Gattimela: ತನ್ನ ಕೈ ಸೂರ್ಯ ನಾರಾಯಣ ಫೋಟೋ ನೋಡಿ ಶಾಕ್ ಆದ ಅಮ್ಮು
ಗಟ್ಟಿಮೇಳ ಧಾರಾವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ನ್ನೋಡುಗರ ಮನ ಸೆಳೆಯುವ ಹಾಗೆ ಮಾಡುತ್ತಿದೆ. ಇದೀಗ ವೇದಾಂತ ಹಾಗೂ ಅಮೂಲ್ಯ ಸೂರ್ಯ ನಾರಾಯಣನನ್ನು ಹುಡುಕಿಕೊಂಡು ಹೊರಟಿದ್ದಾರೆ. ನನ್ನ ಅಪ್ಪ ಚಿಕ್ಕ ವಯಸ್ಸಿನಲ್ಲಿ ಸಾವನ್ನು ಅಪ್ಪಿದ್ದಾರೆ ಎಂದುಕೊಂಡಿದ್ದ ವೇದಾಂತ ಮಾತ್ರ ತನ್ನ ತಮ್ಮ ವಿಕ್ರಾಂತನ ಸಾವಿನ ಬಳಿಕ ಆತ ನಡೆಸಿದ ಇನ್ವೆಸ್ಟಿಗೇಷನ್ ರಿಪೋರ್ಟ್ ತನಗೆ ತಲುಪಿದ ನಂತರ ನಿಜ ವಿಚಾರ ತಿಳಿಯುತ್ತದೆ.
ಮುಂದೆ ನಾನಾದರೂ ನನ್ನ ತಂದೆ ಬದುಕಿದ್ದಾರೋ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಲೆಬೇಕು ಎಂದು ಹಠದಲ್ಲಿ ತಂದೆಯನ್ನು ಹುಡುಕುತ್ತಾ ಹೋಗುತ್ತಾನೆ. ಇನ್ನು ಮನೆಯಲ್ಲೆಲ್ಲಾ ಅದೇ ಡಿಸ್ಕಷನ್ ತನ್ನ ತಂದೆಯನ್ನು ಹೇಗಾದರೂ ಕರೆದುಕೊಂಡು ಬರಬೇಕು ತನ್ನ ತಂದೆ ಬದುಕಿದ್ದಾರೆ ಎಂದರೆ ಯಾಕೆ ಅವರು ನಮ್ಮನ್ನು ಇಷ್ಟು ವರ್ಷ ಬಿಟ್ಟು ದೂರ ಇದ್ದರು ಎಂದು ಯೋಚನೆ ಮಾಡುತ್ತಾ ಇರುತ್ತಾರೆ.

ಇನ್ನು ಸುಹಾಸಿನಿ ವಸಿಷ್ಠ ಮನೆಯಲ್ಲಿ ಏನೇನೆಲ್ಲ ನಡೆಯುತ್ತಿದೆ ಅದೆಲ್ಲವನ್ನೂ ಒಂದು ಬಿಡದೆ ಅಗ್ನಿಗೆ ವರದಿ ಒಪ್ಪಿಸುತ್ತ ಇರುತ್ತಾಳೆ. ಇನ್ನು ಅಗ್ನಿ ಗುಟ್ಟಾಗಿ ವೇದಾಂತ ಹಾಗೂ ಅಮೂಲ್ಯಳನ್ನು ಹಿಂಬಾಲಿಸುತ್ತಾನೆ. ಹೇಗಾದರೂ ಮಾಡಿ ವೇದಾಂತ ಹಾಗೂ ಅಮೂಲ್ಯಳನ್ನು ಕೊಲ್ಲಲೆಬೇಕು ಎಂದು ಪಣ ತೊಟ್ಟಿರುತ್ತಾನೆ.
