Gattimela: ಸುಹಾಸಿನಿ ಕೆನ್ನೆಗೆ ಹೊಡೆದ ಅಮೂಲ್ಯ; ಕ್ಷಮೆ ಕೇಳ್ತಾಳಾ ಸುಹಾಸಿನಿ?

By Poorva

ಗಟ್ಟಿಮೇಳ ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರ ಮನ ಗೆಲ್ಲುತ್ತದೆ. ಇದೀಗ ವಸಿಷ್ಠ ಕುಟುಂಬದಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ. ಮಂಜುನಾಥ್ ಹಾಗೂ ಆರತಿ ವಿಕ್ರಾಂತ್ ಮಗುವನ್ನು ಬರಮಾಡಿಕೊಳ್ಳುವ ಕಾರ್ಯಕ್ರಮ ಹಾಗೆಯೇ ಬಸಿರು ಬಯಕೆ ತೀರಿಸಿಕೊಳ್ಳುವ ಕಾರ್ಯಕ್ರಮ ಕೂಡ . ಬಹಳ ಖುಷಿಯಿಂದ ಇರಬೇಕಾದ ಆರತಿ ಮೊಗದಲ್ಲಿ ನಗುವೇ ಮಾಸಿದೇ. ಕಾರಣ ಸೀಮಂತ ಶಾಸ್ತ್ರಕ್ಕೆ ಇನ್ನೂ ಅಪ್ಪ ಅಮ್ಮ ಬಂದಿಲ್ಲ ಎಂದು. ಬಹಳ ಖುಷಿಯಲ್ಲಿ ಇರಬೇಕಾದ ಆರತಿ ಮಾತ್ರ ಯಾರ ಮಾತನ್ನೂ ಕೇಳದೆ ಸೀಮಂತ ಶಾಸ್ತ್ರಕ್ಕೂ ಒಪ್ಪದೇ ಹೋಗುತ್ತಾಳೆ.

ಒಬ್ಬಳೇ ಕುಳಿತಿರಬೇಕಾದರೆ ಮನೆ ಮಂದಿ ಎಷ್ಟೆಲ್ಲ ಒತ್ತಾಯಿಸಿದರೂ ನನ್ನ ಅಪ್ಪ ಅಮ್ಮನನ್ನು ಕರೆದುಕೊಂಡು ಬನ್ನಿ ಎಂದಷ್ಟೇ ಹೇಳುತ್ತ ಇರುತ್ತಾಳೆ . ಇನ್ನು ಅಡುಗೆ ಮಾಡಲು ಹೇಳಿದ ಭಟ್ಟರು ಸರಿಯಾಗಿ ಕೆಲಸ ಮಾಡುತ್ತಾ ಇದ್ದಾರಾ ಇಲ್ವಾ ಎಂಬುವುದನ್ನು ಚೆಕ್ ಮಾಡಲು ಅಮೂಲ್ಯ ಬರುತ್ತಾಳೆ. ಅಲ್ಲಿ ಎಲ್ಲಾ ಸಿದ್ಧತೆಗಳನ್ನು ನೋಡುತ್ತಾ ಇರುವಾಗ ಮೂವರು ಮುಸುಕು ಹಾಕಿ ಕೆಲಸ ಮಾಡುತ್ತಾ ಇರುವುದು ಕಾಣಿಸುತ್ತದೆ. ಅದು ಯಾರಿರಬಹುದು ಎಂದು ಸ್ವಲ್ಪ ಹೊತ್ತು ಯೋಚನೆ ಮಾಡುತ್ತಾ ಇರುವಾಗ ಅಮೂಲ್ಯಗೆ ಇವರೇ ನನ್ನ ಅಪ್ಪ ಅಮ್ಮ ತಂಗಿ ಎನ್ನಿಸಿ ಬಿಡುತ್ತದೆ. ಬಳಿಕ ಭಟ್ಟರ ಬಳಿ ಇವರ್ಯಾರು ಎಂದಾಗ ಭಟ್ಟರು ನಮಗೆ ಇವರ್ಯಾರು ಗೊತ್ತಿಲ್ಲ ಅಡುಗೆಯಲ್ಲಿ ಸಹಾಯ ಮಾಡುತ್ತೇವೆ ಹಣ ಬೇಡ ಎಂದು ಹೇಳಿದರು ಎನ್ನುತ್ತಾರೆ.

