚಂದ್ರಾ ಕರೆ ಮಾಡುತ್ತಾಳೆ. ತರಾತುರಿಯಲ್ಲಿ ನಿನ್ನ ಬಳಿ ಮಾತನಾಡಬೇಕು ಎಂದು ಹೇಳುತ್ತಾಳೆ. ಅದಕ್ಕಾಗಿ ಸುಹಾಸಿನಿ ಚಂದ್ರ ಬಳಿ ಮಾತನಾಡಲು ಹೋಗುತ್ತಾಳೆ. ಇದು ವಿಕ್ರಾಂತ್‌ಗೆ ತಿಳಿದು ಸುಹಾಸಿನಿಯ ಹಿಂದೆಯಿಂದ ಹೋಗುತ್ತಾರೆ. ಆದರೆ ವಿಕ್ರಾಂತ್ ಹಾಗೂ ಅಮೂಲ್ಯ ತನ್ನ ಬೆನ್ನ ಹಿಂದೆ ಬಿದ್ದಿದ್ದಾರೆ ಎನ್ನುವ ವಿಚಾರ ಸುಹಾಸಿನಿ ತಡವಾಗಿ ತಿಳಿಯುತ್ತದೆ.

Kannada serial Gattimela written update on 27th February

ಸುಹಾಸಿನಿ ಮನದಲ್ಲಿ ಯೋಚನೆ ಮಾಡುತ್ತಾಳೆ ನನ್ನ ಹಿಂದೆಯಿಂದಲೆ ಬರುತ್ತಾ ಇದ್ದೀರಾ, ಪರವಾಗಿಲ್ಲ ನನ್ನ ಬಗ್ಗೆ ಇಷ್ಟೆಲ್ಲ ಯೋಚನೆ ಮಾಡುತ್ತೀರಾ ಅಲ್ವಾ ಎಂದೆಲ್ಲ ಹೇಳಿ ಮೆಲ್ಲಗೆ ನಗುತ್ತಾಳೆ. ಇನ್ನು ಚಂದ್ರ ಮಾತ್ರ ಸುಹಾಸಿನಿ ಜೊತೆ ಮಾತನಾಡಲು ಕಾದು ಕುಳಿತಿದ್ದಾಳೆ. ಇನ್ನು ವೇದಾಂತ್ ಕೂಡ ಆದ್ಯ ಹಾಗೂ ದ್ರುವ ಜೊತೆ ಪಾರ್ಕ್ ಗೆ ಬರುತ್ತಾನೆ.

ಇದನ್ನು ಮರೆಯಿಂದ ನೋಡಿದ ಅದಿತಿ ಆದ್ಯಗೆ ಕರೆ ಮಾಡಿ ಏನು ಅತ್ತಿಗೆ ಇಲ್ಲಿಗೆ ಬಾವ ಕೂಡ ಬಂದಿದ್ದಾರೆ ನನ್ನ ನೀವು ಸಿಕ್ಕಿ ಹಾಕಿಸಲು ಹೀಗೆ ಮಾಡಿದ್ರ ಎಂದು ಕೇಳಿದಾಗ ಅದ್ಯಾ ಸಮಾಧಾನದಿಂದ ನಾನು ಅಣ್ಣನನ್ನು ಕರೆದುಕೊಂಡು ಬರಲಿಲ್ಲ ಅವನಾಗಿಯೇ ಬಂದಿದ್ದು ಎಂದು ಹೇಳುತ್ತಾಳೆ. ಇದನ್ನು ಕೇಳಿದ ಅದಿತಿ ಸುಮ್ಮನೆ ಆಗುತ್ತಾಳೆ. ಇನ್ನು ವೇದಾಂತ್ ಬಳಿ ಆದ್ಯ ಅಣ್ಣ ನನಗೆ ಯಾಕೋ ಐಸ್ ಕ್ರೀಮ್ ತಿನ್ನಬೇಕು ಅನ್ನಿಸುತ್ತಾ ಇದೆ ತಂದು ಕೊಡು ಅಣ್ಣ ಎನ್ನುತ್ತಾಳೆ.

Kannada serial Gattimela written update on 27th February

ವೇದಾಂತ್ ಹೋಗಬೇಕಾದರೆ ತಿನ್ನೋಣ ಈಗ ಬೇಡ ಎಂದರೂ ಆದ್ಯ ಹಠ ಮಾಡುತ್ತಾಳೆ. ಬಳಿಕ ವೇದಾಂತ್ ಐಸ್ ಕ್ರೀಮ್ ತರಲು ಹೋಗುತ್ತಾನೆ. ಇನ್ನು ಅಣ್ಣ ಹೋದ ಬಳಿಕ ಅದಿತಿಯನ್ನು ಕರೆದು ಧ್ರುವ ಬಳಿ ಮಾತನಾಡಲು ಹೇಳುತ್ತಾಳೆ. ಹಾಗೆಯೇ ಬಹಳ ಜಾಗರೂಕತೆಯಿಂದ ಇರಲು ಹೇಳುತ್ತಾಳೆ. ಇದನ್ನು ಕೇಳಿದ ಅದಿತಿ ದ್ರುವನ ಬಳಿ ಮಾತನಾಡಲು ಕರೆದುಕೊಂಡು ಹೋಗುತ್ತಾಳೆ.

ದ್ರುವ ಮೇಲಿರುವ ಪ್ರೀತಿಯನ್ನು ಹೇಳುತ್ತಾಳೆ. ಬಳಿಕ ಆತನ ಜೊತೆ ಜೀವನ ಪೂರ್ತಿ ಕಳೆಯುವುದು ಎಂದು ಮಾತು ಕೊಡುತ್ತಾಳೆ. ಇದನ್ನು ನೋಡಿ ಬಹಳ ಖುಷಿ ಆಗುತ್ತದೆ . ಇನ್ನು ಅರ್ಧ ಗಂಟೆಯ ಬಳಿಕ ವೇದಾಂತ ಐಸ್ ಕ್ರೀಮ್ ಹಿಡಿದು ಬರುತ್ತಾನೆ. ಅಣ್ಣ ಬರುವುದನ್ನು ನೋಡಿ ಅದಿತಿ ಬಳಿ ತಪ್ಪಿಸಿಕೊಳ್ಳಲು ಕರೆ ಮಾಡುತ್ತಾಳೆ. ಅದಿತಿ ಹೋಗುವ ವೇಳೆ ಧ್ರುವನಿಗೆ ಮುತ್ತು ಕೊಡುತ್ತಾಳೆ. ಇನ್ನು ವೇದಾಂತ್ ದ್ರುವನ ಬಳಿ ಬಂದು ನೋಡುತ್ತಾನೆ. ಆತನ ಕೆನ್ನೆಯಲ್ಲಿ ಯಾರೋ ಮುತ್ತುಕೊಟ್ಟು ಹೋಗಿರುವುದು ಆತನಿಗೆ ಗೊತ್ತಾಗುತ್ತದೆ. ಆದ್ಯ ಬಳಿ ಕೂಡ ವಿಚಾರ ಮಾಡುತ್ತಾನೆ. ಆದರೆ ಆದ್ಯ ಮಾತ್ರ ಇದ್ಯಾವುದೂ ನನಗೆ ತಿಳಿದಿಲ್ಲ ಎಂದು ಹೇಳುತ್ತಾಳೆ. ಮುಂದೇನು ಕಾದು ನೋಡಬೇಕಿದೆ.

More from Filmibeat

English summary
Kannada serial gattimela written updated on 27th February
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X