ಇನ್ನು ವೇದಾಂತ ಆತನ ತಂದೆಯ ಜೊತೆಯೇ ಇದ್ದರೂ ಅವರೇ ಸೂರ್ಯ ನಾರಾಯಣ ಎನ್ನುವ ಸುಳಿವು ಮಾತ್ರ ಆತನಿಗೆ ಸಿಗುವುದಿಲ್ಲ. ಅಮೂಲ್ಯ ವೈದೇಹಿಗೆ ಕರೆ ಮಾಡುತ್ತಾಳೆ. ಕರೆ ಸ್ವೀಕಾರ ಮಾಡಿದ ವೈದೇಹಿ ಮೆತ್ತಗೆ ಹಾಗೂ ಕುತೂಹಲದಿಂದ ವೇದಾಂತ ತಂದೆಯವರು ಸಿಕ್ಕಿದ್ರ ಎಂದು ಕೇಳಿದಾಗ ಅಮೂಲ್ಯ ನಿರಾಶೆಯಿಂದ ಇಲ್ಲ ಈ ವೇಳೆ ಅವರ ಫೋಟೋ ಇದ್ದರೆ ಒಳ್ಳೆಯದಿತ್ತು ಎಂದು ಯೋಚನೆ ಮಾಡಿಕೊಂಡು ಹೇಳುತ್ತಾಳೆ.
ಆಗ ವೈದೇಹಿ ಅವರ ಫೋಟೋ ಮನೆಯಲ್ಲಿ ಎಲ್ಲಿ ಇರಬಹುದು ಎಂದೆಲ್ಲ ಯೋಚನೆ ಮಾಡುತ್ತಾ ಇರುವಾಗ ವೇದಾಂತ ನ ರೂಮ್ ನಲ್ಲಿ ಇರುವ ಫೈಲ್ ಅನ್ನು ಹುಡುಕುತ್ತಾಳೆ. ಆದರೆ ಅಲ್ಲಿ ಯಾವ ಫೋಟೋ ಕಾಣ ಸಿಗುವುದಿಲ್ಲ. ಇನ್ನು ಏನು ಮಾಡುವುದು ಎಂದು ಯೋಚನೆ ಮಾಡುತ್ತಾ ಇರುವಾಗ ಯಾರೋ ಹಿಂದೆಯಿಂದ ಭುಜಕ್ಕೆಕೈ ಇಟ್ಟ್ ಹಾಗೆ ಅನ್ನಿಸುತ್ತದೆ.
ಹಿಂದೆ ತಿರುಗಿ ನೋಡಿದಾಗ ಅಲ್ಲಿ ಅಮ್ಮ ಇರುತ್ತಾರೆ. ಅಮ್ಮ ನಾನು ನಿನ್ನ ನೋಡಿ ಸುಹಾಸಿನಿ ಬಂದು ಬಿಟ್ಟಳು ಎಂದುಕೊಂಡು ಬಹಳ ಭಯ ಪಟ್ಟೆ ಎಂದು ಹೇಳುತ್ತಾಳೆ. ಇದನ್ನು ಕೇಳಿದ ವೈದೇಹಿ ಸಮಾಧಾನ ಪಡಿಸುತ್ತಾರೆ. ಹಾಗೆಯೇ ಸೂರ್ಯ ನಾರಾಯಣನ ಫೋಟೋ ನಿನ್ನ ಜೊತೆ ಕೂಡ ಇಲ್ವಾ ಎಂದು ಕೇಳುತ್ತಾಳೆ.
ಆಗ ವೈದೇಹಿ ತನ್ನ ಕಬೋರ್ಡ್ ಹುಡುಕಿದಾಗ ಅದರಲ್ಲಿ ಸೂರ್ಯನಾರಾಯಣ ಅವರ ಫೋಟೋ ಇರುತ್ತದೆ. ಅದರ ಫೋಟೋ ತೆಗೆದು ಅಮೂಲ್ಯಗೆ ಕಳುಹಿಸುತ್ತಾರೆ. ಇದನ್ನು ನೋಡಿದ ಅಮೂಲ್ಯಗೆ ಬಹಳ ಶಾಕ್ ಆಗುತ್ತದೆ ಇಷ್ಟರವರೆಗೆ ನಮ್ಮ ಜೊತೆ ಇದ್ದಿದ್ದು ಮಾತನಾಡಿದ್ದು ಸೂರ್ಯ ನಾರಾಯಣ ಅವರ ಎಂದು ಆಶ್ಚರ್ಯ ಪಡುತ್ತಾಳೆ.


Click it and Unblock the Notifications