 Kannada serial Gattimela written update on 27th march

ಆ ಕಾರಣಕ್ಕೆ ನಾವು ಅಡುಗೆಗೆ ಇಟ್ಟುಕೊಂಡು ಇದ್ದೇವೆ ಎಂದು ಹೇಳಿದಾಗ ಅಮೂಲ್ಯಗೆ ಇವರೇ ನನ್ನ ತಂದೆ ತಾಯಿ ಎನ್ನುವುದು ಗೊತ್ತಾಗುತ್ತದೆ. ಆಕೆ ನಿಧಾನವಾಗಿ ಅಪ್ಪ ಎಂದು ಹೇಳಿದಾಗ ಮಂಜುನಾಥ್‌ಗೆ ನನ್ನ ಮಗಳಿಗೆ ಇದು ನಾನೇ ಎಂಬುವುದು ತಿಳಿದು ಬಿಟ್ಟಿದೆ ಎಂದು ತಿಳಿಯುತ್ತದೆ. ಆ ಬಳಿಕ ಅಮೂಲ್ಯ ಅಮ್ಮ ಎಂದು ಕರೆದಾಗ ಪರಿಮಳಗೆ ತಡೆಯಲಾಗದೆ ಹಿಂದೆ ತಿರುಗಿ ನೋಡಿದಾಗ ಅಮೂಲ್ಯ ಗೆಸ್ ಸರಿಯಾಗಿಯೇ ಇತ್ತು. ಅನನ್ಯ ಅಕ್ಕನನ್ನು ನೋಡಿ ಅಕ್ಕ ಎಂದು ಓಡಿ ಬಂದು ತಬ್ಬಿಕೊಳ್ತಾಳೆ.

ಆ ಬಳಿಕ ಸೀಮಂತ ಶಾಸ್ತ್ರಕ್ಕೆ ಬಾರದೆ ಇಲ್ಲಿ ಎನು ಮಾಡುತ್ತಾ ಇದ್ದೀರಾ ಎಂದು ಕೇಳಿದಾಗ ಸುಹಾಸಿನಿ ಸೀಮಂತ ಶಾಸ್ತ್ರಕ್ಕೆ ಬರಬೇಡಿ ಎಂದು ಹೇಳಿರುವುದು ಅಮೂಲ್ಯಗೆ ತಿಳಿಯುತ್ತದೆ. ಆ ಕಾರಣದಿಂದ ಮಂಜುನಾಥ್ ಹಾಗೂ ಪರಿಮಳ ಮಗಳ ಸೀಮಂತ ಶಾಸ್ತ್ರವನ್ನು ಹೇಗಾದರೂ ಮಾಡಿ ಕದ್ದು ನೋಡಿಕೊಂಡು ಕಣ್ಣು ತುಂಬಿಸಿಕೊಂಡು ಬರಬೇಕು ಎಂದು ಅಡುಗೆಯವರ ವೇಷ ಧರಿಸಿ ಇರಬೇಕಾದ ಪರಿಸ್ಥಿತಿ ತಿಳಿದ ಅಮೂಲ್ಯ ಕೋಪಿಸಿಕೊಂಡು ಅವರನ್ನು ಅಲ್ಲಿಯೆ ಬಿಟ್ಟು ಸೀದಾ ಸುಹಾಸಿನಿ ಬಳಿ ಹೋಗುತ್ತಾಳೆ.

 Kannada serial Gattimela written update on 27th march

ಆಕೆಯನ್ನು ಎಳೆದುಕೊಂಡು ಒಂದು ಬಂದ ಅಮೂಲ್ಯ ನನ್ನ ರಾಣಿ ತಾಯಿಯನ್ನು ಅಕ್ಕನ ಸೀಮಂತ ಶಾಸ್ತ್ರಕ್ಕೆ ಬರಬೇಡಿ ಎಂದು ನೀವು ಹೇಳಿದಿರ ಎಂದು ಕೇಳಿದಾಗ ಸುಹಾಸಿನಿ ಆ ಪ್ರಶ್ನೆಗೆ ಉತ್ತರ ನೀಡದೆ ಇದ್ದಾಗ ಕೋಪಗೊಂಡ ಅಮೂಲ್ಯ ಆಕೆಯ ಕೆನ್ನೆಗೆ ಜೋರಾಗಿ ಹೊಡೆಯುತ್ತಾಳೆ. ಆ ಬಳಿಕ ಸುಹಾಸಿನಿ ಹೌದು ಎಂದು ಒಪ್ಪಿಕೊಳ್ಳುತ್ತಾಳೆ. ಇನ್ನು ಸುಹಾಸಿನಿ ಮಂಜು ಹಾಗೂ ಪರಿಮಳ ಜೊತೆ ಕ್ಷಮೆ ಕೇಳಬೇಕು ಎಂದು ಪಟ್ಟು ಅಮ್ಮು ಪಟ್ಟುಹಿಡಿಯುತ್ತಾಳೆ.

ಇಲ್ಲವಾದರೆ ವೇದಾಂತ್ ಬಳಿ ಎಲ್ಲಾ ವಿಚಾರ ಹೇಳುವುದಾಗಿ ಹೇಳಿದಾಗ ಸುಹಾಸಿನಿ ಮಂಜುನಾಥ್ ಹಾಗೂ ಪರಿಮಳ ಜೊತೆ ಕ್ಷಮೆ ಕೇಳಲು ಒಪ್ಪಿಕೊಳ್ಳುತ್ತಾಳೆ. ಇನ್ನು ಪರಿಮಳ ಹಾಗೂ ಮಂಜು ಬಳಿಗೆ ಬಂದ ಸುಹಾಸಿನಿ ಕ್ಷಮೆ ಕೇಳಿದಾಗ ಮಂಜುನಾಥ್‌ಗೆ ಖುಷಿ ಆಗುತ್ತದೆ. ಮುಂದೇನು ಕಾದು ನೋಡಬೇಕಿದೆ

More from Filmibeat

English summary
Kannada serial gattimela written updated on 27th March.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X